ದೇಹದಲ್ಲಿ ಕಬ್ಬಿಣಾಂಶದ ಕೊರತೆ ಸೂಚಿಸುವ 6 ಮುಖ್ಯ ಲಕ್ಷಣಗಳು

By: Anuradha Yogesh
Subscribe to Boldsky

ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶವು ಅತಿ ಮುಖ್ಯವಾದದ್ದು. ಅದಿಲ್ಲದೆ ದೇಹದ ಎಲ್ಲ ಭಾಗಗಳಿಗೆ ಆಕ್ಸಿಜೆನ್ ತಲುಪಿಸುವ ರಕ್ತದಲ್ಲಿನ ಹೀಮೋಗ್ಲೋಬಿನ್ ಉತ್ಪಾದನೆಯಾಗುವದಿಲ್ಲ. ಅತಿಯಾದ ಕಬ್ಬಿಣಂಶದ ಕೊರತೆಯಾದಾಗ ಇಡೀ ದಿನ ಸುಸ್ತು, ತಲೆ ಸುತ್ತುವಿಕೆಯ ಅನುಭವವಾಗುತ್ತದೆ.

ಇದನ್ನೇ ಅನೀಮಿಯ ಅಥವ ರಕ್ತಹೀನತೆ ಎಂದು ಕರೆಯುತ್ತಾರೆ. ಋತುಚಕ್ರದಲ್ಲಿ ಆಗುವ ರಕ್ತಸ್ರಾವದಿಂದಾಗಿ ಹೆಣ್ಣುಮಕ್ಕಳಲ್ಲೇ ರಕ್ತಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೂ ಕೆಲವೊಮ್ಮೆ ದೇಹದಲ್ಲಾಗುವ ವಿಲಕ್ಷಣ ಬದಲಾವಣೆಗಳು ಕೂಡ ರಕ್ತಹೀನತೆಯನ್ನು ಸೂಚಿಸುತ್ತವೆ...

ಊದಿಕೊಂಡ ನಾಲಿಗೆ

ಊದಿಕೊಂಡ ನಾಲಿಗೆ

'ಅಟ್ರಾಪಿಕ್ ಗ್ಲಾಸಿಟಸ್' ಎಂಬ ರೋಗಲಕ್ಷಣದಲ್ಲಿ ನಾಲಿಗೆ ಊದಿಕೊಂಡು ಮಾಂಸದ ತುಂಡಿನಂತೆ ಕಾಣುತ್ತದೆ. ಇದು ರಕ್ತಹೀನತೆಯ ಅತಿ ಮುಖ್ಯ ಲಕ್ಷಣ. ರುಚಿ ಗ್ರಂಥಿಗಳ ನಾಶವಾಗುವಿಕೆಯಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸೌಂದರ್ಯಕ್ಕೆ ಧಕ್ಕೆ ತರುವದಲ್ಲದೆ, ಅತಿಯಾದ ನೋವಿನಿಂದ ಕೂಡಿದ ಸ್ಥಿತಿಯಾಗಿರುತ್ತದೆ. ತಿನ್ನಲು, ಕುಡಿಯಲು ಹಾಗು ಮಾತನಾಡಲು ಬಹಳ ಹಿಂಸೆ ಆಗುತ್ತದೆ. ನಿಮ್ಮಲ್ಲಿ ಈ ತೆರನಾದ ಯಾವದೇ ಲಕ್ಷಣಗಳು ಕಂದು ಬಂದರೆ ಕೂಡಲೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು.

Image Courtesy

ಮಂಜುಗಡ್ಡೆಯನ್ನು ಜಗಿದು ತಿನ್ನುವ ಅತಿಯಾದ ಬಯಕೆ

ಮಂಜುಗಡ್ಡೆಯನ್ನು ಜಗಿದು ತಿನ್ನುವ ಅತಿಯಾದ ಬಯಕೆ

'ಪ್ಯಾಗೊಫೆಜಿಯ' ಎಂಬ ವಿಚಿತ್ರವಾದ ಮಂಜುಗಡ್ಡೆಯನ್ನು ಜಗಿಯುವ ಬಯಕೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ.(ಇದರಿಂದ ಊದಿಕೊಂಡಿರುವ ನಾಲಿಗೆಗೆ ಆಗಿರುವೆ ಹಿಂಸೆ ಕಡಿಮೆಯಾಗಬಹುದು). ಕೆಲವು ರೋಗಿಗಳು ಲೋಟ ಮತ್ತು ಬಕೆಟ್‌ನಷ್ಟು ಮಂಜು ತಿಂದಿರುವ ನಿದರ್ಶನಗಳಿವೆ.

ಮಣ್ಣು ತಿನ್ನುವ ಬಯಕೆ!!

ಮಣ್ಣು ತಿನ್ನುವ ಬಯಕೆ!!

ಈ ಲಕ್ಷಣಕ್ಕೆ ಮುಖ್ಯವಾದ ಕಾರಣ ಏನೆಂದು ಇನ್ನೂ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ಪ್ಲಾಸ್ಟರ್, ಪೈಂಟ್, ಕೂದಲು ಅಷ್ಟೆ ಅಲ್ಲ ಮಣ್ಣನ್ನು ತಿನ್ನುವ ಅತಿಯಾದ ಪ್ರಚೋದನೆಯಾಗುತ್ತದೆ. ಆದರೆ ಕಬ್ಬಿಣಾಂಶವನ್ನು ಪೂರೈಸುವ ಮಾತ್ರೆಗಳ ಸೇವನೆಯಿಂದ ಈ ಸ್ಥಿತಿಯನ್ನು ನಿಭಾಯಿಸಬಹುದು.

Image source - Lisa Williams

ಒಡೆದ ತುಟಿಗಳು

ಒಡೆದ ತುಟಿಗಳು

ಚಳಿಗಾಲದಲ್ಲಿ ತುಟಿ ಒಡೆಯುವದು ಸಾಮನ್ಯವೆ ಸರಿ, ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ತುಟಿಯ ಸಂದುಗಳಲ್ಲಿ ಸೀಳುವಿಕೆ ಕಾಣಿಸಿಕೊಳ್ಳುತ್ತದೆ(ಆಂಗುಲರ್ ಚೆಲಿಟಿಸ್). ಈ ಸ್ಥಿತಿಯು ರೋಗಿಗಳಿಗೆ ಮತನಾಡಲು, ನಗಲು ಅಷ್ಟೆ ಅಲ್ಲ ತಿನ್ನಲು ಕೂಡ ತೊಂದರೆ ಮಾಡುತ್ತದೆ. ಆಂಗುಲರ್ ಚೆಲಿಟಿಸ್ ಬೇರೆ ಅನೇಕ ರೋಗಗಳ ಲಕ್ಷಣ ಕೂಡ ಆಗಿದೆ, ಆದ್ದರಿಂದ ಬೇಗನ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

Image source - Matthew Ferguson

ಕಾಲುಗಳಲ್ಲಿ ಜುಮ್ಮೆನಿಸುವಿಕೆ

ಕಾಲುಗಳಲ್ಲಿ ಜುಮ್ಮೆನಿಸುವಿಕೆ

ನಾವು ಬಹಳ ಹೊತ್ತು ಒಂದೇ ಕಡೆ ಕುಳಿತರೆ ಜೋಮು ಹಿಡಿಯುವದು ಸಾಮಾನ್ಯ. ಕಬ್ಬಿಣಂಶದ ಕೊರತೆ ಇರಬೇಕಾದರೆ ಈ ಅನುಭವ ಆಗುವದು. ಆದರೆ ಕಬ್ಬಿಣಾಂಶದ ಮಾತ್ರೆ ತೆಗೆದುಕೊಳ್ಳುವವರೆಗೆ ಕಡಿಮೆ ಆಗುವದೇ ಇಲ್ಲ.

ಚಮಚದಾಕಾರದ ಉಗುರುಗಳು(ಕೊಯಿಲೊನೈಕಿಯ)

ಚಮಚದಾಕಾರದ ಉಗುರುಗಳು(ಕೊಯಿಲೊನೈಕಿಯ)

ಕಬ್ಬಿಣಾಂಶದ ಕೊರತೆಯಿಂದ ಉಗುರುಗಳು ಬಾಗಿದಂತಾಗಿ ಬಿರುಸಾಗುತ್ತವೆ. ಉಗುರುಗಳನ್ನು ಸುಲಭವಾಗಿ ಕೈಯಿಂದಲೇ ಮುರಿಯಬಹುದು. ಈ ಸ್ಥಿತಿಯಲ್ಲಿ ಕೂಡಲೆ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು.

Image source - NHS UK

English summary

Crazy Signs You Have Iron Deficiency

when there is a severe deficiency of iron (and therefore, hemoglobin) in your body, you start feeling fatigued all day, become dizzy, and sometimes even faint. This is called iron-deficiency anemia. And women suffer from it more than men since we lose a lot of blood during our menstrual cycle every month. But sometimes the signs of a disease can be very weird. Like the following signs of anemia.
Subscribe Newsletter