For Quick Alerts
ALLOW NOTIFICATIONS  
For Daily Alerts

ನಿಯಮಿತವಾಗಿ ಒಣಫಲಗಳನ್ನು ತಿಂದರೆ 'ಕರುಳಿನ ಕ್ಯಾನ್ಸರ್' ನಿಯಂತ್ರಣಕ್ಕೆ!

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಮೂರು ಬಗೆಯ ಒಣಫಲಗಳು, ಅಂದರೆ ಅಕ್ರೋಟು, ಹೇಜಲ್ ನಟ್ (hazelnut) ಹಾಗೂ ಗೋಡಂಬಿಯನ್ನು ಸೇವಿಸುವ ಮೂಲಕ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಬಹುದಂತೆ...

By Arshad
|

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಮೂರು ಬಗೆಯ ಒಣಫಲಗಳು, ಅಂದರೆ ಅಕ್ರೋಟು, ಹೇಜಲ್ ನಟ್ (hazelnut) ಹಾಗೂ ಗೋಡಂಬಿಯನ್ನು ಸೇವಿಸುವ ಮೂಲಕ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ನೋಡಲಿಕ್ಕೆ ಅಕ್ರೋಟಿನಂತೆಯೇ ಇರುವ pecan ಎಂಬ ಒಣಫಲವೂ ಇದಕ್ಕೆ ಬೆಂಬಲ ನೀಡುತ್ತದೆ.

ಮೂರನೆಯ ಹಂತದ ಕರುಳಿನ ಕ್ಯಾನ್ಸರ್ ಪೀಡಿತ 826 ರೋಗಿಗಳಿಗೆ ಪ್ರತಿವಾರವೂ ಎರಡು ಔನ್ಸ್ ನಷ್ಟು ಒಣಫಲಗಳನ್ನು ಸೇವಿಸಲು ನೀಡಿದ ಬಳಿಕ ಪ್ರತಿಯೊಬ್ಬರ ಆರೋಗ್ಯ ಸಂಬಂಧಿತ ಅಂಕಿಅಂಶಗಳನ್ನು ಕಲೆಹಾಕಿ ಇವರಿಗೆ ಕರುಳಿನ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ 46 ಶೇಖಡಾ ಕಡಿಮೆಯಾಗಿರುವುದು ಹಾಗೂ ಒಣಫಲಗಳನ್ನು ಸೇವಿಸದಿರುವವರಿಗಿಂತಲೂ 53 ಶೇಖಡಾದಷ್ಟು ಕಡಿಮೆ ಸಾವಿಗೀಡಾಗುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ.

Colon Cancer

ಸಂಶೋಧಕರು ಈ ರೋಗಿಗಳಿಗೆ ನೀಡುವ ಒಣಫಲಗಳ ಬಗ್ಗೆ ಹೆಚ್ಚು ಉತ್ಸುಕರಾಗಿರಲು ಕಾರಣ ಇವು ಸ್ಥೂಲಕಾಯವನ್ನು ಕಡಿಮೆಗೊಳಿಸಲು, ಟೈಪ್-2 ಮಧುಮೇಹವನ್ನು ನಿಯಂತ್ರಿಸಲು ಹಾಗೂ ಮಧುಮೇಹಿಗಳ ದೇಹ ಇನ್ಸುಲಿನ್ ಅನ್ನು ತಿರಸ್ಕರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಗುಣಗಳನ್ನು ಹೊಂದಿವೆ. ಈ ದೈಹಿಕ ಸ್ಥಿತಿಗಳು ಕರುಳಿನ ಕ್ಯಾನ್ಸರ್ ಮರುಕಳಿಸಲು ಮತ್ತು ಕರುಳಿನ ಕ್ಯಾನ್ಸರ್ ನಿಂದ ಸಾವಿಗೀಡಾಗುವ ಸಾಧ್ಯತೆಯನ್ನು ಹೆಚ್ಚಾಗಿ ಸಾದರಪಡಿಸುತ್ತವೆ.

ಕ್ಯಾನ್ಸರ್‌ ರೋಗದ ಬೆಚ್ಚಿ ಬೀಳಿಸುವ ಗುಣಲಕ್ಷಣಗಳು

"ಹೃದಯದ ಕಾಯಿಲೆಗಳು ಹಾಗೂ ಮಧುಮೇಹದ ಚಿಕಿತ್ಸೆಯ ನಿಟ್ಟಿನಲ್ಲಿ ನಡೆದ ಹಲವಾರು ಅಧ್ಯಯನಗಳ ಮೂಲಕ ಈ ರೋಗಿಗಳು ಒಣಫಲಗಳನ್ನು ಸೇವಿಸುವುದು ಫಲಕಾರಿಯಗಿದೆ, ಈ ಪ್ರಯೋಜನದ ಬಗ್ಗೆ ಅರಿತ ನಾವು ಈ ಗುಣ ಕರುಳಿನ ಕ್ಯಾನ್ಸರ್ ರೋಗಿಗಳಿಗೂ ಅನ್ವಯವಾಗುತ್ತದೆಯೇ ಎಂದು ಪ್ರಯೋಗಿಸಿ ನೋಡುವುದು ಅತಿಮುಖ್ಯವಾಗಿದೆ" ಎಂದು ಅಮೇರಿಕಾದ ಬೋಸ್ಟನ್ ಪ್ರಾಂತದ ಮೆಸಾಚುಸೆಟ್ಸ್ ನಲ್ಲಿರುವ ದಾನಾ ಫಾರ್ಬರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಕ್ಲಿನಿಕಲ್ ಫೆಲೋ ಆಗಿರುವ ಹಾಗೂ ಈ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸುತ್ತಿರುವ ಟೆಮಿಡಾಯೋ ಫಾದೆಲುರವರು ತಿಳಿಸಿದ್ದಾರೆ.

"ಕ್ಯಾನ್ಸರ್ ಉಲ್ಬಣಗೊಂಡು ಖೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಲ್ಲಿ ಕ್ಯಾನ್ಸರ್ ಮರುಕಳಿಸಂತೆ ಇರುವುದು ಅಥವಾ ಸಾವು ಎದುರಾಗುವುದನ್ನು ತಡೆಯಲು ಏನು ಮಾಡಬೇಕು ಎಂಬುದಾಗಿದೆ. ಇವರಿಗೆ ನಾವು ನೀಡುವ ಸಲಹೆಗಳಲ್ಲಿ ನಿತ್ಯದ ಆಹಾರದ ಸೇವನೆಯಲ್ಲಿ ಮತ್ತು ನಿತ್ಯದ ಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳಿಂದ ಖಂಡಿತಾ ಪ್ರಯೋಜನವಾಗುತ್ತದೆ ಎಂಬ ಸಲಹೆ ನೀಡುತ್ತೇವೆ" ಎಂದು ಫಾದೆಲುರವರು ತಿಳಿಸಿದ್ದಾರೆ.

ಈ ಸಂಶೋಧನೆಯ ಫಲಿತಾಂಶವನ್ನು ಬರುವ ಜೂನ್ 2-6ರವರೆಗೆ ಅಮೇರಿಕಾದ ಶಿಕಾಗೋ ನಗರದಲ್ಲಿ ನಡೆಯಲಿರುವ 2017 American Society of Clinical Oncology (ASCO) ಎಂಬ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಲಾಗುವುದು. ಆದರೆ ತಮ್ಮ ಆಹಾರದಲ್ಲಿ ಒಣಫಲಗಳ ಬದಲಿಗೆ ಶೇಂಗಾಬೀಜ ಅಥವಾ ಶೇಂಗಾಬೀಜದ ಪುಡಿಯನ್ನು ಸೇರಿಸಿದ ಬೆಣ್ಣೆ (ಪೀನಟ್ ಬಟರ್) ಸೇವಿಸಿದವರಲ್ಲಿ ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗಿರುವುದೇನೋ ಕಂಡುಬಂದಿಲ್ಲ.

ಕ್ಯಾನ್ಸರ್‌ನ್ನು ಮಟ್ಟ ಹಾಕುವ ತಾಕತ್ತು-'ಹಲಸಿನ ಹಣ್ಣಿನಲ್ಲಿದೆ'!

ಇದಕ್ಕೆ ಕಾರಣವೇನೆಂದರೆ, ಶೇಂಗಾಬೀಜ ಒಣಫಲವಾಗಿದ್ದರೂ ಇದರ ಪೋಷಕಾಂಶಗಳು ಇತರ ಒಣಫಲಗಳಿಗಿಂತಲೂ ಬೇರೆಯೇ ಆಗಿದ್ದು ಆ ಫಲಗಳ ಗುಣಗಳನ್ನು ಹೊಂದಿಲ್ಲ ಎಂದು ಅಧ್ಯಯನದ ಲೇಖಕರು ವಿವರಿಸಿದ್ದಾರೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ರೋಗಿಗಳಿಗೆ ಯಾದೃಚ್ಛಿಕವಾಗಿ ಒಣಫಲಗಳನ್ನು ಸೇವಿಸಲು ನೀಡಲಾಗುವುದು ಹಾಗೂ ಇವರ ಆರೋಗ್ಯ ಹಾಗೂ ಆಹಾರಸೇವನೆಯನ್ನು ಕ್ರಮಬದ್ದವಾಗಿಸಿ ಕರುಳಿನ ಕ್ಯಾನ್ಸರ್ ತಡೆಗಟ್ಟುವುದು ಮಾತ್ರವಲ್ಲ, ಗುಣವಾದ ಬಳಿಕ ಇನ್ನೊಮ್ಮೆ ಬರದೇ ಇರದಂತೆ ನೋಡಿಕೊಳ್ಳುವುದೂ ಆಗಿದೆ.

"ಈ ಫಲಗಳ ಸೇವನೆಯಿಂದ ಲಭ್ಯವಾಗುವ ಧನಾತ್ಮಕ ಪರಿಣಾಮಗಳನ್ನು ಕ್ಯಾನ್ಸರ್ ನ ಇತರ ಹಂತಗಳಲ್ಲಿರುವ ರೋಗಿಗಳಿಗೆ, ವಿಶೇಷವಾಗಿ ನಾಲ್ಕನೆಯ ಹಂತದಲ್ಲಿರುವ ರೋಗಿಗಳಿಗೂ ಅನ್ವಯಿಸುವಂತೆ ಮಾಡಿ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಲು ಯತ್ನಿಸಲಾಗುವುದು. ಅಂತಿಮವಾಗಿ ಈ ಒಣಫಲಗಳು ಹೇಗೆ ಕ್ಯಾನ್ಸರ್ ನಿವಾರಿಸಿ ರಕ್ಷಿಸಲು ನೆರವಾಗುತ್ತವೆ ಎಂಬುದರ ಬಗ್ಗೆ ಅರಿಯುವುದೂ ಆಗಿದೆ" ಎಂದು ಫಾದೆಲುರವರು ತಿಳಿಸಿದ್ದಾರೆ.

English summary

Eating Nuts May Cut Risk Of Colon Cancer Recurrence By Half

Researchers were particularly interested in nut consumption because it has been linked to lower incidence of obesity, Type-2 diabetes, and reduction in insulin resistance. These health conditions represent a state of excess energy and are each associated with a higher risk of recurrence and death from colon cancer.
Story first published: Tuesday, May 23, 2017, 20:43 [IST]
X
Desktop Bottom Promotion