For Quick Alerts
ALLOW NOTIFICATIONS  
For Daily Alerts

ಇಂತಹ ಆಹಾರಗಳನ್ನು ಫ್ರಿಜ್‌ನಲ್ಲಿ ಇಡಲೇಬಾರದು! ಯಾಕೆಂದರೆ...

|

ಹಿಂದಿನ ಕಾಲದಲ್ಲಿ ಫ್ರಿಜ್‌ ಅಥವಾ ರೆಫ್ರಿಜರೇಟರ್ ಎನ್ನುವುದೇ ಇರಲಿಲ್ಲ. ಆದರೂ ಕೆಲವೊಂದು ಆಹಾರಗಳನ್ನು ಕೆಡದಂತೆ ಇಡುವುದು ಹೇಗೆನ್ನುವ ಉಪಾಯವು ನಮ್ಮ ಹಿರಿಯರಿಗೆ ತಿಳಿದಿತ್ತು. ಆದರೆ ಇಂದು ಪ್ರತಿಯೊಂದು ಮನೆಯಲ್ಲೂ ಫ್ರಿಜ್ ಬಂದಿದೆ. ಯಾವುದೇ ಆಹಾರವಾಗಲಿ ಅದು ಫ್ರಿಜ್ ನಲ್ಲಿ ಜಾಗ ಪಡೆಯುತ್ತದೆ.

ನಮಗೆ ತಿಳಿದೋ ತಿಳಿಯದೆಯೋ ಫ್ರಿಜ್‌‌ನಲ್ಲಿ ಆಹಾರಗಳನ್ನು ಇಡುವುದರಿಂದ ಅದರಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಆಹಾರವನ್ನು ಮುತ್ತಿಕ್ಕಿಕೊಳ್ಳುತ್ತದೆ. ಇದರಿಂದ ಆಹಾರವು ಕೆಲವೊಮ್ಮೆ ವಿಷವಾಗುವುದು. ಪ್ರತಿಯೊಂದು ಆಹಾರ ಮತ್ತು ಪಾನೀಯಗಳಿಗೆ ಫ್ರಿಜ್‌ ತುಂಬಾ ಒಳ್ಳೆಯದು ಹೇಳಲಾಗುತ್ತದೆ.

ನಿಮ್ಮ ಆರೋಗ್ಯಕ್ಕೆ ಫ್ರಿಜ್ ಹೀಗಿರಲಿ

ಆದರೆ ಇದರಲ್ಲಿ ಇಡುವ ಆಹಾರಗಳಿಂದ ನಮ್ಮ ಆಹಾರವು ಕೆಡಬಹುದು. ಆಹಾರದ ರುಚಿ ಹಾಗೂ ಪೋಷಕಾಂಶಗಳು ಕಳೆದುಹೋಗಿ ನಾವು ಕೇವಲ ಮಣ್ಣು ತಿಂದಂತೆ ಆಗುತ್ತದೆ. ಹೊಟ್ಟೆ ತುಂಬಲು ಮಾತ್ರ ಇಂತಹ ಸೇವನೆ ಮಾಡಬಹುದು. ಇದರಿಂದ ಯಾವುದೇ ಪೋಷಕಾಂಶಗಳು ನಮ್ಮ ದೇಹಕ್ಕೆ ಲಭ್ಯವಾಗದು. ಯಾವ ಆಹಾರಗಳನ್ನು ಫ್ರಿಜ್‌‌ನಲ್ಲಿ ಇಡಬಾರದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿದುಕೊಳ್ಳಿ....

 ಮೊಟ್ಟೆಗಳು

ಮೊಟ್ಟೆಗಳು

ಒಡೆದು ಕಲಸಿದ ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿ ಇಡಬಹುದು. ಆದರೆ ಬೇಯಿಸಿದ ಮೊಟ್ಟೆಯನ್ನು ಯಾವತ್ತೂ ಫ್ರಿಡ್ಜ್ ನಲ್ಲಿ ಇಡಬಾರದು. ಬೇಯಿಸುವ ವೇಳೆ ಮೊಟ್ಟೆಯು ಕೆಲವೊಂದು ಕಡೆ ಬಿರುಕು ಬಿಡುವ ಕಾರಣ ಬ್ಯಾಕ್ಟೀರಿಯಾ ಇದರ ಮೂಲಕ ಮೊಟ್ಟೆಯೊಳಗೆ ಪ್ರವೇಶಿಸಬಹುದು. ಮೊಟ್ಟೆ ಬಿರುಕು ಬಿಡದೇ ಇದ್ದರೂ ಮೊಟ್ಟೆಯ ಬಿಳಿ ಭಾಗವು ರಬ್ಬರ್ ನಂತೆ ಆಗಬಹುದು. ಇದರಿಂದ ಮೊಟ್ಟೆಯನ್ನು ಫ್ರಿಜ್‌ನಲ್ಲಿಡುವ ನಿರ್ಧಾರ ಬಿಟ್ಟುಬಿಡಿ.

ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಇಡಬೇಡಿ!

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲನ್ನು ಫ್ರಿಜ್‌‌ನಲ್ಲಿ ಇಡುವುದು ಸರಿಯಾದ ನಿರ್ಧಾರವಲ್ಲ. ಇದರಿಂದ ಹಾಲಿನ ರುಚಿ ಬದಲಾಗಬಹುದು. ಚೀಸ್ ನಂತಹ ವಸ್ತುಗಳನ್ನು ಫ್ರಿಜ್‌‌ನಲ್ಲಿ ಇಟ್ಟಾಗ ಅದು ಬಣ್ಣ ಕಳೆದುಕೊಳ್ಳಬಹುದು.

ಕರಿದ ತಿಂಡಿಗಳು

ಕರಿದ ತಿಂಡಿಗಳು

ಕರಿದ ತಿಂಡಿಗಳನ್ನು ತಕ್ಷಣವೇ ಸೇವಿಸಬೇಕು. ಕರಿದ ತಿಂಡಿಗಳನ್ನು ಫ್ರಿಜ್‌‌ನಲ್ಲಿ ಇಟ್ಟು ತಿಂದರೆ ಅದು ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡಬಹುದು. ಕರಿದ ತಿಂಡಿಗಳನ್ನು ಯಾವುದೇ ವಿಧಾನದಿಂದ ತಿಂದರೂ ಅದರಿಂದ ಹೃದಯದ ಕಾಯಿಲೆ ಮತ್ತು ಬೊಜ್ಜು ಉಂಟಾಗಬಹುದು. ಕರಿದ ಆಹಾರವನ್ನು ಫ್ರಿಜ್‌‌ನಲ್ಲಿ ಇಡಲೇಬಾರದು.

ಕಾರ್ಬೋನೇಟೆಡ್ ಪಾನೀಯ

ಕಾರ್ಬೋನೇಟೆಡ್ ಪಾನೀಯ

ಕಾರ್ಬೋನೇಟೆಡ್ ಪಾನೀಯವನ್ನು ಫ್ರಿಜ್‌‌ನಲ್ಲಿ ಇಡುವುದರಿಂದ ಅಲ್ಯುಮಿನಿಯಂ ಸ್ಪೋಟವಾಗಬಹುದು ಮತ್ತು ದೀರ್ಘಕಾಲ ಸೋಡಾ ಅಂಟಿಕೊಳ್ಳಬಹುದು. ಇಂತಹ ಪಾನೀಯಗಳನ್ನು ಖರೀದಿಸಿದ ತಕ್ಷಣ ಸೇವಿಸಿ. ಅರ್ಧ ಕುಡಿದು ಫ್ರಿಜ್‌ನಲ್ಲಿ ಇಡಲು ಹೋಗಬೇಡಿ.

ಪೂರ್ತಿ ಬೇಯಿಸಿದ ಪಾಸ್ತಾ

ಪೂರ್ತಿ ಬೇಯಿಸಿದ ಪಾಸ್ತಾ

ಪೂರ್ತಿ ಬೇಯಿಸಿದ ಪಾಸ್ತಾವನ್ನು ಫ್ರಿಜ್‌‌ನಲ್ಲಿ ಇಟ್ಟರೆ ಅದರಲ್ಲಿ ಮೆತ್ತಗಿನ ಗಂಟು ಮೂಡಬಹುದು. ಇಂತಹ ಆಹಾರವನ್ನು ಯಾವಾಗಲೂ ತಯಾರಿಸಿದ ತಕ್ಷಣ ಸೇವಿಸಬೇಕು.

ಶೀತಲೀಕರಿಸಿದ ಮಾಂಸ

ಶೀತಲೀಕರಿಸಿದ ಮಾಂಸ

ಮಾಂಸವನ್ನು ಒಂದು ಸಲ ಫ್ರಿಜ್‌‌ನಲ್ಲಿ ಇಡಬಹುದು. ಆದರೆ ಇದನ್ನು ಪದೇ ಪದೇ ಫ್ರಿಡ್ಜ್ ನಲ್ಲಿ ಇಟ್ಟರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಫ್ರಿಜ್‌ ನಿಂದ ತೆಗೆದು ಮತ್ತೆ ಫ್ರಿಜ್‌ನಲ್ಲಿ ಇಡುವ ಮಧ್ಯೆ ಬ್ಯಾಕ್ಟೀರಿಯಾ ಮತ್ತೆ ಉತ್ಪತ್ತಿಯಾಗಿ ಮಾಂಸದಲ್ಲಿ ಬೆಳೆಯುವುದು.

English summary

Foods You Must Never Put In Your Refrigerator

There are some products that you must never refrigerate no matter what. Not all of your foods are freezer-friendly and it is important that you are aware of it in order to avoid the possible consequences. There are some foods that can come out a little different when you freeze them than how they were before they got in. It can sometimes turn out to be dangerous for your health as well. The refrigerator is usually considered as a safe haven for all our foods and drinks.
X
Desktop Bottom Promotion