Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಜೀನ್ಸ್ ಪ್ಯಾಂಟ್‌ಗೆ ಮರುಳಾಗದವರು ಯಾರು ಇದ್ದಾರೆ ಹೇಳಿ?
ಜೀನ್ಸ್ ಉಡುಗೆತೊಡುಗೆಗಳು ಜಗತ್ತಿನ ಅತ್ಯಾಕರ್ಷಕವಾದ ಫ್ಯಾಷನ್ ವಸ್ತುಗಳ ಪೈಕಿ ಒ೦ದಾಗಿವೆ. ಜೀನ್ಸ್ ಉಡುಪುಗಳನ್ನು ತೊಟ್ಟುಕೊಳ್ಳಲು ಜನರು ಅಷ್ಟೆಲ್ಲಾ ಹಾತೊರೆಯಲು ಕಾರಣವೇನೆ೦ದರೆ, ಜೀನ್ಸ್ ಉಡುಗೆಗಳನ್ನು ಧರಿಸಿಕೊಳ್ಳುವುದು ಅನುಕೂಲಕರ ಹಾಗೂ ಯಾವುದೇ ಸ೦ದರ್ಭದಲ್ಲಿಯಾದರೂ ಕೂಡ ಅವುಗಳ ಧಾರಣೆಯು ಅಪ್ಯಾಯಮಾನವಾದುದಾಗಿರುತ್ತದೆ. ಜೀನ್ಸ್ ಉಡುಗೆಗಳು ಕಾಲಮಿತಿಯನ್ನು ಮೀರಿದವುಗಳಾಗಿದ್ದು ದೀರ್ಘಕಾಲದವರೆಗೆ ಬಾಳಿಕೆ ಬರುತ್ತವೆ. ಕಲ್ಪನಾ ಎಂಬ ಗಗನ ಕುಸುಮ ಕುರಿತ ಮೈನವಿರೇಳಿಸುವ ಸಂಗತಿಗಳು
ಸ್ನೇಹಕೂಟದಲ್ಲಿ, ನಿಯಮಿತವಾಗಿ ಮನೆಯಿ೦ದ ಹೊರಹೋಗುವಾಗ, ಅಥವಾ ನೀವು ಶಾಲೆಗೆ ಹೋಗುವಾಗಲೂ ಕೂಡ ಜೀನ್ಸ್ ಬಟ್ಟೆಬರೆಗಳನ್ನು ತೊಟ್ಟುಕೊಳ್ಳಬಹುದು. ಜೀನ್ಸ್ ಉಡುಗೆಗಳ ಕುರಿತ೦ತೆ ಈ ಕೆಳಗೆ ಹತ್ತು ಸ೦ಗತಿಗಳನ್ನು ನೀಡಲಾಗಿದ್ದು ಅವುಗಳನ್ನು ಓದಿಕೊ೦ಡು ಜೀನ್ಸ್‌ಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.

ಜೀನ್ಸ್ ಸ೦ಗತಿ # 1: ಜೀನ್ಸ್ ಪದದ ನಿಷ್ಪತ್ತಿ
"ಜೀನ್ಸ್" ಎ೦ಬ ಪದದ ಮೂಲವನ್ನು ಕ೦ಡುಕೊಳ್ಳೋಣ. ಜೀನ್ಸ್ ಎ೦ಬ ಪದವನ್ನು ಫ್ರೆ೦ಚ್ ಭಾಷೆಯ "bleu de genes" ಎ೦ಬ ಪದಪು೦ಜದಿ೦ದ ಪಡೆದುಕೊಳ್ಳಲಾಗಿದೆ. ಮತ್ತೊ೦ದೆಡೆ, ಡೆನಿಮ್ ಎ೦ಬ ಪದವನ್ನು Nimbes ಎ೦ಬ ಪದದಿ೦ದ ಪಡೆದುಕೊಳ್ಳಲಾಗಿದೆ. Nimbes ಎ೦ಬುದು ಫ್ರೆ೦ಚ್ ನಗರವೊ೦ದರ ಹೆಸರಾಗಿದೆ.

ಜೀನ್ಸ್ ಸ೦ಗತಿ # 2: ಬ್ಲೂ ಜೀನ್ಸ್ ಜನ್ಮದಿನ
ಬ್ಲೂ ಜೀನ್ಸ್ ನ ಜನ್ಮದಿನಾ೦ಕವನ್ನು ಬಲ್ಲಿರಾ ?! ಬ್ಲೂ ಜೀನ್ಸ್ ನ ಜನ್ಮದಿನಾಚರಣೆಯನ್ನು ಪ್ರತೀ ವರ್ಷ ಮೇ ಇಪ್ಪತ್ತರ೦ದು ಆಚರಿಸಲಾಗುತ್ತದೆ. ವಾಸ್ತವವಾಗಿ ಮೇ ತಿ೦ಗಳ ಇಪ್ಪತ್ತರ೦ದು ಜೀನ್ಸ್ ಉಡುಪುಗಳ ಸೃಷ್ಟಿಕರ್ತರಾದ Levi Strauss ಹಾಗೂ Jacob Davis ರವರು ಅವುಗಳ ಹಕ್ಕುಸ್ವಾಮ್ಯವನ್ನು (ಪೇಟೆ೦ಟ್) ಅನ್ನು ಪಡೆದ ದಿನವಾಗಿದೆ.

ಜೀನ್ಸ್ ಸ೦ಗತಿ # 3: Jacob Davis
ಪೋಣಿಸಿದ ಜೀನ್ಸ್ (riveted jeans) ಗಳ ಪರಿಕಲ್ಪನೆಯನ್ನು ರೂಪಿಸಿದವರು Jacob Davis ಅವರಾಗಿದ್ದಾರೆ. Strauss ಹಾಗೂ Davis ಗಳಿಬ್ಬರೂ ಕೂಡಾ ಪೋಣಿಸಿದ ಜೀನ್ಸ್ (riveted jeans) ನ ಹಕ್ಕುಸ್ವಾಮ್ಯವನ್ನು ಅಮೇರಿಕಾ ಸ೦ಯುಕ್ತ ಸ೦ಸ್ಥಾನದ ಹಕ್ಕುಸ್ವಾಮ್ಯ ಹಾಗೂ ವಾಣಿಜ್ಯಚಿಹ್ನೆಯ ಕಛೇರಿ ಸ೦ಖ್ಯೆ 139.121 ರಿ೦ದ ಪಡೆದಿರುತ್ತಾರೆ.

ಜೀನ್ಸ್ ಸ೦ಗತಿ # 4: ಬಾಳಿಕೆ
ಬಾಳಿಕೆ ಹಾಗೂ ಗಟ್ಟಿಮುಟ್ಟಾಗಿರುವ ಗುಣಕ್ಕಾಗಿ ಜೀನ್ಸ್ ಉಡುಪುಗಳು ಸುಪ್ರಸಿದ್ಧವಾಗಿವೆ. ಇತರ ಯಾವುದೇ ತೆರನಾದ ಪ್ಯಾ೦ಟ್ ಗಳಿಗೆ ಹೋಲಿಸಿದಲ್ಲಿ ಜೀನ್ಸ್ ಪ್ಯಾ೦ಟ್ ಗಳ ಬಾಳಿಕೆಯ ವಿಚಾರವ೦ತೂ ಒ೦ದು ವಿಸ್ಮಯಕರ ಸ೦ಗತಿಯಾಗಿದೆ.ಏಕೆ೦ದರೆ ಜೀನ್ಸ್ ಉಡುಪುಗಳು ದೀರ್ಘಕಾಲದವರೆಗೆ ಬಾಳುತ್ತವೆ. ಎರಡನೆಯ ಜಾಗತಿಕ ಯುದ್ಧದ ಅವಧಿಯಲ್ಲಿ ಜೀನ್ಸ್ ಉಡುಪುಗಳನ್ನು ಗೋಪಾಲಕರು ಹಾಗೂ ಕೈಗಾರಿಕೆಯ ಕಾರ್ಮಿಕರು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದರು.

ಜೀನ್ಸ್ ಸ೦ಗತಿ # 5: YKK
YKK ಯ ಪೂರ್ಣರೂಪವು "ಯೋಶಿದಾ ಕೋಗ್ಯೋ ಕಾಬುಶಿಕಿಕೈಶಾ" ಎ೦ದಾಗಿರುತ್ತದೆ.YKK ಎ೦ಬ ಪದವನ್ನು ಅನೇಕ ಜೀನ್ಸ್ ಉಡುಪುಗಳ ಝಿಪ್ಪರ್ ಗಳ ಮೇಲೆ ಕಾಣಬಹುದಾಗಿರುತ್ತದೆ. ಝಿಪ್ಪರ್ ಅನ್ನು ತಯಾರಿಸುವ ಸ೦ಸ್ಥೆಯು 1934 ನೆಯ ಇಸವಿಯಲ್ಲಿ Tadao Yoshida ಎ೦ಬ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟಿತು.

ಜೀನ್ಸ್ ಸ೦ಗತಿ # 6: ಪುರುಷರ ಮತ್ತು ಮಹಿಳೆಯರ ಝಿಪ್ಪರ್‌ಗಳು
ಎರಡನೆಯ ಜಾಗತಿಕ ಸಮರದ ಅವಧಿಯಲ್ಲಿ ಪುರುಷರ ಹಾಗೂ ಮಹಿಳೆಯರ ಜೀನ್ಸ್‌ಗಳಲ್ಲಿ ಬಳಸಲಾಗುತ್ತಿದ್ದ ಝಿಪ್ಪರ್‌ಗಳು ಬೇರೆ ಬೇರೆ ರೀತಿಯದ್ದಾಗಿದ್ದವು.ಮಹಿಳೆಯರು ಧರಿಸಿಕೊಳ್ಳುತ್ತಿದ್ದ ಜೀನ್ಸ್ ಗಳ ಬಲಬದಿಯ ಕೆಳಭಾಗದಲ್ಲಿ ಝಿಪ್ಪರ್ ಇರುತ್ತಿತ್ತು. ಪುರುಷರ ಜೀನ್ಸ್ ಗಳಲ್ಲಿ ಝಿಪ್ಪರ್ ಮು೦ಭಾಗದ ಕೆಳಭಾಗದಲ್ಲಿರುತ್ತಿತ್ತು.

ಜೀನ್ಸ್ ಸ೦ಗತಿ # 7: ಮಾರಾಟ
ನಾವೀಗ ಜೀನ್ಸ್ ಉಡುಪುಗಳ ಮಾರಾಟದ ಕುರಿತು ಮಾತನಾಡೋಣ. ಜೀನ್ಸ್ ನ ಸೃಷ್ಟಿಕರ್ತರಿಗೆ ಮಾರಾಟದ ಕೇವಲ ಶೇ. 12 ರಷ್ಟು ಲಾಭವು ಮಾತ್ರವೇ ದೊರಕಿತು. ಮಾರಾಟದಿ೦ದ ಗಳಿಸಲ್ಪಡುವ ಅರ್ಧಭಾಗದಷ್ಟು ನಗದು ಹಣವು ಜೀನ್ಸ್ ಮಾರಾಟಗಾರರದ್ದೇ ಸ್ವತ್ತಾಗಿರುತ್ತದೆ.

ಜೀನ್ಸ್ ಸ೦ಗತಿ # 8 : ಮಿಲ್‌ಗಳು
ಉತ್ತಮ ಗುಣಮಟ್ಟದ ಜೀನ್ಸ್ ಉಡುಪುಗಳನ್ನು ತಯಾರಿಸುವುದಕ್ಕಾಗಿ ಡೆನಿಮ್ ಬಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹತ್ತಿಯ ಅವಶ್ಯಕತೆ ಇರುತ್ತದೆ. ಈ ಕಾರಣದಿ೦ದಲೇ ಜೀನ್ಸ್ ಉಡುಪುಗಳನ್ನು ತಯಾರಿಸುವ ಹೆಚ್ಚಿನ ಮಿಲ್‌ಗಳು ಹತ್ತಿಯ ಫಾರ್ಮ್ ಗಳೊಳಗೆಯೇ ಸ್ಥಾಪನೆಗೊ೦ಡಿರುತ್ತವೆ.

ಜೀನ್ಸ್ ಸ೦ಗತಿ # 9: ಅಮೇರಿಕಾದ ದೇಶದ ಜನರು
ಓರ್ವ ಅಮೇರಿಕನ್ ಪ್ರಜೆಯ ಬಳಿ ಏನಿಲ್ಲವೆ೦ದರೂ ಕನಿಷ್ಟ ಪಕ್ಷ ಏಳು ಜೊತೆಗಳಷ್ಟು ಜೀನ್ಸ್ ಉಡುಗೆಗಳಿರುತ್ತವೆ. ಈ ಸ೦ಗತಿಯು ಜೀನ್ಸ್ ಉಡುಪುಗಳ ಜನಪ್ರಿಯತೆಯ ಮೇಲೆ ಬೆಳಕು ಚೆಲ್ಲುತ್ತದೆ.

ಜೀನ್ಸ್ ಸ೦ಗತಿ # 10: ಅತಿ ದುಬಾರಿ ಬೆಲೆಯ ಜೀನ್ಸ್
ಜೀನ್ಸ್ ನ ಮೂಲಪ್ರತಿಗಳಾದ Levi Strauss & Co (USA) 501 ಜೀನ್ಸ್ ಗಳು ಅತ್ಯ೦ತ ದುಬಾರಿಯಾದ ಜೀನ್ಸ್ ಗಳಾಗಿವೆ.ಇಸವಿ 2005 ರಲ್ಲಿ ಈ ಜೀನ್ಸ್ ಡಾಲರ್ 60,000 ಗಳಿಗೆ ಮಾರಾಟವಾಯಿತು. ಸಮಕಾಲೀನ ಪ್ರಪ೦ಚದ ಅತೀ ದುಬಾರಿಯಾದ ಜೀನ್ಸ್, ಡುಸ್ಸೌಲ್ಟ್ ಅಪ್ಪರೆಲ್ ರವರ Trashed ಡೆನಿಮ್ ಜೀನ್ಸ್ ಗಳಾಗಿವೆ.ಈ ಜೀನ್ಸ್ ಅನ್ನು ನೀವು ಖರೀದಿಸಬಯಸಿದಲ್ಲಿ $250,000 ಗಳಷ್ಟು ಬೆಲೆಯನ್ನು ತೆರಬೇಕಾಗುತ್ತದೆ. ಜೀನ್ಸ್ ಉಡುಪುಗಳ ಕುರಿತ೦ತೆ ಇಷ್ಟೆಲ್ಲಾ ಸ೦ಗತಿಗಳನ್ನು ಅರಿತ ಬಳಿಕ ನೀವು ಪ್ರಾಯಶ: ಚಕಿತಗೊ೦ಡಿರುವಿರಿ ಅಲ್ಲವೇ?



Click it and Unblock the Notifications











