For Quick Alerts
ALLOW NOTIFICATIONS  
For Daily Alerts

ದೈನಂದಿನ ಆಹಾರ ಪಥ್ಯ ಹೀಗಿದ್ದರೆ, 'ಕ್ಷಯ ರೋಗಕ್ಕೆ' ಮದ್ದೇ ಬೇಡ!

ಕ್ಷಯ' ಅಥವಾ ಟಿ.ಬಿ' (ಟ್ಯೂಬರ್‌ಕ್ಯುಲೋಸಿಸ್) ಎಂಬುದು ಒಂದು ಬಗೆಯ ಸೋಂಕು ಆಗಿದ್ದು, ಒಂದು ರೀತಿಯ ಬ್ಯಾಕ್ಟೀರಿಯಾ "ಮೈಕೊಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್‌" ನಿಂದ ಜನ್ಮ ತಾಳುತ್ತದೆ.

By Jayasubramanya
|

ಇಂದು ಮಾನವನ್ನು ಕಾಡುತ್ತಿರುವ ರೋಗಗಳಿಗೆ ಅಂಕೆ ಸಂಖ್ಯೆಯೇ ಇಲ್ಲವಾಗಿಬಿಟ್ಟಿದೆ! ಕಟ್ಟುನಿಟ್ಟಲ್ಲದ ಜೀವನ ಶೈಲಿ ಮತ್ತು ಆಧುನೀಕತೆ ನಮ್ಮನ್ನು ರೋಗರುಜಿನಗಳಿಗೆ ಹೆಚ್ಚುಚ್ಚು ಒಳಗಾಗುವಂತೆ ಮಾಡುತ್ತದೆ. ಇಂದು ಸಣ್ಣ ಮಟ್ಟಿಗಿನ ರೋಗಗಳು ಕೂಡ ದೊಡ್ಡದಾಗಿ ವಿಸ್ತರಿಸಿ ಮಾನವ ಜೀವನಕ್ಕೆ ಮಾರಕವಾಗಿ ಮಾರ್ಪಟ್ಟಿದೆ. ನಾವು ನೈಸರ್ಗಿಕ ವಿಧಾನಗಳಿಂದ ಆಧುನಿಕ ಆಹಾರ ಪದ್ಧತಿಗೆ ನಮ್ಮನ್ನು ಮಾರ್ಪಡಿಸಿಕೊಂಡಿರುವುದೇ ಇದಕ್ಕೆ ಕಾರಣವೆಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಮೊದಲೆಲ್ಲಾ ವಿರಳವಾಗಿದ್ದ ಕಾಯಿಲೆ ಟಿ.ಬಿ ಇಂದು ತನ್ನ ಕಬಂಧ ಬಾಹುವನ್ನು ಎಲ್ಲೆಡೆ ವಿಸ್ತರಿಸಿದೆ. ಕ್ಷಯ' ಅಥವಾ ಟಿ.ಬಿ' (ಟ್ಯೂಬರ್‌ಕ್ಯುಲೋಸಿಸ್) ಎಂಬುದು ಒಂದು ಬಗೆಯ ಸೋಂಕು ಆಗಿದ್ದು, ಒಂದು ರೀತಿಯ ಬ್ಯಾಕ್ಟೀರಿಯಾ "ಮೈಕೊಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್‌" ನಿಂದ ಜನ್ಮ ತಾಳುತ್ತದೆ. ಇದು ಸೋಂಕು ಆಗಿರುವುದರಿಂದ ದೇಹದ ಯಾವುದೇ ಭಾಗವನ್ನು ಆಕ್ರಮಿಸಿಕೊಳ್ಳಬಹುದು. ತನ್ನ ಪ್ರಾಬಲ್ಯವನ್ನು ಬ್ಯಾಕ್ಟೀರಿಯಾದ ಮೂಲಕ ಈ ರೋಗವು ತೋರಿಸಲಿದ್ದು ಒಮ್ಮೆಲೇ ದೇಹದಲ್ಲಿ ಪರಿಣಾಮವನ್ನು ಉಂಟುಮಾಡದೇ ಇದ್ದರೂ ನಿಧಾನವಾಗಿ ಈ ರೋಗ ತನ್ನ ಹಾಜರಾತಿಯನ್ನು ತೋರ್ಪಡಿಸುತ್ತದೆ.

ದುರ್ಬಲ ರೋಗನಿರೋಧಕ ಶಕ್ತಿ, ಹಸಿವಾಗದಿರುವಿಕೆ, ಆಯಾಸ, ರಕ್ತ ವಾಂತಿ ಕೆಮ್ಮು, ಉಸಿರಾಟದ ತೊಂದರೆ, ತೂಕ ಇಳಿಕೆ, ರಾತ್ರಿವೇಳೆಯಲ್ಲಿ ಬೆವರುವುದು, ಆಗಾಗ್ಗೆ ಜ್ವರ, ಮತ್ತು ಸ್ನಾಯುಗಳಲ್ಲಿ ನೋವು ಈ ರೋಗದ ಸಾಮಾನ್ಯ ಲಕ್ಷಣವಾಗಿವೆ. ಹೆಚ್ಚು ದೀರ್ಘ ಸಮಯದಿಂದ ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆ ಎಂದಲ್ಲಿ ಇದಕ್ಕೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ.

ಅದಾಗ್ಯೂ ನೀವು ಸೇವಿಸುವ ಆಹಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಾಗ ಟಿಬಿಯಿಂದ ನೈಸರ್ಗಿಕವಾಗಿ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಲವೊಂದು ತರಕಾರಿ ಹಣ್ಣುಗಳನ್ನು ಈ ಕೆಳಗೆ ನಾವು ಶಿಫಾರಸು ಮಾಡಿದ್ದು ಇದು ಟಿ.ಬಿ ಅಥವಾ ಕ್ಷಯ ರೋಗವನ್ನು ನೈಸರ್ಗಿಕವಾಗಿ ಪರಿಹರಿಸಲಿದೆ...

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಸಾಕಷ್ಟು ಪ್ರಮಾಣದಲ್ಲಿ ಮಿನರಲ್‌ಗಳನ್ನು ಒಳಗೊಂಡಿರುವ ಕಿತ್ತಳೆಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೆಯೇ ಶ್ವಾಸಕೋಶವನ್ನು ಯಾವುದೇ ಸೋಂಕಿನಿಂದ ಸಂರಕ್ಷಿಸುತ್ತದೆ. ಸ್ವಲ್ಪ ಉಪ್ಪು ಮತ್ತು ಜೇನು ಸೇರಿಸಿ ನಿಮಗೆ ಇದರ ಜ್ಯೂಸ್ ಅನ್ನು ಸಿದ್ಧಪಡಿಸಬಹುದಾಗಿದೆ. ದಿನಕ್ಕೆರಡು ಬಾರಿ ಈ ಜ್ಯೂಸ್ ಅನ್ನು ಸೇವಿಸುತ್ತಿರಿ.ಹುಳಿ ಸಿಹಿ ರುಚಿಯ ಕಿತ್ತಳೆ ಹಣ್ಣಿನ ಚಿನ್ನದಂತಹ ಗುಣಗಳು

ಸೋರೆಕಾಯಿ

ಸೋರೆಕಾಯಿ

ನೀರಿನ ಅಂಶ ಮತ್ತು ನಾರಿನಂಶವನ್ನು ಈ ತರಕಾರಿ ಒಳಗೊಂಡಿದೆ. ಬೇರೆ ಬೇರೆ ರೀತಿಯ ನ್ಯೂಟ್ರಿನ್ ಮತ್ತು ಮಿನರಲ್‌ಗಳನ್ನು ಇದು ಹೊಂದಿದ್ದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಲಿದೆ. ಸೋರೆಕಾಯಿಯನ್ನು ನಿತ್ಯವೂ ಸೇವಿಸುವುದು ಟಿಬಿಗೆ ಉತ್ತಮ ಔಷಧ ಎಂದೆನಿಸಿದೆ.ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್‌' ಮಿಸ್ ಮಾಡಬೇಡಿ!

ಪುದೀನಾ

ಪುದೀನಾ

ಪುದೀನಾದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಲೋಳೆಯನ್ನು ಕರಗಿಸಿ ಶ್ವಾಸಕೋಶಕ್ಕೆ ಪೌಷ್ಟಿಕತೆಯನ್ನು ಇದು ನೀಡುತ್ತದೆ. ಔಷಧಗಳ ಪ್ರತಿಕೂಲ ಪರಿಣಾಮವನ್ನು ತಡೆಯಲು ಪುದೀನಾ ಸಹಕಾರಿಯಾಗಿದೆ. ಅಂತೆಯೇ ವಿಷಕಾರಿ ಅಂಶಗಳನ್ನು ದೇಹದಿಂದ ಇದು ಹೊರಹಾಕುತ್ತದೆ. ಟಿಬಿಯಿಂದ ನಿಮ್ಮನ್ನು ಕಾಪಾಡಿಕೊಳ್ಳುವಲ್ಲಿ ಇದು ಉತ್ತಮ ಮನೆಮದ್ದು ಎಂದೆನಿಸಿದೆ. ಪುದೀನಾ ಎಲೆಗಳ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?

ಬೆಳ್ಳುಳ್ಳಿ

ಬೆಳ್ಳುಳ್ಳಿ

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಸಹಾಯಕ. ನಿಮ್ಮ ನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ ಸೇವನೆಯನ್ನು ಮಾಡಿ ಅಂತೆಯೇ ಟಿಬಿಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಮಟ್ಟ ಹಾಕುವಲ್ಲಿ ಇದು ಸಹಕಾರಿಯಾಗಿದೆ. ಅಲಿಸಿನ್ ಮತ್ತು ಅಜೊನಾ ಅಂಶವು ಬೆಳ್ಳುಳ್ಳಿಯಲ್ಲಿದ್ದು ಇದು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಟಿಬಿಯಿಂದ ರಕ್ಷಣೆ ಪಡೆಯುವಲ್ಲಿ ಇದೊಂದು ನೈಸರ್ಗಿಕ ಉತ್ಪನ್ನವಾಗಿದೆ.ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬಾಳೆಹಣ್ಣು

ಬಾಳೆಹಣ್ಣು

ಉತ್ತಮ ಅಂಶಗಳನ್ನು ಬಾಳೆಹಣ್ಣು ಒಳಗೊಂಡಿದ್ದು ಇದು ನ್ಯೂಟ್ರಿನ್ ಅಂಶಗಳಿಂದ ಯಥೇಚ್ಛವಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಲಿದೆ ಅಂತೆಯೇ ಜ್ವರ ಮತ್ತು ಕೆಮ್ಮನ್ನು ದೂರಮಾಡಲಿದ್ದು ಟಿಬಿಯ ರೋಗ ಲಕ್ಷಣಗಳನ್ನು ಇಳಿಕೆ ಮಾಡಲಿದೆ. ಆರೋಗ್ಯವಾಗಿರಲು ನಿತ್ಯವೂ 1-2 ಬಾಳೆಹಣ್ಣುಗಳನ್ನು ಸೇವಿಸಿ.ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಕರಿಮೆಣಸು

ಕರಿಮೆಣಸು

ಶ್ವಾಸಕೋಶಗಳಲ್ಲಿರುವ ಉರಿಯೂತ ಗುಣಗಳನ್ನು ತನ್ನ ಅಂಶಗಳಿಂದ ಇದು ಕಡಿಮೆ ಮಾಡುತ್ತದೆ. ಶ್ವಾಸಕೋಶವನ್ನು ಸ್ವಚ್ಛಮಾಡಲು ಇದು ಸಹಕಾರಿಯಾಗಿದೆ. ಟಿಬಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ಅನನ್ಯ ಮನೆಮದ್ದಾಗಿದೆ.ನಮಗೆ ತಿಳಿದಿರುವ ಕೆಲವೊಂದು ಅಂಶಗಳನ್ನು ಈ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಸೀತಾಫಲ ಹಣ್ಣು

ಸೀತಾಫಲ ಹಣ್ಣು

ಟಿ.ಬಿ ಕಾಯಿಲೆಗೆ ಇದು ಉತ್ತಮ ಔಷಧವಾಗಿರುವ ಹಣ್ಣಾಗಿದೆ. ನಿಮ್ಮ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಈ ಹಣ್ಣು ಸಹಕಾರಿಯಾಗಿದೆ ಮತ್ತು ಜ್ಯೂಸ್ ರೂಪಲ್ಲಿ ಇಲ್ಲವೇ ಹಾಗೆಯೇ ಈ ಹಣ್ಣಿನ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ.ಸೀತಾಫಲ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

English summary

Effective Ways To Cure Tuberculosis Naturally

There are various cures for tuberculosis. We here at Boldsky, are going to share some of the best home remedies to get rid of tuberculosis in this post. Read on to know how you can get rid of this infection...
X
Desktop Bottom Promotion