ಇನ್ನು ಮುಂದೆ ಹೆಚ್ಚು ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಬೇಡಿ!

By: manu
Subscribe to Boldsky

ಜೀನ್ಸ್ ವಾಸ್ತವವಾಗಿ ಗಣಿಯ ಕೆಲಸಗಾರರು ತೊಡಲು ನಿರ್ಮಿಸಿದ್ದ ಬಹುಕಾಲ ಬಾಳಿಕ ಬರುವ ಒರಟು ಬಟ್ಟೆಯಾಗಿದ್ದು ಗಣಿ ಕೆಲಸಗಾರರನ್ನು ಅನುಸರಿಸಲು ಪಡ್ಡೆ ಹುಡುಗರು ಭಾರೀ ಬೇಡಿಕೆ ಇರಿಸಿದ್ದರಿಂದ ಪ್ರಾರಂಭವಾದ ಫ್ಯಾಷನ್ ಇಂದು ಹಿರಿಯ ಕಿರಿಯ, ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ತೊಡುತ್ತಿದ್ದಾರೆ.

ಆದರೆ ಇದು ಮೊದಲು ಬಿಗಿಯಾಗೇನೂ ಇರಲಿಲ್ಲ, ನಮ್ಮ ವಸ್ತ್ರ ವಿನ್ಯಾಸಕರೇ ಬಿಗಿಯಾಗಿಸಿ, ಅಲ್ಲಲ್ಲಿ ಬೇಕೆಂದೇ ಹರಿದು, ಬಣ್ಣವನ್ನು ಮಾಸಲುಗೊಳಿಸಿ ತೊಟ್ಟವರಿಗೆ ತಾವು ಫ್ಯಾಷನ್ ಜಗತ್ತಿನ ಅತ್ಯುನ್ನತ ಶಿಖರದ ಮೇಲಿರುವಂತೆ ಭಾವಿಸುವಂತೆ ಮಾಡಿದ್ದಾರೆ. ಜೀನ್ಸ್ ಪ್ಯಾಂಟ್‌ನ್ನು ಬೇಕಾಬಿಟ್ಟಿಯಾಗಿ ತೊಳೆದು ಹಾಕುವಂತಿಲ್ಲ! 

ಆದರೆ ಯಾವುದೇ ಬಿಗಿಯಾದ ಉಡುಗೆಯಂತೆಯೇ ಬಿಗಿಯಾದ ಜೀನ್ಸ್ ಸಹಾ ಆರೋಗ್ಯಕ್ಕೆ ಮಾರಕವಾಗಿದೆ. ವಿಶೇಷವಾಗಿ ಬಿಗಿಯಾದ ಪ್ಯಾಂಟ್ ತೊಡುವುದರಿಂದ ಪುರುಷರಿಗೂ ಮಹಿಳೆಯರಿಗೂ ಕೆಲವಾರು ವಿಧಗಳಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಜೀನ್ಸ್ ಪ್ಯಾಂಟ್‌ಗೆ ಮರುಳಾಗದವರು ಯಾರು ಇದ್ದಾರೆ ಹೇಳಿ?

ಬಿಗಿಯಾಗಿದ್ದರೇನು ಎಂದು ದಾರ್ಷ್ಟ್ಯದ ಪ್ರಶ್ನೆ ಕೇಳುವವರಿಗೆ ಜೀನ್ಸ್ ಬಟ್ಟೆ ಇತರ ಬಟ್ಟೆಗಳಂತಲ್ಲದೇ ಬಿಗಿಯಾಗಿರುವ ಕಾರಣ ಚರ್ಮ ಗಾಳಿಯ ಸಂಪರ್ಕವನ್ನು ಪಡೆಯಲು ಸಾಧ್ಯವಾಗದೇ ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಪರಿಣಾಮವಾಗಿ ನರಗಳು ಬಾಧೆಗೊಳಗಾಗಿ ರಕ್ತಸಂಚಾರಕ್ಕೂ ತೊಡಕಾಗುತ್ತದೆ. ಇಷ್ಟೇ ಅಲ್ಲ, ಇನ್ನು ಯಾವ ಯಾವ ರೀತಿಯಲ್ಲಿ ಇದು ಆರೋಗ್ಯವನ್ನು ಬಾಧಿಸುತ್ತದೆ ಎಂಬುದನ್ನು ನೋಡೋಣ.... 

ದುಷ್ಪರಿಣಾಮದ ಸಾಧ್ಯತೆ #1

ದುಷ್ಪರಿಣಾಮದ ಸಾಧ್ಯತೆ #1

ಪುರುಷರಲ್ಲಿ ಬಿಗಿಯಾದ ಜೀನ್ಸ್ ತೊಡುವ ಮೂಲಕ ಅವರ ಪುರುಷತ್ವ ಬಹುವಾಗಿ ಬಾಧೆಗೊಳಗಾಗುತ್ತದೆ. ಬಿಗಿ ಜೀನ್ಸ್ ತೊಡುವ ಅಭ್ಯಾಸವಿರುವ ಪುರುಷರ ವೃಷಣಗಳು ಸದಾ ಒತ್ತಡದಲ್ಲಿಯೇ ಇರುವ ಕಾರಣ ಇಲ್ಲಿ ಉತ್ಪತ್ತಿಯಾದ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿ ಫಲವಂತಿಕೆಯಾಗದ ಸಾಧ್ಯತೆ ಹೆಚ್ಚುತ್ತದೆ.

ದುಷ್ಪರಿಣಾಮದ ಸಾಧ್ಯತೆ #2

ದುಷ್ಪರಿಣಾಮದ ಸಾಧ್ಯತೆ #2

ಜೀನ್ಸ್ ಬಿಗಿಯಾದಷ್ಟೂ ನಮ್ಮ ಗುಪ್ತಾಂಗಗಳಿಗೆ ಸರಿಯಾಗಿ ಚಲಿಸಲು ಸಾಧ್ಯವಾಗದೇ, ಗಾಳಿಯೇ ಇಲ್ಲದೇ ಈ ಭಾಗದಲ್ಲಿ ಬಿಸಿ ಹೆಚ್ಚಾಗುತ್ತಾ ಹೋಗುತ್ತದೆ. ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಈ ಬಿಸಿ ಜನನೇಂದ್ರಿಯಗಳ ಕ್ಷಮತೆಯನ್ನು ಕುಗ್ಗಿಸುತ್ತದೆ.

ದುಷ್ಪರಿಣಾಮದ ಸಾಧ್ಯತೆ #3

ದುಷ್ಪರಿಣಾಮದ ಸಾಧ್ಯತೆ #3

ಕೆಲವು ಮೂಲಗಳ ಪ್ರಕಾರ ಅತಿ ಹೆಚ್ಚು ಬಿಗಿಯಾಗಿರುವ ಜೀನ್ಸ್ ತೊಟ್ಟ ಪುರುಷರ ವೃಷಣಗಳು ಅತಿ ಹೆಚ್ಚು ಹಿಂಡಿದಂತಾಗಿ ಇವುಗಳ ಒಳಗಿನ ಅಂಗಾಂಶಗಳು ಘಾಸಿಗೊಳ್ಳುತ್ತವೆ. ಕೆಲವೊಮ್ಮೆ ಇದು ಕ್ಯಾನ್ಸರ್‌ಗೆ ತಿರುಗುವ ಅಪಾಯವೂ ಇದೆ.

ದುಷ್ಪರಿಣಾಮದ ಸಾಧ್ಯತೆ #4

ದುಷ್ಪರಿಣಾಮದ ಸಾಧ್ಯತೆ #4

ಮಹಿಳೆಯರು ಬಿಗಿಯಾದ್ ಜೀನ್ಸ್ ತೊಡುವ ಮೂಲಕ ಇವರಲ್ಲಿ ಮೂತ್ರಕೋಶದ ಸೋಂಕು ಉಂಟಾಗುವ ಸಾಧ್ಯತೆ ಅತಿ ಹೆಚ್ಚಾಗುತ್ತದೆ.

ಮೂತ್ರಕೋಶದ ಸೊಂಕಿನ ಸಮಸ್ಯೆ

ಮೂತ್ರಕೋಶದ ಸೊಂಕಿನ ಸಮಸ್ಯೆ

ಏಕೆಂದರೆ ಜೀನ್ಸ್ ತೊಟ್ಟು ನಡೆದಾಡುವಾಗ ಗಾಳಿಯ ಕೊರತೆಯಿಂದ ಜನಾಂಗದ ಒಳಭಾಗದಲ್ಲಿ ಹೆಚ್ಚು ಬಿಸಿಯಾಗಿ ಈ ಭಾಗದಲ್ಲಿ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚುತ್ತದೆ. ಪರಿಣಾಮವಾಗಿ ಮೂತ್ರಕೋಶ ಸೋಂಕಿಗೊಳಗಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ದುಷ್ಪರಿಣಾಮದ ಸಾಧ್ಯತೆ #5

ದುಷ್ಪರಿಣಾಮದ ಸಾಧ್ಯತೆ #5

ಕೆಲವು ಸಂಶೋಧನೆಗಳ ಪ್ರಕಾರ ಬಿಗಿಯಾದ ಜೀನ್ಸ್ ತೊಡುವ ಮೂಲಕ ಸೊಂಟದ ಮೂಳೆಗಳ ಸಂಧುಗಳಿಗೂ ಅಪಾಯವಿದೆ. ಅದು ಹೇಗೆ? ಪ್ಯಾಂಟ್ ಬಿಗಿಯಾಗಿದ್ದಷ್ಟೂ ಕಾಲುಗಳು ಚಲಿಸಬಹುದಾದ ಕೋನ ಕಡಿಮೆಯಾಗುತ್ತಾ, ಅಂದರೆ ಹೆಜ್ಜೆ ತುಂಬಾ ಚಿಕ್ಕದಾಗಿದ್ದು ಇದರಿಂದ ನಡಿಗೆಯ ಸಾಮಾನ್ಯ ಶೈಲಿ ಬದಲಾಗಿ ಸೊಂಟದ ಮೂಳೆಗಳ ಮತ್ತು ಮೂಳೆಸಂದುಗಳ ಒಂದೇ ಭಾಗದಲ್ಲಿ ಹೆಚ್ಚಿನ ಒತ್ತಡ ಬಿದ್ದು ಅಪಾಯ ಎದುರಾಗಬಹುದು. ಇದರಿಂದ ಪರೋಕ್ಷವಾಗಿ ಬೆನ್ನುಹುರಿಯೂ ಅಪಾಯಕ್ಕೆ ಒಳಗಾಗಬಹುದು.

ದುಷ್ಪರಿಣಾಮದ ಸಾಧ್ಯತೆ #6

ದುಷ್ಪರಿಣಾಮದ ಸಾಧ್ಯತೆ #6

ಪ್ಯಾಂಟ್ ಬಿಗಿಯಾಗಿದ್ದಂತೆಯೇ ಸೊಂಟ ಅಥವಾ ಹೊಟ್ಟೆಯ ಮೇಲೆ ಕಟ್ಟುವ ಬೆಲ್ಟ್ ಸಹಾ ಬಿಗಿಯಾಗಿರುತ್ತದೆ. ಇದರಿಂದ ದುಗ್ಧ ಗ್ರಂಥಿಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಇವುಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅಲ್ಲದೇ ಹೊಟ್ಟೆ ಬಿಗಿಯಾದಷ್ಟೂ ರಕ್ತಪರಿಚಲನೆ ಮತ್ತು ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ.

ದುಷ್ಪರಿಣಾಮದ ಸಾಧ್ಯತೆ #7

ದುಷ್ಪರಿಣಾಮದ ಸಾಧ್ಯತೆ #7

ಜೀನ್ಸ್ ಬಿಗಿಯಾದಷ್ಟೂ ಚರ್ಮದ ಮೇಲೆ ಒತ್ತಡ ಹೇರಿ ಈ ಒತ್ತಡ ಚರ್ಮದ ಅಡಿಯಲ್ಲಿ ಹಾದು ಹೋಗುವ ನರಗಳ ಮೇಲೂ ಬಿದ್ದು ಇದರಿಂದ ದೇಹದ ತುದಿಭಾಗಗಳಿಗೆ ತಲುಪುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಪಾದಗಳಲ್ಲಿ ಸೂಚಿ ಚುಚ್ಚಿದಂತೆ ನೋವಾಗುವುದು ಮತ್ತು ಬೆಂಕಿ ಹತ್ತಿಕೊಂಡಂತೆ ಉರಿಯಾಗುವ ಅನುಭವವಾಗುತ್ತದೆ.

 
English summary

Health Dangers Of Wearing Tight Jeans

Both men and women love to wear tight jeans pants. But it could be unhealthy to both men and women. Though there isn't enough evidence to back these claims, there are so many cases where the effects of tight pants could be studied.
Please Wait while comments are loading...
Subscribe Newsletter