Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸತತವಾಗಿ 'ತಲೆನೋವು' ಕಾಡುತ್ತಿದ್ದರೆ-ಅಪಾಯ ಕಟ್ಟಿಟ್ಟ ಬುತ್ತಿ!
ತಲೆನೋವು ಬಂದಾಗ ವೈದ್ಯಕೀಯ ಸಲಹೆ ಪಡೆಯುವುದೇ ಸೂಕ್ತ. ಒಂದು ವೇಳೆ ತಲೆನೋವು ತೀವ್ರವಾಗಿದ್ದು ಸತತವಾಗಿ ಬರುತ್ತಲೇ ಇದ್ದರೆ ಇದು ಬೇರೆ ರೋಗದ ತೊಂದರೆಯ ಅಡ್ಡಪರಿಣಾಮಗಳಿರ ಬಹುದೆಂದು ಈ ಕೆಳಗಿನ ಸಂಜ್ಞೆಗಳು ಸೂಚಿಸುತ್ತವೆ...
ಒಂದು ವೇಳೆ ನೀವು ಸತತವಾಗಿ ಕಾಡುವ ತಲೆನೋವಿಗೆ ಒಳಗಾಗಿದ್ದರೆ, ಇದನ್ನು ಸಾಮಾನ್ಯ ತಲೆನೋವು ಎಂದು ಪರಿಗಣಸಲು ಸಾಧ್ಯವೇ ಇಲ್ಲ. ಏಕೆಂದರೆ ಈ ತಲೆನೋವು ಬೇರಾವುದೋ ದೊಡ್ಡ ತೊಂದರೆಯೊಂದರ ಪರಿಣಾಮವಾಗಿರಬಹುದು. ದೇಹವನ್ನೇ ನಿತ್ರಾಣವಾಗಿಸಿ ಹಿಂಡಿ ಹಿಪ್ಪೆ ಮಾಡಬಲ್ಲ ನೋವುಗಳಲ್ಲಿ ತಲೆನೋವು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ
ಕೆಲವೊಮ್ಮೆ, ತಲೆನೋವು ತೀವ್ರವಾದಾಗ ಕಣ್ಣುಗಳನ್ನು ತೆರೆಯಲೂ ಸಾಧ್ಯವಾಗುವುದಿಲ್ಲ, ಕಿವಿಯಿಂದ ಕೇಳುವ ಯಾವುದೇ ಶಬ್ದವೂ, ತಣ್ಣಗಿನ ಗಾಳಿ, ಪರಿಮಳ ಮೊದಲಾದ ಸಂವೇದನೆಗಳೂ ತಲೆನೋವನ್ನು ಹೆಚ್ಚಿಸುತ್ತವೆ. ಈ ಸಮಯದಲ್ಲಿ ಸುಮ್ಮನೆ ಮಲಗುವುದೊಂದೇ ಎಲ್ಲರಿಗೆ ಹೊಳೆಯುವ ಪರಿಹಾರ. ಪರಿಣಾಮವಾಗಿ ನಿತ್ಯದ ಕೆಲಸಕಾರ್ಯಗಳೆಲ್ಲಾ ಬಾಧೆಗೊಳಗಾಗುತ್ತವೆ. ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ 'ತಲೆನೋವು' ಮಂಗಮಾಯ!
ತಲೆನೋವು ಎಂದಾಕ್ಷಣ ಹೆಚ್ಚಿನವರು ನೋವು ನಿವಾರಕ ಗುಳಿಗೆಯನ್ನು ಸೇವಿಸುವ ನಿರ್ಧಾರ ಅಥವಾ ಶಿಫಾರಸ್ಸು ಮಾಡುತ್ತಾರೆ.
ಆದರೆ ವಾಸ್ತವವಾಗಿ ನೋವು ನಿವಾರಕಗಳು ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪಲು ಅಡ್ಡಗಾಲು ಹಾಕುತ್ತವೆಯೇ ಹೊರತು ನೋವನ್ನು ಕಡಿಮೆ ಮಾಡುವುದಿಲ್ಲ. ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!
ಅಲ್ಲದೇ ಇವುಗಳಿಗೆ ಕೆಲವು ಅಡ್ಡಪರಿಣಾಮಗಳೂ ಇವೆ. ಆದ್ದರಿಂದ ತಲೆನೋವು ಬಂದಾಗ ವೈದ್ಯಕೀಯ ಸಲಹೆ ಪಡೆಯುವುದೇ ಸೂಕ್ತ. ಒಂದು ವೇಳೆ ತಲೆನೋವು ತೀವ್ರವಾಗಿದ್ದು ಸತತವಾಗಿ ಬರುತ್ತಲೇ ಇದ್ದರೆ ಇದು ಬೇರೆ ರೋಗದ ತೊಂದರೆಯ ಅಡ್ಡಪರಿಣಾಮಗಳಿರ ಬಹುದೆಂದು ಈ ಕೆಳಗಿನ ಸಂಜ್ಞೆಗಳು ಸೂಚಿಸುತ್ತವೆ...

ಚಪ್ಪಾಳೆ ಹೊಡೆದಂತೆ ಥಟ್ಟನೇ ನೋವಾಗುವುದು
ಸಾಮಾನ್ಯವಾಗಿದ್ದ ವೇಳೆಯಲ್ಲಿ ಒಂದು ವೇಳೆ ತಲೆನೋವು ಥಟ್ಟನೇ, ಚಪ್ಪಾಳೆ ಹೊಡೆದಷ್ಟು ಬೇಗನೇ ಆವರಿಸಿಬಿಟ್ಟು ಕೆಲವಾರು ನಿಮಿಷಗಳವರೆಗೆ ನಿಧಾನವಾಗಿ ಇಳಿಯುತ್ತಾ ಹೋದರೆ ನಿಮ್ಮ ಮೆದುಳಿನಲ್ಲಿ ರಕ್ತಸ್ರಾವ ಅಥವಾ ಗಡ್ಡೆಕಟ್ಟಿರಬಹುದು (brain hemorrhage). ಇದೇ ತಲೆಯೊಳಗೆ ಚಪ್ಪಾಳೆ ಹೊಡೆದಂತೆ ನೋವು ಏರಲು (thunderclap) ಕಾರಣ.

ನೋವಿನಲ್ಲಿ ಏರಿಳಿತವಾಗುತ್ತಾ ಇರುವುದು
ಒಂದು ವೇಳೆ ತಲೆನೋವಿನ ತೀವ್ರತೆ ಒಮ್ಮೆ ಅತಿ ಹೆಚ್ಚಾಗಿಯೂ, ಕೆಲವೊಮ್ಮೆ ತೀರಾ ಕಡಿಮೆಯಾಗಿಯೂ ಏರುತ್ತಾ ಇಳಿಯುತ್ತಾ ಇದ್ದು ಒಂದೇ ಹಂತದಲ್ಲಿರದಿದ್ದರೆ ಇದು ಮೈಗ್ರೇನ್ ತಲೆನೋವಿನ ಅಥವಾ brain aneurism ಎಂಬ ಮೆದುಳಿನ ತೊಂದರೆಯಾಗಿರಬಹುದು.ತಲೆನೋವು ತರುವ 10 ಅಭ್ಯಾಸಗಳು!

ಕಣ್ಣ ಹಿಂದೆ ಕೇಂದ್ರೀಕೃತಗೊಳ್ಳುವ ನೋವು
ಒಂದು ವೇಳೆ ನೋವು ನಿಮ್ಮ ತಲೆಯ ನಟ್ಟ ನಡುವೆ, ಅಂದರೆ ಕಣ್ಣುಗುಡ್ಡೆಗಳ ಹಿಂಭಾಗದ ನಡುವಿನ ಭಾಗದಲ್ಲಿದ್ದಂತೆ ಅನ್ನಿಸಿದರೆ ಇದು ಕಣ್ಣಿನ ಭೀಕರ ಕಾಯಿಲೆಯಾದ ಗ್ಲೌಕೋಮಾ ಅಥವಾ ಕುಹರದ (ಸೈನಸ್) ಸೋಂಕಿನಿಂದ ಆಗಿರುವ ಸೈನುಸೈಟಿಸ್ ಆಗಿರಬಹುದು.

ಕೇವಲ ಬೆಳಗ್ಗಿನ ಸಮಯದ ತಲೆನೋವು
ಒಂದು ವೇಳೆ ಬೆಳಿಗ್ಗೆದ್ದಾಗ ಅತಿ ಹೆಚ್ಚಾಗಿದ್ದು ಬಿಸಿಲೇರಿದಂತೆಲ್ಲಾ ನೋವು ಕಡಿಮೆಯಾಗುತ್ತಾ ಹೋದರೆ ಇದು ಸೌಮ್ಯ ಪ್ರಮಾಣದ ಸೈನುಸೈಟಿಸ್ ಅಥವಾ ಕುಹರದ ಸೋಂಕಿನ ಸಂಕೇತವಾಗಿರಬಹುದು. ಇದರಿಂದ ರಾತ್ರಿಯ ಸಮಯದಲ್ಲಿ ಮೂಗಿನ ಒಳಭಾಗದ ಸೋಂಕು ಹೆಚ್ಚಾಗಿದ್ದು ಬೆಳಿಗ್ಗೆದ್ದ ತಕ್ಷಣ ತಲೆನೋವಿಗೆ ಕಾರಣವಾಗಿರುತ್ತದೆ.

ತಲೆನೋವಿನ ಜೊತೆಗೆ ತಲೆಸುತ್ತುವುದು
ಒಂದು ವೇಳೆ ನಿಮಗೆ ಅತೀವ ತಲೆನೋವಿದ್ದು ತಿಂಗಳಿಗೂ ಹೆಚ್ಚು ಕಾಲ ಕಾಡಿದರೆ ಮತ್ತು ಇದರೊಂದಿಗೆ ತಲೆತಿರುಗಿ ಬೀಳುವಷ್ಟು ನಿತ್ರಾಣ ಕಾಡಿದರೆ ಇದು ಹೃದಯಾಘಾತವಾಗುವ ಸಂಭವ ಹೆಚ್ಚಿರುವುದನ್ನು ಸೂಚಿಸುತ್ತದೆ.

ತಲೆನೋವಿನ ಜೊತೆ ವಾಂತಿಯಾಗುವ ಲಕ್ಷಣ ಕಂಡುಬಂದರೆ
ತಲೆನೋವು ತೀವ್ರವಾಗಿದ್ದು ಈ ಸಮಯದಲ್ಲಿ ವಾಂತಿ ಬಂದಂತಾಗುವುದು, ಆದರೆ ವಾಂತಿಯಾಗದೇ ಇರುವುದು ಮೈಗ್ರೇನ್ ತಲೆನೋವಿನ ಲಕ್ಷಣವಾಗಿದೆ.



Click it and Unblock the Notifications
