ಟಾಯ್ಲೆಟ್ ಫ್ಲಶ್‌ ಮಾಡುವ ಮೊದಲು ಇದನ್ನೊಮ್ಮೆ ಓದಿ

By: Lekhaka
Subscribe to Boldsky

ಯಾವುದೇ ಶೌಚಾಲಯಕ್ಕೆ ಹೋದರೂ ಕೆಲವೊಂದು ಸ್ವಚ್ಛತಾ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕಾಗುತ್ತದೆ. ಯಾಕೆಂದರೆ ಶೌಚಾಲಯದಲ್ಲಿ ಇರುವಷ್ಟು ಕೀಟಾಗಳು ಮತ್ತು ಬ್ಯಾಕ್ಟೀರಿಯಾಗಳು ಬೇರೆ ಯಾವುದೇ ಸ್ಥಳದಲ್ಲೂ ಇರಲ್ಲ. ನಿಮ್ಮ ಶೌಚ ಕಾರ್ಯ ಮುಗಿಸಿದ ಬಳಿಕ ನೀವು ಫ್ಲಶ್ ಮಾಡುವ ಮೊದಲು ಟಾಯ್ಲೆಟ್ ಮುಚ್ಚಳ ಹಾಕಿಕೊಳ್ಳಬೇಕು.

ಫ್ಲಶ್ ಮಾಡುವ ವೇಳೆ ಟಾಯ್ಲೆಟ್ ಪ್ಲಮ್ ಎನ್ನುವ ವಿದ್ಯಮಾನವು ನಡೆಯುವುದು. ಇದರಿಂದ ನೀವು ಫ್ಲಶ್ ಮಾಡುವಾಗ ನೀರು ಕಲ್ಮಶ ತೆಗೆಯಲು ಅತಿಯಾದ ವೇಗದಲ್ಲಿ ಬರುವುದು. ಇದರಿಂದ ನೀರು ಸುಮಾರು 15 ಅಡಿ ತನಕ ಮೇಲಕ್ಕೆ ಜಿಗಿಯಬಹುದು. ಶೌಚಾಲಯವನ್ನು ಪದೇ ಪದೇ ಬಳಸುತ್ತಾ ಇದ್ದರೆ ನೀವು ಫ್ಲಶ್ ಮಾಡಿಕೊಳ್ಳುವ ಮೊದಲು ಅದರ ಮುಚ್ಚಲ ಹಾಕುವುದು ತುಂಬಾ ಒಳ್ಳೆಯದು. 

Toilet Room

ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಶೌಚಾಲಯದಲ್ಲಿ ನೀವು ಹಾಕಿರುವುದು ನೀವು ಬಳಸಿದ ಬಳಿಕವೂ ತುಂಬಾ ದೀರ್ಘ ಕಾಲದ ತನಕ ಉಳಿದುಕೊಳ್ಳುವುದು ಎಂದು ಜರ್ನಲ್ ಅಪ್ಲೈಡ್ ಮೈಕ್ರೋಬಯೋಲಾಜಿಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯು ಹೇಳಿದೆ. ಶೌಚಾಲಯದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್ ತಗುಲಿದ ಬಳಿಕ ನೆಲ, ಸಿಂಕ್ ಮತ್ತು ನೀವು ಅಲ್ಲಿಟ್ಟಿರುವ ಹಲ್ಲುಜ್ಜುವ ಬ್ರಶ್ ನಲ್ಲೂ ಸೂಕ್ಷ್ಮಾಣು ಜೀವಿಗಳು ನೆಲೆನಿಲ್ಲಲು ಶೌಚಾಲಯವು ನೆರವಾಗುವುದು. 

ಹಲವಾರು ಸಲ ಫ್ಲಶ್ ಮಾಡಿದ ಬಳಿಕವೂ ಶೌಚಾಲಯದ ಬೌಲ್ ರೀತಿಯಲ್ಲಿರುವ ಮೇಲ್ಭಾಗದಲ್ಲಿ ಈ ಸೂಕ್ಷ್ಮಾಣುಗಳು ಹಾಗೆ ಉಳಿದುಕೊಳ್ಳುವುದು. ಕೆಲವು ಸಲ ಫ್ಲಶ್ ಮಾಡಿದಾಗ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಆದರೆ ಸಂಪೂರ್ಣವಾಗಿ ತೊಳೆಯುವ ತನಕ ಅದು ಹಾಗೆ ಉಳಿದುಕೊಂಡಿತ್ತು ಎಂದು ಅಧ್ಯಯನಗಳು ಹೇಳಿವೆ. 

Flush

ಬ್ಯಾಕ್ಟೀರಿಯಾಗಳಾದ ಸಾಲ್ಮೊನೆಲ್ಲಾ ಮತ್ತು ಶಿಗೆಲ್ಲಾ, ವೈರಸ್ ಗಳಾದ ನೊರೊವೈರಸ್ ಮತ್ತು ಹೆಪಟೈಟೀಸ್ ಎ ಹಲವಾರು ವಿಧಗಳಿಗೆ ಬಾಯಿಯೊಳಗೆ ಪ್ರವೇಶಿಸುವ ಸಾಧ್ಯತೆಯು ಹೆಚ್ಚಾಗಿದೆ. ಇದರಿಂದ ಬಾಯಿಗೆ ಬಳಸುವ ವಸ್ತುಗಳನ್ನು ನೀವು ಆದಷ್ಟು ಮಟ್ಟಿಗೆ ಶೌಚಾಲಯದ ಹೊರಗಡೆ ಇಟ್ಟರೆ ತುಂಬಾ ಒಳ್ಳೆಯದು.

ಯಾವುದೇ ಶೌಚಾಲಯದಲ್ಲಿ ಪ್ಲಮ್ ವಿದ್ಯಮಾನ ತಡೆಯಲು ಸರಿಯಾದ ಸ್ವಚ್ಛತೆ ಅತೀ ಅಗತ್ಯ. ಶೌಚಾಲಯ ತೊಳೆಯುವ ಮೊದಲು ಕೈ ಸರಿಯಾಗಿ ತೊಳೆಯಿರಿ. ಜಠರಗರುಳಿನ ವೈರಸ್ ಗಳು, ಎರೆಟಿಕ್ ರೋಗಕಾರಕಗಳು, ಚರ್ಮ ಜೀವಿಗಳು, ಉಸಿರಾಟದ ವೈರಸ್ ಗಳು, ಉಳಿದ ಶಿಲೀಂಧ್ರಗಳು ಇತ್ಯಾದಿಗಳು ಶೌಚಾಲಯದಲ್ಲಿ ತಮ್ಮ ಸಂತಾನ ಬೆಳೆಸುವಂತಹ ಅತ್ಯಂತ ಅಪಾಯಕಾರಿ ಕೀಟಾಣುಗಳು. ಶೌಚಾಲಯವನ್ನು ಒಳ್ಳೆಯ ರೀತಿ ಸ್ವಚ್ಛವಾಗಿಡುವುದು ಮತ್ತು ಇದರ ಕಡೆ ಗಮನಹರಿಸುವ ಮೂಲಕ ಇಂತಹ ಮಾರಕ ಕೀಟಾಣುಗಳನ್ನು ತಡೆಯಬಹುದು.

ಇವುಗಳನ್ನು ಹೊರತುಪಡಿಸಿ ಶೌಚಾಲಯದಲ್ಲಿ ಈಕೋಲಿ, ಸ್ಯೂಡೋಮೊನಸ್ ಏರುಜಿನೋಸಾ, ಸ್ಟ್ಯಾಫಿಲೋಕೊಕಸ್ ಔರೆಸ್, ಸಾಲ್ಮೊನೆಲ್ಲಾ, ಎಂಟರ್ಬಾಬ್ಯಾಕ್ಟರ್ ಇತ್ಯಾದಿ ಬ್ಯಾಕ್ಟೀರಿಯಾಗಳು ಕಂಡುಬರುವುದು. ಸಾರ್ವಜನಿಕ ಶೌಚಾಲಯಗಳನ್ನು ಬಳಸುವಾಗ ನಿಮಗಾಗಿ ಕೆಲವೊಂದು ಸಲಹೆಗಲನ್ನು ನಾವು ನೀಡುತ್ತಾ ಇದ್ದೇವೆ. ಖಾಲಿ ಕೈಯಲ್ಲಿ ಶೌಚಾಲಯದ ಬಾಗಿಲಿನ ಹಿಡಿ ಮುಟ್ಟಬೇಡಿ. ಇದರಲ್ಲಿ ಹೆಚ್ಚಿನ ಮಟ್ಟದ ಕೀಟಾಣುಗಳಿರುವುದು ಮತ್ತು ಸೋಂಕು ಬರಬಹುದು. ಬಾಗಿಲಿನ ಹಿಡಿಯನ್ನು ಹಿಡಿಯುವಾಗ ಟಿಶ್ಯೂ ತೆಗೆದುಕೊಳ್ಳಿ.

Toilet room

ನೀವು ಸಾರ್ವಜನಿಕ ಶೌಚಾಲಯ ಬಳಸುವಾಗ ನಿಮ್ಮ ಸಾಮಾನುಗಳ ಬಗ್ಗೆ ಗಮನಹರಿಸಿ. ಕೈ ಸ್ವಚ್ಛವಾದರೂ ಕೀಟಾಣುಗಳು ಬ್ಯಾಗ್ ಮತ್ತು ಫೋನ್ ಗೆ ಪ್ರವೇಶಿಸಬಹುದು. ನೀವು ಫ್ಲಶ್ ಮಾಡಿದ ಕೂಡಲೇ ಶೌಚಾಲಯದಿಂದ ಹೊರಬನ್ನಿ. ಗಾಳಿಯಲ್ಲಿ ಓಡಾಡುವಂತಹ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುವುದು. ಶೌಚಾಲಯದ ಒಳಗೆ ಇರುವ ಹ್ಯಾಂಡ್ ಡ್ರೈಯರ್ ಬಳಸಬೇಡಿ. ಇದರಿಂದ ಸುತ್ತಲಿನ ಕೀಟಾಣುಗಳು ನಿಮ್ಮ ಮೇಲೆ ಬರುವ ಸಾಧ್ಯತೆಯಿದೆ. ಕೈಗಳನ್ನು ಸರಿಯಾಗಿ ತೊಳೆದುಕೊಂಡ ಬಳಿಕ ಟಿಶ್ಯೂನಿಂದ ಸರಿಯಾಗಿ ತೊಳೆಯಬೇಕು.

ಮನೆಯ ಶೌಚಾಲಯದ ಸ್ವಚ್ಛತೆ ಹತ್ತು ಮಂದಿ ಮೆಚ್ಚುವಂತಿರಲಿ!

ಪಾಶ್ಚಿಮಾತ್ಯ ಶೈಲಿಯ ಶೌಚಾಲಯಕ್ಕೆ ಬದಲಿಗೆ ಭಾರತೀಯ ಶೈಲಿಯ ಶೌಚಾಲಯ ಬಳಸಿ. ಇದರಿಂದ ನೀವು ನೇರವಾಗಿ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಸಂಪರ್ಕ ಸಾಧಿಸುವುದು ಕಡಿಮೆಯಾಗುವುದು. ಭಾರತೀಯ ಶೈಲಿಯ ಶೌಚಾಲಯ ಸಿಗದೆ ಇದ್ದರೆ ತಾಗದಂತೆ ಕುಳಿತುಕೊಳ್ಳಲು ಪ್ರಯತ್ನಿಸಿ. ಹ್ಯಾಂಡ್ ಸ್ಯಾನಿಟರಿ ಬಳಸಿಕೊಂಡರೆ ತುಂಬಾ ಒಳ್ಳೆಯದು.

English summary

Are You Flushing Your Toilet With The Lid Open?

After you are done with your toilet, you really should put your toilet seat down before flushing. The main reason why you should put the toilet lid down before flushing it is due to the phenomenon known as 'toilet plume'. When you flush a toilet, the water that swirls at high speed to remove the waste from the bowl shoots aerosolized faeces into the air. These aerosol plumes can reach as high as 15 feet.
Subscribe Newsletter