ಭಯಹುಟ್ಟಿಸುವ ಕಾಯಿಲೆಗಳು-ಮಹಿಳೆಯರೇ ಇದಕ್ಕೆ ಮೊದಲ ಟಾರ್ಗೆಟ್!

By: manu
Subscribe to Boldsky

ಪುರುಷರ ಮತ್ತು ಮಹಿಳೆಯರ ದೇಹಪ್ರಕೃತಿಯ ವ್ಯತ್ಯಾಸದಿಂದಾಗಿ ಎದುರಾಗುವ ಕಾಯಿಲೆಗಳ ಸ್ವರೂಪವೂ ಕೊಂಚ ಭಿನ್ನವಾಗಿರುತ್ತದೆ. ಆದರೆ ಮಹಿಳೆಯರಲ್ಲಿ ಶಾರೀರಿಕ ತೊಂದರೆಗಳು ಮಾನಸಿಕವಾಗಿಯೂ ಬಾಧಿಸುವ ಕಾರಣ ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಆದ್ದರಿಂದ ವಿಶೇಷವಾಗಿ ಮಹಿಳೆಯರನ್ನು ಕಾಡುವ ಕೆಲವು ಮಾರಣಾಂತಿಕ ಕಾಯಿಲೆಗಳ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರುವುದು ಅತ್ಯಗತ್ಯವಾಗಿದೆ.

ಮಹಿಳೆಯರಿಗೆ ಎದುರಾಗುವ ಕೆಲವು ಕಾಯಿಲೆಗಳಿಗೆ ವೈದ್ಯರಿಂದ ಸೂಕ್ಷ್ಮವಾದ ಪರಿಶೀಲನೆ, ಹಿಂದಿನ ದಿನಗಳ ಇತಿಹಾಸ ಸಹಿತ ಇನ್ನೂ ಹಲವು ಮಾಹಿತಿಗಳನ್ನು ಪರಿಗಣಿಸಿಯೇ ಚಿಕಿತ್ಸೆ ನೀಡಬೇಕಾಗುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ಮಹಿಳೆಯರು ಮನೆಗೆಲಸ, ಉದ್ಯೋಗ, ಮಕ್ಕಳ ಕಾಳಜಿ ಮೊದಲಾದ ಕೆಲಸಗಳಲ್ಲಿ ತಮ್ಮ ಸ್ವಂತ ಆರೋಗ್ಯವನ್ನೇ ಕಡೆಗಣಿಸುವುದರಿಂದ ಅರಿವಿಲ್ಲದೇ ಅನಾರೋಗ್ಯಗಳು ಕಾಡುತ್ತವೆ.   ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ!

ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಅನಾರೋಗ್ಯದ ಬಗ್ಗೆ ಅರಿವಿದ್ದೂ ಅಷ್ಟೊಂದು ಗಂಭೀರವಲ್ಲವೆಂದು ಪರಿಗಣಿಸಿ ತಮ್ಮ ನಿತ್ಯದ ಕೆಲಸಗಳಿಗೇ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಅನಾರೋಗ್ಯ ಮುಂದುವರೆದು ಗಂಭೀರ ರೂಪ ತಾಳಲು ಸ್ವತಃ ಕಾರಣರಾಗುತ್ತಾರೆ.   ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ 10 ಕಾಯಿಲೆಗಳು

ಕೆಲವು ಗಂಭೀರ ಕಾಯಿಲೆಗಳೂ ಚಿಕ್ಕ ನೋವು ಅಥವಾ ಒಂದು ಸಮಯ ಅಥವಾ ಒಂದು ಭಂಗಿಯಲ್ಲಿ ಬಾಗಿದಾಗ ಮಾತ್ರ ಪ್ರಕಟಿಸುವ ಮೂಲಕ ತಮ್ಮ ಇರುವನ್ನು ತಿಳಿಸುತ್ತವೆ. ಈ ಸೂಚನೆಗಳನ್ನು ವೈದ್ಯರು ಗಮನಿಸಿ ಯಾವ ತೊಂದರೆ ಇರಬಹುದೆಂದು ಸ್ಥೂಲವಾಗಿ ಅಂದಾಜಿಸಿ ಕೆಲವು ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳುತ್ತಾರೆ. ಆದರೆ ಈ ಸೂಚನೆಗಳನ್ನು ಮಹಿಳೆಯರು ಅಲಕ್ಷಿಸುತ್ತಾರೆ. ಬನ್ನಿ, ಪ್ರತಿ ಮಹಿಳೆಯೂ ತನ್ನ ಆರೋಗ್ಯದ ಬಗ್ಗೆ ಖಂಡಿತಾ ತಿಳಿದಿರಲೇಬೇಕಾದ ಕೆಲವು ಸೂಚನೆಗಳ ಬಗ್ಗೆ ಅರಿಯೋಣ....  

ಮೂತ್ರ ನಾಳದ ಸೋಂಕು (Urinary Tract Infection)

ಮೂತ್ರ ನಾಳದ ಸೋಂಕು (Urinary Tract Infection)

UTI ಎಂದೂ ಕರೆಯಲ್ಪಡುವ ಈ ತೊಂದರೆ ಸ್ವಚ್ಛತೆಯ ಮತ್ತು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತದೆ. ವಿಶೇಷವಾಗಿ ಸಮಾಗಮ ಹಾಗೂ ಮೂತ್ರವಿಸರ್ಜನೆಯ ಬಳಿಕ ಸ್ವಚ್ಛತೆಗೆ ನೀಡುವ ನಿರಾಸಕ್ತಿಯ ಕಾರಣ ಸೋಂಕು ಉಂಟಾಗುತ್ತದೆ. ಇದರಿಂದ ಚರ್ಮ ಕೆಂಪಗಾಗುವುದು, ಉರಿ ಮೊದಲಾದವು ಎದುರಾಗುತ್ತದೆ. ತಕ್ಷಣವೇ ವೈದ್ಯರಿಂದ ತಪಾಸಣೆಗೊಳಗಾಗುವುದು ಅಗತ್ಯ.ಉರಿಮೂತ್ರ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಎಂಡೋಮೆಟ್ರಿಯೋಸಿಸ್ (Endometriosis)

ಎಂಡೋಮೆಟ್ರಿಯೋಸಿಸ್ (Endometriosis)

ಒಂದು ವೇಳೆ ಮಾಸಿಕ ದಿನಗಳಲ್ಲಿ ಏರುಪೇರು, ಕೆಳಹೊಟ್ಟೆಯಲ್ಲಿ ನೋವು ಮೊದಲಾದವು ಕಂಡುಬಂದರೆ ಇದು ಎಂಡೋಮೆಟ್ರಿಯೋಸಿಸ್ ಎಂಬ ತೊಂದರೆಯ ಸೂಚನೆಯಾಗಿರಬಹುದು. ಈ ತೊಂದರೆಯಲ್ಲಿ ಗರ್ಭಕೋಶದ ಗೋಡೆಯ ಹೊರಭಾಗದಲ್ಲಿ ಅನಗತ್ಯವಾಗಿ ಜೀವಕೋಶಗಳು ಬೆಳವಣಿಗೆಯಾಗುತ್ತವೆ. ಇದು ಗಂಭೀರವಾದ ತೊಂದರೆಯಾಗಿದ್ದು ವೈದ್ಯರಲ್ಲಿ ಭೇಟಿ ಅಗತ್ಯವಾಗಿದೆ. ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?

ಹೆರಿಗೆಯ ಬಳಿಕ ಖಿನ್ನತೆ (Postpartum Depression)

ಹೆರಿಗೆಯ ಬಳಿಕ ಖಿನ್ನತೆ (Postpartum Depression)

ಸಾಮಾನ್ಯವಾಗಿ ಹೆರಿಗೆಯ ಬಳಿಕ ಮಹಿಳೆಯರ ದೇಹದಲ್ಲಿ ಸ್ರವಿಸುವ ಕೆಲವು ಹಾರ್ಮೋನುಗಳ ಕಾರಣ ಹಾಗೂ ಮಾನಸಿಕ ಒತ್ತಡದ ಕಾರಣ ಒಂದು ಬಗೆಯ ಖಿನ್ನತೆ ಎದುರಾಗುತ್ತದೆ. ಈ ಖಿನ್ನತೆಯನ್ನು ಮುಂದುವರೆಯಲು ಬಿಡದೇ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಷ್ಟೂ ಉತ್ತಮ. ಆದರೆ ಇದರೆ ಖಿನ್ನತೆ ಹೆಚ್ಚುತ್ತಾ ಹೋದರೆ ಮಾತ್ರ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್

ಮಹಿಳೆಯರಿಗೆ ಆವರಿಸುವ ಸಾಮಾನ್ಯವಾದ ಸ್ತನ ಕ್ಯಾನ್ಸರ್ ನ ಮುಖ್ಯ ಲಕ್ಷಣಗಳೆಂದರೆ ಗಾತ್ರದಲ್ಲಿ ಬದಲಾವಣೆ, ಒಳಭಾಗದಲ್ಲಿ ಗಂಟುಗಳಿರುವಂತೆ ಕಂಡುಬರುವುದು ಮೊದಲಾದವು. ಯಾವುದೇ ಅನುಮಾನವಿದ್ದರೂ ವೈದ್ಯರಿಂದ ತಪಾಸಣೆಗೊಂಡು ಮ್ಯಾಮೋಗ್ರಫಿ ಮೂಲಕ ಖಚಿತಪಡಿಸಿಕೊಳ್ಳಬೇಕು. ಸ್ತನ ಕ್ಯಾನ್ಸರ್‌‌‌ನ ಹೆಡೆಮುರಿ ಕಟ್ಟಿ ಹಾಕುವ ಸೂಪರ್ ಫುಡ್!

ಗರ್ಭಕೋಶದ ಕ್ಯಾನ್ಸರ್

ಗರ್ಭಕೋಶದ ಕ್ಯಾನ್ಸರ್

ಸಾಮಾನ್ಯವಾಗಿ ಗರ್ಭಕೋಶ, ಗರ್ಭಕೋಶದ ಕಂಠ (cervix) ಕ್ಯಾನ್ಸರ್‌ಗೆ ತುತ್ತಾಗುವ ಅಂಗಗಳಾಗಿದ್ದು ಇದರ ಮುನ್ಸೂಚನೆಗಳಾಗಿ ಅನಿಯಮಿತ ಮಾಸಿಕ ಸ್ರಾವ, ಕೆಳಹೊಟ್ಟೆಯಲ್ಲಿ ಸೆಳೆತದ ನೋವು, ಸೆಡೆತ ಮೊದಲಾದವು ಕಾಣಿಸಿಕೊಳ್ಳುತ್ತವೆ.

ಅಂಡಾಶಯದ ಕ್ಯಾನ್ಸರ್

ಅಂಡಾಶಯದ ಕ್ಯಾನ್ಸರ್

ಅಂಡಾಶಯಕ್ಕೆ ಆವರಿಸುವ ಕ್ಯಾನ್ಸರ್‌ನ ಮೂಲಕ ಅಂಡಾಶಯದಲ್ಲಿ ಗಂಟುಗಳು ಮೂಡುತ್ತವೆ. ಇದರ ಪರಿಣಾಮವಾಗಿ ಹೊಟ್ಟೆಯುಬ್ಬರಿಕೆ, ಕೆಳಹೊಟ್ಟೆಯಲ್ಲಿ ನೋವು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಬ್ಯಾಕ್ಟೀರಿಯಲ್ ವಜೈನೋಸಿಸ್ (Bacterial Vaginosis)

ಬ್ಯಾಕ್ಟೀರಿಯಲ್ ವಜೈನೋಸಿಸ್ (Bacterial Vaginosis)

ಜನನಾಂಗದ ಒಳಭಾಗದಲ್ಲಿ ಬ್ಯಾಕ್ಟೀರಿಯಾಗಳ ವೃದ್ಧಿಯ ಕಾರಣ ಉಂಟಾಗಿರುವ ಸೋಂಕಿನಿಂದ ಒಳಭಾಗದಲ್ಲಿ ತುರಿಕೆ, ವಾಸನೆಭರಿತ ಸ್ರಾವ, ಉರಿಯಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.

 
English summary

Health Issues Every Woman must be Aware of

Most of the ailments and disorders that women suffer from require different kinds of medical attention and treatment, because, obviously their body works differently. The fact is that, in today's world most women have to manage multiple things, such as their jobs, household work, taking care of the kids, etc., so many a times, a woman ignores her own health!
Please Wait while comments are loading...
Subscribe Newsletter