ಚಿನ್ನಕ್ಕಿಂತ ತಾಮ್ರದ 'ಕೈ ಕಡಗ' ಧರಿಸಿ, ಬಹಳಷ್ಟು ಪ್ರಯೋಜನಗಳಿವೆ!

By: Hemanth
Subscribe to Boldsky

ಭಾರತೀಯರಿಗೆ ಯಾವ ವಸ್ತುವಿನಿಂದ ಯಾವ ರೀತಿಯ ಆರೋಗ್ಯ ಲಾಭಗಳು ಸಿಗುತ್ತದೆ ಎಂದು ಖಚಿತವಾಗಿ ತಿಳಿದಿರುತ್ತದೆ. ಸಾವಿರಾರು ವರ್ಷಗಳಿಂದಲೂ ಭಾರತೀಯರು ದೇಹ ಹಾಗೂ ಆರೋಗ್ಯಕ್ಕೆ ಲಾಭವಾಗುವಂತಹ ವಸ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ.

ಅದರಲ್ಲೂ ಕೆಲವೊಂದು ಲೋಹಗಳಿಂದಲೂ ನಮ್ಮ ದೇಹಕ್ಕೆ ಲಾಭಗಳಿವೆ ಎಂದು ಹಿಂದಿನಿಂದಲೂ ಭಾರತೀಯರು ಅರಿತುಕೊಂಡಿದ್ದಾರೆ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಾಮ್ರದಿಂದ ದೇಹಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದೆ. ತಾಮ್ರದ ಕೈ ಕಡಗವನ್ನು ಅಥವಾ ತಾಮ್ರದ ಕೈ ಬಳೆಯನ್ನು ಪುರುಷರು ಹಾಗೂ ಮಹಿಳೆಯರು ಧರಿಸುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗಲಿದೆ.

ಜ್ಯೋತಿಷ್ಯ: ಚಿನ್ನ, ಬೆಳ್ಳಿಗಿಂತಲೂ 'ತಾಮ್ರದ ಉಂಗುರ' ಶ್ರೇಷ್ಠ!

ಕೆಲವೊಮ್ಮೆ ಯಾವುದೇ ಅಡ್ಡಪರಿಣಾಮಗಳು ಇಲ್ಲದ ತಾಮ್ರದಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಅಂತಹವರು ಇದನ್ನು ಬಳಸದಿರುವುದು ಒಳ್ಳೆಯದು. ತಾಮ್ರದ ಕೈಕಡಗವನ್ನು ಬಳಸಿದರೆ ಯಾವ ರೀತಿಯ ಲಾಭಗಳು ದೇಹಕ್ಕೆ ಆಗುತ್ತದೆ ಎಂದು ಮುಂದೆ ಕಣ್ಣಾಯಿಸುತ್ತಾ ತಿಳಿಯಿರಿ....

ಸೆಳೆತ ನಿವಾರಣೆ

ಸೆಳೆತ ನಿವಾರಣೆ

ಸಂಧಿವಾತ ಮತ್ತು ಸಂಧಿವಾತದಂತಹ ಸಮಸ್ಯೆ ಇರುವವರ ಕಾಲಿನಲ್ಲಿ ಸೆಳೆದಂತಹ ಅನುಭವ ಉಂಟಾಗುತ್ತದೆ. ಇಂತಹ ಸಮಸ್ಯೆಯನ್ನು ತಾಮ್ರವು ಕಡಿಮೆ ಮಾಡುವುದು. ತಾಮ್ರದ ಕೈಕಡಗವನ್ನು ಹಾಕಿಕೊಂಡರೆ ಇದು ಕಡಿಮೆಯಾಗುತ್ತದೆ. ತಾಮ್ರದ ಕೈಕಡಗವು ಮೊಣಕೈಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇತರ ಭಾಗದಲ್ಲಿ ಇರುವಂತಹ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.

ನೋವು ನಿವಾರಕ

ನೋವು ನಿವಾರಕ

ಗಂಟಿನಲ್ಲಿರುವ ಸೆಳೆತ ಕಡಿಮೆ ಮಾಡುವುದರೊಂದಿಗೆ ತಾಮ್ರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಸಂಧಿವಾತ ಇರುವಂತಹ ವ್ಯಕ್ತಿಗಳ ಗಂಟಿನಲ್ಲಿ ಇರುವಂತಹ ನೋವನ್ನು ಇದು ಕಡಿಮೆ ಮಾಡುವುದು. ತಾಮ್ರದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಎಂದು ಕೆಲವೊಂದು ಮೂಲಗಳು ಹೇಳಿವೆ.

ಖನಿಜಾಂಶ ಹೀರಿಕೊಳ್ಳಲು ಸಹಕಾರಿ

ಖನಿಜಾಂಶ ಹೀರಿಕೊಳ್ಳಲು ಸಹಕಾರಿ

ಸತು ಮತ್ತು ಕಬ್ಬಿಣವನ್ನು ಹಾಕಿಕೊಂಡು ತಾಮ್ರದ ಮಿಶ್ರಣವನ್ನು ತಯಾರಿಸುವ ಕಾರಣದಿಂದ ಈ ಖನಿಜಾಂಶಗಳನ್ನು ದೇಹವು ಹೀರಿಕೊಳ್ಳುತ್ತದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಈ ಖನಿಜಾಂಶಗಳ ಕೊರತೆಯಿದ್ದರೆ ಸಮಸ್ಯೆ ಬಗೆಹರಿಯುತ್ತದೆ.

ಸಪ್ಲಿಮೆಂಟ್‌ಗಳಿಂದ ಒಳ್ಳೆಯದು

ಸಪ್ಲಿಮೆಂಟ್‌ಗಳಿಂದ ಒಳ್ಳೆಯದು

ತಾಮ್ರವು ಸಪ್ಲಿಮೆಂಟ್‌ಗಿಂತ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಕೆಲವೊಂದು ಮೂಲಗಳು ಹೇಳಿವೆ. ಕೆಲವೊಂದು ಸೂಕ್ಷ್ಮ ಖನಿಜಾಂಶಗಳು ಬೆವರಿನ ಮೂಲಕ ನೇರವಾಗಿ ರಕ್ತನಾಳಗಳನ್ನು ಸೇರಿಕೊಳ್ಳುವುದರಿಂದ ಇದು ತುಂಬಾ ಪರಿಣಾಮಕಾರಿ ಎನ್ನಲಾಗಿದೆ. ಇದು ಗಂಟು ಹಾಗೂ ಕೋಶಗಳಿಗೆ ನೆರವಾಗಲಿದೆ.

ನ್ಯೂನ್ಯತೆ ನಿವಾರಣೆ

ನ್ಯೂನ್ಯತೆ ನಿವಾರಣೆ

ತಾಮ್ರದ ಕೊರತೆಯ ಸಮಸ್ಯೆಗೆ ಅಯೊರ್ಟಿಕ್ ಅನೆರೈಸ್ಮಗಳು ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಾಮ್ರದ ಕೈಕಡವನ್ನು ಧರಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಇತರ ಲಾಭಗಳು

ಇತರ ಲಾಭಗಳು

ತಾಮ್ರದಿಂದ ಇತರ ಕೆಲವು ಲಾಭಗಳು ಕೂಡ ಇದೆ. ಇದು ಇತರ ಲೋಹಗಳಲ್ಲಿ ಇರುವಂತಹ ವಿಷಕಾರಿ ಅಂಶ ತೆಗೆದುಹಾಕುತ್ತದೆ. ಕೆಲವೊಂದು ಕಿಣ್ವಗಳನ್ನು ಪ್ರಚೋದಿಸಿ ಹಿಮೋಗ್ಲೋಬಿನ್‌ನ್ನು ಉತ್ಪಾದಿಸುತ್ತದೆ.

ವಯಸ್ಸಾಗುವುದನ್ನು ತಡೆಯುವುದು

ವಯಸ್ಸಾಗುವುದನ್ನು ತಡೆಯುವುದು

ತಾಮ್ರದ ಕೈಕಡಗ ಧರಿಸಿರುವಂತಹ ವ್ಯಕ್ತಿಯು ತುಂಬಾ ಆರಾಮವಾದ ಭಾವನೆ ಹೊಂದಿರುತ್ತಾನೆ. ತಾಮ್ರದಲ್ಲಿ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಕಾರಣದಿಂದ ಇದು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ.

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರಿನ ಆರೋಗ್ಯ ಲಾಭಗಳು

 

English summary

Health Benefits Of Wearing Copper Bracelets

Many Indians wear copper bracelets. Both men and women wear them. Wearing copper seems to have a therapeutic effect on the body and that is why since centuries people wore copper ornaments. If you are allergic to copper, you can skip using it but otherwise, copper seems to boost immunity and offer several other health benefits too. Very less scientific evidence is available explaining the benefits. But still, there are no side effects of wearing a copper bracelet unless your skin is allergic or sensitive to copper. Here are some more facts.
Subscribe Newsletter