For Quick Alerts
ALLOW NOTIFICATIONS  
For Daily Alerts

ತಣ್ಣೀರು-ಉಗುರು ಬೆಚ್ಚನೆಯ ನೀರು, ಆರೋಗ್ಯಕ್ಕೆ ಯಾವುದು ಒಳ್ಳೆಯದು?

By Arshad
|

ಬೆಳಿಗ್ಗೆದ್ದ ತಕ್ಷಣ ನಮಗೆಲ್ಲಾ ತಣ್ಣೀರು ಅಥವಾ ಬಿಸಿಬಿಸಿ ಟೀ ಅಥವಾ ಕಾಫಿ ಬೇಕು. ಆದರೆ ದೇಹದ ಅಗತ್ಯತೆಯನ್ನು ಪೂರೈಸಲು ತಣ್ಣೀರು ಅತ್ಯಂತ ಉತ್ತಮವಾದ ಆಯ್ಕೆಯಾಗಿದೆ. ಸರಿ ನೀರನ್ನೇ ಕುಡಿಯೋಣ. ಆದರೆ ಫ್ರಿಜ್ಜಿನಲ್ಲಿರುವ ತಣ್ಣನೆಯ ನೀರು ಉತ್ತಮವೋ ಅಥವಾ ಉಗುರುಬೆಚ್ಚನೆಯ ನೀರು ಉತ್ತಮವೋ?

ಈ ವಿಷಯದ ಮೇಲೆ ಹಲವಾರು ಸಂಶೋಧನೆಗಳಾಗಿದ್ದು ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ನಮಗೆ ಇದುವರೆಗೆ ಗೊತ್ತಿರದೇ ಇದ್ದ ಹಲವಾರು ಆರೋಗ್ಯರಕ ಪ್ರಯೋಜನಗಳಿವೆ ಎಂದು ಕಂಡುಕೊಳ್ಳಲಾಗಿದೆ. ಮುಂಜಾನೆ ಎದ್ದ ತಕ್ಷಣ ಒಂದು ದೊಡ್ಡ ಲೋಟಾ ಉಗುರುಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ದಿನದ ಚಟುವಟಿಕೆಗೆ ಅತಿ ಹೆಚ್ಚಿನ ಶಕ್ತಿ ದೊರಕುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನಾವೆಲ್ಲಾ ತಿಳಿದಿರುವಂತೆ ನಮ್ಮ ದೇಹದ ಎಪ್ಪತ್ತು ಶೇಖಡಾ ನೀರಾಗಿದ್ದು ನಿತ್ಯದ ಕಾರ್ಯಗಳಿಗೆ ಸತತವಾಗಿ ನೀರನ್ನು ಕುಡಿಯುತ್ತಲೇ ಇರಬೇಕು. ನಮ್ಮ ದೇಹಕ್ಕೆ ಆಹಾರವಿಲ್ಲದೇ ಕೆಲವಾರು ದಿನ ಜೀವಂತವಿರುವ ಸಾಮರ್ಥ್ಯವಿದೆ. ಆದರೆ ನೀರಿಲ್ಲದೇ ಒಂದೆರಡು ದಿನ ಕಳೆಯುವುದು ಕಷ್ಟ. ನಾಲ್ಕು ದಿನ ನೀರಿಲ್ಲದೇ ಹೋದರೆ ಬಸವಳಿಯುವುದು ಹಾಗೂ ಐದನೆಯ ದಿನ ಪ್ರಾಣಾಪಾಯವೂ ಸಂಭವಿಸಬಹುದು.

ರಾತ್ರಿ ಮಲಗಿದ ಸಮಯದಲ್ಲಿ ನಡೆಯುವ ಅನೈಚ್ಛಿಕ ಕಾರ್ಯಗಳಿಗೆ ನೀರಿನ ಬಳಕೆಯಾಗಿದ್ದು ಇದನ್ನು ಪೂರೈಸಿಕೊಳ್ಳಲು ನೀರಿನಲ್ಲಿರುವ ಪೋಷಕಾಂಶಗಳು ಸೂಕ್ತ ತಾಪಮಾನದಲ್ಲಿದ್ದರೆ ಅತ್ಯುತ್ತಮವಾಗಿದೆ. ಇದೇ ಕಾರಣಕ್ಕೆ ಮುಂಜಾನೆ ಕುಡಿಯುವ ನೀರು ತಣ್ಣೀರಾಗಿರದೇ ಉಗುರುಬೆಚ್ಚನೆಯದ್ದಾಗಿದ್ದಷ್ಟೂ ಉತ್ತಮ. ನೀರಿನಲ್ಲಿ ಯಾವುದೇ ಕ್ಯಾಲೋರಿಗಳಿಲ್ಲದೇ ಇರುವುದರಿಂದ ಬೆಳಗ್ಗಿನ ಅಗತ್ಯತೆಯನ್ನು ಹೆಚ್ಚಿನ ಹೊರೆ ಇಲ್ಲದೇ ನಿರ್ವಹಿಸಲು ಸಾಧ್ಯ.

ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರು, ಆಯಸ್ಸು ನೂರು!

ನೀರಿನ ಬದಲು ಬೇರಾವುದೇ ಆಹಾರವನ್ನು ಸೇವಿಸಿದರೆ ಈ ಮೂಲಕ ಬರುವ ಪೋಷಕಾಂಶಗಳನ್ನು ಜೀರ್ಣಿಸಲು ದೇಹ ಶಕ್ತಿಯನ್ನು ವ್ಯಯಿಸಬೇಕಾಗಿ ಬರುತ್ತದೆ. ಆಗ ನೀರಿನಿಂದ ಆಗಬೇಕಾದ ಕೆಲಸಗಳು ತಡವಾಗುತ್ತವೆ ಅಥವಾ ಪೂರ್ಣವಾಗಿ ಆಗುವುದಿಲ್ಲ. ಆದ್ದರಿಂದ ನೀರಿನ ಅಗತ್ಯತೆಯನ್ನು ನೀರಿನಿಂದಲೇ ಪೂರೈಸುವುದು ಜಾಣತನದ ಕ್ರಮವಾಗಿದೆ. ಹಲವಾರು ಮನೆಮದ್ದುಗಳಲ್ಲಿ ಬೆಳಗ್ಗೆದ್ದು ನೀರು ಕುಡಿಯುವುದನ್ನು ಔಷಧಿಯ ರೂಪದಲ್ಲಿಯೂ ನಿರ್ವಹಿಸಲಾಗುತ್ತದೆ. ಬನ್ನಿ, ಹೀಗೆ ಉಗುರುಬೆಚ್ಚನೆಯ ನೀರನ್ನು ಬೆಳಿಗ್ಗೆದ್ದು ಕುಡಿಯುವ ಮೂಲಕ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ....

ಗಂಟಲ ನೋವು ನಿವಾರಿಸುತ್ತದೆ

ಗಂಟಲ ನೋವು ನಿವಾರಿಸುತ್ತದೆ

ಒಂದು ವೇಳೆ ಗಂಟಲ ಒಳಗೆ ಕಫವಾಗಿದ್ದು ನೋವು ಉಂಟಾಗಿದ್ದರೆ ಉಗುರುಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ಈ ಕಫ ಕರಗಿ ನೋವು ಕಡಿಮೆಯಾಗಲು ನೆರವಾಗುತ್ತದೆ. ವಿಶೇಷವಾಗಿ ಗಂಟಲಲ್ಲಿ ಕಿರಿಕಿರಿ ಇದ್ದರೆ ಈ ನೀರು ಅದ್ಭುತವಾದ ಶಮನವನ್ನು ನೀಡುತ್ತದೆ. ಅಲ್ಲದೇ ರಾತ್ರಿಯ ನಿದ್ದೆಯ ಬಳಿಕ ಬೆಳಿಗ್ಗೆದ್ದಾಗ ಗಂಟಲ ಒಳಭಾಗ ಹೆಚ್ಚೂಕಡಿಮೆ ಒಣಗಿದ್ದು ನೀರು ಕುಡಿಯದೇ ಆಹಾರ ಸೇವಿಸಲು ಯತ್ನಿಸಿದರೆ ಇದು ಒಣಗಂಟಲಲ್ಲಿ ಇಳಿಯಲು ಕಷ್ಟವಾಗಿಸುತ್ತದೆ ಹಾಗೂ ಇದರ ಒತ್ತಡ ಗಂಟಲಿಗೆ ಇನ್ನಷ್ಟು ನೋವು ಉಂಟುಮಾಡಬಹುದು.

ಮಲವಿಸರ್ಜನೆ ಸುಲಭವಾಗುತ್ತದೆ

ಮಲವಿಸರ್ಜನೆ ಸುಲಭವಾಗುತ್ತದೆ

ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ಕರುಳುಗಳಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತದೆ ಹಾಗೂ ಮಲವಿಸರ್ಜನೆಯ ಕೆಲಸ ಸುಲಭವಾಗಿ ಆಗುತ್ತದೆ. ಅಲ್ಲದೇ ದಿನದ ಮುಂದಿನ ಅವಧಿಗಳಲ್ಲಿ ಸೇವಿಸುವ ಆಹಾರವನ್ನು ಜೀರ್ಣೀಸಿಕೊಳ್ಳಲು ಕರುಳುಗಳನ್ನು ಸಿದ್ಧವಾಗಿಸಿಟ್ಟುಕೊಳ್ಳಲು ನೆರವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ರಕ್ತಪರಿಚಲನೆ ಉತ್ತಮಪಡಿಸುತ್ತದೆ

ರಕ್ತಪರಿಚಲನೆ ಉತ್ತಮಪಡಿಸುತ್ತದೆ

ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಕೆಲವಾರು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ದೇಹದ ತಾಪಮಾನ ಏರಿದಾಗ ರಕ್ತಪರಿಚಲನೆಯೂ ಚುರುಕುಗೊಳ್ಳುತ್ತದೆ. ಈ ನೀರಿನ ತಾಪಮಾನ ರಕ್ತಪರಿಚಲನೆ ಉತ್ತಮಗೊಳ್ಳಲು ಸಹಕಾರಿಯಾಗಿದೆ.

 ತೂಕ ಇಳಿಕೆ ನೆರವಾಗುತ್ತದೆ

ತೂಕ ಇಳಿಕೆ ನೆರವಾಗುತ್ತದೆ

ತೂಕ ಇಳಿಸುವ ಯಾವುದೇ ಕ್ರಮಕ್ಕೆ ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವುದು ಪೂರಕವಾಗಿದ್ದು ಹೆಚ್ಚಿನ ಫಲವನ್ನು ಪಡೆಯಲು ಸಾಧ್ಯ. ಈ ನೀರಿನ ಕುಡಿಯುವಿಕೆಯಿಂದ ದಿನದ ಹೊತ್ತಿನಲ್ಲಿ ಅನಗತ್ಯವಾಗಿ ಹಸಿವಾಗುವುದು ತಪ್ಪುತ್ತದೆ ಹಾಗೂ ತೂಕ ಇಳಿಯಲು ನೆರವಾಗುತ್ತದೆ.

ಹಾಗಾದರೆ ತಣ್ಣೀರು ಕುಡಿಯುವುದೇಕೆ ತಪ್ಪು

ಹಾಗಾದರೆ ತಣ್ಣೀರು ಕುಡಿಯುವುದೇಕೆ ತಪ್ಪು

ನಿರ್ಜಲೀಕರಣ ಹೆಚ್ಚಿಸುತ್ತದೆ: ತಣ್ಣೀರು ಕುಡಿಯುವುದರಿಂದ ಆ ಕ್ಷಣಕ್ಕೆ ತಂಪಾದಂತೆ ಅನ್ನಿಸಿದರೂ ಹೊಟ್ಟೆಗೆ ಹೋದ ಬಳಿಕ ನೀರಿನ ತಂಪುತನ ರಕ್ತನಾಳಗಳನ್ನು ಸಂಕುಚಿಸುವ ಮೂಲಕ ರಕ್ತಪರಿಚಲನೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ ನೀರು ಎಲ್ಲೆಡೆ ತಲುಪಲು ಅಡ್ಡಿಯಾಗಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿರ್ಜಲೀಕರಣಕ್ಕೆ ಕೇವಲ ತಣ್ಣೀರು ಮಾತ್ರವಲ್ಲ, ಸಾಕಷ್ಟು ನೀರು ಕುಡಿಯದೇ ಇರುವುದೂ ಒಂದು ಕಾರಣವಾಗಿದೆ.

ತಣ್ಣೀರು: ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಸಿದ್ಧೌಷಧ

ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ

ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ

ತಣ್ಣೀರು ಹೊಟ್ಟೆಗೆ ಧಾವಿಸಿದ ತಕ್ಷಣ ಇದರ ತಾಪಮಾನ ಜೀರ್ಣರಸಗಳ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಹೊಟ್ಟೆಯಲ್ಲಿರುವ ಹಾಗೂ ಈಗಾಗಲೇ ರಕ್ತದಲ್ಲಿ ಬೆರೆತಿರುವ ಕೊಬ್ಬಿನ ಕಣಗಳನ್ನು ಘನೀಕರಿಸುತ್ತದೆ. ಘನೀಕೃತಗೊಂಡ ಕೊಬ್ಬು ರಕ್ತನಾಳದ ಒಳಗೆ ಅಂಟಿಕೊಳ್ಳುವ ಸಂಭವವಿದೆ. ಇದು ಪರೋಕ್ಷವಾಗಿ ಹಲವು ತೊಂದರೆಗಳಿಗೆ ಕಾರಣವಾಗುವುದರಿಂದ ತಣ್ಣೀರು ಕುಡಿಯುವುದೆಷ್ಟು ಅಪಾಯಕಾರಿ ಎಂಬುದು ಈಗ ನಿಮಗೆ ಅರಿವಾಗಿರಬಹುದು.

ದೇಹದ ತಾಪಮಾನ ಹೆಚ್ಚಿಸುತ್ತದೆ

ದೇಹದ ತಾಪಮಾನ ಹೆಚ್ಚಿಸುತ್ತದೆ

ಕೊಂಚ ವಿಚಿತ್ರ ಎಂದು ಕಂಡುಬಂದರೂ ಇದು ನಿಜ. ತಣ್ಣೀರು ಕುಡಿದರೆ ಈ ತಂಪುತನವನ್ನು ಸಾಮಾನ್ಯ ತಾಪಮಾನಕ್ಕೆ ತರಲು ದೇಹಕ್ಕೆ ಹೆಚ್ಚಿನ ಉಷ್ಣತೆಯನ್ನು ಉತ್ಪಾದಿಸಬೇಕಾಗಿ ಬರುತ್ತದೆ. ಇದು ದೇಹ ಬಿಸಿಯಾಗಲು ಕಾರಣವಾಗುತ್ತದೆ.

ಕಫ ಹೆಚ್ಚಿಸುತ್ತದೆ

ಕಫ ಹೆಚ್ಚಿಸುತ್ತದೆ

ತಣ್ಣೀರನ್ನು ಕುಡಿಯುವ ಮೂಲಕ ಶ್ವಾಸನಾಳಗಳ ಒಳಗೆ ಹೆಚ್ಚಿನ ಕಫ ಉಂಟಾಗುತ್ತದೆ. ಇದು ಶ್ವಾಸ ಎಳೆದುಕೊಳ್ಳಲು ಕಷ್ಟಕರವಾಗಿಸುತ್ತದೆ ಹಾಗೂ ಗಂಟಲಿನ ಒಳಗೆ ಸೋಂಕು ಆವರಿಸುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಈ ಎಲ್ಲಾ ವಿಷಯವನ್ನು ಪರಿಗಣಿಸಿದ ಬಳಿಕ ಪ್ರತಿದಿನವೂ ಬೆಳಿಗ್ಗೆದ್ದ ಬಳಿಕ ಉಗುರುಬೆಚ್ಚನೆಯ ನೀರು ಕುಡಿಯುವುದು ಅತ್ಯಂತ ಆರೋಗ್ಯಕರ ಹಾಗೂ ಫ್ರಿಜ್ಜಿನ ತಣ್ಣೀರನ್ನು ಕುಡಿಯುವುದು ಅನಾರೋಗ್ಯಕರ ಎಂಬ ತೀರ್ಮಾನಕ್ಕೆ ಬರಬಹುದು.

ಸೂಚನೆ

ಸೂಚನೆ

ಒಂದು ವೇಳೆ ಉಗುರುಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾದಾ, ಅಂದರೆ ಫ್ರಿಜ್ಜಿನಲ್ಲಿಡದ ಸಾಮಾನ್ಯ ತಾಪಮಾನದ ನೀರು ಸಹಾ ಆಗುತ್ತದೆ. ಆದರೆ ಮಡಕೆಯ ನೀರು ಅಥವಾ ಐಸ್ ಬೆರೆಸಿದ ನೀರು ಸಹಾ ಬೇಡ.

English summary

Cold Water -Warm Water; Which Is The Best One For Your Health?

The nutrients in warm water will not show any significant difference from the nutrients in cold or normal water. Water is a zero-calorie healthy drink that is essential for various body functions. But water does contain certain essential minerals in varying proportions and it also depends on the source of water. Many home remedies stress on the advantages of drinking hot water in the morning.
Story first published: Friday, July 14, 2017, 18:33 [IST]
X
Desktop Bottom Promotion