ಕರುಳಿನ ಕಲ್ಮಶಗಳನ್ನು ಹೊರ ಹಾಕುವ ಆಯುರ್ವೇದ ಜ್ಯೂಸ್

By: Jaya subramanya
Subscribe to Boldsky

ನಮ್ಮ ಇಂದಿನ ಆಹಾರ ಪದ್ಧತಿ ಎಷ್ಟೊಂದು ಮಾರ್ಪಾಡುಗಳನ್ನು ಪಡೆದುಕೊಂಡಿದೆ ಎಂದರೆ ಹೆಚ್ಚಿನ ಸಮಯಗಳಲ್ಲಿ ನಾವು ವಿಷವನ್ನೇ ತಿಂದು ಬದುಕುತ್ತಿದ್ದೇವೆ ಎಂಬಂತಹ ಆಘಾತಕಾರಿ ವಿಷಯವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ನಾವು ತಿನ್ನುವ ಜಂಕ್ ಆಹಾರ ಪದ್ಧತಿಗಳು ನಮ್ಮ ನಾಲಗೆಗೆ ರುಚಿಯನ್ನು ನೀಡಿದರೂ ದೇಹಕ್ಕೆ ವಿಷವನ್ನೇ ಉಣಿಸುತ್ತಿದೆ. ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಆಹಾರ ತಯಾರಕರಿಗೆ ಲಾಭವಿದ್ದರೂ ನಮಗೆ ವಿನಾಶ ಕಟ್ಟಿಟ್ಟ ಬುತ್ತಿಯಾಗಿದೆ.

ನಮ್ಮ ದೇಹದಲ್ಲಿ ಕರುಳು ಹಾನಿಕಾರಕ ಕಲ್ಮಶಗಳನ್ನು ಹೊರಹಾಕಿ ದೇಹವನ್ನು ಶುದ್ಧೀಕರಿಸುವ ಕ್ರಿಯೆಯನ್ನು ನಡೆಸುತ್ತದೆ. ಇದೇ ಕರುಳಿಗೆ ನಾವು ವಿಷವನ್ನೇ ಉಣಿಸುತ್ತಿದ್ದೇವೆ ಎಂದಾದಾಗ ಶುದ್ಧೀಕರಿಸುವ ಶಕ್ತಿಯನ್ನೇ ಅದು ಕಳೆದುಕೊಳ್ಳುತ್ತದೆ ಮತ್ತು ಹಲವಾರು ರೋಗಗಳಿಗೆ ನಾವು ಒಳಗಾಗುವುದು ಖಚಿತ. ಹಾಗಿದ್ದರೆ ಈಗಾಗಲೇ ನಿಮ್ಮ ಹೊಟ್ಟೆಯಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಬಗೆ ಹೇಗೆ ಎಂಬುದನ್ನು ಕಂಡುಕೊಳ್ಳೋಣ. ಕರುಳಿನ ಕಲ್ಮಶಗಳನ್ನು ಹೊರ ಹಾಕುವ ಅದ್ಭುತ ಮನೆಮದ್ದುಗಳು

ಇದೊಂದು ಆಯುರ್ವೇದಿಕ್ ರೆಸಿಪಿಯಾಗಿದ್ದು ಇದನ್ನು ತಯಾರಿಸಲು ನಿಮಗೆ ಹಚ್ಚಿನ ಸಮಯ ಬೇಕಾಗಿಲ್ಲ. ಸರಳವಾಗಿ ಈ ಔಷಧವನ್ನು ತಯಾರಿಸಿ ಸೇವಿಸಿದರೆ ವಿಷಕಾರಿ ಅಂಶಗಳನ್ನು ಹೊರಹಾಕಬಹುದಾಗಿದೆ. 

Apple vinegar
 

ಸಾಮಾಗ್ರಿಗಳು

*ಸೇಬಿನ ರಸ - 1/4 ಕಪ್

*ಲಿಂಬೆ ರಸ - 1/4 ಕಪ್

*ಉಪ್ಪು - 1/2 ಚಮಚ

ಈ ಮನೆಮದ್ದು ನಿಮ್ಮ ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ತ್ಯಾಜ್ಯ ಹಾಗೂ ವಿಷಕಾರಿ ಅಂಶಗಳನ್ನು ತೊಡೆದು ಹಾಕುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದು ನಿಮಗೆ ಅದ್ಭುತ ಪ್ರಯೋಜನವನ್ನು ನೀಡಲಿದೆ. ಸೇಬಿನ ರಸವು ಉತ್ಕರ್ಷಣ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಕರುಳುಗಳ ಚಲನೆಗಳನ್ನು ನಿರಾಳವಾಗಿಸುತ್ತದೆ ಇದರಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಕವಾಗುತ್ತದೆ. 

salt
 

ಉಪ್ಪು ಮತ್ತು ಲಿಂಬೆಯ ಮಿಶ್ರಣ ಸ್ವಭಾವದಲ್ಲಿ ಆಸಿಡ್ ಅನ್ನು ಪಡೆದುಕೊಂಡಿದ್ದು, ನಿಮ್ಮ ಕರುಳಿನ ಗೋಡೆಗಳಲ್ಲಿರುವ ವಿಷವನ್ನು ನಿವಾರಿಸುತ್ತದೆ.

ಮಾಡುವ ವಿಧಾನ

*ಕಪ್‌ನಲ್ಲಿ ತಿಳಿಸಿರುವ ಸಾಮಾಗ್ರಿಗಳನ್ನು ಅಳತೆಗೆ ಅನುಸಾರವಾಗಿ ಹಾಕಿ.

*ಈ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ

*ನಿಮ್ಮ ಪಾನೀಯ ಸೇವಿಸಲು ಸಿದ್ಧವಾಗಿದೆ 

Lime juice

*ಪ್ರತೀ ಮುಂಜಾನೆ, ಊಟದ ನಂತರ, 2 ತಿಂಗಳಿಗೆ ಈ ಪೇಯವನ್ನು ಸೇವಿಸಿ.

English summary

Ayurvedic Remedy To Remove Toxins From Your Intestines In A Week!

Everything we ingest ultimately reach our intestines so, the stomach can be a storehouse of toxins, especially if you are not eating healthy! It is very important to have clean intestines and your body must flush out the toxins naturally. If you want to attain a clean stomach and you are looking for a hom remedy that can improve the health of your stomach and intestines, then you can go the natural way. Learn how to make this Ayurvedic remedy for a toxin-free intestines, and also see how to flush out the accumulated toxins in the stomach.
Story first published: Wednesday, February 15, 2017, 23:31 [IST]
Please Wait while comments are loading...
Subscribe Newsletter