Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ 10 ಕಾಯಿಲೆಗಳು
ಅನೇಕ ರೀತಿಯ ಕಾಯಿಲೆಗಳಿವೆ. ಅವುಗಳಲ್ಲಿ ಕೆಲವು ಸಾಮಾನ್ಯ ಕಾಯಿಲೆ ಮತ್ತೆ ಕೆಲವು ಪ್ರಾಣಕ್ಕೆ ಅಪಾಯ ತರುವಂತಹ ಕಾಯಿಲೆಗಳಾಗಿವೆ. ವಿಜ್ಞಾನ ಸಾಕಷ್ಟು ಮುಂದುವರೆದಿದೆ ಅನೇಕ ಮಾರಕ ಕಾಯಿಲೆಗಳಿಗೆ ಔಷಧಿ ಕಂಡು ಹಿಡಿಯಲಾಗಿದೆ. ಆದರೆ ಏಡ್ಸ್ ನಂತಹ ಕೆಲವೊಂದು ಕಾಯಿಲೆಗಳು ವಿಜ್ಞಾನಕ್ಕೆ ಸವಾಲಾಗಿದೆ.
ಮತ್ತೆ ಕೆಲವು ಕಾಯಿಲೆಗಳು ಉದಾಹರಣೆಗೆ ಶೀತ ಬಂದರೆ ತಾತ್ಕಾಲಿಕವಾಗಿ ಗುಣಪಡಿಸಬಹುದು. ಆದರೆ ಈ ಕಾಯಿಲೆ ನಮ್ಮ ಜೀವಿತ ಕಾಲದಲ್ಲಿ ಸಾಕಷ್ಟು ಭಾರಿ ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವ ಔಷಧಿಗೂ ಇದುವರೆಗೆ ಸಾಧ್ಯವಾಗಲಿಲ್ಲ.
ವಿಜ್ಞಾನಕ್ಕೆ ಗುಣಪಡಿಸಲಾಗದ 10 ಕಾಯಿಲೆಗಳ ಬಗ್ಗೆ ಚಿತ್ರ ಮಾಹಿತಿಯನ್ನು ನೀಡಲಾಗಿದೆ ನೋಡಿ:

ಏಡ್ಸ್
ಏಡ್ಸ್ ಕಾಯಿಲೆ ಬಂತೆಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಏಡ್ಸ್ ಕಾಯಿಲೆ ಗಾಳಿಯಲ್ಲಿ , ನೀರಿನಲ್ಲಿ ಹರಡುವುದಿಲ್ಲವಾದ್ದರಿಂದ ಇದನ್ನು ಜಾಗೃತೆವಹಿಸಿದರೆ ಬರದಂತೆ ತಡೆಯಬಹುದು.

ಕ್ಯಾನ್ಸರ್
ಕ್ಯಾನ್ಸರ್ ಬಂದರೆ ರೇಡಿಯೋ ಥೆರಪಿಯಿಂದ ಕ್ಯಾನ್ಸರ್ ರೋಗಿಯ ಆಯಸ್ಸನ್ನು ಸ್ವಲ್ಪ ದಿನ ಹೆಚ್ಚು ಹೆಚ್ಚಿಸಬಹುದೇ ಹೊರತು, ಈ ಕಾಯಿಲೆಯನ್ನು ಬುಡದಿಂದಲೇ ಹೋಗಲಾಡಿಸಲು ಸಾಧ್ಯವಾಗಲಿಲ್ಲ.

ಫೋಲಿಯೋ
ಫೋಲಿಯೋ ಬರದಂತೆ ತಡೆಯಲು ಚಿಕ್ಕ ಮಕ್ಕಳಿಗೆ ಫೋಲಿಯೋ ಡ್ರಾಪ್ಸ್ ಹಾಕಿಸಬೇಕು. ಏಕೆಂದರೆ ಒಮ್ಮೆ ಫೋಲಿಯೋ ಬಂತೆಂದರೆ ನಂತರ ಆ ಕಾಯಿಲೆ ಸಾಯುವವರೆಗೆ ಇರುತ್ತದೆ, ಕಾಲು ತನ್ನ ಶಕ್ತಿಯನ್ನು ಕಳೆದುಕೊಂಡು, ನಡೆದಾಡಲು ಕಷ್ಟವಾಗುವುದು.

ಮೈ ಕೈ ನೋವು
ಮೈ ಕೈ ನೋವು, ಸಂಧಿ ನೋವು ಈ ರೀತಿ ಕಾಣಿಸಿಕೊಂಡರೆ ಮಾತ್ರೆ, ಮುಲಾಮುಗಳಿಂದ ಕಡಿಮೆ ಮಾಡಬಹುದು. ಆದರೆ ಒಮ್ಮೆ ಔಷಧಿ ತೆಗೆದುಕೊಂಡರೆ ಬರುವುದೇ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಂತಹ ಕಾಯಿಲೆಗಳು ಮರುಕಳಿಸುತ್ತಲೇ ಇರುತ್ತವೆ.

ಶೀತ
ನಮ್ಮ ಗೆಳೆಯ ಹತ್ತಿರ "ನನಗೆ ಶೀತ' ಎಂದು ಹೇಳಿದರೆ "ಮೂಗು ಇದ್ದಷ್ಟು ಕಾಲ ಶೀತ ಇದ್ದೇ ಇರುತ್ತದೆ ಅದಕ್ಕೆ ಏಕೆ ಚಿಂತೆ ಮಾಡ್ತೀಯಾ ಮಾರಾಯ" ಎಂದು ತಮಾಷೆ ಮಾಡುವುದನ್ನು ಕೇಳಿರಬಹುದು. ಶೀತವನ್ನು ನಮ್ಮ ಜೀವಿತ ಕಾಲದಲ್ಲಿ ಬರದಂತೆ ತಡೆಯುವ ಯಾವುದೇ ಔಷಧಿಯನ್ನು ಇದುವರೆಗೆ ಕಂಡುಹಿಡಿಯಲಿಲ್ಲ.

ಫ್ಲೂ
ಇದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಇದು ಕಾಣಿಸಿಕೊಂಡರೆ ಶ್ವಾಸಕೋಶದಲ್ಲಿ ನೀರು ತುಂಬುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಈ ರೋಗಾಣು ವೇಗವಾಗಿ ಹರಡುತ್ತದೆ. ಸ್ವೈನ್ ಫ್ಲೂ , ಹಕ್ಕಿ ಜ್ವರ ಇವೆಲ್ಲಾ ಅಪಾಯಕಾರಿಯಾದ ಕಾಯಿಲೆಯಾಗಿದೆ.

ಅಸ್ತಮಾ
ಅಸ್ತಮಾದಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು.

ಮಧುಮೇಹ
ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದೇ ಹೊರತು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.

ಎಬೋಲ
ಎಬೋಲ ಅನ್ನುವುದು ಒಂದು ರೀತಿಯ ಜ್ವರ. ಮೊದಲು ಇದು ಆಫ್ರಿಕಾದಲ್ಲಿ ಕಂಡು ಬಂತು. ಈ ಕಾಯಿಲೆ ಬಂದ ರೋಗಿಗಳನ್ನು ಇದುವರೆಗೆ ಗುಣ ಪಡಿಸಲು ಸಾಧ್ಯವಾಗಲಿಲ್ಲ.

Creutzfeldt-Jakob ಕಾಯಿಲೆ
ಇದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಇದು ಕಾಣಿಸಿಕೊಂಡರೆ ಮೆದುಳಿನ ಮಧ್ಯಭಾಗದ ನರಕ್ಕೆ ಹಾನಿಯಾಗುತ್ತದೆ. ಇದನ್ನು ಗುಣ ಪಡಿಸಲು ಇದುವರೆಗೆ ವೈದ್ಯಕೀಯ ಜಗತ್ತಿಗೆ ಸಾಧ್ಯವಾಗಲಿಲ್ಲ.



Click it and Unblock the Notifications
