ಮಲಗುವ ಭಂಗಿ ಹೇಗಿರಬೇಕು? ಸರಿಯಾದ ಕ್ರಮ ಯಾವುದು?

By: manu
Subscribe to Boldsky

ನಮ್ಮ ಜೀವಿತಾವಧಿಯಲ್ಲಿ ನಾವು ಎಷ್ಟು ಸಮಯ ಮಲಗಿ ಕಳೆಯುತ್ತೇವೆ ಗೊತ್ತೇ? ಸರಿಸುಮಾರು ಮೂರನೆಯ ಒಂದು ಭಾಗದಷ್ಟು. ಅಚ್ಚರಿಗೊಂಡಿರಾ? ದಿನಕ್ಕೆ ಎಂಟು ಗಂಟೆಗಳ ಕಾಲ ಮಲಗಿದರೆ ಇಷ್ಟೇ ಆಗುತ್ತದೆ. ಅಲ್ಲದೇ ಉತ್ತಮ ಆರೋಗ್ಯಕ್ಕೆ ಆರರಿಂದ ಎಂಟು ಗಂಟೆ ಗಾಢ ನಿದ್ದೆಯ ಅಗತ್ಯವಿದೆ.  ಸ್ವಭಾವವನ್ನು ತಿಳಿಯಲು ನೀವು ಮಲಗುವ ಭಂಗಿ ಸಾಕು!

ಆರು ಗಂಟೆಗಳ ಗಾಢ ನಿದ್ದೆ ಪಡೆಯಲು ಸುಮಾರು ಏಳರಿಂದ ಎಂಟು ಗಂಟೆಗಳಾದರೂ ಮಲಗಿರುವ ಅಗತ್ಯವಿದೆ ಎಂದು ತಜ್ಞರು ತಿಳಿಸುತ್ತಾರೆ. ಉತ್ತಮ ಆರೋಗ್ಯ, ಸುದೃಢ ಶರೀರ, ಉಲ್ಲಸಿತ ಮನಸ್ಸು ಮತ್ತು ಮನೋಭಾವನೆಗೆ ಸಾಕಷ್ಟು ನಿದ್ದೆಯ ಅಗತ್ಯವಿದೆ.

ಆದರೆ ಕೆಲವು ವ್ಯಕ್ತಿಗಳಿಗೆ ಇದು ಸುಲಭವಾದ ಮಾತಲ್ಲ. ಅಸಮರ್ಪಕ ಹಾಸಿಗೆ, ಸಮರ್ಪಕ ಆಹಾರ ಸೇವನೆ ಮತ್ತು ಸಲ್ಲದ ಪಾನೀಯಗಳನ್ನು ಸೇವಿಸುವ ಕ್ರಮ ಹಾಗೂ ಮುಖ್ಯವಾಗಿ ತಪ್ಪಾದ ಮಲಗುವ ಭಂಗಿ ಗಾಢ ನಿದ್ದೆ ಪಡೆಯಲು ಅಡ್ಡಿಪಡಿಸುತ್ತವೆ. ಯಾವ ರೀತಿ ಮಲಗುವ ಭಂಗಿ ಆರೋಗ್ಯಕ್ಕೆ ಉತ್ತಮವಾದದ್ದು?

ಸರಿಯಾದ ಭಂಗಿಯಲ್ಲಿ ಮಲಗದೇ ಇದ್ದರೆ ಇದರ ಪರಿಣಾಮವಾಗಿ ಬೆನ್ನಿನ ನೋವು, ಕುತ್ತಿಗೆ ನೋವು, ಹೊಟ್ಟೆಯಲ್ಲಿ ತೊಂದರೆ ಮತ್ತು ಅವಧಿಗೂ ಮುನ್ನ ವೃದ್ಧಾಪ್ಯ ಆವರಿಸುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಸರಿಯಾದ ಭಂಗಿಯಲ್ಲಿ ಮಲಗುವ ಕ್ರಮಗಳನ್ನು ಕೆಳಗೆ ನೀಡಲಾಗಿದೆ...   

ಬೆನ್ನಿನ ಮೇಲೆ ಮಲಗುವುದು

ಬೆನ್ನಿನ ಮೇಲೆ ಮಲಗುವುದು

ಹಾಸಿಗೆಯ ಮೇಲೆ ನೇರವಾಗಿ ಬೆನ್ನ ಮೇಲೆ ಮಲಗುವುದು ಅತ್ಯುತ್ತಮ ಭಂಗಿಯಾಗಿದೆ, ಬೆನ್ನುಹುರಿಗೆ ಹಾಸಿಗೆಯೇ ಸರಿಯಾದ ಆಧಾರ ನೀಡುವಂತಿರಬೇಕು.

ತಲೆದಿಂಬು ಇಲ್ಲದೇ ಅಥವಾ ತೆಳ್ಳಗಿನ ಒಂದೇ ದಿಂಬು ಬಳಸಿ

ತಲೆದಿಂಬು ಇಲ್ಲದೇ ಅಥವಾ ತೆಳ್ಳಗಿನ ಒಂದೇ ದಿಂಬು ಬಳಸಿ

ಬೆನ್ನಿಗೆ ಅತಿ ಕಡಿಮೆ ಸೆಳೆತ ನೀಡಲು ತಲೆದಿಂಬು ಇಲ್ಲದೇ ಅಥವಾ ತೆಳ್ಳಗಿನ ಒಂದೇ ದಿಂಬು ಬಳಸಿ ಮಲಗುವುದು ಉತ್ತಮ. ಇದರಿಂದ ಕುತ್ತಿಗೆಗೆ ತಟಸ್ಥ ಸ್ಥಾನ ದೊರೆತು ಬೆಳಿಗ್ಗೆದ್ದಾಗ ಕುತ್ತಿಗೆಯ ನೋವು ಇಲ್ಲದೇ ಇರಲು ನೆರವಾಗುತ್ತದೆ.

ಬೆನ್ನ ಮೇಲೆ ಮಲಗುವ ಮೂಲಕ ಆರೋಗ್ಯ ಪಡೆಯಿರಿ

ಬೆನ್ನ ಮೇಲೆ ಮಲಗುವ ಮೂಲಕ ಆರೋಗ್ಯ ಪಡೆಯಿರಿ

ಬೆನ್ನ ಮೇಲೆ ಮಲಗುವ ಮೂಲಕ ಉಸಿರಾಟ ಅತಿ ಸೂಕ್ತವಾದ ಭಂಗಿಯಲ್ಲಿರುವ ಕಾರಣ ಗರಿಷ್ಠ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ, ಪರಿಣಾಮವಾಗಿ ಚರ್ಮದಲ್ಲಿ ನೆರಿಗೆ ಮೂಡುವ ಸಾಧ್ಯತೆ ಕಡಿಮೆಯಾಗಿ ವೃದ್ಧಾಪ್ಯ ದೂರಾಗುತ್ತದೆ.ಅಲ್ಲದೇ ಈ ಭಂಗಿಯಲ್ಲಿ ಹೊಟ್ಟೆಯ ಆಮ್ಲೀಯತೆ ಹಿಂದೆಸರಿಯುವ ಸಾಧ್ಯತೆ ಕಡಿಮೆಯಾಗುತ್ತದಾದರೂ ಮೂಗಿನ ಒಳಗಿನ ಭಾಗಗಳು ಹೆಚ್ಚು ಸಡಿಲಗೊಳ್ಳುವ ಮೂಲಕ ಗೊರಕೆ ಮಾತ್ರ ಹೆಚ್ಚಾಗುತ್ತದೆ.

ಒಂದು ಬದಿಯಲ್ಲಿ ಮಲಗುವುದು

ಒಂದು ಬದಿಯಲ್ಲಿ ಮಲಗುವುದು

ವೈದ್ಯರು ಸಲಹೆ ಮಾಡುವ ಪ್ರಕಾರ ಈ ಭಂಗಿ ಎರಡನೆಯ ಅತ್ಯುತ್ತಮ ಭಂಗಿಯಾಗಿದ್ದು ಹೆಚ್ಚಿನ ವೈದ್ಯರು ಎಡಮಗ್ಗುಲಲ್ಲಿ ಮಲಗುವುದೇ ಉತ್ತಮ ಎಂದು ತಿಳಿಸುತ್ತಾರೆ. ವಿಶೇಷವಾಗಿ ಗರ್ಭಿಣಿಯರು ಎಡಮಗ್ಗುಲಲ್ಲಿ ಮಲಗುವ ಮೂಲಕ ಉತ್ತಮಗೊಳ್ಳುವ ರಕ್ತಪರಿಚಲನೆ ತಾಯಿ ಮತ್ತು ಮಗುವಿನ ಅರೋಗ್ಯಕ್ಕೆ ಪೂರಕವಾಗಿದೆ.

ಒಂದು ಬದಿಯಲ್ಲಿ ಮಲಗುವುದು

ಒಂದು ಬದಿಯಲ್ಲಿ ಮಲಗುವುದು

ಈ ಭಂಗಿಯಲ್ಲಿ ಬೆನ್ನಿಗೆ ಬೀಳುವ ಒತ್ತಡವೂ ಕಡಿಮೆಯಾಗುತ್ತದೆ. ಈ ಭಂಗಿಯಲ್ಲಿ ಆಮ್ಲೀಯತೆ ಹಿಂದೆಸರಿಯುವ ಮತ್ತು ಎದೆಯುರಿಯುಂಟಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.ಎಡ ಮಗ್ಗುಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ಒಂದು ಬದಿಯಲ್ಲಿ ಮಲಗುವುದರ ಅಡ್ಡಪರಿಣಾಮ

ಒಂದು ಬದಿಯಲ್ಲಿ ಮಲಗುವುದರ ಅಡ್ಡಪರಿಣಾಮ

ಆದರೆ ಈ ಭಂಗಿಯ ಪ್ರತಿಕೂಲ ಪರಿಣಾಮಗಳೆಂದರೆ ಚರ್ಮದಲ್ಲಿ ನೆರಿಗೆ ಬೀಳುವ ಸಾಧ್ಯತೆ ಮತ್ತು ಸ್ತನಗಳು ಜೋಲುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಹೊಟ್ಟೆಯ ಮೇಲೆ ಮತ್ತು ಶ್ವಾಸಕೋಶಗಳ ಮೇಲೆ ಬೀಳುವ ಒತ್ತಡ ಭುಜ ಮತ್ತು ಕೆಳಬೆನ್ನಿನ ನೋವಿಗೆ ಕಾರಣವಾಗಬಹುದು.

ಹೊಟ್ಟೆಯ ಮೇಲೆ ಮಲಗುವುದು

ಹೊಟ್ಟೆಯ ಮೇಲೆ ಮಲಗುವುದು

ಈ ಭಂಗಿಯಲ್ಲಿ ಮಲಗುವುದು ಸರ್ವಥಾ ಸಲ್ಲದು. ಏಕೆಂದರೆ ನಮ್ಮ ಬೆನ್ನುಹುರಿಗೆ ಸೂಕ್ತವಾದ ಆಧಾರ ದೊರಕದೇ ಬೆನ್ನುಹುರಿಯ ಮೇಲೆ ಅತಿ ಹೆಚ್ಚಿನ ಒತ್ತಡ ಬೀಳುವ ಕಾರಣ ಬೆನ್ನುನೋವು ಮತ್ತು ಕುತ್ತಿಗೆ ನೋವು ಎದುರಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಅಲ್ಲದೇ ಇದರಿಂದ ಮುಖದಲ್ಲಿ ನೆರಿಗೆ ಬೀಳುವ ಮತು ಸ್ತನಗಳು ಜೋತುಬೀಳುವ ಸಾಧ್ಯತೆಯೂ ಹೆಚ್ಚುತ್ತದೆ.

ಇದರಿಂದ ಗೊರಕೆಯೂ ಕಡಿಮೆಯಾಗುತ್ತದೆ!

ಇದರಿಂದ ಗೊರಕೆಯೂ ಕಡಿಮೆಯಾಗುತ್ತದೆ!

ಆದರೆ ನೀವು ದೊಡ್ಡದಾಗಿ ಗೊರಕೆ ಹೊಡೆಯುವವರಾಗಿದ್ದರೆ ಹೊಟ್ಟೆಯ ಮೇಲೆ ಮಲಗುವ ಮೂಲಕ ಮೂಗಿನ ಮೇಲ್ಭಾಗ ಹಾಗೂ ಗಾಳಿಯಾಡುವ ಭಾಗಗಳಿಗೆ ಕಡಿಮೆ ಸ್ಥಳಾವಕಾಶವಿರುವ ಕಾರಣ ಗೊರಕೆಯೂ ಕಡಿಮೆಯಾಗುತ್ತದೆ.

ಕುತ್ತಿಗೆ ನೋವು ಬರಬಹುದು ಎಚ್ಚರ!

ಕುತ್ತಿಗೆ ನೋವು ಬರಬಹುದು ಎಚ್ಚರ!

ಆದರೆ ಹೊಟ್ಟೆಯ ಮೇಲೆ ಮಲಗುವಾಗ ತಲೆಯನ್ನು ಒಂದು ಬದಿ ವಾಲಿಸುವುದು ಅನಿವಾರ್ಯವಾದ ಕಾರಣ ಮರುದಿನ ಬೆಳಿಗ್ಗೆದ್ದಾಗ ಕುತ್ತಿಗೆ ನೋವು ಇದ್ದೇ ಇರುತ್ತದೆ.

ಗರ್ಭಿಣಿಯರಂತೂ ಬಹಳ ಎಚ್ಚರವಹಿಸಬೇಕು...

ಗರ್ಭಿಣಿಯರಂತೂ ಬಹಳ ಎಚ್ಚರವಹಿಸಬೇಕು...

ಆದ್ದರಿಂದ ಈ ಭಂಗಿಯನ್ನು ಗೊರಕೆ ಕಡಿಮೆಗೊಳಿಸಲು ಕೊಂಚ ಕಾಲಕ್ಕಾಗಿ ಮೀಸಲಿಡಬೇಕೇ ಹೊರತು ಇದೇ ಭಂಗಿಯಲ್ಲಿ ಇಡಿಯ ರಾತ್ರಿ ಮಲಗಿದರೆ ಬೆಳಿಗ್ಗೆದ್ದಾಗ ಬೆನ್ನುನೋವು ಮತ್ತು ಕುತ್ತಿಗೆ ನೋವು ಇದ್ದೇ ಇರುತ್ತದೆ. ಗರ್ಭಿಣಿಯರಂತೂ ಈ ಭಂಗಿಯ ಬಗ್ಗೆ ಯೋಚಿಸಲೂಕೂಡದು. ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಮಲಗುವ ಭಂಗಿ ಹೇಗಿರಬೇಕು?

 
English summary

Best and Worst Sleeping Positions to Stay Healthy

Do you know how much time one spends sleeping in his or her life span? It is one-third of our lives. Surprised? It is true. So it is very much important that we get a good night sleep. A good sleep is very important for our health, physical body, mind and mood. It is recommended by experts that every adult should get 7-8 hours of sleep per night.
Please Wait while comments are loading...
Subscribe Newsletter