For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀಯಿಂದ ಆರೋಗ್ಯ ಲಾಭ ಪಡೆಯಬೇಕೆ? ಹಾಗಾದರೆ ಹೀಗೆ ತಯಾರಿಸಿ...

By Anuradha Yogesh
|

ಎಲ್ಲರಿಗೂ ಗೊತ್ತಿರುವಂತೆ ಈವತ್ತಿನ ಜನಾಂಗ ದೇಹಾರೋಗ್ಯಕ್ಕೆ ತುಂಬ ಪ್ರಾಮುಖ್ಯತೆ ಕೊಡುತ್ತದೆ. ಆಯಾಸ ಪರಿಹರಿಸಿಕೊಳ್ಳಲು ಎಲ್ಲರೂ ಚಹ ಮತ್ತು ಕಾಫಿ ಮೊರೆಹೋಗುವದು ಸುಳ್ಳಲ್ಲ. ಕ್ಯಾಲೋರಿ ಲೆಕ್ಕ ಹಾಕಿ ಊಟ ಮಾಡುವವರಿಗೆ ಸಕ್ಕರೆ, ಹಾಲು ಬೆರೆತ ಚಹ ಕುಡಿಯುವದು ಪಥ್ಯವಾಗದ ವಿಷಯ. ಆದರೆ ಚಹ ಕುಡಿಯದೆ ದಿನವೇ ಪರಿಪೂರ್ಣವೆನಿಸುವದಿಲ್ಲ. ಚಹಕ್ಕೆ ಪರ್ಯಾಯವಾದ ಎಲ್ಲರಿಗೂ ವರದಾನವಾದ ಆರೋಗ್ಯಕರ ಹಾಗು ಚೈತನ್ಯ ಬರಿಸುವ ಪೇಯವೆಂದರೆ 'ಗ್ರೀನ್ ಟೀ'.

ಚಹದಷ್ಟು ರುಚಿಯೆನಿಸದಿದ್ದರೂ, ಗ್ರೀನ್ ಟೀನಲ್ಲಿ ಆರೋಗ್ಯಕ್ಕೆ ಪೂರಕವಾದ ಬಹಳ ಅಂಶಗಳಿವೆ. ಇದು ಕ್ಯಾನ್ಸರ್‌ನಂತಹ ಮಾರಕ ರೋಗದೊಂದಿಗೆ ಹೋರಾಡುವ ಜೊತೆಗೆ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಮುಖ್ಯವಾಗಿ ಧೂಮಪಾನ ಮಾಡುವವರ ಆರೋಗ್ಯ ಸುಧಾರಿಸುವದಗೋಸ್ಕರ ಬಿಡುಗಡೆಯಾಯಿತು.

green tea

ಇದರಲ್ಲಿರುವ ಆಂಟಿಆಕ್ಸಿಡೆಂಟುಗಳಿಂದ ತುಂಬ ಪ್ರಸಿದ್ಧ ಪೇಯವಾಗಿ ಜನಪ್ರಿಯವಾಗಿದೆ. ಚೀನೀಯರು ಇದರಲ್ಲಿರುವ ಔಷಧೀಯ ಗುಣಗಳನ್ನು ಮೊದಲು ಪತ್ತೆಹಚ್ಚಿ ಏಷ್ಯದ ಎಲ್ಲ ದೇಶಗಳಿಗೆ ಪರಿಚಯಿಸಿದರು. ಗ್ರೀನ್ ಟೀನ ಮಹತ್ವಗಳ ಪಟ್ಟಿ ನೋಡೋಣ ಬನ್ನಿ..

ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!

ಇದರಲ್ಲಿರುವ 'ಕ್ಯಾಟೆಚಿನ್' ಎಂಬ ಆಂಟಿಆಕ್ಸಿಡೆಂಟ್ ದೇಹದಲ್ಲಿರುವ ಬ್ಯಾಕ್ಟೀರಿಯ ಹಾಗು ವೈರುಸ್ಗಿಳನ್ನು ನಿರ್ನಾಮಗೊಳಿಸಿ ದೇಹವನ್ನು ರೋಗಗಳಿಂದ ಸಂರಕ್ಷಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕರಗಿಸುತ್ತದೆ. ಕ್ಯಾನ್ಸರಿಗೆ ಮಾರಕವಾದ ಜೀವಕೋಶಗಳನ್ನು ನಾಶಗೊಳಿಸುವದಲ್ಲದೆ, ಅವುಗಳ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಇದರಲ್ಲಿರುವ ಅಮೀನೊ ಆಸಿಡ್ ಖಿನ್ನತೆಗೆ ರಾಮಬಾಣವಾಗಿದೆ.

green tea

ಈಗಿನ ಧಾವಂತದ ಜೀವನದಲ್ಲಿ ಮೇಲೆ ಹೇಳಿರುವ ಎಲ್ಲ ರೋಗಗಳು ಬಹಳ ಸಾಮಾನ್ಯವಾಗಿವೆ. ಇವೆಲ್ಲವುಗಳಿಗೆ ಸುಲಭವಾದ ಪರಿಹಾರವೆಂದರೆ ಗ್ರೀನ್ ಟೀಯ ಸೇವನೆ. ಆದ್ದರಿಂದ ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ. ಗ್ರೀನ್ ಟೀಯನ್ನು ಬ್ಲಾಕ್ ಟೀ‌ನ(ನಮ್ಮ ದಿನನಿತ್ಯದ ಚಹದ) ಗಿಡದಿಂದಲೇ ಪಡೆಯಲಾಗುತ್ತದೆ. ಆದರೆ ಗ್ರೀನ್ ಟೀನ ಎಲೆಗಳನ್ನು ಕಡಿಮೆ ಸಂಸ್ಕರಿಸುವದರಿಂದ ಇದರಲ್ಲಿವ ಪೌಷ್ಟಿಕಾಂಷಗಳು ನಾಶವಾಗುವದಿಲ್ಲ.

ಹಲ್ಲಿನ ಯಾವುದೇ ಸಮಸ್ಯೆಗೆ-ಒಂದು ಕಪ್ 'ಗ್ರೀನ್ ಟೀ' ಪರ್ಫೆಕ್ಟ್ ಮದ್ದು!

ಗ್ರೀನ್ ಮತ್ತು ಬ್ಲಾಕ್ ಟೀನ ಎಲೆಗಳನ್ನು ಒಂದೇ ಗಿಡದಿಂದ ತೆಗೆದುಕೊಂಡರೂ, ಅವುಗಳಿಂದ ತಯಾರಿಸುವ ಚಹಾದ ವಿಧಾನ ಮಾತ್ರ ಒಂದೇ ಆಗಿಲ್ಲ. ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಮಾತ್ರ ನಮಗೆ ಸಂಪೂರ್ಣ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗ್ರೀನ್ ಟೀಯನ್ನು ಸರಿಯಾಗಿ ತಯಾರಿಸುವ ವಿಧಾನ ತಿಳಿಯೋಣ ಬನ್ನಿ:

ಗ್ರೀನ್ ಟೀ ಎಲೆಗಳು

ಸಾಧ್ಯವಾದಷ್ಟು ಮಟ್ಟಿಗೆ ಬಿಡಿದಾದ ದೊಡ್ಡ ಎಲೆಗಳನ್ನು ಉಪಾಯೋಗಿಸಬೇಕು. ಟೀ ಬಾಗ್ಸ್ ಉಪಯೋಗಿಸಿದರೆ ಸಂಪೂರ್ಣ ಲಾಭ ಸಿಗಲಿಕ್ಕಿಲ್ಲ. ಕಡಿಮೆ ಸಂಸ್ಕರಿಸಿದ್ದ ಎಲೆಗಳಿದ್ದಷ್ಟೂ ಒಳ್ಳೆಯದು. ದೊಡ್ಡ ಎಲೆಗಳು ಸಣ್ಣ ಸಣ್ಣ ಎಲೆಗಳಿಗಿಂತ ಕುದಿಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

green tea

ಖರೀದಿಸಿದ ಎಲೆಗಳ ಶೇಖರಣೆ

ಎಲೆಗಳ ತಾಜಾತನ ಕಾಪಾಡಲು ಸಾಧ್ಯವಾದಷ್ಟು ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಡಬೇಕು. ನೇರವಾಗಿ ಸೂರ್ಯನ ಕಿರಣಗಳು ಬೀಳದಂತಿರಬೇಕು. ಸ್ವಲ್ಪ ಸ್ವಲ್ಪವೇ ಖರೀದಿಸಿ ಉಪಯೋಗಿಸಿ, ಇದರಿಂದ ಎಲೆಗಳು ತಾಜಾತನ ಉಳಿಸಿಕೊಳ್ಳುತ್ತವೆ. ಎಲೆಗಳ ಕುದಿಸುವಿಕೆ ಅತಿ ಮುಖ್ಯವಾದ ಅಂಶ. ಹೆಚ್ಚು ಹೊತ್ತು ಕುದಿಸಿದರೆ ಪೌಷ್ಟಿಕಾಂಷಗಳು ನಶಿಸಿ ಚಹವು ಕಹಿಯಾಗುತ್ತದೆ. ಸಕ್ಕರೆ ಮತ್ತು ಹಾಲು ಬೆರೆಸದೆ ಇರುವದರಿಂದ ಕಹಿ ಚಹದ ಸೇವನೆ ಕಷ್ಟವಾಗುತ್ತದೆ. ಸಾಕಷ್ಟು ಬಿಸಿ ಮಾಡದಿದ್ದರೆ, 'ಕ್ಯಾಟೆಚಿನ್' ಆಂಟಿಆಕ್ಸಿಡೆಂಟ್ ಬಿಡುಗಡೆಯಾಗುವದಿಲ್ಲ. ಆದ್ದರಿಂದ ಕುದಿಯುವ ನೀರಿನ ಶಾಖ 160 ಡಿಗ್ರಿ ಫ್ಯಾರನ್‌ಹೀಟ್ ನಷ್ಟು ಇರಬೇಕು. ಒಂದು ಚಮಚ ಎಲೆಗಳಿಂದ ಒಂದು ಕಪ್ ಚಹ ತಯಾರಿಸಬಹುದು.

ಇನ್ನು ಚಹ ತಯಾರಿಸುವ ವಿಧಾನವನ್ನು ಹಂತ ಹಂತವಾಗಿ ನೋಡೋಣ ಬನ್ನಿ:

*ಪಾತ್ರೆಯಲ್ಲಿ ನೀರನ್ನು ಒಂದು ಸಣ್ಣ ಕುದಿ ಬರುವವರೆಗೆ ಕುದಿಸಬೇಕು.

*ಒಂದು ಚಮಚದಷ್ಟು ಗ್ರೀನ್ ಟೀ ಎಲೆಗಳನ್ನು ಹಾಕಿ 2-3 ನಿಮಿಷಗಳವರೆಗೆ ಮುಚ್ಚಿ ಇಡಬೇಕು.

*ಚಹವನ್ನು ಶೋಧಿಸಿ ಆಸ್ವಾದಿಸಿ. ನಿಮಗೆ ಮೊದಲನೆಯ ಬಾರಿಗೆ ಚಹ ರುಚಿಸಲಿಕ್ಕಿಲ್ಲ, ಚಿಂತೆ ಬೇಡ ಎಲೆಗಳನ್ನು ಸ್ವಲ್ಪ ಹೆಚ್ಚು ಕಡಿಮೆ ಮಾಡಿ ಪ್ರಯೋಗಿಸಿ. ಅಷ್ಟೆ ಅಲ್ಲದೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಸೇವಿಸಬಹುದು. ಚಹ ಸೇವಿಸುವ ಸಮಯ ಕೂಡ ಬಹಳ ಮುಖ್ಯವಾದದ್ದು.

green tea

*ತೂಕ ಇಳಿಸಿಕೊಳ್ಳಲು ಸಹ ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಡಿಹೈಡ್ರೇಶನ್ ಆಗುವ ಸಂಭವವಿರುತ್ತದೆ.

* ಊಟದ ಜೊತೆಗೆ ಗ್ರೀನ್ ಟೀ ಸೇವಿಸಲೇಬಾರದು, ಅದರಿಂದ ಆಹರದಲ್ಲಿನ ಪೌಷ್ಟಿಕಾಂಷಗಳು ಸರಿಯಾಗಿ ಹೀರಲ್ಪಡುವದಿಲ್ಲ.

*ಹಾಲಿನ ಉತ್ಪನ್ನಗಳ ಜೊತೆಗೆ ಗ್ರೀನ್ ಟೀ ಸೇವಿಸಬಾರದು. ಇದರಿಂದ ಚಹದ ಪರಿಣಮ ಕಡಿಮೆಯಾಗುತ್ತದೆ. ಹಾಲಿನಲ್ಲಿನ ಕ್ಯಾಲ್ಸಿಯಂ ಸಂಪೂರ್ಣವಾಗಿ ದೇಹಕ್ಕೆ ದೊರಕುವದಿಲ್ಲ.

*ಗ್ರೀನ್ ಟೀ ಸೇವನಗೆ ಅತಿ ಸೂಕ್ತವಾದ ಸಮಯವೆಂದರೆ ಬೆಳಗಿನ 11 ಅಥವ ಸಂಜೆಯ 4 ಗಂಟೆ.

English summary

green tea health benefits right way to brew

Green tea has been going around as a health drink for quite some time. It has a host of benefits from fighting cancer to aiding in weight loss. It began its journey in the market by claiming to be a magical tonic of sorts for smokers, but slowly became popular for the amount of antioxidants it contains.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more