For Quick Alerts
ALLOW NOTIFICATIONS  
For Daily Alerts

  ಬೇಸಿಗೆಯ ಬಿಸಿಲ ಝಳದಿಂದ ಬಚಾವ್ ಆಗಲು ಸರಳೋಪಾಯ

  By Manu
  |

  ಕರ್ನಾಟಕದ ಬಳ್ಳಾರಿಯಲ್ಲಿ ಎರಡು ಋತುಗಳಿವೆಯಂತೆ. ಒಂದು ಬೇಸಿಗೆ, ಇನ್ನೊಂದು ಬಿರುಬೇಸಿಗೆ ಎಂದು ಬೀಚಿಯವರು ತಮ್ಮ ಬರಹದಲ್ಲಿ ತಿಳಿಸುತ್ತಾರೆ. ಸಾಮಾನ್ಯವಾಗಿ ಕರಾವಳಿ, ಬಯಲುಸೀಮೆ, ಕಲ್ಲುಬಂಡೆಗಳಿರುವ ಪ್ರದೇಶಗಳಲ್ಲಿ ಸೆಖೆ ಹೆಚ್ಚೇ ಇರುತ್ತದೆ. ಬಿಸಿಲಿನ ಝಳ ಹೆಚ್ಚಾದಂತೆ ದೇಹ ನೀರನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಬಾಡಿ ಹೀಟ್ ಕಮ್ಮಿ ಮಾಡುವ 9 ಪಾನೀಯಗಳು

  ಸೂಕ್ತ ಪ್ರಮಾಣದ ಆರೈಕೆ ಹಾಗೂ ನೀರಿನ ಪೂರೈಕೆ ಆಗದೇ ಇದ್ದರೆ ಈ ಝಳ ದೇಹವನ್ನು ನಿರ್ಜಲೀಕರಿಸಿ ಆಘಾತವನ್ನು ನೀಡಬಹುದು. ಇದನ್ನು ಬಿಸಿಲಿನ ಆಘಾತ ಅಥವಾ Heat stroke ಎಂದು ಕರೆಯುತ್ತಾರೆ.  ಬಾಡಿ ಹೀಟ್ ಕಡಿಮೆ ಮಾಡಲು ಮನೆ ಮದ್ದು

  ಬಿಸಿಲಿನ ಆಘಾತ ಹೆಚ್ಚಾದಷ್ಟೂ ನಿತ್ರಾಣವೂ ಹೆಚ್ಚುತ್ತಾ ಹೋಗಿ ಕೆಲವು ಮುಖ್ಯ ಅಂಗಗಳು ಕುಸಿಯುತ್ತವೆ. ಈ ಹಂತದಲ್ಲಿ ಉಸಿರಾಟ ವೇಗವಾಗುವುದು, ತಲೆನೋವು, ಹೃದಯದ ಬಡಿತ ಹೆಚ್ಚುವುದು, ವಾಕರಿಕೆ, ಚರ್ಮ ಕೆಂಪಗಾಗುತ್ತದೆ ಮತ್ತು ಅತಿ ಹೆಚ್ಚು ಬೆವರುವುದು ಕಂಡುಬರುತ್ತದೆ. ಇದರೊಂದಿಗೆ ತಲೆ ಸುತ್ತುವುದು, ಕಣ್ಣು ಕತ್ತಲೆ ಕವಿಯುವುದು ಮೊದಲಾದವು ಬಿಸಿಲಿನ ಆಘಾತದ ಸೂಚನೆಗಳಾಗಿವೆ. ಇದರಿಂದ ರಕ್ಷಿಸಿಕೊಳ್ಳಲು ಕೆಲವು ಉಪಾಯಗಳು ಇಲ್ಲಿವೆ....  

  ಈರುಳ್ಳಿಯ ಜ್ಯೂಸ್

  ಈರುಳ್ಳಿಯ ಜ್ಯೂಸ್

  ಕೇಳಲು ವಿಚಿತ್ರವೆನಿಸುವ ಈ ಮಾಹಿತಿ ನಿಜಕ್ಕೂ ಪರಿಣಾಮಕಾರಿಯಾಗಿದೆ. ಈರುಳ್ಳಿಯ ರಸವನ್ನು ಎದೆ ಮತ್ತು ಕಿವಿಯ ಹಿಂಭಾಗದ ಭಾಗದಲ್ಲಿ ಹಚ್ಚಿಕೊಳ್ಳುವ ಮೂಲಕ ಆಘಾತವನ್ನು ತಡೆಯಬಹುದು. ಬಿಸಿಲಿನ ಝಳವಿರುವ ಸ್ಥಳಗಳಲ್ಲಿ ಈ ವಿಧಾನವನ್ನು ಅನುಸುರಿಸುವ ಮೂಲಕ ಹಾಗೂ ಆಹಾರದ ಜೊತೆ ಹಸಿ ನೀರುಳ್ಳಿಯನ್ನು ಸಾಲಾಡ್ ರೂಪದಲ್ಲಿ ಸೇವಿಸುವ ಮೂಲಕ ಬಿಸಿಲಿನ ಝಳವನ್ನು ಕಡಿಮೆ ಮಾಡಬಹುದು. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

  ಹುಣಸೆ ನೀರು

  ಹುಣಸೆ ನೀರು

  ಒಂದು ಪಾತ್ರೆಯಲ್ಲಿ ಕೊಂಚ ನೀರನ್ನು ಬಿಸಿಮಾಡಿ. ಕುದಿಯಲು ಪ್ರಾರಂಭವಾದ ಬಳಿಕ ಇದಕ್ಕೆ ಕೊಂಚ ಹುಣಸೆ ಹುಳಿ ಹಾಕಿ ಹತ್ತು ನಿಮಿಷ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಕುಡಿಯಿರಿ. ಈ ನೀರಿನಲ್ಲಿ ಹಲವಾರು ಖನಿಜಗಳ ಜೊತೆಗೇ ವಿಟಮಿನ್ನುಗಳೂ ಎಲೆಕ್ಟ್ರೋಲೈಟುಗಳೂ ಇವೆ. ಅಲ್ಲದೇ ಇದು ಬಿಸಿಲಿಗೆ ಏರಿದ್ದ ದೇಹದ ತಾಪಮಾನವನ್ನೂ ಇಳಿಸುತ್ತದೆ.

  ಎಳನೀರು

  ಎಳನೀರು

  ಬಿಸಿಲಿನಿಂದ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಬೆವರಿನ ಮೂಲಕ ಆವಿಯಾಗುತ್ತದೆ. ಇದನ್ನು ಮರುತುಂಬಿಕೊಳ್ಳಲು ಎಳನೀರು ಮತ್ತು ಮಜ್ಜಿಗೆಯನ್ನು ಕುಡಿದಷ್ಟೂ ಉತ್ತಮ. ಇದು ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ತುಂಬಿಸಿ ದೇಹ ಕಳೆದುಕೊಂಡಿದ್ದ ಖನಿಜಗಳನ್ನು ಮತ್ತೆ ಒದಗಿಸುತ್ತವೆ.ಎಳನೀರಿನಲ್ಲಿಯೂ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟುಗಳಿವೆ. ಕಲ್ಪವೃಕ್ಷ ಎಳೆ ನೀರಿನ ಎಣಿಕೆಯಿಲ್ಲದ ಆರೋಗ್ಯ ಗುಣಗಳು

  ಪುದೀನಾ ಜ್ಯೂಸ್

  ಪುದೀನಾ ಜ್ಯೂಸ್

  ದೇಹವನ್ನು ತಂಪಾಗಿಸಲು ಪುದಿನಾ ಎಲೆಗಳ ಜ್ಯೂಸ್ ಸಹಾ ಸಮರ್ಥವಾಗಿದೆ. ಇದರ ಜೊತೆಗೆ ಕೊತ್ತಂಬರಿ ಎಲೆಗಳನ್ನು ಸೇರಿಸಿದರೆ ಇನ್ನೂ ಉತ್ತಮ. ಬೇಸಿಗೆಯಲ್ಲಿ ದಿನಕ್ಕೊಂದು ಲೋಟವಾದರೂ ಈ ಜ್ಯೂಸ್ ಕುಡಿಯಿರಿ.ಒಂದು ಲೋಟ 'ಪುದೀನ ಜ್ಯೂಸ್‌'ನಲ್ಲಿದೆ ಔಷಧೀಯ ಶಕ್ತಿ!

  ಸೇಬಿನ ಶಿರ್ಕಾ

  ಸೇಬಿನ ಶಿರ್ಕಾ

  ಲೋಳೆಸರದ ಜ್ಯೂಸ್ ಕುಡಿಯುವ ಮೂಲಕ ಪರಿಸರದ ತಾಪಮಾನದೊಂದಿಗೆ ದೇಹ ಹೊಂದಿಕೊಳ್ಳಲು ನೆರವಾಗುತ್ತದೆ. ಒಂದು ಲೋಟ ಲೋಳೆಸರದ ಜ್ಯೂಸ್ ಅನ್ನು ಮುಂಜಾನೆಯ ಹೊತ್ತು ಕುಡಿಯುವುದು ಉತ್ತಮ. ಏರುತ್ತಿರುವ ಉರಿಬಿಸಿಲಿನ ಧಗೆ-ಆಹಾರ ಕ್ರಮ ಹೀಗಿರಲಿ

  ಶ್ರೀಗಂಧದ ಲೇಪನ

  ಶ್ರೀಗಂಧದ ಲೇಪನ

  ದೇಹವನ್ನು ತಂಪಾಗಿಸಲು ಶ್ರೀಗಂಧದ ಲೇಪನವೂ ಉತ್ತಮವಾಗಿದೆ. ಎದೆ ಮತ್ತು ಹಣೆಯ ಮೇಲೆ ಈ ಲೇಪನವನ್ನು ಹಚ್ಚಿಕೊಳ್ಳುವ ಮೂಲಕ ದೇಹದ ತಾಪಮಾನವನ್ನು ಕಡಿಮೆಗೊಳಿಸಬಹುದು.ನಿಮ್ಮ ತ್ವಚೆಯ ಅಂದಕ್ಕೆ ಬೇಕು ಶ್ರೀಗಂಧದ ಲೇಪನ!

   

  English summary

  Do This To Prevent Heat Stroke In Summer!

  Some places are very hot in summer. When climatic conditions are harsh, you may need to take special care to protect your body. Heat stroke is the first danger that comes with summer season. Many people die every year due to heat stroke. When the fluids in you dry up, it could turn into a life threatening condition
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more