For Quick Alerts
ALLOW NOTIFICATIONS  
For Daily Alerts

ತಣ್ಣೀರು: ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಸಿದ್ಧೌಷಧ

ನಮ್ಮ ಆರೋಗ್ಯಕ್ಕೆ ಅತ್ಯುತ್ತಮವೆಂದರೆ ಸಾಮಾನ್ಯ ತಾಪಮಾನದಲ್ಲಿರುವ ತಣ್ಣೀರು.(ಅಂದರೆ ಫ್ರಿಜ್ಜಿನಲ್ಲಿ ತಣಿಸಿದ ನೀರಲ್ಲ) ಈ ನೀರನ್ನು ಕುಡಿಯುವುದರಿಂದ ಹಾಗೂ ಬೆಳಿಗ್ಗೆದ್ದು-ತಣ್ಣೀರಿನಿಂದ ಸ್ನಾನ ಮಾಡುವ ಮೂಲಕ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು

By Arshad
|

ನೀರು, ಇದಕ್ಕೆ ಜೀವಜಲವೆಂದು ಕರೆಯಲು ಕಾರಣವೇನು ಗೊತ್ತೇ? ಇಡಿಯ ನಿಸರ್ಗದ ಜೀವಾಳವೇ ನೀರು. ಉತ್ತಮ ಆರೋಗ್ಯಕ್ಕೆ ಸ್ವಚ್ಛವಾದ ನೀರಿನ ಅಗತ್ಯವಿದೆ. ಕೆಲವಾರು ಕಾಯಿಲೆಗಳಿಗೆ ಕೇವಲ ನೀರೇ ಔಷಧಿಯ ರೂಪದಲ್ಲಿ ಕೆಲಸ ಮಾಡುತ್ತದೆ. ನಮ್ಮ ಭೂಮಿಯಲ್ಲಿ ಶೇ 71 ರಷ್ಟು ನೀರು ಇರುವಂತೆಯೇ ನಮ್ಮ ದೇಹವೂ ಸುಮಾರು 71 ಶೇ ನೀರಿನಿಂದ ಕೂಡಿದೆ. ಆರೋಗ್ಯ ಉತ್ತಮವಾಗಿರಬೇಕಾದರೆ ಸಾಕಷ್ಟು ನೀರು ಕುಡಿಯುವುದೂ ಅಗತ್ಯ. ನೆನಪಿಡಿ, ಊಟ ಮಾಡುವಾಗ ನೀರು ಕುಡಿಯಬೇಡಿ...

ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯ ಹೊಂದಿರಬೇಕಾದರೆ ನೀರು ಇರಲೇ ಬೇಕು. ಅಷ್ಟೇ ಅಲ್ಲ, ದೇಹದಿಂದ ತ್ಯಾಜ್ಯವಸ್ತುಗಳನ್ನು ನಿವಾರಿಸಲು, ಕಲ್ಮಶಗಳನ್ನು ಹೊರಹಾಕಲೂ ನೀರು ಬೇಕು. ನಮ್ಮ ತ್ವಚೆ ಉತ್ತಮವಾಗಿರಲು, ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು, ಸೋಂಕುಕಾರಕ ಕಣಗಳನ್ನು ನಿವಾರಿಸಲೂ ನೀರು ಬೇಕು. ಅಲ್ಲದೇ ಜೀವರಾಸಾಯನಿಕ ಕ್ರಿಯೆ ಉತ್ತಮವಾಗಿ ನಡೆಯಲು, ಆಹಾರವನ್ನು ಪಚನಗೊಳಿಸಿ ಶಕ್ತಿಯನ್ನು ಪಡೆಯಲು, ಮೂಳೆಸಂಧುಗಳಲ್ಲಿ ಜಾರುಕವನ್ನು ಒದಗಿಸಿ ಚಲನೆ ಸುಗಮಗೊಳಿಸಲು, ಮನೋಭಾವ ಉತ್ತಮವಾಗಿರಲು, ಏಕಾಗ್ರತೆ ಪಡೆಯಲು, ಜೀರ್ಣಕ್ರಿಯೆ ಉತ್ತಮಗೊಳಿಸಲು, ಒಟ್ಟಾರೆ, ಇಡಿಯ ಆರೋಗ್ಯಕ್ಕೆ ನೀರು ಅತ್ಯಗತ್ಯವಾಗಿ ಬೇಕಾದ ವಸ್ತುವಾಗಿದೆ. ಏನೇ ಆಗಲಿ ದಿನನಿತ್ಯ ಎಂಟು ಲೋಟಗಳಷ್ಟು ನೀರು ಕುಡಿಯಿರಿ

ಕುಡಿಯುವ ನೀರು ಸ್ವಚ್ಛವಾಗಿರುವುದು ತುಂಬಾ ಅಗತ್ಯ. ಸ್ವಚ್ಛ ನೀರನ್ನು ಪಡೆಯುವ ಸುಲಭ ವಿಧಾನವೆಂದರೆ ಕುದಿಸಿ ತಣಿಸಿ ಕುಡಿಯುವುದು. ನಮ್ಮ ಆರೋಗ್ಯಕ್ಕೆ ಅತ್ಯುತ್ತಮವೆಂದರೆ ಸಾಮಾನ್ಯ ತಾಪಮಾನದಲ್ಲಿರುವ ತಣ್ಣೀರು. (ಅಂದರೆ ಫ್ರಿಜ್ಜಿನಲ್ಲಿ ತಣಿಸಿದ ನೀರಲ್ಲ). ಈ ನೀರನ್ನು ಕುಡಿಯುವುದರಿಂದ ಹಾಗೂ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ಸ್ನಾನ ಮಾಡುವ ಮೂಲಕ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ತಣ್ಣೀರಿನ ಸ್ನಾನದಿಂದ ಇಡಿಯ ದಿನ ಉಲ್ಲಾಸದಿಂದಿರಲು ಸಾಧ್ಯವಾಗುತ್ತದೆ. ನೀರಿನ ರುಚಿ ಹೆಚ್ಚಿಸಲು ಈ ವಿಧಾನಗಳನ್ನು ಬಳಸಿ

ವಿಶೇಷವಾಗಿ ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಅತ್ಯುತ್ತಮವಾಗಿದೆ. ಇದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ಹಲವಾರು ಕಾಯಿಲೆಯಗಳು ಶಮನಗೊಳ್ಳುತ್ತವೆ. ಬನ್ನಿ, ತಣ್ಣೀರಿನಿಂದ ಇನ್ನೂ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ..

ಸಂಧಿವಾತ (Gout)

ಸಂಧಿವಾತ (Gout)

ಯೂರಿಕ್ ಆಮ್ಲ ನಮ್ಮ ದೇಹದಲ್ಲಿ ಹೆಚ್ಚು ಹೆಚ್ಚು ಸಂಗ್ರಹವಾದಂತೆ ಇದು ನಮ್ಮ ಮೂಳೆಗಳ ಸಂಧುಗಳ ಮೇಲೆ ಹೆಚ್ಚು ಹೆಚ್ಚು ಪ್ರಭಾವ ಬೀರತೊಡಗುತ್ತದೆ. ಇದು ಸಂಧಿವಾತಕ್ಕೆ ಕಾರಣವಾಗುತ್ತದೆ. ಯೂರಿಕ್ ಆಮ್ಲವನ್ನು ದೇಹದಲ್ಲಿ ಉಳಿಸಿಕೊಳ್ಳದೆ ಇರುವುದೇ ಜಾಣತನದ ಕ್ರಮ. ಇದಕ್ಕಾಗಿ ದಿನವಿಡೀ ಸಾಕಷ್ಟು ತಣ್ಣೀರನ್ನು ಕುಡಿಯುತ್ತಾ ಇದ್ದರೆ ಸಾಕು. ಇತರ ಕಲ್ಮಶಗಳೊಂದಿಗೆ ಯೂರಿಕ್ ಆಮ್ಲವೂ ನೀರಿನೊಂದಿಗೆ ಕರಗಿ ಹೊರಹೋಗುತ್ತದೆ. ಈ ಮೂಲಕ ಸಂಧಿವಾತ ಸಹಿತ ಹಲವಾರು ತೊಂದರೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

ನೋವು ನಿವಾರಕವಾಗಿದೆ

ನೋವು ನಿವಾರಕವಾಗಿದೆ

ಕೆಲವಾರು ಕಾರಣಗಳಿಂದ ದೇಹದ ವಿವಿಧ ಭಾಗಗಳಲ್ಲಿ ಆವರಿಸುವ ನೋವನ್ನು ನಿವಾರಿಸಲು ಕೇವಲ ತಣ್ಣೀರೇ ಸಾಕಾಗುತ್ತದೆ. ನೋವಿರುವ ಭಾಗದ ಮೇಲೆ ದಪ್ಪ ಟವೆಲ್ ಅಥವಾ ಬಟ್ಟೆಯನ್ನು ತಣ್ಣೀರಿನಲ್ಲಿ ಒದ್ದೆ ಮಾಡಿಕೊಂಡು ಸುತ್ತಿ ಕೊಂಚ ಹೊತ್ತು ಇರಿಸಿದರೆ ನೋವು ಶಮನಗೊಳ್ಳುತ್ತದೆ. ವಿಶೇಷವಾಗಿ ಸ್ನಾಯುಗಳಿಗೆ ಉಂಟಾದ ನೋವಿಗೆ ಈ ವಿಧಾನದಿಂದ ರಕ್ತಪರಿಚಲನೆಯ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ನೋವು ಕಡಿಮೆಯಾಗಲು ಸಹಕರಿಸುತ್ತದೆ.

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಫಲವತ್ತತೆಯನ್ನು ಹೆಚ್ಚಿಸುತ್ತದೆ

ವಿಶೇಷವಾಗಿ ಪುರುಷರ ಫಲವತ್ತತೆಯಲ್ಲಿ ತಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳು ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ಇರಬೇಕು. ಇದೇ ಕಾರಣಕ್ಕೆ ಎಲ್ಲಾ ಸಸ್ತನಿಗಳ ವೃಷಣಗಳು ದೇಹದಿಂದ ಹೊರಗಿರುತ್ತವೆ. ಆದರೆ ನಾವು ಅನಿವಾರ್ಯವಾಗಿ ತೊಡಬೇಕಾದ ಬಟ್ಟೆಗಳು, ದೀರ್ಘಕಾಲ ಕುಳಿತುಕೊಳ್ಳುವುದು, ವಾಹನ ಚಾಲನೆ ಮೊದಲಾದ ಕೆಲವಾರು ಕಾರಣಗಳಿಂದ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಕಷ್ಟು ತಣ್ಣೀರು ಕುಡಿಯುವ ಮೂಲಕ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಫಲವತ್ತತೆ ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಸಾಧ್ಯವಾಗುತ್ತದೆ.

ಮೂತ್ರನಾಳದ ಸೋಂಕು ನಿವಾರಿಸುತ್ತದೆ

ಮೂತ್ರನಾಳದ ಸೋಂಕು ನಿವಾರಿಸುತ್ತದೆ

ಸಾಮಾನ್ಯವಾಗಿ ಕಾಡುವ ಉರಿಮೂತ್ರಕ್ಕೆ ಮೂತ್ರನಾಳದ ಸೋಂಕು ಪ್ರಮುಖ ಕಾರಣ. ಇದಕ್ಕೆ ಅತ್ಯುತ್ತಮ ಉಪಶಮನವೆಂದರೆ ತಣ್ಣೀರು ಕುಡಿಯುವುದನ್ನು ಹೆಚ್ಚಿಸುವುದು. ಹೆಚ್ಚಿನ ತಣ್ಣೀರಿನ ಲಭ್ಯತೆಯಿಂದ ಮೂತ್ರವೂ ಹೆಚ್ಚಾಗಿ ಮೂತ್ರನಾಳದಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಮೂತ್ರದ ಪ್ರಮಾಣವೂ ಹೆಚ್ಚುವ ಕಾರಣ ಕಲ್ಮಶಗಳು ಹೆಚ್ಚು ಹೊತ್ತು ದೇಹದಲ್ಲಿ ಉಳಿಯದೇ ಬೇಗಬೇಗನೇ ವಿಸರ್ಜಿಸಲ್ಪಡುವ ಕಾರಣ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳೂ ಇಲ್ಲವಾಗುತ್ತವೆ.

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಲು ಕೆಲವಾರು ಕಾರಣಗಳಿವೆ. ನಾವು ಸೇವಿಸುವ ಆಹಾರ ಮತ್ತು ದ್ರವಪದಾರ್ಥಗಳ ಮೂಲಕ ಒಳಪ್ರವೇಶಿಸುವ ಲವಣಗಳು ಸಾಂದ್ರೀಕೃತಗೊಳ್ಳುವುದು ಪ್ರಮುಖ ಕಾರಣ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳು ಇದ್ದೇ ಇರುತ್ತವೆ. ಆದರೆ ಇವು ದೊಡ್ಡದಾಗದಂತೆ ನೋಡಿಕೊಳ್ಳಲು ನೀರಿನ ಕುಡಿಯುವಿಕೆ ಸತತವಾಗಿರಬೇಕು. ತಣ್ಣೀರು ಹೆಚ್ಚು ಹೆಚ್ಚು ಕುಡಿದಷ್ಟೂ ಮೂತ್ರಪಿಂಡಗಳಲ್ಲಿರುವ ಕಲ್ಲುಗಳು ಕರಗಲು ನೆರವಾಗಿ ಕಲ್ಲುಗಳು ದೊಡ್ಡದಾಗದಿರಲು ಹಾಗೂ ಚಿಕ್ಕ ಕಲ್ಲುಗಳೂ ಸಂಪೂರ್ಣವಾಗಿ ಕರಗಿ ಹೋಗಲು ಸಾಧ್ಯವಾಗುತ್ತದೆ.

ಕಣ್ಣುಗಳ ಕಾಳಜಿಗಾಗಿ

ಕಣ್ಣುಗಳ ಕಾಳಜಿಗಾಗಿ

ಕಣ್ಣುಗಳ ಆರೋಗ್ಯ ಉತ್ತಮವಾಗಿರಲು ಆಗಾಗ ತಣ್ಣೀರಿನಿಂದ ತೊಳೆದುಕೊಳ್ಳುತ್ತಾ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಕಣ್ಣುಗಳಿಗೆ ಆರಾಮವಾಗುತ್ತದೆ ಹಾಗೂ ಕಣ್ಣುಗಳಿಗೆ ಅಂಟಿಕೊಂಡಿದ್ದ ಧೂಳು ಮತ್ತಿತರ ಕಣಗಳ ನಿವಾರಣೆ ಸಾಧ್ಯವಾಗುತ್ತದೆ. ಕೆಲವು ಕಣಗಳು ಕಣ್ಣಿನಲ್ಲಿ ಉರಿ ತರಿಸಬಹುದು. ಈ ಉರಿಯನ್ನು ನಿವಾರಿಸಲು ತಕ್ಷಣ ತಣ್ಣೀರಿನಿಂದ ತೊಳೆದುಕೊಳ್ಳುವುದು ಅತ್ಯುತ್ತಮವಾದ ಪ್ರಥಮ ಚಿಕಿತ್ಸೆಯಾಗಿದೆ.

ಆಮ್ಲೀಯತೆ

ಆಮ್ಲೀಯತೆ

ಹೊಟ್ಟೆಯಲ್ಲಿ ಆಹಾರ ಜೀರ್ಣಗೊಂಡ ಬಳಿಕ ಕೆಲವು ಕಾರಣಗಳಿಂದ ಆಮ್ಲ ಬಳಕೆಯಾಗದೇ ಉಳಿದರೆ ಇದರಿಂದ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹೊಟ್ಟೆಯುರಿಯಿಂದ ಎದೆಯ ಭಾಗದಲ್ಲಿ ಉರಿ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗುತ್ತವೆ. ಈ ತೊಂದರೆ ಇರುವ ವ್ಯಕ್ತಿಗಳು ಪ್ರತಿದಿನ ಬೆಳಿಗ್ಗೆದ್ದ ತಕ್ಷಣವೇ ಒಂದು ಲೋಟ ತಣ್ಣೀರು ಕುಡಿಯುವ ಅಭ್ಯಾಸ ಮೂಡಿಸಿಕೊಂಡರೆ ಎದೆಯುರಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಒಣಚರ್ಮವಾಗುವುದನ್ನು ತಡೆಯುತ್ತದೆ

ಒಣಚರ್ಮವಾಗುವುದನ್ನು ತಡೆಯುತ್ತದೆ

ಚರ್ಮ ಒಣಗಲು ಒಣಹವೆ ಪ್ರಮುಖ ಕಾರಣ. ಇದರ ಹೊರತಾಗಿ ಬಿಸಿನೀರಿನ ಸ್ನಾನ ಹಾಗೂ ಬಿಸಿನೀರಿನ ಕುಡಿಯುವಿಕೆಯಿಂದಲೂ ಒಣಚರ್ಮ ಉಂಟಾಗುತ್ತದೆ. ಒಣಚರ್ಮಕ್ಕೆ ತಕ್ಷಣವೇ ಸೂಕ್ತ ಆರೈಕೆ ಒದಗಿಸದಿದ್ದಲ್ಲಿ ಸಹಜ ಸೌಂದರ್ಯವನ್ನೇ ಕಸಿದು ಬಿಡಬಹುದು. ಒಣಚರ್ಮಕ್ಕೆ ತಣ್ಣೀರು ಅತ್ಯುತ್ತಮವಾದ ಪರಿಹಾರವಾಗಿದೆ. ಚರ್ಮದಲ್ಲಿ ತುರಿಕೆ, ಪರೆ ಏಳುವುದು ಮೊದಲಾದ ತೊಂದರೆಗಳಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು.

English summary

Cold Water: Did You Know It Helps Cure These Diseases?

Cold water doesn't mean that it should be ice cold. Cold water will cool down your body during this peak summer. It also helps in curing some diseases by reducing blood flow, promoting detoxification, and supporting the digestive system. Here, we will talk about the health benefits of cold water.
X
Desktop Bottom Promotion