Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನುಗ್ಗೆ ಸೊಪ್ಪು+ಅರಿಶಿನ- ಬರೋಬ್ಬರಿ ಏಳು ರೋಗಕ್ಕೆ ಮದ್ದು....
ಕುಕ್ಕರ್‌ನಲ್ಲಿ ಸ್ವಲ್ಪ ನುಗ್ಗೆ ಎಲೆಗಳನ್ನು ಬೇಯಿಸಿ ಮೃದುವಾದ ಬಳಿಕ ಈ ಎಲೆಗಳಿಗೆ ಎರಡು ಚಿಕ್ಕಚಮಚ ಅರಿಶಿನ ಪುಡಿ ಸೇರಿಸಿ ಪ್ರತಿದಿನ ಮುಂಜಾನೆಯ ಉಪಾಹಾರದ ಬಳಿಕ ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು.
ನಮ್ಮ ಆರೋಗ್ಯವನ್ನು ಕಾಪಾಡಲು ನಿಸರ್ಗ ನಮ್ಮ ಕೈತೋಟದಲ್ಲಿಯೇ ಹಲವಾರು ಔಷಧೀಯ ಸಸ್ಯಗಳನ್ನು ಕೊಡುಗೆಯಾಗಿ ನೀಡಿದೆ. ಸಾಂಬಾರ್‌ನ ಅವಿಭಾಜ್ಯ ಅಂಗವಾಗಿರುವ ನುಗ್ಗೇಕಾಯಿಯನ್ನು ಇಷ್ಟಪಡುವ ನಾವು ನುಗ್ಗೆಸೊಪ್ಪನ್ನು ಮರೆತೇ ಬಿಟ್ಟಿದ್ದೇವೆ. ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು
ಈ ನುಗ್ಗೆಯ ಕೆಲವು ಎಲೆಗಳನ್ನು ಅರಿಶಿನದ ಜೊತೆಗೆ ಸೇವಿಸಿದರೆ ಕನಿಷ್ಠ ಏಳು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಕುಕ್ಕರ್‌ನಲ್ಲಿ ಸ್ವಲ್ಪ ಎಲೆಗಳನ್ನು (ಸರಿ ಸುಮಾರು ಹತ್ತು ಎಲೆಗಳು) ಬೇಯಿಸಿ ಮೃದುವಾದ ಬಳಿಕ ಈ ಎಲೆಗಳಿಗೆ ಎರಡು ಚಿಕ್ಕಚಮಚ ಅರಿಶಿನ ಪುಡಿ ಸೇರಿಸಿ ಪ್ರತಿದಿನ ಮುಂಜಾನೆಯ ಉಪಾಹಾರದ ಬಳಿಕ ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ...

ಮಧುಮೇಹವನ್ನು ಗುಣಪಡಿಸುತ್ತದೆ
ನುಗ್ಗೆಯ ಎಲೆಗಳಲ್ಲಿ ರೈಬೋಫ್ಲೇವಿನ್ ಎಂಬ ಪೋಷಕಾಂಶವಿದ್ದು ಇದು ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ತನ್ಮೂಲಕ ಮಧುಮೇಹದ ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸಿ ಮಧುಮೇಹ ತಹಬಂದಿಗೆ ಬರಲು ನೆರವಾಗುತ್ತದೆ.
ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
ಗರ್ಭದಲ್ಲಿರುವ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ
ಗರ್ಭಿಣಿಯರು ಈ ವಿಧಾನವನ್ನು ಅನುಸರಿಸುವ ಮೂಲಕ ಈ ಎಲೆಗಳಲ್ಲಿರುವ ಫೋಲೇಟ್ ಎಂಬ ಪೋಷಕಾಂಶ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಗೆ ಹೆಚ್ಚಿನ ನೆರವು ನೀಡುವ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಅರಿಶಿನ ಪುಡಿ ಮತ್ತು ನುಗ್ಗೆಯ ಎಲೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುವ ಮೂಲಕ ಹಲವು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಕರುಳಿನಲ್ಲಿ ತ್ಯಾಜ್ಯಗಳನ್ನು ಸಡಿಲಿಸಿ ಸುಲಭವಾಗಿ ಹೊರಹಾಕಲು ನೆರವಾಗುತ್ತದೆ. ತನ್ಮೂಲಕ ಮಲಬದ್ದತೆಯ ತೊಂದರೆಯನ್ನು ನಿವಾರಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ
ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ
ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ. ಈ ಸೊಪ್ಪಿನ ಸೇವನೆಯ ಬಳಿಕ ರಕ್ತಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯದ ತೊಂದರೆ ಕಡಿಮೆಯಾಗುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ
ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.
ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!



Click it and Unblock the Notifications
