ತೂಕ ಇಳಿಸಲು ನೆರವಾಗುವ ಪುಟ್ಟ ಕರಿಮೆಣಸಿನ ದೊಡ್ಡ ಆರೋಗ್ಯಕರ ಪ್ರಯೋಜನಗಳು

Posted By: Arshad
Subscribe to Boldsky

ಭಾರತೀಯ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಮಹತ್ವವಿದೆ. ಚಿಟಿಕೆಯಷ್ಟು ಕರಿಮೆಣಸು ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸುವ ಮೂಲಕ ಅಡುಗೆಯ ರುಚಿಯನ್ನು ಹೆಚ್ಚಿಸಬಹುದು, ಜೊತೆಗೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನೂ ಪಡೆಯಬಹುದು. ಕಾಳುಮೆಣಸಿನಲ್ಲಿ ಅಗತ್ಯ ಖನಿಜಗಳಾದ ಮೆಗ್ನೀಶಿಯಂ, ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಗಂಧಕ, ಕಬ್ಬಿಣ

ಮೊದಲಾದವು ಇವೆ. ಇದರಲ್ಲಿ ಕರಗದ ನಾರು ಹಾಗೂ ನಿಗದಿತ ಪ್ರಮಾಣದ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟುಗಳಿವೆ. ಕಾಳುಮೆಣಸನ್ನು ಆಹಾರದೊಡನೆ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಅತಿಸಾರ ಹಾಗೂ ಮಲಬದ್ಧತೆಯಗದಂತೆಯೂ ನೋಡಿಕೊಳ್ಳಬಹುದು.

ಕಾಳುಮೆಣಸಿನ ಪ್ರಮುಖ ಉಪಯೋಗವೆಂದರೆ ಜೀರ್ಣಕ್ರಿಯೆಯಲ್ಲಿ ಉತ್ಪನ್ನವಾಗುವ ವಾಯುವನ್ನು ನಿಗ್ರಹಿಸುತ್ತದೆ. ದೇಹದಲ್ಲಿ ಬೆವರಿನ ಹಾಗೂ ಮೂತ್ರದ ಪ್ರಮಾಣ ಹೆಚ್ಚಿಸಲೂ ನೆರವಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟು ಗುಣ ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ ಹಾಗೂ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಕಣಗಳ ಪ್ರಭಾವದಿಮ್ದ ರಕ್ಷಿಸುತ್ತದೆ.

ಅರಿಶಿನದ ಜೊತೆ ಕರಿಮೆಣಸು ಬೆರೆತರೆ ಅದರ ಶಕ್ತಿಯೇ ಬೇರೆ...

ಆಯುರ್ವೇದದ ಪ್ರಕಾರ ಕಾಳುಮೆಣಸು ಕಿವಿನೋವು ಮತ್ತು ಗ್ಯಾಂಗ್ರೀನ್ ಮೊದಲಾದ ಕಾಯಿಲೆಗಳಿಗೆ ಔಷಧಿಯಾಗಿದೆ. ಈ ಪ್ರಯೋಜನಗಳ ಹೊರತಾಗಿ ಕಾಳುಮೆಣಸು ಸ್ಥೂಲಕಾಯ ಆವರಿಸುವುದರಿಂದ ರಕ್ಷಿಸುತ್ತದೆ ಹಾಗೂ ತೂಕ ಇಳಿಸಲು ನೆರವಾಗುವ ಆಹಾರಕ್ಕೆ ರುಚಿಕಾರಕವಾಗಿಯೂ ಬಳಸಲ್ಪಡುತ್ತದೆ. ಬನ್ನಿ, ತೂಕ ಇಳಿಸುವ ನಿಟ್ಟಿನಲ್ಲಿ ಕಾಳುಮೆಣಸು ಯಾವ ರೀತಿಯಲ್ಲಿ ನೆರವಿಗೆ ಬರುತ್ತದೆ ಎಂಬುದನ್ನು ನೋಡೋಣ... 

ಕಾಳುಮೆಣಸಿನಲ್ಲಿ ಪ್ರಬಲ ಪೋಷಕಾಂಶಗಳಿವೆ

ಕಾಳುಮೆಣಸಿನಲ್ಲಿ ಪ್ರಬಲ ಪೋಷಕಾಂಶಗಳಿವೆ

ಕಾಳುಮೆಣಸಿನಲ್ಲಿ ಪ್ರಬಲ ಪೋಷಕಾಂಶವಾದ ಪೈಪೆರಿನ್ ಇದೆ. ಇದೇ ಕಾಳುಮೆಣಸಿನ ಖಾರಕ್ಕೆ ಪ್ರಮುಖ ಕಾರಣ. ಈ ಪೋಷಕಾಂಶ ಕೊಬ್ಬಿನ ಕಣಗಳ ಉತ್ಪತ್ತಿಗೆ ಅಡ್ಡಿಯಾಗುತ್ತದೆ. ಈ ಕ್ರಿಯೆಗೆ adipogenesis ಎಂದು ಕರೆಯುತ್ತಾರೆ. ಪರಿಣಾಮವಾಗಿ ಸ್ಥೂಲಕಾಯ ಆವರಿಸಲು ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಇದರಲ್ಲಿದೆ ಫೈಟೋ ನ್ಯೂಟ್ರಿಯೆಂಟುಗಳು

ಇದರಲ್ಲಿದೆ ಫೈಟೋ ನ್ಯೂಟ್ರಿಯೆಂಟುಗಳು

ಆಹಾರಕಣಗಳನ್ನು ಒಡೆಯಲು ನೆರವಾಗುವ ಮೂಲಕ ಕಾಳುಮೆಣಸು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅಲ್ಲದೇ ಕಾಳುಮೆಣಸಿನ ಕವಚದಲ್ಲಿ ಫೈಟೋ ನ್ಯೂಟ್ರಿಯಂಟ್ ಅಥವಾ ರಕ್ಷಣೆ ಒದಗಿಸುವ ಪೋಷಕಾಂಶಗಳಿವೆ. ಇವು ಕೊಬ್ಬಿನ ಕಣಗಳನ್ನು ಹೆಚ್ಚುಹೆಚ್ಚಾಗಿ ಒಡೆಯಲು ಪ್ರಚೋದನೆ ನೀಡುತ್ತದೆ.

 ವೀಳ್ಯದೆಲೆಯೊಂದಿಗೆ ಕಾಳುಮೆಣಸು

ವೀಳ್ಯದೆಲೆಯೊಂದಿಗೆ ಕಾಳುಮೆಣಸು

ತೂಕ ಕಳೆದುಕೊಳ್ಳಲು ದಿನಕ್ಕೆರಡು ವೀಳ್ಯದೆಲೆಗಳನ್ನು ಕೆಲವು ಕಾಳುಮೆಣಸಿನೊಂದಿಗೆ ಜಗಿದು ಸೇವಿಸಿ. ಇದರಿಂದ ತೂಕ ಇಳಿಸಲು ಭಾರೀ ನೆರವು ದೊರಕುತ್ತದೆ. ಏಕೆಂದರೆ ಇವೆರಡೂ ಸಾಮಾಗ್ರಿಗಳಲ್ಲಿರುವ ಪೋಷಕಾಂಶಗಳು ಕೊಬ್ಬಿನ ಕಣಗಳನ್ನು ಗರಿಷ್ಟ ಮಟ್ಟದಲ್ಲಿ ನಿವಾರಿಸುತ್ತವೆ.

ಕಾಳು ಮೆಣಸು ಕಡಿಮೆ ಕ್ಯಾಲೋರಿ ಹೊಂದಿದೆ

ಕಾಳು ಮೆಣಸು ಕಡಿಮೆ ಕ್ಯಾಲೋರಿ ಹೊಂದಿದೆ

ಒಂದು ವೇಳೆ ನೀವು ಸ್ಥೂಲಕಾಯ ಹೊಂದಿದ್ದು ಕಡಿಮೆ ಕ್ಯಾಲೋರಿ ಇರುವ ಆಹಾರಗಳನ್ನು ಸೇವಿಸುವಂತೆ ಸಲಹೆ ಪಡೆದಿದ್ದರೆ ನಿಮ್ಮ ಅಹಾರದಲ್ಲಿ ಕಾಳು ಮೆಣಸನ್ನು ಧಾರಾಳವಾಗಿ ಸೇರಿಸಿಕೊಳ್ಳಬಹುದು. ಒಂದು ಟೀ ಚಮಚದಷ್ಟು ಕಾಳುಮೆಣಸಿನಲ್ಲಿ ಕೇವಲ ಎಂಟು ಕ್ಯಾಲೋರಿ ಮಾತ್ರವೇ ದೊರಕುತ್ತದೆ. ಇದೇ ಕಾರಣದಿಂದ ನಿಮ್ಮ ಅಹಾರಕ್ಕೆ ರುಚಿಗಾಗಿ ಸೇರಿಸುವ ಭಾರೀ ಕ್ಯಾಲೋರಿಗಳಿರುವ ಸಾಸ್ ಹಾಗೂ ಇತರ ರುಚಿಕಾರಕಗಳ ಬದಲಿಗೆ ಕಾಳುಮೆಣಸಿನ ಪುಡಿಯನ್ನು ಬಳಸಬಹುದು.

ಹೊಸ ಕೊಬ್ಬಿನ ಕಣಗಳ ಉತ್ಪತ್ತಿಯನ್ನು ತಡೆಯುತ್ತದೆ

ಹೊಸ ಕೊಬ್ಬಿನ ಕಣಗಳ ಉತ್ಪತ್ತಿಯನ್ನು ತಡೆಯುತ್ತದೆ

ಕಾಳುಮೆಣಸಿನ ಸೇವನೆಯಿಂದ ಕೊಬ್ಬಿನ ಆಮ್ಲ, ಟ್ರೈಗ್ಲಿಸರೈಡ್, ಫಾಸ್ಪೋಲಿಪಿಡ್ಸ್ ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಿಸುವ ಮೂಲಕ ರಕ್ತದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ರಕ್ತದಲ್ಲಿ ಒಳ್ಳೆಯ ಕೊಲೆಸ್ಟಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಕೊಬ್ಬಿನ ಕಣಗಳು ಹೊಸದಾಗಿ ಉತ್ಪತ್ತಿಯಾಗದಂತೆ ತಡೆಯುತ್ತದೆ.

ಕಾಳುಮೆಣಸು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕಾಳುಮೆಣಸು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕಾಳುಮೆಣಸನ್ನು ಆಹಾರದೊಡನೆ ಸೇವಿಸುವ ಮೂಲಕ ಜೀರ್ಣಾಂಗಗಳಲ್ಲಿ ಕೊಬ್ಬಿನ ಆಮ್ಲಗಳನ್ನು ಮೊದಲಾಗಿ ಜೀರ್ಣಗೊಳಿಸುವ ಮೂಲಕ ಇತರ ಕೊಬ್ಬುಗಳನ್ನು ಒಡೆಯುವುದನ್ನು ಸುಲಭವಾಗಿಸುತ್ತದೆ. ಇದು ಉತ್ತಮವಾದ ಉಷ್ಣಕಾರಿ ಆಹಾರವಾಗಿದ್ದು ತನ್ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಆಹಾರದ ಪೋಷಕಾಂಶಗಳು ಶೀಘ್ರವಾಗಿ ದೇಹದ ವಿವಿಧ ಭಾಗಗಳಿಗೆ ತಲುಪಲು ನೆರವಾಗುತ್ತದೆ.

ಸ್ಥೂಲಕಾಯದ ಮೂಲಕ ಎದುರಾಗುವ ಉತ್ಕರ್ಷಣಶೀಲ ಒತ್ತಡದಿಂದ ರಕ್ಷಿಸುತ್ತದೆ

ಸ್ಥೂಲಕಾಯದ ಮೂಲಕ ಎದುರಾಗುವ ಉತ್ಕರ್ಷಣಶೀಲ ಒತ್ತಡದಿಂದ ರಕ್ಷಿಸುತ್ತದೆ

ಸ್ಥೂಲದೇಹಿಗಳು ತಮಗೆ ಇಷ್ಟವಾದ ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಉತ್ಕರ್ಷಣಶೀಲ ಒತ್ತಡಕ್ಕೆ ಒಳಗಾಗಿರುತ್ತಾರೆ. ಈ ಒತ್ತಡ ಮುಂದೆ ಕ್ಯಾನ್ಸರ್, ಪಾರ್ಕಿನ್ಸನ್ ಖಾಯಿಲೆ, ಆಲ್ಜೀಮರ್ಸ್ ಕಾಯಿಲೆಗಳಿಗೂ ಮೂಲವಾಗಬಲ್ಲುದು. ಆಹಾರದಲ್ಲಿ ಕಾಳು ಮೆಣಸನ್ನು ಅಳವಡಿಸಿಕೊಳ್ಳುವ ಮೂಲಕ ಸ್ಥೂಲಕಾಯದ ಮೂಲಕ ಎದುರಾಗುವ ಉತ್ಕರ್ಷಣಶೀಲ ಒತ್ತಡದಿಂದ ರಕ್ಷಣೆ ಪಡೆಯಬಹುದು.

ಕಾಳುಮೆಣಸು ಕ್ಯಾಲೋರಿಗಳನ್ನು ದಹಿಸುತ್ತದೆ

ಕಾಳುಮೆಣಸು ಕ್ಯಾಲೋರಿಗಳನ್ನು ದಹಿಸುತ್ತದೆ

ಕಾಳುಮೆಣಸನ್ನು ಇತರ ಸಾಂಬಾರ ಪದಾರ್ಥಗಳೊಂದಿಗೆ ಸೇವಿಸಿದಾಗ ನಾವು ಸೇವಿಸುವ ಆಹಾರದ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಅಗತ್ಯಕ್ಕೂ ಹೆಚ್ಚು ಸೇವಿಸಿದ ಆಹಾರದ ಮೂಲಕ ಲಭ್ಯವಾದ ಕ್ಯಾಲೋರಿಗಳನ್ನು ಘಂಟೆಗಳ ಬಳಿಕವೂ ದಹಿಸುವ ಸಾಮರ್ಥ್ಯವನ್ನು ಕಾಳುಮೆಣಸು ಪಡೆದಿದೆ.

ಪೋಷಕಾಂಶಗಳನ್ನು ಶೀಘ್ರವಾಗಿ ಹೀರಿಕೊಳ್ಳಲು ನೆರವಾಗುತ್ತದೆ.

ಪೋಷಕಾಂಶಗಳನ್ನು ಶೀಘ್ರವಾಗಿ ಹೀರಿಕೊಳ್ಳಲು ನೆರವಾಗುತ್ತದೆ.

ಒಂದು ವೇಳೆ ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಆಹಾರದಲ್ಲಿ ಕಾಳುಮೆಣಸನ್ನು ಹೆಚ್ಚು ಸೇವಿಸಬೇಕು. ಏಕೆಂದರೆ ಈ ಮೂಲಕ ದೇಹ ಆಹಾರಗಳಲ್ಲಿರುವ ಪೋಷಕಾಂಶಗಳನ್ನು ಪೂರ್ಣಪ್ರಮಾಣದಲ್ಲಿ ಪಡೆಯಲು ಹಾಗೂ ಶೀಘ್ರವಾಗಿ ಪಡೆಯಲು ಸಾಧ್ಯವಾಗುತ್ತದೆ ಹಾಗೂ ತನ್ಮೂಲಕ ದೇಹದ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ನೆರವಾಗುತ್ತದೆ.

ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ

ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ

ಹೊಟ್ಟೆಯ ಕೊಬ್ಬು ತೂಕ ಹೆಚ್ಚಿಸುವುದು ಮಾತ್ರವಲ್ಲ, ಅಧಿಕ ರಕ್ತದೊತ್ತಡ, ಟೈಪ್ ೨ ಮಧುಮೇಹ, ಮರೆಗುಳಿತನ ಹಾಗೂ ಕೆಲವು ಬಗೆಯ ಕ್ಯಾನ್ಸರ್ ಗಳಿಗೆ ಕಾರಣವಾಗಬಲ್ಲುದು. ಕಾಳುಮೆಣಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೆರವಾಗುವ ಮೂಲಕ ಈ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

English summary

Health Benefits Of Black Pepper For Weight Loss

Black pepper also prevents the formation of intestinal gas and promotes sweating and urination. Black pepper has anti-bacterial and antioxidant properties that help fight against infections and repair the damage caused by free radicals. According to ayurveda, black pepper helps to prevent ear aches and gangrene as well. Apart from the benefits that it offers, black pepper has potential benefit for fighting obesity and can be used as a source of flavouring agent in a weight-loss diet. Here are the health benefits of black pepper for weight loss.
Story first published: Thursday, January 11, 2018, 16:00 [IST]