Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-ಚಿಕನ್ ಆರೋಗ್ಯಕ್ಕೆ ಬಹಳ ಒಳ್ಳೆಯದು
ಮಾಂಸಾಹಾರಿಗಳಿಗೆ ಅತಿಪ್ರಿಯ ಖಾದ್ಯವೆಂದರೆ ಕೋಳಿಮಾಂಸದ ಪದಾರ್ಥ. ಕೋಳಿ ಮಾಂಸ ಬರೆಯ ಭಾರತದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಆಹಾರ, ಸರಿಸುಮಾರು ಗೋಧಿ ಮತ್ತು ಅಕ್ಕಿಯ ಬಳಿಕದ ಸ್ಥಾನ. ಈ ಬೇಡಿಕೆಗೆ ಅನುಗುಣವಾಗಿ ಕೋಳಿ ಫಾರಮ್ಮುಗಳಿಂದ ಪ್ರತಿದಿನವೂ ಲಕ್ಷಾಂತರ ಕೋಳಿಗಳು ಮಾರುಕಟ್ಟೆಗೆ ಬಂದು ಬಾಣಸಿಗನ ಬಾಣಲೆಗೆ ಬೀಳುತ್ತವೆ. ಇದಕ್ಕೆ ನೆರವಾಗಿರುವುದು ಕುಕ್ಕುಟ ತಂತ್ರಜ್ಞಾನ. ಮಾಂಸದ ಕೋಳಿಗಳನ್ನು ಚಪ್ಪರಿಸುವ ಮುನ್ನ, ಇರಲಿ ಎಚ್ಚರ!
ಆದರೆ ಕಹಿ ಸುದ್ದಿ ಏನಪ್ಪಾ ಎಂದರೆ, ಕೋಳಿಯ ಮಾಂಸದ ಬೆಳವಣಿಗೆ ಧಿಡೀರನೇ ಏರಲು ಕೋಳಿಗಳು ತಿನ್ನುವ ಖಾದ್ಯದಿಂದ ಹಿಡಿದು ಕುಡಿಸುವ ನೀರಿನಲ್ಲಿ ಕೃತಕ ರಾಸಾಯನಿಕಗಳನ್ನು ಸೇರಿಸಿ, ಫಾರಮ್ಮಿನ ತಾಪಮಾನ ಮೊದಲಾದವುಗಳನ್ನು ಮಾರ್ಪಾಡಿಸಿ ಒಂದು ಮಾಂಸದ ಮುದ್ದೆ ತಯಾರಾಗುವಂತೆ ಮಾಡಲಾಗುತ್ತದೆ...ಅದು ಏನೇ ಇರಲಿ, ಆದರೆ ಜಗತ್ತಿನಾದ್ಯಾಂತ ಕೋಳಿ ಮಾಂಸಕ್ಕೆ ಮಾತ್ರ ಸಿಕ್ಕಾಪಟ್ಟೆ ಬೇಡಿಕೆ! ಖಾರ ಪ್ರಿಯರಿಗಾಗಿ ಚಿಕನ್ ಚಿಲ್ಲಿ ರೆಸಿಪಿ
ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೋಳಿ ಮಾಂಸವು ತುಂಬಾ ಜನಪ್ರಿಯವಾಗಿದೆ. ಕೋಳಿ ಮಾಂಸದಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಇದಕ್ಕೆ ಕಾರಣವಾಗಿದೆ. ಕೋಳಿ ಮಾಂಸವು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರಲ್ಲಿ ಪ್ರೋಟೀನ್ ದೇಹದ ಬೆಳವಣಿಗೆ ಹಾಗೂ ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಕರಿದ ಕೋಳಿ ಮಾಂಸಕ್ಕಿಂತ ಬೇಯಿಸಿದ ಕೋಳಿ ಮಾಂಸವು ಹೆಚ್ಚು ಆರೋಗ್ಯಕಾರಿ ಎಂದು ಹೇಳಲಾಗುತ್ತದೆ. ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಕೋಳಿ ಮಾಂಸವನ್ನೇ ಸೇವನೆ ಮಾಡಿಕೊಂಡು ಸ್ನಾಯುಗಳನ್ನು ಕಟ್ಟುಮಸ್ತಾದ ಜೀವ ಬೆಳೆಸುತ್ತಾರೆ. ಬೆಳೆಯುವ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಕೋಳಿ ಮಾಂಸ ತುಂಬಾ ಪರಿಣಾಮಕಾರಿ. ಕೋಳಿ ಮಾಂಸವು ದೇಹಕ್ಕೆ ಯಾವ ರೀತಿಯಲ್ಲಿ ಲಾಭವನ್ನು ಉಂಟು ಮಾಡಲಿದೆ ಎಂದು ತಿಳಿದುಕೊಳ್ಳಿ...

ಹೃದಯದ ಆರೋಗ್ಯಕ್ಕೆ
ಚಿಕನ್ ನಲ್ಲಿ ಕೊಲೆಸ್ಟ್ರಾಲ್ ಇದ್ದರೂ ಇದರಲ್ಲಿ ನಿಯಾಸಿನ್(niacin) ಇರುವುದರಿಂದ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಗ್ರಿಲ್ಡ್ ಮಾಡಿದ ಚಿಕನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ರೋಗನಿರೋಧಕ ಶಕ್ತಿ ಹೆಚ್ಚಳ
ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ ಇದರಲ್ಲಿ ಖನಿಜಾಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಜ್ವರ ಬಂದಾಗ ಅದರ ಸುಸ್ತನ್ನು ನಿವಾರಿಸಲು ಚಿಕನ್ ಸೂಪ್ ಕುಡಿದರೆ ಸಾಕು ಸ್ವಲ್ಪ ಸಮಯದಲ್ಲೇ ಚೇತರಿಸಿಕೊಳ್ಳುವಿರಿ.

ಮಾನಸಿಕ ಒತ್ತಡ ನಿಯಂತ್ರಣಕ್ಕೆ!
ತುಂಬಾ ಮಾನಸಿಕ ಒತ್ತಡದಲ್ಲಿ ಇದ್ದಾಗ ಚಿಕನ್ ಅಡುಗೆ ಅಥವಾ ಚಿಕನ್ ಸೂಪ್ ಕುಡಿಯಿರಿ, ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ದೊರೆತಂತೆ ಅನಿಸುವುದು.

ಮುಟ್ಟಿನ ಸಮಯದಲ್ಲಿ
ಕೋಳಿ ಮಾಂಸದಲ್ಲಿ ಇರುವಂತಹ ಮೆಗ್ನಿಶಿಯಂ ಋತುಮಾಸದ ಒತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಋತುಚಕ್ರಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ರಕ್ತದಲ್ಲಿನ ಮೆಗ್ನಿಶಿಯಂ ಕಡಿಮೆಯಾಗುತ್ತದೆ. ಕೋಳಿ ಮಾಂಸವನ್ನು ತಿಂದರೆ ಇದು ಸಮತೋಲನದಲ್ಲಿ ಇರುತ್ತದೆ.

ಹಸಿವು ಹೆಚ್ಚಿಸುವುದು
ಕೋಳಿ ಮಾಂಸದಲ್ಲಿ ಇರುವಂತಹ ಸತುವಿನ ಅಂಶವು ಆರೋಗ್ಯಕಾರಿಯಾಗಿ ಹಸಿವನ್ನು ಹೆಚ್ಚಿಸುವುದು. ಅಲ್ಲದೆ ಕೋಳಿ ಮಾಂಸದ ಸೂಪ್ ನಿಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ.

ಮಕ್ಕಳ ಬೆಳವಣಿಗೆಗೆ
ಬೆಳೆಯುತ್ತಿರುವ ಮಕ್ಕಳಿಗೆ ಕೋಳಿಮಾಂಸವು ಅತೀ ಉತ್ತಮ ಆಹಾರವಾಗಿದೆ. ಕೋಳಿ ಮಾಂಸದಲ್ಲಿ ಹೆಚ್ಚಿನ ಅಮಿನೋ ಆಮ್ಲವಿದೆ. ಇದರಿಂದ ಮಕ್ಕಳು ಉದ್ದ ಹಾಗೂ ಬಲಿಷ್ಠವಾಗಿ ಬೆಳೆಯಲು ನೆರವಾಗುತ್ತದೆ.

ಟೆಸ್ಟೋಸ್ಟಿರಾನ್ ಮಟ್ಟವನ್ನು ಹೆಚ್ಚಿಸುವುದು
ಕೋಳಿ ಮಾಂಸವು ಪುರುಷರಿಗೆ ಹಲವಾರು ರೀತಿಯ ಲಾಭವನ್ನು ಉಂಟು ಮಾಡುತ್ತದೆ. ಕೋಳಿ ಮಾಂಸದಲ್ಲಿ ಇರುವಂತಹ ಸತು ಪುರುಷರಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ತಡೆಯುತ್ತದೆ.

ಸಂಧಿವಾತ ಅಪಾಯ ಕಡಿಮೆಯಾಗುವುದು
ಸೆಲೇನಿಯಂನಂತಹ ಖನಿಜಾಂಶದಿಂದ ಸಮೃದ್ಧವಾಗಿರುವಂತಹ ಕೋಳಿ ಮಾಂಸವು ಸಂಧಿವಾತದ ಅಪಾಯವನ್ನು ತಡೆಯುತ್ತದೆ. ಜೀವನದ ಯಾವುದೇ ಹಂತದಲ್ಲಿ ಸಂಧಿವಾತವನ್ನು ಇದು ತಡೆಯುತ್ತದೆ.

ಮುನ್ನೆಚ್ಚರಿಕೆ ಕ್ರಮ
ಬ್ರಾಯ್ಲರ್‌ಗಿಂತ ನಾಟಿ ಕೋಳಿಯೇ ಉತ್ತಮ. ಬ್ರಾಯ್ಲರ್ ಕೊಳ್ಳುವುದಾದರೆ ಕೊಂಚ ದುಬಾರಿಯಾದರೂ ತೊಂದರೆಯಿಲ್ಲ, ಉತ್ತಮ ಗುಣಮಟ್ಟದ ಕೋಳಿಯನ್ನೇ ಕೊಳ್ಳಿ. ಕೊಂಡ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿಯೇ ತನ್ನಿ ಹಾಗೂ ಪ್ರತಿ ಬಾರಿ ತಾಜಾ ಕೋಳಿಯ ಮಾಂಸವನ್ನೇ ಬಯಸಿ. ಸಾಧ್ಯವಾದಷ್ಟು ಕಡಿಮೆ ತೂಕದ ಕೋಳಿಗಳನ್ನು ಕೊಳ್ಳುವುದು ಇನ್ನೂ ಉತ್ತಮ.

ಬ್ರಾಯ್ಲರ್ ಕೋಳಿಗಳಿಂದ ಆದಷ್ಟು ದೂರವಿರಿ
ಕೋಳಿಗಳಿಗೆ ಬೇಗನೇ ತೂಕ ಬರಲು ತಿನ್ನಿಸುವ ಹಾರ್ಮೋನುಗಳು, ಆಂಟಿಬಯೋಟಿಕ್ ಮತ್ತಿತರ ಔಷಧಿಗಳಿಂದ ಇದರ ದೇಹದಲ್ಲಿ ಆರ್ಸೆನಿಕ್ ಒಂದು ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ.
ವಿಚಿತ್ರವೆಂದರೆ ಈ ವಿಷ ಕೋಳಿಯ ದೇಹದಲ್ಲಿದ್ದರೂ ಕೋಳಿ ಈ ವಿಷಕ್ಕೆ ಸಾಯುವುದಿಲ್ಲ. ಬದಲಿಗೆ ಇದರ ಮಾಂಸವನ್ನು ಸೇವಿಸಿದವರಿಗೆ ಪ್ರಾಣಾಪಾಯ ಉಂಟುಮಾಡುತ್ತದೆ.



Click it and Unblock the Notifications









