For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಎದ್ದ ಕೂಡಲೇ-ಲಿಂಬೆ ರಸ ಬೆರೆಸಿದ ನೀರು ಕುಡಿಯಿರಿ

ಬೆಳಗ್ಗೆ ಉಗುರು ಬೆಚ್ಚಗಿನ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿಕೊಂಡು ಕುಡಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು....

By Manu
|

ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಹೋಗಿ ಒಂದು ಕಪ್ ಕಾಫಿ ಅಥವಾ ಚಾ ಕುಡಿಯುತ್ತೇವೆ. ಇದು ಹಿಂದಿನಿಂದಲೂ ನಮಗೆ ಅಭ್ಯಾಸವಾಗಿ ಹೋಗಿದೆ. ಇನ್ನೂ ಕೆಲವರು ಹಾಸಿಗೆ ಬಿಟ್ಟು ಏಳುವ ಮೊದಲೇ ಮುಖವನ್ನು ತೊಳೆಯದೆ ಚಾ ಅಥವಾ ಕಾಫಿ ಸೇವನೆ ಮಾಡುತ್ತಾರೆ. ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..!

ಆದರೆ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿಕೊಂಡು ಕುಡಿದರೆ ಅದು ಅದ್ಭುತವನ್ನೇ ಮಾಡಲಿದೆ....ಮುಂದೆ ಓದಿ...

ಎದೆಯುರಿ, ಹೊಟ್ಟೆಯುಬ್ಬರವನ್ನು ದೂರವಿಡುವುದು

ಎದೆಯುರಿ, ಹೊಟ್ಟೆಯುಬ್ಬರವನ್ನು ದೂರವಿಡುವುದು

ಬೆಳಿಗ್ಗೆ ಎದ್ದು ಉಗುರು ಬೆಚ್ಚಗಿನ ಬಿಸಿನೀರಿನೊಂದಿಗೆ ಲಿಂಬೆರಸ ಹಾಕಿ ಕುಡಿದರೆ ಅದರಿಂದ ಜೀರ್ಣಶಕ್ತಿಯು ಹೆಚ್ಚುವುದು. ಲಿಂಬೆರಸವು ಯಕೃತ್ ಹೆಚ್ಚು ಪಿತ್ತರಸವನ್ನು ಉತ್ಪಾದಿಸಿ ಜಟಿಲವಾಗಿರುವ ಆಹಾರವನ್ನು ಕರಗಿಸಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ನೆರವಾಗುವುದು. ಇದು ಹೊಟ್ಟೆಯನ್ನು ಸರಿಯಾಗಿಟ್ಟುಕೊಂಡು ಎದೆಯುರಿ, ಹೊಟ್ಟೆಯುಬ್ಬರವನ್ನು ದೂರವಿಡುವುದು.

ಕಿಡ್ನಿಯಲ್ಲಿನ ಕಲ್ಲು ನಿವಾರಣೆಗೆ

ಕಿಡ್ನಿಯಲ್ಲಿನ ಕಲ್ಲು ನಿವಾರಣೆಗೆ

ಮೂತ್ರಪಿಂಡದಲ್ಲಿ ಕಲ್ಲುಂಟಾಗಿದ್ದರೆ ನಿತ್ಯವೂ ಮುಂಜಾನೆ ಕೊಂಚವೇ ಬಿಸಿ ಇರುವ ನೀರಿನಲ್ಲಿ ಲಿಂಬೆಯೊಂದರ ರಸ ಹಾಕಿ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಕಲ್ಲು ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಜೊತೆಗೇ ಮೇದೋಜೀರಕ ಗ್ರಂಥಿಯ ಕಲ್ಲು, ಪಿತ್ತಕೋಶದ ಕಲ್ಲುಗಳು ಮತ್ತು ಕ್ಯಾಲ್ಸಿಯಂ ಘನೀಕರಿಸಿದ್ದರೆ ಅವೂ ಕರಗಿ ನೀರಾಗಿ ಹೊರಹರಿದು ಹೋಗುತ್ತವೆ.

ಲವಲವಿಕೆಯ ಜೀವನ ಶೈಲಿಗೆ

ಲವಲವಿಕೆಯ ಜೀವನ ಶೈಲಿಗೆ

ಬೆಳಿಗ್ಗೆದ್ದ ಕೂಡಲೇ ಈ ಲಿಂಬೆ ಬೆರೆಸಿದ ನೀರು ಕುಡಿದು ದಿನದ ವ್ಯಾಯಾಮ ಹಾಗೂ ಇತರ ಚಟುವಟಿಕೆಗಳನ್ನು ನಡೆಸುವಾಗ ಮುಂಚಿನಷ್ಟು ಸುಸ್ತಾಗುವುದಿಲ್ಲ. ಏಕೆಂದರೆ ಈ ಪೇಯದಲ್ಲಿರುವ ಪೋಷಕಾಂಶಗಳು ತಕ್ಷಣವೇ ರಕ್ತಕ್ಕೆ ಪೂರೈಕೆಯಾಗಿ ಪ್ರತಿ ಜೀವಕೋಶ ಪೂರ್ಣವಾಗಿ ಕೆಲಸ ಮಾಡುವ ಸಾಮರ್ಥ್ಯ ಪಡೆಯುತ್ತದೆ. ಬೆಳಗ್ಗಿನ ಈ ಚಟುವಟಿಕೆಯ ಕಾರಣ ಮನಸ್ಸು ಇಡಿಯ ದಿನ ಪ್ರಫುಲ್ಲವಾಗಿರುತ್ತದೆ.

ಕರುಳಿನ ಸ್ವಚ್ಛತೆಗೆ

ಕರುಳಿನ ಸ್ವಚ್ಛತೆಗೆ

ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

ವಯಸ್ಸಾಗುತ್ತಿರುವ ಲಕ್ಷಣವನ್ನು ನಿಯಂತ್ರಿಸುತ್ತದೆ

ವಯಸ್ಸಾಗುತ್ತಿರುವ ಲಕ್ಷಣವನ್ನು ನಿಯಂತ್ರಿಸುತ್ತದೆ

ನೀರಿಗೆ ಎರಡು ಮೂರು ಚಮಚ ಲಿಂಬೆರಸವನ್ನು ಹಾಕಿ ಕುಡಿದರೆ ಅದರಿಂದ ಕಪ್ಪುಕಲೆಗಳು, ವಯಸ್ಸಾಗುತ್ತಿರುವ ಲಕ್ಷಣ ಮತ್ತು ನೆರಿಗೆ ಮೂಡುವುದನ್ನು ತಡೆಯಬಹುದು. ಲಿಂಬೆರಸವು ತಂಪನ್ನು ಉಂಟು ಮಾಡುವ ಕಾರಣದಿಂದ ಅತಿಯಾದ ಉಷ್ಣತೆಯಲ್ಲಿ ಇದು ತುಂಬಾ ಪರಿಣಾಮಕಾರಿ.

ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು

ತೂಕ ಇಳಿಸಲು ಸಹಕಾರಿ ಲಿಂಬೆ ನೀರನ್ನು ಜೇನಿನೊಂದಿಗೆ ಮಿಶ್ರ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿದು ಸುಂದರ ಕಾಯ ನಿಮ್ಮದಾಗುತ್ತದೆ.ತೂಕ ಇಳಿಸಿಕೊಳ್ಳಬೇಕೇ? ಬೆಳಿಗ್ಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ

ಅಜೀರ್ಣ ಸಮಸ್ಯೆಗೆ

ಅಜೀರ್ಣ ಸಮಸ್ಯೆಗೆ

ಅಜೀರ್ಣವೆನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಂಡುಬರುತ್ತಿದೆ. ಆದರೆ ಉಗುರು ಬಿಸಿನೀರು ಮತ್ತು ಲಿಂಬೆರಸವು ಅಜೀರ್ಣಕ್ಕೆ ಒಳ್ಳೆಯ ಮದ್ದು. ಅಷ್ಟೇ ಅಲ್ಲದೆ ಲಿಂಬೆರಸವು ರಕ್ತವನ್ನು ಶುದ್ಧೀಕರಿಸುತ್ತದೆ, ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

ಬಾಯಿಯ ಕೆಟ್ಟ ವಾಸನೆಗೆ

ಬಾಯಿಯ ಕೆಟ್ಟ ವಾಸನೆಗೆ

ಅಷ್ಟೇ ಅಲ್ಲದೆ ಇದು ಬಾಯಿಯ ಕೆಟ್ಟ ವಾಸನೆ ಹಾಗೂ ಒಸಡುಗಳಲ್ಲಿ ರಕ್ತ ಸೋರುವುದನ್ನು ನಿವಾರಿಸುತ್ತದೆ. ಹಲ್ಲುಗಳು ಕೆಡುವುದನ್ನು ಇದು ತಡೆಯುವುದು. ಲಿಂಬೆರಸದಲ್ಲಿ ಇರುವಂತಹ ಪೊಟಾಶಿಯಂ ಅಧಿಕ ರಕ್ತದೊತ್ತಡವನ್ನು ನಿವಾರಿಸುವುದು. ಇದು ವಾಕರಿಕೆ ಹಾಗೂ ತಲೆತಿರುಗುವಿಕೆಯನ್ನು ತಡೆಯುತ್ತದೆ.

ಸಲಹೆ

ಸಲಹೆ

*ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಉಗುರುಬೆಚ್ಚನಿಯ ನೀರಿನಲ್ಲಿ ಬೆಳಿಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಕ್ಕರೆ ಸೇರಿಸುವುದರಿಂದ ಲಿಂಬೆಯ ಗುಣಗಳು ನಾಶವಾಗುವುದರಿಂದ ಸಕ್ಕರೆ, ಉಪ್ಪು, ಬೆಲ್ಲ ಯಾವುದನ್ನೂ ಸೇರಿಸಬೇಡಿ. ಕೆಲವು ಹನಿ ಜೇನನ್ನು ಬೇಕಾದರೆ ಸೇರಿಸಬಹುದು.

*ಜೇನು ಸೇರಿಸಿದ ನೀರು ಕುಡಿಯುವುದರಿಂದ ದೇಹ ಲಿಂಬೆ ಮತ್ತು ಜೇನು ಎರಡರ ಪ್ರಯೋಜನವನ್ನೂ ಪಡೆಯಬಹುದು. ಈ ನೀರನ್ನು ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಸೇವಿಸಿದ ಬಳಿಕ ದೀರ್ಘ ಉಸಿರಾಟದ ಮೂಲಕ ಸಾಕಷ್ಟು ನಡೆಯಿರಿ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

English summary

Benefits of Drinking Warm Lemon Water Every Morning

You might have heard a lot of people suggesting to you to drink lemon water first thing in the morning. Well, it is one of the best health tips to have a healthy body and a glowing skin. There are many benefits of drinking lemon water.
X
Desktop Bottom Promotion