ಜೀರ್ಣಕ್ರಿಯೆಗೆ ಸಹಾಯ ಮಾಡುವ ಸರಳ ಆಹಾರ ಪದಾರ್ಥಗಳು

By: Divya
Subscribe to Boldsky

ವಯಸ್ಸಾದಂತೆ ಅಥವಾ ತಾತ್ಕಾಲಿಕ ಆರೋಗ್ಯ ಸಮಸ್ಯೆಗಳಿಂದ ಅಜೀರ್ಣವಾಗುತ್ತದೆ. ತಿಂದ ಆಹಾರವು ಹೊಟ್ಟೆಯಲ್ಲಿ ಕರಗದೆ, ಕಲ್ಲಿನಂತೆ ಕುಳಿತಿದೆಯೇನೋ? ಎನ್ನುವಷ್ಟು ಅಸಮಧಾನ ಉಂಟಾಗುವುದು. ಈ ಸಮಸ್ಯೆಯು ಕರುಳಿನ ಬ್ಯಾಕ್ಟೀರಿಯಾಗಳನ್ನು ಅವಲಂಬಿಸಿರುತ್ತದೆ ಎನ್ನಲಾಗುತ್ತದೆ. ಜೀರ್ಣಕ್ರಿಯೆಯು ಸರಿಯಾಗಿ ಆಗದಿದ್ದಾಗ ವಾಂತಿ, ವಾಕರಿಕೆ, ಮಲಬದ್ಧತೆ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳುವುದು ಸಹಜ.

ದೈನಂದಿನ ಆಹಾರದಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳಿಂದಲೂ ಅಜೀರ್ಣ ಸಮಸ್ಯೆಯಿಂದ ಪಾರಾಗಬಹುದು. ಅಲ್ಲದೆ ಜಠರ ಮತ್ತು ಕರುಳಿನ ಕಾರ್ಯಗಳನ್ನು ಉತ್ತೇಜಿಸಬಹುದು. ಅಡುಗೆ ಪದಾರ್ಥದಲ್ಲಿ ಈ ಕೆಳಗಿನ ವಸ್ತುಗಳ ಬಳಕೆಯಿಂದ ಅಥವಾ ಅವುಗಳ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. 

ಧಾನ್ಯಗಳು

ಧಾನ್ಯಗಳು

ಧಾನ್ಯಗಳಲ್ಲಿ ಸೂಕ್ಷ್ಮಾಣು ಜೀವಿಯನ್ನು ಬೆಂಬಲಿಸುವ ಅಂಶಗಳಿರುತ್ತವೆ. ಇವುಗಳನ್ನು ಮುಂಜಾನೆಯ ಉಪಹಾರದಲ್ಲಿ ಸೇವಿಸಿದರೆ ಕರುಳಿಗೆ ಅನುಕೂಲವಾಗುವುದು. ತಿಂದ ಆಹಾರವೂ ಜೀರ್ಣವಾಗುವುದು.

ಇದನ್ನೂ ಓದಿ -ಸುಗಮ ಜೀರ್ಣಕ್ರಿಯೆಗೆ, ಇಂತಹ ಹಣ್ಣುಗಳನ್ನು ಸೇವಿಸಿ

ಚಿಯಾ ಬೀಜಗಳು

ಚಿಯಾ ಬೀಜಗಳು

ಚಿಯಾ ಬೀಜಗಳಲ್ಲಿ ನಾರಿನಂಶ ಸಮೃದ್ಧವಾಗಿವೆ. ನಾರಿನಂಶ ಜೀರ್ಣಕ್ರಿಯೆಗೆ ಅದ್ಭುತವಾದ ಸಹಾಯ ಮಾಡುತ್ತದೆ. ಈ ಬೀಜಗಳನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ ಉತ್ತಮ ಶಕ್ತಿಯನ್ನು ಪಡೆಯಬಹುದು.

ಅರಿಶಿನ

ಅರಿಶಿನ

ಅರಿಶಿನವು ಅಪಾರ ಆರೋಗ್ಯ ಗುಣಗಳನ್ನು ಒಳಗೊಂಡಿದೆ. ಇದನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಜೀರ್ಣಕಾರಿ ವ್ಯವಸ್ಥೆಗೆ ಸಹಾಯ ಮಾಡುವುದು, ಜೊತೆಗೆ ಉರಿಯೂತಗಳನ್ನು ಕಡಿಮೆ ಮಾಡುವುದು.

ಇದನ್ನೂ ಓದಿ - ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅನೇಕ ರೋಗಲಕ್ಷಣಗಳನ್ನು ಗುಣಮುಖವಾಗಿಸಬಲ್ಲ ಶಕ್ತಿಯಿದೆ. ಆಹಾರದಲ್ಲಿ ಇದರ ಬಳಕೆಯು ಮಿತವಾಗಿದ್ದರೆ ಜೀರ್ಣಕ್ರಿಯೆಯು ಸುಲಭವಾಗುವುದು.

ಇದನ್ನೂ ಓದಿ -ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಶುಂಠಿ

ಶುಂಠಿ

ಇದು ಉತ್ತಮ ಔಷಧೀಯ ಗುಣವನ್ನು ಹೊಂದಿದೆ. ವಾಂತಿ, ವಾಕರಿಕೆ ಸೇರಿದಂತೆ ಅನೇಕ ಅಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಕ್ರೂಸಿಫರ್

ಕ್ರೂಸಿಫರ್

ಇದರಲ್ಲಿ ಸಮೃದ್ಧವಾದ ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶಗಳಿವೆ. ಇವು ಜೀರ್ಣಕ್ರಿಯೆ ಸರಾಗವಾಗಲು ಸಹಾಯಮಾಡುವವು.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಇದೆ. ಈ ಊಟದ ಕೊನೆಯಲ್ಲಿ ಕೊತ್ತಂಬರಿ ಸೇರಿಸಿದ ಮಜ್ಜಿಗೆ ಸಹಾ ಇದೆ. ಏಕೆಂದರೆ ಜೀರ್ಣಕ್ರಿಯೆ ಉತ್ತಮಗೊಳಿಸಲು ಕೊತ್ತಂಬರಿ ಸಹಕಾರಿಯಾಗಿದೆ. ಆದರೆ ಮಜ್ಜಿಗೆಗಿಂತಲೂ ಕೊತ್ತಂಬರಿ ನೆನೆಸಿಟ್ಟ ನೀರು ಹೆಚ್ಚು ಪರಿಣಾಮಕಾರಿ. ಇದಕ್ಕಾಗಿ ಒಂದ್ ಜಗ್ ಭರ್ತಿ ನೀರು ತುಂಬಿಸಿ ಇದಕ್ಕೆ ಕೆಲವು ದಂಡು ಕೊತ್ತಂಬರಿ ಸೊಪ್ಪು ಮತ್ತು ಅಡ್ಡಲಾಗಿ ಕೊಯ್ದ ಲಿಂಬೆಹಣ್ಣಿನ ಬಿಲ್ಲೆಗಳನ್ನು ಸೇರಿಸಿ ಇಡಿಯ ರಾತ್ರಿ ನೆನೆಸಿಡಿ. ಈ ನೀರನ್ನು ಮರುದಿನ ಹಲವು ಬಾರಿ ಕುಡಿದು ಸಂಜೆಯ ಒಳಗೆ ಖಾಲಿ ಮಾಡಿ.

ಮೊಸರು

ಮೊಸರು

ಮೊಸರನ್ನು ತಿನ್ನುವುದರಿಂದ ಅದು ಜೀರ್ಣ ಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇದರಲ್ಲಿರುವ ಕಿಣ್ವಗಳು ಮತ್ತು ಒಳ್ಳೆಯ ಬ್ಯಾಕ್ಟೀರಿಯಾ ಹೊಟ್ಟೆಯನ್ನು ಸರಾಗವಾಗಿರಿಸಿ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಪ್ರತೀ ದಿನ ಮೊಸರಾನ್ನ ಅಥವಾ ಒಂದು ಕಪ್ ಮೊಸರನ್ನು ಸೇವಿಸಿ.

English summary

Foods That Support Digestive Health

When your digestive system is upset, your daily life may come to a halt as you may not be able to do anything if you are suffering from vomiting, nausea, constipation, loose motions, or stomach pain.
Subscribe Newsletter