Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ಬೆಳಿಗ್ಗೆ ಎದ್ದಾಗ ತಲೆನೋವು ಕಾಡುತ್ತದೆಯೇ? ಇದೇ ಸಮಸ್ಯೆ ಇರಬಹುದು!
ನಿದ್ರೆಯಿಂದ ಎದ್ದಾಗ ನಿಮ್ಮ ದೇಹಸ್ಥಿತಿಯು ಯಾವ ರೀತಿಯಲ್ಲಿ ಇರುತ್ತದೆಯಾ ಅದರ ಮೇಲೆ ಸಂಪೂರ್ಣ ದಿನವು ಅಲಂಬಿತವಾಗಿರುವುದು. ನೀವು ಉಲ್ಲಾಸದಿಂದ ಬೆಳಿಗ್ಗೆ ಎದ್ದರೆ ಆ ದಿನ ಒಳ್ಳೆಯದಾಗಿರುವುದು. ಕೆಲವೊಂದು ಸಲ ಬೆಳಿಗ್ಗೆ ಎದ್ದ ಕೂಡಲೇ ದೇಹದಲ್ಲಿ ನೋವು, ನಿಶ್ಯಕ್ತಿ ಅಥವಾ ಉದಾಸೀನ ಕಾಣಿಸಿಕೊಂಡರೆ ಆಗ ದಿನವು ಕೆಟ್ಟದಾಗಿರುವುದು.
ಹಾಸಿಗೆಯಿಂದ ಮೇಲೇದ್ದ ಕೂಡಲೇ ತಲೆನೋವು ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಇದು ಸಂಪೂರ್ಣ ದಿನ ಇರುವುದು ಮಾತ್ರವಲ್ಲದೆ ಯಾವುದೇ ಕೆಲಸಕಾರ್ಯ ಮಾಡಲು ಬಿಡದು. ತಲೆನೋವು ಕಾಣಿಸಿಕೊಳ್ಳಲು ಒತ್ತಡ, ಕೆಫಿನ್, ಆಲ್ಕೋಹಾಲ್ ಸೇವನೆ, ನಿದ್ರಾಹೀನತೆ ಮತ್ತು ಅತಿಯಾದ ಉಷ್ಣಾಂಶವು ಪ್ರಮುಖ ಕಾರಣವಾಗಿದೆ. ಅತಿಯಾದ ಉಷ್ಣತೆ ಇರುವಂತಹ ಸಮಯದಲ್ಲಿ ತಲೆನೋವು ಪದೇ ಪದೇ ಕಾಣಿಸಿಕೊಳ್ಳುವುದು.
ಇದರೊಂದಿಗೆ ದೇಹವು ಉತ್ಪತ್ತಿ ಮಾಡುವಂತಹ ನೋವು ನಿವಾರಕಗಳಾದ ಎಂಡಾರ್ಫಿನ್ಸ್ ಮತ್ತು ಎನ್ಕಿಫಾಲಿನ್ ಗಳ ಉತ್ಪತ್ತಿಯು ಬೆಳಿಗ್ಗೆ 4 ಗಂಟೆಯಿಂದ 8 ಗಂಟೆ ತನಕ ಕಡಿಮೆಯಿರುವುದು. ಮುಂಜಾನೆ ವೇಳೆ ಅಡ್ರಿನಾಲಿನ್ ಉತ್ಪತ್ತಿಯು ತುಂಬಾ ಹೆಚ್ಚಾಗಿರುವುದು. ರಕ್ತದೊತ್ತಡ ಮತ್ತು ರಕ್ತನಾಳಗಳ ಕುಗ್ಗುವಿಕೆ ಹಾಗೂ ಸಂಕೋಚನೆ ಅಡ್ರಿನಾಲಿನ್ ಪರಿಣಾಮ ಬೀರುವುದು.
ಇದು ಮೈಗ್ರೇನ್‌ನಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೈಗ್ರೇನ್ ನಿಯಂತ್ರಣ ಮಾಡಬೇಕಾದರೆ ನೀವು ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಮಲಗುವ ಮೊದಲು ಮೊಬೈಲ್ ಮತ್ತು ಇತರ ಒತ್ತಡದ ಚಟುವಟಿಕೆ ಬಿಟ್ಟುಬಿಡಿ. ಆಲ್ಕೋಹಾಲ್ ಸೇವನೆ ನಿಯಂತ್ರಣದಲ್ಲಿರಲಿ ಮತ್ತು ಸಂಜೆ ಬಳಿಕ ಕೆಫಿನ್ ಸೇವನೆ ಮಾಡಬೇಡಿ. ಒಳ್ಳೆಯ ಸಂಗೀತ ಕೇಳಬೇಕು ಮತ್ತು ಯೋಗ ಮಾಡಬೇಕು. ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ತಲೆನೋವು ಕಾಣಿಸಲು ಕಾರಣವೇನೆಂದು ತಿಳಿಯಿರಿ.....

ರಕ್ತದ ಸಕ್ಕರೆ ಮಟ್ಟ ಕುಸಿತ
ನಿದ್ರಿಸಿದ ಬಳಿಕ ದೇಹಕ್ಕೆ ಸುಮಾರು ಎಂಟು ಗಂಟೆ ಕಾಲ ಯಾವುದೇ ಆಹಾರ ಸಿಗುವುದಿಲ್ಲ. ಇದರಿಂದ ದೇಹದಲ್ಲಿನ ಸಕ್ಕರೆ ಮಟ್ಟವು ಕುಸಿಯುವುದು. ಮಧುಮೇಹ ಇರುವಂತಹವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಕುಸಿಯುವ ಕಾರಣದಿಂದ ರಾತ್ರಿ ಅಥವಾ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಹೈಪೊಗ್ಲೈಕ್ಯಾಮಿಕ್ ತಲೆನೋವು ಕಾಣಿಸಿಕೊಳ್ಳಬಹುದು.

ನಿದ್ರಿಸುವ ಭಂಗಿ
ನಿದ್ರಿಸುವ ಅಥವಾ ಕುಳಿತುಕೊಳ್ಳುವ ವೇಳೆ ನಿಮ್ಮ ಭಂಗಿಯು ಸರಿಯಾಗಿ ಇಲ್ಲದೆ ಇದ್ದೆರ ಅದರಿಂದ ಮಸ್ಕ್ಯುಲೋಸ್ಕೆಲಿಟಲ್ ಜಾಗವು ವಿಸ್ತಾರವಾಗುವುದು. ಇದರಿಂದ ತಲೆನೋವು ಕಾಣಿಸಿಕೊಳ್ಳಬಹುದು.

ನಿದ್ರಿಸುವ ಭಂಗಿ
ನಿದ್ರಿಸುವ ವೇಳೆ ಕಾಣಿಸಿಕೊಳ್ಳುವಂತಹ ಉಸಿರುಗಟ್ಟುವಿಕೆಯಂತಹ ಸಮಸ್ಯೆಯಿಂದ ನಿದ್ರೆಯ ಚಕ್ರದ ಮೇಲೆ ಪರಿಣಾಮವಾಗುವುದು. ಇದರಿಂದ ಬೆಳಿಗ್ಗೆ ಎದ್ದಾಗ ತಲೆನೋವು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದಾಗ ಕಾಣಿಸಿಕೊಳ್ಳುವ ಮೈಗ್ರೇನ್‌ಗೆ ಇದು ಪ್ರಮುಖ ಕಾರಣವಾಗಿದೆ.

ಹಲ್ಲುಜ್ಜುವಿಕೆ
ಕೆಲವೊಮ್ಮೆ ಜೋರಾಗಿ ಬ್ರಷ್‌ನಿಂದ ಹಲ್ಲುಜ್ಜುವುದರಿಂದಾಗಿ ಕೆಲವೊಂದು ನೋವು ಸೂಕ್ಷ್ಮ ವಲಯಗಳ ಉತ್ತೇಜನ ಉಂಟುಮಾಡುವುದು. ಇದರಿಂದ ತಲೆನೋವು ಉಂಟಾಗಬಹುದು. ಹಲ್ಲನ್ನು ಉಜ್ಜುವ ವೇಳೆ ಅದರ ಪ್ರಭಾವವು ತಲೆಬುರುಡೆ, ಭುಜ, ಕುತ್ತಿಗೆ ಮತ್ತು ತಲೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ದವಡೆಯಲ್ಲಿ ನೋವು ಕಾಣಿಸಿಕೊಂಡು ಬೆಳಿಗ್ಗೆ ತಲೆನೋವು ಕಾಣಿಸಿಕೊಳ್ಳುವುದು.

ಅತಿಯಾದ ಔಷಧಿ
ತಲೆನೋವು ನಿವಾರಣೆ ಮಾಡಲು ನೋವು ನಿವಾರಕ ಪದೇ ಪದೇ ಬಳಸುತ್ತಾ ಇದ್ದರೆ ಅದರಿಂದ ತಲೆನೋವು ಕಾಣಿಸಬಹುದು. ಇದು ಬೆಳಗ್ಗಿನ ತಲೆನೋವಿಗೂ ಕಾರಣವಾಗುವುದು.

ಆಹಾರ
ಸಂರಕ್ಷಿತ ಹಾಗೂ ಸಂಸ್ಕರಿಸಿದ ಜಂಕ್ ಫುಡ್‌ಗಳಲ್ಲಿ ಕಾಣಿಸಿಕೊಳ್ಳುವ ಸೇರ್ಪಡೆ ಹಾಗೂ ಕೆಫಿನ್‌ನಿಂದಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ನಿಮಗೆ ತಲೆನೋವು ಉಂಟು ಮಾಡುವುದು.

ಒಂದಿಷ್ಟು ಸಲಹೆಗಳನ್ನು ಅನುಸರಿಸಿ...
ಸ್ವಲ್ಪ ನೀರು ಕುಡಿಯಿರಿ
ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ನೀರು ಕುಡಿಯುವುದರಿಂದ ನಿಮ್ಮ ಜಠರದ ಆರೋಗ್ಯವು ಸುಧಾರಿಸುತ್ತದೆ. ಬೆಳ್ಳಗ್ಗೆ ಇದನ್ನು ಸೇವಿಸುವುದರಿಂದ ಖಾಲಿ ಹೊಟ್ಟೆಯಲ್ಲಿರುವ ಕಲ್ಮಶಗಳು ನೇರವಾಗಿ ನಿಮ್ಮ ಕರುಳುಗಳಿಗೆ ರವಾನೆಯಾಗಿ, ದೇಹದಿಂದ ಹೊರಹಾಕಲ್ಪಡುತ್ತವೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಪರಿಪೂರ್ಣ ಉಪಾಹಾರ
ಬೆಳಗ್ಗೆ ನೀವು ಸೇವಿಸುವ ಉಪಾಹಾರವು ನಿಮ್ಮ ಇಡೀ ದಿನದ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿರುತ್ತದೆ. ಅದಕ್ಕೆ ಆಂಗ್ಲ ಗಾದೆಯೊಂದು ಹೀಗೆ ಹೇಳಿದೆ: "ಈಟ್ ಬ್ರೇಕ್‍ಫಾಸ್ಟ್ ಲೈಕ್ ಎ ಕಿಂಗ್, ಲಂಚ್ ಲೈಕ್ ಎ ಕ್ವೀನ್ ಅಂಡ್ ಡಿನ್ನರ್ ಲೈಕ್ ಎ ಪೀಸಂಟ್" ಎಂದರೆ ರಾಜನ ರೀತಿ ಉಪಾಹಾರ ಸೇವಿಸು, ರಾಣಿಯ ರೀತಿ ಮಧ್ಯಾಹ್ನದ ಊಟ ಮಾಡು, ರೈತನ ರೀತಿ ರಾತ್ರಿ ಊಟವನ್ನು ಮಾಡು ಎಂದು ಈ ಗಾದೆ ತಿಳಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟು ಅದ್ಧೂರಿಯಾದ ಉಪಾಹಾರವನ್ನು ಸೇವಿಸಿ.

ನೆನಪಿಡಿ ಮೊದಲು ಟೀ ಕುಡಿಯುವ ಮುನ್ನ ನೀರು ಕುಡಿಯಿರಿ
ಕಾಫಿ ಟೀ ಮೊದಲಾದ ಬಿಸಿಯಾದ ಪಾನೀಯಗಳು ಕೊಂಚ ಆಮ್ಲೀಯವಾಗಿರುತ್ತದೆ. ಅಂದರೆ ಇವುಗಳ ಪಿಎಚ್ ಮಟ್ಟ 5 ಮತ್ತು 6 ರ ನಡುವೆ ಇರುತ್ತದೆ. ಇದರಿಂದ ಜೀರ್ಣರಸಗಳ ಆಮ್ಲೀಯತೆ ಕೊಂಚ ಹೆಚ್ಚುತ್ತದೆ ಹಾಗೂ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಹುಣ್ಣು (ಅಲ್ಸರ್) ಆಗುವ ಸಾಧ್ಯತೆ ಇದೆ. ಇದು ಕ್ಯಾನ್ಸರಿಗೂ ತಿರುಗಬಹುದು. ಆದ್ದರಿಂದ ಟೀ ಕಾಫಿ ಕುಡಿಯುವ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣರಸಗಳ ಆಮ್ಲೀಯತೆ ಹೆಚ್ಚುವುದನ್ನು ಕಡಿಮೆಗೊಳಿಸಬಹುದು.

ರಾತ್ರಿ ಮಲಗುವ ಮುನ್ನ ನೀರು ಕುಡಿಯುರಿ
ರಾತ್ರಿ ಮಲಗುವ ಸಮಯಕ್ಕೂ ಒಂದು ಗಂಟೆ ಮುಂಚಿತವಾಗಿ ಒಂದು ದೊಡ್ಡ ಲೋಟ ನೀರು ಕುಡಿದು ಕೊಂಚ ಕಾಲ ಅಡ್ಡಾಡಿ ಬಳಿಕ ಪಾದಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಮಲಗುವ ಮೂಲಕ ಗಾಢವಾದ ನಿದ್ದೆ ಆವರಿಸುತ್ತದೆ. ಈ ನೀರು ರಾತ್ರಿಯ ನಿದ್ದೆಯ ಸಮಯದಲ್ಲಿ ನಡೆಯುವ ಅನೈಚ್ಛಿಕ ಕಾರ್ಯಗಳಿಗೆ ಅಗತ್ಯವಾದ ನೀರನ್ನು ಪೂರೈಸುತ್ತದೆ. ಅಲ್ಲದೇ ನೀರಿನ ಕೊರತೆಯಾಗದಂತೆ ನೋಡಿಕೊಂಡು ಹೃದಯಾಘಾತ ಅಥವಾ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.... ಅಷ್ಟೇ ಅಲ್ಲದೇ ಮುಂಜಾನೆ ಎದ್ದಾಗ ತಲೆ ನೋವು ಕೂಡ ಕಡಿಮೆಯಾಗುತ್ತದೆ

ಹಠಾತ್ ಏಳುವುದು ಮತ್ತು ತಕ್ಷಣ ಜಿಮ್ಮಿಗೆ ಹೋಗಬೇಡಿ!
ಹಠಾತ್ ಏಳುವುದು ಮತ್ತು ತಕ್ಷಣ ಜಿಮ್ಮಿಗೆ ಹೋಗುವುದು ಬೆಳಗೆದ್ದ ಮೇಲೆ ಸ್ವಲ್ಪ ಆರಾಮವಾಗಿ ತೆಗೆದುಕೊಳ್ಳಿ. ಸ್ವಲ್ಪ ಆರಾಮವಾಗಿ ಎದ್ದು ನಿಮ್ಮ ಕೈಕಾಲುಗಳನ್ನು ನಿಧಾನವಾಗಿ ಚಲಿಸಿ. ಬೆಳಿಗೆ ಏಳುವಾಗ ನಿಮ್ಮ ಬಲಗಡೆ ತಿರುಗಿ ಹಾಸಿಗೆಯಿಂದ ಏಳಿ. ಹಾಗೆ ಮಾಡಿದಾಗ ನೀವು ನಿದ್ರೆ ಮಾಡುತ್ತಿದ್ದಾಗ ಸುಪ್ತಾವಸ್ಥೆಯಲ್ಲಿದ್ದ ಚೈತನ್ಯವು ಹರಿದು ಸಮತೋಲನಗೊಳಿಸುತ್ತದೆ.

ಆದಷ್ಟು ಮೊಬೈಲ್ ಫೋನ್‌ಗಳಿಂದ ದೂರವಿರಿ
ನೀವು ಎದ್ದು ಎರಡುಗಂಟೆಗಳಕಾಲ ಮೇಲ್ ಚೆಕ್ ಮಾಡದೇ ಇತರ ಕೆಲಸಗಳ ಕಡೆ ನಿಗಾ ಇಡಿ. ನಿಮ್ಮ ಜೀವನದ ಕೆಲಸಗಳು ಸುಗಮವಾಗಿರಲು ಅನಿರೀಕ್ಷಿತ ತಂತ್ರಗಳ ಸಾಧ್ಯತೆ ಇರುವ ಮೈಲ್‌ಗಳನ್ನು ನೋಡಬೇಡಿ. ನೀವೇನು ಈ ಸಮಯದಲ್ಲಿ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಶಕ್ತಿಯನ್ನು ಕಡಿಮೆ ಮಹತ್ವವಿರುವ ಕಾರ್ಯಗಳನ್ನು ಬಿಟ್ಟು ಇತರ ಅತ್ಯಂತ ಮುಖ್ಯವಾದ ಕಾರ್ಯಗಳ ಕಡೆ ಗಮನಕೊಡಿ.

ಸಾಧ್ಯವಾದಷ್ಟು ಮನಸ್ಸು ಶಾಂತಿಯಾಗಿರಲಿ...
ಏಳುವಾಗಲೇ ಕೋಪದಿಂದೇಳುವುದು ಬಹಳಷ್ಟು ಜನರು ಬೆಳಗಿನ ಸಮಯದಲ್ಲಿ ಅತಿಯಾದ ಕಾರ್ಯಕ್ರಮಗಳನ್ನು ತುಂಬಿಕೊಂಡಿರುತ್ತಾರೆ. ಹಾಗಿದ್ದಾಗ, ಅವುಗಳು ತಲೆಯಲ್ಲೇ ತುಂಬಿಕೊಂಡಿದ್ದು ಬೆಳಗೇಳುವಾಗ ಮುಂಗೋಪದಿಂದಿರುವ ಸಾಧ್ಯತೆಗಳು ಇರುತ್ತವೆ. ನೀವು ನಿಮ್ಮ ದಿನದ ಕಾರ್ಯಕ್ರಮಗಳ ಬಗ್ಗೆ ವೇಳಾಪಟ್ಟಿ ಅಥವಾ ಯೋಜನೆ ಮಾಡುವುದಿಲ್ಲವೇ?. ಬಹಳಷ್ಟು ಜನರು ತಾವು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಒಂದು ಯೋಜನೆ ಅಥವಾ ವೇಳಾಪಟ್ಟಿ ಮುಂಚೆಯೇ ಮಾಡುವುದಿಲ್ಲ. ಇಂತಹವರು ದಿನ ಪೂರ್ತಿ ಕೆಲಸಗಳಲ್ಲಿ ನಿರತರಾಗಿ ದಿನದ ಕೊನೆಯಲ್ಲಿ ಮರುದಿನ ಮಾಡುವ ಕೆಲಸಗಳ ಬಗ್ಗೆ ಯೋಚಿಸುವುದನ್ನು ಇಷ್ಟಪಡುವುದಿಲ್ಲ. ಆದರೂ ಮಾರನೆಯದಿನದ ಉಪಹಾರ, ಊಟ ಮತ್ತು ಧರಿಸುವ ಬಟ್ಟೆಗಳ ಬಗ್ಗೆ ಯೋಚಿಸಿ ಯೋಜನೆ ಮಾಡುವುದು ಒಳ್ಳೆಯದು. ಹಿಂದಿನ ರಾತ್ರಿಯೇ ಮಾರನೇ ದಿನದ ಉಪಹಾರವನ್ನು ಯೋಜಿಸಿ.



Click it and Unblock the Notifications