ಮೆದುಳಿಗೆ ಹಾನಿ ಎಸಗುವ ಆಹಾರಗಳಿವು! ಆದಷ್ಟು ಇದರಿಂದ ದೂರವಿರಿ

By: Arshad
Subscribe to Boldsky

ಮೆದುಳಿನ ಕ್ಷಮತೆ ಹೆಚ್ಚಲು ಕೆಲವು ಪೋಷಕಾಂಶಗಳ ಅಗತ್ಯವಿದೆ. ಇವು ಕೆಲವು ಆಹಾರಗಳಲ್ಲಿ ಹೆಚ್ಚಿರುವ ಕಾರಣ ಇವುಗಳನ್ನು ತಿನ್ನುವ ಮೂಲಕ ಮೆದುಳು ಚುರುಕಾಗುತ್ತದೆ ಎನ್ನುತ್ತಾರೆ. ವ್ಯತಿರಿಕ್ತವಾಗಿ ಕೆಲವು ಆಹಾರಗಳಲ್ಲಿನ ಪೋಷಕಾಂಶಗಳು ಮೆದುಳಿನ ಕ್ಷಮತೆಯನ್ನು ಕಡಿಮೆಗೊಳಿಸುತ್ತವೆ. ಆದ್ದರಿಂದ ಮೆದುಳಿನೆ ಹಾನಿ ಎಸಗುವ ಈ ಆಹಾರಗಳನ್ನು ಸೇವಿಸದಿರುವುದೇ ಜಾಣತನದ ಕ್ರಮ...

ಒಂದು ವೇಳೆ ಅನಿವಾರ್ಯವಾಗಿ ತಿನ್ನಲೇಬೇಕಾಗಿ ಬಂದರೆ ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿರುವ ಕೆಲವು ಕಾರ್ಬೋಹೈಡ್ರೇಟುಗಳು ಮೆದುಳಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅದರಲ್ಲೂ ಹೆಚ್ಚಿನ ಗ್ಲೈಸಿಮೆಕ್ ಇಂಡೆಕ್ಸ್ (ಅಂದರೆ ಆಹಾರ ಸೇವನೆಯ ಬಳಿಕ ಎಷ್ಟು ಹೆಚ್ಚು ಸಕ್ಕರೆ ಸಕ್ಕರೆ ಸೇರುತ್ತದೆ ಎಂಬ ಸೂಚ್ಯಂಕ) ಇರುವ ಆಹಾರಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತವೆ. 

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಒಂದಿಷ್ಟು ಸರಳ ಟಿಪ್ಸ್

ಇದೇ ರೀತಿಯಾಗಿ ಸಂಸ್ಕರಿತ ಕಾರ್ಬೋಹೈಡ್ರೇಟುಗಳಿರುವ ಆಹಾರ ಸೇವನೆಯಿಂದ ಸುಸ್ತು, ಮನೋಭಾವದಲ್ಲಿ ಏರುಪೇರು ಹಾಗೂ ಇನ್ನೂ ಕೆಲವು ಬಗೆಯ ಖಿನ್ನತೆಗೆ ಕಾರಣವಾಗುತ್ತವೆ. ಬನ್ನಿ, ಈ ದುಷ್ಪರಿಣಾಮಗಳನ್ನು ಬೀರುವ ಆಹಾರಗಳು ಯಾವುವು ಎಂಬುದನ್ನು ನೋಡೋಣ... 

ಸೋಡಿಯಂ ಲವಣ ಹೆಚ್ಚಿರುವ ಆಹಾರಗಳು

ಸೋಡಿಯಂ ಲವಣ ಹೆಚ್ಚಿರುವ ಆಹಾರಗಳು

ಆಹಾರದಲ್ಲಿ ಸೋಡಿಯಂ ಹೆಚ್ಚಿದ್ದಷ್ಟೂ ದೈಹಿಕ ಚಟುವಟಿಕೆಯ ಮಟ್ಟ ಕಡಿಮೆಯಾಗುತ್ತದೆ. ಈ ಪರಿಣಾಮ ಮೆದುಳಿನ ಮೇಲೂ ಬಿದ್ದು ಯೋಚನಾಸಾಮರ್ಥ್ಯ ಕಡಿಮೆಯಾಗುತ್ತದೆ. ಯಾವುದೇ ಆಹಾರದಲ್ಲಿ ಕೊಂಚವಾದರೂ ಸೋಡಿಯಂ ಲವಣ ಇದ್ದೇ ಇರುತ್ತದೆ. ಇದರ ಪರಿಣಾಮವನ್ನು ಕಡಿಮೆಗೊಳಿಸಲು ದೈಹಿಕ ಚಟುವಟಿಕೆ ಅಗತ್ಯವಾಗಿದೆ. ಹಾಗಾಗಿ ಇಡಿಯ ದಿನ ಬಸವನಹುಳದಂತೆ ಬಿದ್ದಿರುವ ವ್ಯಕ್ತಿಗಳು ಸರಿಯಾಗಿ ಯೋಚಿಸಲು ಅಸಮರ್ಥರಾಗುವುದು ಇದೇ ಕಾರಣಕ್ಕೆ. ಆದ್ದರಿಂದ ಸೋಡಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು ಅಥವಾ ಅತಿ ಕಡಿಮೆ ಮಾಡಬೇಕು.

ಕೊಬ್ಬಿನ ಆಮ್ಲ ಆಧಾರಿತ ಆಹಾರಗಳು

ಕೊಬ್ಬಿನ ಆಮ್ಲ ಆಧಾರಿತ ಆಹಾರಗಳು

ಟ್ರಾನ್ಸ್ ಫ್ಯಾಟ್ ಅಥವಾ ಕೊಬ್ಬಿನ ಆಮ್ಲದ ಪ್ರಮಾಣ ಹೆಚ್ಚಿರುವ ಆಹಾರಗಳು ಮೆದುಳಿನ ಕ್ಷಮತೆಗೆ ಅಪಾಯಕಾರಿಯಾಗಿವೆ. ವಿಶೇಷವಾಗಿ ಕೆಲವು ಎಣ್ಣೆಗೆ ಜಿಡ್ಡುತನವನ್ನು ನೀಡಲು ಅನುಸರಿಸುವ ಹೈಡ್ರೋಜಿನೇಶನ್ ಅಥವಾ ಜಲಜನೀಕರಣ ಪ್ರಕ್ರಿಯೆಯ ಮೂಲಕ ಉತ್ಪತ್ತಿಯಾಗುವ ಆಹಾರಗಳು ಮೆದುಳಿನ ಕ್ಷಮತೆಯನ್ನು ನಿಧಾನವಾಗಿ ಉಡುಗಿಸುತ್ತಾ ಹೋಗುತ್ತದೆ.

ಟ್ಯೂನಾ ಮೀನು

ಟ್ಯೂನಾ ಮೀನು

ಮೀನು ಮೆದುಳಿಗೆ ಒಳ್ಳೆಯದೇ ಆದರೆ ಎಣ್ಣೆಯ ಅಂಶ ಹೆಚ್ಚಿರುವ ಟ್ಯೂನಾ ಮೀನು ಇಂದು ಡಬ್ಬಿಯಲ್ಲಿ ಲಭಿಸುತ್ತಿದ್ದು ಈ ಆಹಾರವೂ ಮೆದುಳಿನ ಕ್ಷಮತೆಯನ್ನು ಉಡುಗಿಸುತ್ತದೆ. ಸಾಮಾನ್ಯ ಪ್ರಮಾಣದಲ್ಲಿ ಈ ಮೀನನ್ನು ವಾರದಲ್ಲಿ ಮೂರು ಹೊತ್ತಿಗಿಂತ ಹೆಚ್ಚು ತಿನ್ನಲೇಬಾರದು.

ಸಂಪನ್ನಗೊಂಡ ಕೊಬ್ಬಿನ ಆಹಾರಗಳು (Saturated Fatty Foods)

ಸಂಪನ್ನಗೊಂಡ ಕೊಬ್ಬಿನ ಆಹಾರಗಳು (Saturated Fatty Foods)

ಈ ಆಹಾರಗಳನ್ನು ಒಂದು ಮಿತಿಯಲ್ಲಿರಿಸಿದಷ್ಟೂ ಉತ್ತಮ. ಮಿತಿ ಮೀರಿದರೆ ಈ ಆಹಾರ ಮೆದುಳಿನಲ್ಲಿರುವ mesolimbic dopamine system ಎಂಬ ವ್ಯವಸ್ಥೆಯನ್ನು ಏರುಪೇರುಗುಳಿಸುತ್ತದೆ. ಇದರಿಂದ ಪ್ರೇರೇಪಿಸುವ ಹಾಗೂ ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವ ಮನೋಭಾವ ಕುಂದುತ್ತದೆ.

ಟೋಫು

ಟೋಫು

ಸೋಯಾ ಅವರೆಯ ಹಾಲನ್ನು ಮೊಸರಾಗಿಸಿ ನೀರನ್ನು ಹಿಂಡಿ ಚೌಕಾಕೃತಿಯಲ್ಲಿ ಕತ್ತರಿಸಿದ ಈ ಆಹಾರ ತಿನ್ನಲು ಪನೀರ್ ನಂತೆಯೇ ಇದ್ದರೂ ಇದರ ಸೇವನೆಯಿಂದ ಸ್ಮರಣಶಕ್ತಿಯು ಕುಂದುವುದು ಹಾಗೂ ಯೋಚನಾಸಾಮರ್ಥ್ಯವೂ ಉಡುಗುವುದು ಕಂಡುಬರುತ್ತದೆ. ಟೋಫುವಿನಲ್ಲಿರುವ ಫೈಟೋ ಈಸ್ಟ್ರೋಜೆನ್ ಎಂಬ ಪೋಷಕಾಂಶ ಈ ಗುಣವನ್ನು ಹೊಂದಿದ್ದು ಮೆದುಳಿನ ಕ್ಷಮತೆಯನ್ನು ಉಡುಗಿಸುತ್ತದೆ.

English summary

Foods That Can Hurt The Brain, Do Make Sure To Away From These

Certain kinds of carbs can have a negative effect on your brain. Foods with a high glycaemic index can also make your blood sugar level shoot up. Consumption of highly refined carbs is linked to fatigue, mood swings and other forms of depression. In this article, we have mentioned to you some of the top foods that can hurt the brain.
Subscribe Newsletter