Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಲಭವಾಗಿ ಬಗ್ಗದ ಮೈಗ್ರೇನ್‌ಗೆ ಆಯುರ್ವೇದ ಚಿಕಿತ್ಸೆ
ಮೈಗ್ರೇನ್ ನೋವು ಎಷ್ಟು ತೀವ್ರವಾಗಿರುತ್ತದೆಂದರೆ ಇದು ಶೀಘ್ರ ಉಪಶಮನವನ್ನು ಕಂಡುಕೊಳ್ಳಲಿ ಎಂಬುದೇ ಇದನ್ನು ಅನುಭವಿಸುತ್ತಿರುವವರು ಹೇಳುವ ಮಾತು... ಆದರೆ ಇದನ್ನು ನಿಯಂತ್ರಣದಲ್ಲಿರಿಸಲು ಆಯುರ್ವೇದದಲ್ಲಿ ಪರಿಹಾರಗಳಿವೆ ಮುಂದೆ ಓದಿ...
ತಲೆನೋವಿನ ಉಗ್ರರೂಪವಾದ ಮೈಗ್ರೇನ್ ಇಂದು ಹತ್ತರಲ್ಲಿ ಒಬ್ಬರನ್ನಾದರೂ ಬಾಧಿಸುತ್ತಿದೆ. ಈ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ತರಹನಾಗಿರಬಹುದು. ಆದರೆ ಬಹುತೇಕವಾಗಿ ಸೂಜಿ ಚುಚ್ಚಿದಂತಹ ನೋವು, ಯೋಚಿಸಲೂ ಸಾಧ್ಯವಿಲ್ಲದಂತೆ ಮನಸ್ಸನ್ನೆಲ್ಲಾ ಆವರಿಸುವ ನೋವನ್ನು ಸಹಿಸಿಕೊಂಡವರೇ ಬಲ್ಲರು. ಮೈಗ್ರೇನ್ ನಿಂದ ದೂರವುಳಿಯುವುದು ಹೇಗೆ?
ಯಾವುದೇ ತಲೆನೋವಿನಂತೆ ಮೈಗ್ರೇನ್ ಸಹಾ ಪ್ರಾರಂಭದಲ್ಲಿ ನಿಧಾನವಾಗಿದ್ದು ಕ್ರಮೇಣ ಏರುತ್ತಾ ತೀವ್ರಸ್ವರೂಪ ಪಡೆಯುತ್ತದೆ. ತೀವ್ರರೂಪ ಪಡೆದ ಬಳಿಕ ಸುಮ್ಮನೇ ಮಲಗದೇ ವಿಧಿಯೇ ಇಲ್ಲ. ಆದ್ದರಿಂದ ಯಾವುದೇ ಚಿಕಿತ್ಸೆ ಮಾಡುವುದಾದರೂ ಪ್ರಾರಂಭದಲ್ಲಿಯೇ ಮಾಡಿದರೆ ಮಾತ್ರ ಫಲಕಾರಿ. ಮೈಗ್ರೇನ್ ನೋವಿಗೆ ಅಂತ್ಯ ಹಾಡುವ ಹತ್ತು ಗಿಡಮೂಲಿಕೆಗಳು
ಈ ತಲೆನೋವನ್ನು ಆಯುರ್ವೇದದಲ್ಲಿ ಸೂರ್ಯವರ್ತ ಎಂದು ಕರೆಯಲಾಗಿದೆ. ಸಂಸ್ಕೃತದಲ್ಲಿ ಆವರ್ತ ಎಂದರೆ ಮರೆಮಾಚು ಎಂದರ್ಥ. ಬಹುತೇಕ ಈ ನೋವು ಹಗಲಿನಲ್ಲಿ, ಅದರಲ್ಲೂ ಸೂರ್ಯನ ಆವೃತ್ತಕ್ಕನುಗುಣವಾಗಿಯೇ ಇರುವ ಕಾರಣ ಈ ಹೆಸರನ್ನಿಡಲಾಗಿದೆ. ಎಲ್ಲಾ ಮೈಗ್ರೇನ್ ತಲೆನೋವುಗಳು ಒಂದು ನಿಗದಿತ ಸಮಯಕ್ಕೇ ಬರುವುದಿಲ್ಲವಾದರೂ ಸಾಮಾನ್ಯವಾಗಿ ಬೆಳಿಗ್ಗೆ ಕಡಿಮೆ, ಮಧ್ಯಾಹ್ನ ಉಗ್ರರೂಪ ಮತ್ತು ಸಂಜೆ ಕಡಿಮೆ ಇರುತ್ತದೆ....

ಕೊತ್ತಂಬರಿ ಕಾಳಿನ ಆರೈಕೆ
ಒಂದು ದೊಡ್ಡಚಮಚ ಧನಿಯ ಅಥವಾ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಇಡಿಯ ರಾತ್ರಿ ನೆನೆಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ಮರುದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಧನಿಯ ಬೀಜಗಳಲ್ಲಿರುವ ಉರಿಯೂತ ನಿವಾರಕ ಗುಣ ತಕ್ಷಣ ರಕ್ತದ ಮೂಲಕ ಮೆದುಳನ್ನು ತಲುಪಿ ಈ ನೋವನ್ನು ಬುಡದಲ್ಲಿಯೇ ಚಿವುಟಿಬಿಡುತ್ತದೆ.

ಕೊತ್ತಂಬರಿ ಕಾಳಿನ ಆರೈಕೆ
ಸೋಸಿದ ಬಳಿಕ ಉಳಿದ ಧನಿಯ ಬೀಜಗಳನ್ನು ನಿತ್ಯದ ಆಹಾರದಲ್ಲಿ ಬೆರೆಸಿ ಸೇವಿಸುವ ಮೂಲಕ ಅಥವಾ ಸಾಧ್ಯವಾದರೆ ಜಗಿದು ನುಂಗುವ ಮೂಲಕ ನೋವನ್ನು ಎದುರಿಸಲು ದೇಹ ಇನ್ನಷ್ಟು ಸಮರ್ಥವಾಗುತ್ತದೆ.

ಆಯುರ್ವೇದೀಯ ಎಣ್ಣೆ ಮಸಾಜ್
ತಲೆಗೂ ಎಣ್ಣೆಯ ಮಸಾಜ್ ಮಾಡಬಹುದು. ಆಯುರ್ವೇದದಲ್ಲಿ ಅಭ್ಯಂಗ ಎಂದು ಕರೆದಿರುವ ಈ ಚಿಕಿತ್ಸಾವಿಧಾನದಲ್ಲಿ ನುರಿತ ಮಸಾಜ್ ಮಾಡುವ ಆಯುರ್ವೇದ ವೈದ್ಯಶಾಲೆಗಳಲ್ಲಿ ನಿತ್ಯವೂ ಒಂದು ಸಮಯದಲ್ಲಿ ಮಸಾಜ್ ಮಾಡಿಸಿಕೊಳ್ಳುವ ಮೂಲಕ ಈ ನೋವಿನ ಪ್ರಬಲತೆಯನ್ನು ಹೆಚ್ಚಿಸಬಹುದು.

ಆಯುರ್ವೇದೀಯ ಎಣ್ಣೆ ಮಸಾಜ್
ಅಭ್ಯಂಗಕ್ಕೆ ಸೂಕ್ತವಾದ ಎಣ್ಣೆಯನ್ನು ವ್ಯಕ್ತಿಯ ಆರೋಗ್ಯವನ್ನು ಅನುಸರಿಸಿ ವೈದ್ಯಶಾಲೆಯವರು ಸೂಚಿಸುತ್ತಾರೆ. ಸಾಮಾನ್ಯವಾದ ತಲೆನೋವಿಗೆ ಕಜ್ಞುಂನ್ಯಾಡಿ(Kannjunyaadi)ತೈಲಂ ಉತ್ತಮವಾಗಿದೆ. ಇದರಿಂದ ತಲೆಗೆ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.

ಅಜ್ಞೇಯ ತಪಸ್ಸು (Transcendental Meditation)
ಕೆಲವು ಸಾವಿರ ವರ್ಷಗಳ ಹಿಂದಿನಿಂದ ಭಾರತದಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ ಈ ವಿಧಾನದಲ್ಲಿ ಮನಸ್ಸನ್ನು ಒಂದೇ ವಿಷಯದತ್ತ ಕೇಂದ್ರೀಕರಿಸಿ ಮನಸ್ಸಿನಲ್ಲಿ ಬೇರಾವುದೇ ಯೋಚನೆಗಳು ಸುಳಿಯದಂತೆ ಮಾಡುವ ಮೂಲಕ ತಲೆನೋವನ್ನು ಕಡಿಮೆ ಮಾಡಬಹುದು. ಇದರಿಂದ ಮೆದುಳಿಗೆ ಎದುರಾಗುವ ಒತ್ತಡ ಇಲ್ಲವಾಗುತ್ತದೆ. ಮೈಗ್ರೇನ್ ತಲೆನೋವಿಗೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದೆ.

ಒಣದ್ರಾಕ್ಷಿ ಮತ್ತು ಬಾದಾಮಿಯ ಆರೈಕೆ
ರಾತ್ರಿ ಮಲಗುವ ಮುನ್ನ ಒಂದು ಲೋಟ ತಣ್ಣೀರಿನಲ್ಲಿ ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳನ್ನು ನೆನೆಸಿಡಿ.

ಒಣದ್ರಾಕ್ಷಿ ಮತ್ತು ಬಾದಾಮಿಯ ಆರೈಕೆ
ಬಳಿಗ್ಗೆ ಇವನ್ನು ಜಗಿದು ನುಂಗಿ, ನೆನೆಸಿದ ನೀರನ್ನೂ ಕುಡಿಯಿರಿ. ಇದರಿಂದ ಪ್ರಾರಂಭಿಕ ಹಂತದ ಮೈಗ್ರೇನ್ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಕೇಸರಿಯ ಆರೈಕೆ
ಆಯುರ್ವೇದದಲ್ಲಿ ಈ ತಲೆನೋವಿಗೆ ತಿಳಿಸಲಾದ ಅತ್ಯುತ್ತಮ ಆರೈಕೆ ಎಂದರೆ ಕೇಸರಿಯ ಆರೈಕೆ. ಒಂದು ಚಿಟಿಕೆಯಷ್ಟು ಕೇಸರಿಯನ್ನು ಪುಡಿಮಾಡಿ ಒಂದು ಚಿಕ್ಕಚಮಚ ಅಪ್ಪಟ ತುಪ್ಪದಲ್ಲಿ ಮಿಶ್ರಣ ಮಾಡಿ. ಬೆಳಗ್ಗೆದ್ದ ಬಳಿಕ ಪ್ರಥಮವಾಗಿ ಈ ಮಿಶ್ರಣದಿಂದ ಕೊಂಚವೇ ಪ್ರಮಾಣವನ್ನು ಮೂಗಿನ ಮೂಲಕ ಒಳಗೆಳೆದುಕೊಳ್ಳಿ.

ಕೇಸರಿಯ ಆರೈಕೆ
ನಂತರ ಕನಿಷ್ಠ ಇಪ್ಪತ್ತು ನಿಮಿಷದವರೆಗೆ ಏನನ್ನೂ ಸೇವಿಸಬೇಡಿ ಅಥವಾ ಸ್ನಾನ ಮಾಡಬೇಡಿ. ಸುಮಾರು ಎರಡು ವಾರಗಳ ಕಾಲ ಈ ವಿಧಾನವನ್ನು ಅನುಸರಿಸಿದರೆ ಉಗ್ರ ರೂಪದ ತಲೆನೋವು ಇಲ್ಲವಾಗುತ್ತದೆ.

ತಲೆನೋವನ್ನು ಹೆಚ್ಚಿಸುವ ಇವುಗಳಿಂದ ದೂರವಿರಿ
ಅನಿವಾರ್ಯ ಕಾರಣಗಳ ಹೊರತು ಟೀವಿ ಮತ್ತು ಕಂಪ್ಯೂಟರ್‌ಗಳ ಪರದೆಯನ್ನು ವೀಕ್ಷಿಸಬೇಡಿ. ಏಕೆಂದರೆ ಇವುಗಳಿಂದ ಹೊರಟ ಬೆಳಕಿನ ಕಿರಣಗಳು ನೇರವಾಗಿ ಕಣ್ಣಿನ ಒಳಬರುವ ಮೂಲಕ ದೃಷ್ಟಿನರಕ್ಕೆ ಹೆಚ್ಚಿನ ಒತ್ತಡ ನೀಡ್ತುತದೆ, ಇದು ಪರೋಕ್ಷವಾಗಿ ತಲೆನೋವಿಗೆ ಕಾರಣವಾಗುತ್ತದೆ.

ತಲೆನೋವನ್ನು ಹೆಚ್ಚಿಸುವ ಇವುಗಳಿಂದ ದೂರವಿರಿ
ಇದರ ಹೊರತಾಗಿ ದೊಡ್ಡ ಶಬ್ದ, ಯಾವುದೇ ರೂಪದ ಹೊಗೆ, ಪರಿಮಳ ಬೀರುವ ಕೃತಕ ಸುಗಂಧಗಳು ಮೊದಲಾದವುಗಳಿಂದ ಸಾಧ್ಯವಾದಷ್ಟು ದೂರವಿರಿ. ಅಲ್ಲದೇ ಸಾಕಷ್ಟು ಬೆಚ್ಚಗಿರಬೇಕು, ಏಸಿಯ ತಂಪುಹವೆಯ ಸೇವನೆಯೂ ಮೈಗ್ರೇನ್ ಅನ್ನು ಹೆಚ್ಚಿಸಬಹುದು.



Click it and Unblock the Notifications