ಲಿಂಬೆ ಹಣ್ಣು ಹಾಕಿ ಕುದಿಸಿದ ನೀರು ಕುಡಿದರೆ, ವೃದ್ಧಿಯಾಗುತ್ತೆ ಆರೋಗ್ಯ...

By: Hemanth
Subscribe to Boldsky

ಆರೋಗ್ಯದ ಬಗ್ಗೆ ಈಗ ಪ್ರತಿಯೊಬ್ಬರಿಗೂ ಜಾಗೃತಿ ಮೂಡುತ್ತಾ ಇದೆ. ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿ ಇದೆ. ಇದು ಸುಳ್ಳಲ್ಲ, ಆರೋಗ್ಯವಿದ್ದರೆ ನಾವು ದುಡಿದು ಸಂಪಾದಿಸಿದ ಹಣದ ಸದುಪಯೋಗ ಮಾಡಬಹುದು. ಆರೋಗ್ಯ ಇಲ್ಲವೆಂದಾದರೆ ಆಗ ಸಂಪಾದಿಸಿದ ಹಣವೆಲ್ಲಾ ಆಸ್ಪತ್ರೆಗೆ ಖರ್ಚಾಗಿ ಹೋಗುತ್ತದೆ. ಹೀಗಾಗಿ ಆರೋಗ್ಯ ಕಾಪಾಡಲು ಪ್ರತಿಯೊಬ್ಬರು ಗಮನಹರಿಸುತ್ತಾ ಇದ್ದಾರೆ. ಆರೋಗ್ಯ ಒಂದು ಇದ್ದರೆ ಬೇರೆ ಎಲ್ಲವೂ ಇದ್ದಂತೆ ಎನ್ನುವ ಭಾವನೆ ಜನರಲ್ಲಿ ಮೂಡಲು ಆರಂಭಿಸಿದೆ.

ಲಿಂಬೆ+ಜೇನು ಬೆರೆಸಿದ ನೀರು ಸೇವಿಸಿ-ತೂಕ ಇಳಿಸಿಕೊಳ್ಳಿ!

ಈ ಕಾರಣದಿಂದಲೇ ಇಂಟರ್ನೆಟ್‌ನಲ್ಲಿ ಪ್ರತೀ ದಿನ ಆರೋಗ್ಯದ ವಿಷಯದ ಹುಡುಕಾಟ ಅತೀ ಹೆಚ್ಚಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು ಎನ್ನುವ ವಿಷಯದ ಹುಡುಕಾಟ ನಡೆಯುತ್ತಲೇ ಇದೆ. ಅದೇ ರೀತಿ ಯಾವ ಆರೋಗ್ಯ ಮತ್ತು ಪಾನೀಯ ಕುಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವ ವಿಚಾರವು ಹುಡುಕಾಡಲ್ಪಡುತ್ತದೆ. ಇದಕ್ಕಾಗಿ ಹಲವಾರು ಆಯ್ಕೆಗಳು ಸಿಕ್ಕೇ ಸಿಗುತ್ತದೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದರಿಂದ ಲಾಭ ಸಿಗುವುದು. ಇಲ್ಲವಾದಲ್ಲಿ ನಿಮ್ಮ ಪ್ರಯತ್ನವೆಲ್ಲಾ ನೀರಿನಲ್ಲಿಟ್ಟ ಹೋಮದಂತಾಗುತ್ತದೆ.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ನೀರು ಕುಡಿದರೆ ಒಳ್ಳೆಯದು ಎನ್ನುವ ಬಗ್ಗೆ ನಾವು ಕೇಳಿದ್ದೇವೆ. ಆದರೆ ಲಿಂಬೆ ರಸವನ್ನು ಹಿಂಡಿಕೊಂಡು ಅದರ ನೀರನ್ನು ಕುಡಿದರೆ ಕೆಲವು ಆರೋಗ್ಯ ಲಾಭಗಳು ನಿಮಗೆ ಸಿಗಬಹುದು. ಆದರೆ ಲಿಂಬೆಯ ಸಿಪ್ಪೆ ಮತ್ತು ಅದರ ತಿರುಳಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇವೆ. ಕೇವಲ ರಸ ಮಾತ್ರ ತೆಗೆದರೆ ಅದರ ಪೋಷಕಾಂಶಗಳು ನಮಗೆ ಸಿಗದು. ನೀವು ಇದೇ ರೀತಿ ಲಿಂಬೆ ರಸ ಕುಡಿಯುತ್ತಾ ಇದ್ದರೆ ಅದು ತಪ್ಪು. ಲಿಂಬೆಯ ಹೆಚ್ಚಿನ ಪೋಷಕಾಂಶಗಳು ಸಿಗಲು ಅದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ನಿಮಗಿಲ್ಲಿ ತಿಳಿಸಿಕೊಡಲಿದ್ದೇವೆ....ಮುಂದೆ ಓದಿ 

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

3 ಕಪ್ ನೀರು

5-6 ಲಿಂಬೆ

2 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಎಲ್ಲಾ ಲಿಂಬೆಗಳನ್ನು ತುಂಡು ಮಾಡಿಕೊಂಡು ಸುಮಾರು ಐದು ನಿಮಿಷ ಕಾಲ ನೀರಿನಲ್ಲಿ ಹಾಕಿ ಕುದಿಸಿ.

*ಈ ನೀರು ತಣ್ಣಗಾಗಲು ಬಿಡಿ

*ಲಿಂಬೆ ತುಂಡನ್ನು ಹಿಂಡಿ ಅದನ್ನು ನೀರಿನಿಂದ ಬೇರ್ಪಡಿಸಿ.

*ನೀರನ್ನು ಸೋಸಿ ತೆಗೆದು ಒಂದು ಕಪ್ ಗೆ ಹಾಕಿಡಿ. ಉಳಿದ ನೀರನ್ನು ಮತ್ತೆ ಬಳಸಲು ತೆಗೆದಿಡಬಹುದು.

ಉಗುರುಬೆಚ್ಚಗಿನ ಲಿಂಬೆ ನೀರಿಗೆ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ.

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಲಿಂಬೆಯಲ್ಲಿ ಇರುವಂತಹ ಅಂಶಗಳು ಯಕೃತ್ ನಲ್ಲಿ ಪಿತ್ತರಸದ ಉತ್ಪಾದನೆಗೆ ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಯು ಆರೋಗ್ಯಕರ ರೀತಿಯಲ್ಲಿ ಹೆಚ್ಚಾಗುವುದು ಮಾತ್ರವಲ್ಲದೆ ದೇಹದಲ್ಲಿರುವ ವಿಷ ಹೊರಹಾಕುವುದು. ಜೇನುತುಪ್ಪ ಬೆರೆಸಿಕೊಂಡು ಒಂದು ಕಪ್ ಲಿಂಬೆರಸ ಬೆಳಿಗ್ಗೆ ಸೇವಿಸಿದರೆ ಎಲ್ಲಾ ರೀತಿಯ ಜೀರ್ಣಕ್ರಿಯೆ ಸಮಸ್ಯೆಗಳು ಪರಿಹಾರವಾಗುವುದು. ಹೊಟ್ಟೆಯುಬ್ಬರ, ಭೇದಿ ಮತ್ತು ಮಲಬದ್ಧತೆ ನಿವಾರಣೆಯಾವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಲಿಂಬೆ ಹಾಗೂ ಜೇನುತುಪ್ಪದ ಮಿಶ್ರಣದ ನೀರನ್ನು ಸೇವಿಸಿದರೆ ಅದರಿಂದ ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಹಾಗೂ ಬಲಗೊಳ್ಳುವುದು. ಇದರಲ್ಲಿ ಇರುವ ಸೂಕ್ಷ್ಮಾಣು ಜೀವಿ ವಿರೋಧಿ ಗುಣಗಳು ಸೋಂಕು ತಡೆದು ಜ್ವರ ಹಾಗೂ ಶೀತದ ವಿರುದ್ಧ ಹೋರಾಡಲು ನೆರವಾಗುವುದು.

ಶಕ್ತಿ ವೃದ್ಧಿಸುವುದು

ಶಕ್ತಿ ವೃದ್ಧಿಸುವುದು

ಲಿಂಬೆಯ ಜ್ಯೂಸ್ ನಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಫೋಸ್ಪರಸ್, ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಒಳಗೊಂಡಿರುವ ಕಾರಣದಿಂದ ಇದು ನೈಸರ್ಗಿಕವಾಗಿ ಶಕ್ತಿ ವೃದ್ಧಿಸುವುದು. ಲಿಂಬೆ ಜ್ಯೂಸ್ ಕುಡಿದ ಒಂದು ನಿಮಿಷದ ಒಳಗಡೆ ನಿಮ್ಮ ದೇಹಕ್ಕೆ ಆಮ್ಲಜನಕ ನೀಡುವುದು. ಇದು ಹೆಚ್ಚು ಋಣಾತ್ಮಕ ವಿದ್ಯುದಾವೇಶ ಆಯಾನುಗಳನ್ನು ಹೊಂದಿರುವ ಕಾರಣದಿಂದ ದೇಹಕ್ಕೆ ತಕ್ಷಣ ಶಕ್ತಿ ಸಿಗುವುದು. ಲಿಂಬೆ ಜ್ಯೂಸ್ ಕುಡಿದ ಕೂಡಲೇ ನಿಮ್ಮ ದೇಹಕ್ಕೆ ಶಕ್ತಿ ಹಾಗೂ ಮರುಜೀವ ಸಿಕ್ಕಂತೆ ಆಗುತ್ತದೆ.

ಉಸಿರಿನ ದುರ್ವಾಸನೆ ನಿವಾರಣೆ

ಉಸಿರಿನ ದುರ್ವಾಸನೆ ನಿವಾರಣೆ

ಲಿಂಬೆ ರಸ ಮತ್ತು ಜೇನುತುಪ್ಪದ ಆಮ್ಲೀಯ ಸಂಯೋಜನೆಯು ಉಸಿರಿನ ದುರ್ವಾಸನೆ ನಿವಾರಣೆ ಮಾಡುತ್ತದೆ. ಇದು ಬಾಯಿ ಸ್ವಚ್ಛಗೊಳಿಸಿ, ಜೊಲ್ಲು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ ಉಂಟು ಮಾಡುವ ವಾಸನೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವವರಿಗೆ ಇದು ಒಳ್ಳೆಯ ಮನೆಮದ್ದು. ಇದರಲ್ಲಿ ಉನ್ನತ ಮಟ್ಟದ ಪೆಕ್ಟಿನ್ ನಾರಿನಾಂಶವಿದೆ. ಇದು ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ದೀರ್ಘ ಕಾಲ ಹಸಿವು ಆಗದಂತೆ ಮಾಡುವುದು. ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ.

ರಕ್ತದೊತ್ತಡ ನಿಯಂತ್ರಿಸುವುದು

ರಕ್ತದೊತ್ತಡ ನಿಯಂತ್ರಿಸುವುದು

ದುಗ್ದನಾಳ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಲಿಂಬೆ ಜ್ಯೂಸ್ ದೇಹವನ್ನು ತೇವಾಂಶದಿಂದ ಇಡುವುದು. ಇದರಿಂದ ರಕ್ತದೊತ್ತಡ ಕಡಿಮೆಯಾಗಿ, ಒತ್ತಡ ನಿವಾರಣೆಯಾಗುತ್ತದೆ ಮತ್ತು ಮೆದುಳಿನ ಕ್ರಿಯೆಯು ಸುಧಾರಣೆಯಾಗಿ ನಿದ್ರೆಯು ಉತ್ತಮಗೊಳ್ಳುವುದು.

ಚರ್ಮ ಸುಧಾರಣೆ

ಚರ್ಮ ಸುಧಾರಣೆ

ಲಿಂಬೆ ಮತ್ತು ಜೇನುತುಪ್ಪದ ಮಿಶ್ರಣ ಕುಡಿದ ಒಂದು ವಾರದಲ್ಲಿ ನಿಮ್ಮ ಚರ್ಮದಲ್ಲಿ ಹೆಚ್ಚಿನ ಬದಲಾವಣೆ ಕಾಣಲಿದ್ದೀರಿ. ಇದು ಹೊಸ ರಕ್ತ ಕಣಗಳ ಬೆಳವಣಿಗೆ ಸೂಧಾರಿಸಿ ರಕ್ತನಾಳಗಳನ್ನು ಶುದ್ಧೀಕರಿಸುತ್ತದೆ. ಮೊಡವೆ, ಕಲೆಗಳು ಮತ್ತು ವಯಸ್ಸಾಗುವ ಲಕ್ಷಣಗಳನ್ನು ತೆಗೆದುಹಾಕುವುದು.

ಸೂಚನೆ

ಸೂಚನೆ

ಈ ನೀರನ್ನು ಬಿಸಿಯಾಗಿರುವಾಗಲೇ ಅಥವಾ ಉಗುರುಬೆಚ್ಚಗಿನ ಬಿಸಿ ಇರುವಾಗಲೇ ಕುಡಿಯಿರಿ. ತೆಗೆದಿಟ್ಟ ನೀರನ್ನು ಮತ್ತೆ ಕುಡಿಯುವ ಮೊದಲು ಮತ್ತೊಮ್ಮೆ ಬಿಸಿ ಮಾಡಿ. ಆದರೆ ಮೂರು ದಿನಕ್ಕಿಂತ ಹೆಚ್ಚು ಕಾಲ ಇದನ್ನು ಫ್ರಿಡ್ಜ್ ನಲ್ಲಿ ಇಡಬೇಡಿ. ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯಿರಿ. ನೀವು ಖಂಡಿತವಾಗಿಯೂ ಫಲಿತಾಂಶ ಪಡೆಯುತ್ತೀರಿ ಎಂದು ನಾವು ಖಚಿತವಾಗಿ ಹೇಳಬಲ್ಲೆವು.

English summary

Boil Lemons And Drink The Liquid As Soon As You Wake Up

The trend of drinking lemon water early in the morning on an empty stomach is quite the rage now. However, not many of us are aware of the correct method to prepare it. Merely squeezing a lemon in a cup of water and adding a tablespoon of honey to it is not enough to reap the benefits of this drink. Most of the nutrients in are present in the pulp and peel of the lemon. And, when you extract the juice, you lose these nutrients and do not get all the benefits
Subscribe Newsletter