Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಕಾಫಿ ಪ್ರಿಯರೇ- ನಿಮ್ಮ ಕಾಫಿ ಸೇವನೆಯ ಸಮಯ ತಪ್ಪಾಗಿಲ್ಲ ತಾನೇ?
ದಕ್ಷಿಣ ಭಾರತದ ಜನರ ಬೆಳಗ್ಗಿನ ಪ್ರಥಮ ಪೇಯವೆಂದರೆ ಬಿಸಿಬಿಸಿ ಕಾಫಿ. ನಾವೆಲ್ಲರೂ ತಿಳಿದಂತೆ ಕಾಫಿಯಲ್ಲಿ ಕೆಫೀನ್ ಎಂಬ ಪದಾರ್ಥವಿದೆ. ಇದರ ಸೇವನೆಯಿಂದ ಮೆದುಳಿಗೆ ಮುದ ಸಿಗುತ್ತದೆ ಹಾಗೂ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ಉತ್ಸಾಹ ಮೂಡುತ್ತದೆ.
ಆದರೆ ಬೆಳ್ಳಂಬೆಳಿಗ್ಗೆ ಕೆಫೀನ್ ರಕ್ತಕ್ಕೆ ಸೇರಿಸುವುದು ಸರಿಯೇ? ಏಕೆಂದರೆ ಸರಿಯಾದ ಕ್ರಮದಲ್ಲಿ ಕಾಫಿ ಸೇವಿಸದೇ ಇದ್ದರೆ ಅನಗತ್ಯವಾದ ಹೊತ್ತಿನಲ್ಲಿ ರಕ್ತದಲ್ಲಿ ಸೇರುವ ಕೆಫೀನ್ ಕೆಲವೊಮ್ಮೆ ಥಟ್ಟನೇ ನಿತ್ರಾಣತೆ, ನಿದ್ರಾಹೀನತೆ, ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಹಾಗಾದರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ನೋಡೋಣ.....

ವಾಸ್ತವಾಂಶ #1
ದಿನದ ಪ್ರಥಮ ಪೇಯವಾಗಿ ಕಾಫಿ ಕುಡಿದರೆ ಏನಾಗುತ್ತದೆ? ನಮ್ಮ ಮೆದುಳಿಗೆ ತಲುಪುವ ಕಾರ್ಟಿಸೋಲ್ ಎಂಬ ರಸದೂತ ಮಾನಸಿಕ ಒತ್ತಡಕ್ಕೆ ನೇರವಾಗಿ ಕಾರಣವಾಗಿದೆ. ಇದರ ಪ್ರಭಾವ ಬೆಳಿಗ್ಗೆ ಎಂಟರಿಂದ ಒಂಬತ್ತು ಗಂಟೆಯ ನಡುವೆ ಅತಿ ಹೆಚ್ಚಾಗಿರುತ್ತದೆ. ಈ ಪ್ರಕ್ರಿಯೆ ರಾತ್ರಿಪಾಳಿಯ ಕೆಲಸಗಾರರನ್ನು ಹೊರತುಪಡಿಸಿ ಇತರರಲ್ಲಿ ಬಹುತೇಕ ಇದೇ ಸಮಯದಲ್ಲಿ ಆಗುತ್ತದೆ. ಈ ಹೊತ್ತಿನಲ್ಲಿ ಕಾಫಿ ಕುಡಿದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು!
ಫಿಲ್ಟರ್ ಕಾಫಿ-ರುಚಿಕರವೇನೋ ಹೌದು, ಆದರೆ ಆದಷ್ಟು ಕಡಿಮೆ ಸೇವಿಸಿ!

ವಾಸ್ತವಾಂಶ #2
ಬೆಳಿಗ್ಗೆ ಎಂಟರಿಂದ ಒಂಭತ್ತರ ನಡುವೆ ಕಾರ್ಟಿಸೋಲ್ ಪ್ರಮಾಣ ಹೇಗಿದ್ದರೂ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಸೇವನೆಯಿಂದ ರಕ್ತಕ್ಕೆ ಧಾವಿಸುವ ಕೆಫೀನ್ ಇನ್ನಷ್ಟು ಹೆಚ್ಚು ಕಾರ್ಟಿಸೋಲ್ ಸ್ರವಿಸಲು ಪ್ರಚೋದಿಸುವ ಕಾರಣ ಒತ್ತಡ ಇನ್ನಷ್ಟು ಹೆಚ್ಚಿ ಮಾನಸಿಕ ಕ್ಷೋಭೆ, ತಲ್ಲಣ, ಚಡಪಡಿಕೆ ಇತ್ಯಾದಿಗಳು ಹೆಚ್ಚುತ್ತವೆ. ಹಾಗಾಗಿ ಈ ಸಮಯದಲ್ಲಿ ಕಾಫಿ ಸೇವಿಸದಿರುವುದೇ ಸರಿಯಾದ ನಿರ್ಧಾರವಾಗಿದೆ.
ಟೀ, ಕಾಫಿ ಕುಡಿಯುವ ಮುಂಚೆ, ಒಂದು ಗ್ಲಾಸ್ ನೀರು ಕುಡಿಯಿರಿ!
ವಾಸ್ತವಾಂಶ #3
ಕಾಫಿ ಸೇವನೆಯ ಇನ್ನೊಂದು ತೊಂದರೆ ಎಂದರೆ ದೇಹ ಕೆಫೀನ್ ಅನ್ನು ತಾಳಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು. ಅಂದರೆ ಪ್ರಾರಂಭದಲ್ಲಿ ದಿನಕ್ಕೆ ಒಂದು ಕಪ್ ಕುಡಿದರೂ ಸಾಕಾಗುತ್ತಿದ್ದರೆ ದಿನಗಳೆದಂತೆ ಇದು ಹೆಚ್ಚುತ್ತಾ ವರ್ಷಗಳ ಬಳಿಕ ದಿನಕ್ಕೆ ಹಲವಾರು ಕಪ್ ಗಳು ಕುಡಿದರೂ ಸಾಕಾಗುತ್ತಿಲ್ಲವೆನ್ನುವಂತಾಗುತ್ತದೆ. ಅಂದರೆ ಇದು ನೇರವಾಗಿ ಕಾಫಿಯ ವ್ಯಸನಕ್ಕೆ ಕಾರಣವಾಗುತ್ತದೆ.

ವಾಸ್ತವಾಂಶ #4
ಒಂದು ವೇಳೆ ನಿಮಗೆ ಕಾಫಿಯ ಹೊರತಾಗಿ ಜೀವನವೇ ಸಾಗದು ಎನ್ನುವಷ್ಟು ಈಗಾಗಲೇ ವ್ಯಸನಿಗಳಾಗಿದ್ದರೆ ನಿಮಗೆ ಕಾಫಿ ಕುಡಿಯಲು ಸರಿಯಾದ ಸಮಯವೆಂದರೆ ಬೆಳಿಗ್ಗೆ ಹತ್ತರಿಂದ ಹನ್ನೊಂದುವರೆಯವರೆಗೆ ಮಾತ್ರ. ಈ ಅವಧಿಯಲ್ಲಿ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಕನಿಷ್ಟಕ್ಕಿಳಿಯುವುದರಿಂದ ಕಾಫಿಯ ಸೇವನೆಯಿಂದ ಕನಿಷ್ಟ ಪ್ರಭಾವವನ್ನು ನಿರೀಕ್ಷಿಸಬಹುದು.

ವಾಸ್ತವಾಂಶ #5
ಆದರೆ ಕಾರ್ಟಿಸೋಲ್ ಪುನಃ ನಡುಮದ್ಯಾಹ್ನ ಹನ್ನೆರಡರಿಂದ ಒಂದು ಘಂಟೆಯವರೆಗೆ ಮತ್ತೆ ತನ್ನ ಸ್ರವಿಕೆಯ ಪರಾಕಾಷ್ಠೆಯನ್ನು ತಲುಪುವುದರಿಂದ ಈ ಸಮಯದಲ್ಲಿ ಕಾಫಿಯನ್ನು ಸರ್ವಥಾ ಸೇವಿಸಕೂಡದು.

ವಾಸ್ತವಾಂಶ #6
ಮಧ್ಯಾಹ್ನ ಒಂದು ಘಂಟೆಯ ಬಳಿಕ ಕಾರ್ಟಿಸೋಲ್ ಪ್ರಮಾಣ ಕಡಿಮೆಯಾಗತೊಡಗುತ್ತದೆ. ಹಾಗೂ ಸಂಜೆ ಐದರವರೆಗೂ ಕಡಿಮೆಯಾಗಿಯೇ ಇರುತ್ತದೆ. ಹಾಗಾಗಿ ಒಂದು ವೇಳೆ ಮಧ್ಯಾಹ್ನದ ಊಟದ ಪ್ರಭಾವದಿಂದ ನಿದ್ದೆ ಆವರಿಸುತ್ತಿದ್ದು ಶಕ್ತಿ ಉಡುಗಿದಂತೆ ಅನ್ನಿಸುತ್ತಿದ್ದರೆ ಮಾತ್ರ ಈ ಅವಧಿಯಲ್ಲಿ ಕೇವಲ ಒಂದು ಕಪ್ ಮಾತ್ರ ಕಾಫಿ ಕುಡಿಯಬಹುದು. ಇದು ಚೈತನ್ಯ ಮೂಡಿಸಲು ನೆರವಾಗುತ್ತದೆ.

ವಾಸ್ತವಾಂಶ #7
ಎಂದಿಗೂ ಊಟಕ್ಕೂ ಮೊದಲು ಅಥವಾ ಊಟವಾದ ತಕ್ಷಣ ಕಾಫಿ ಕುಡಿಯಕೂಡದು. ಏಕೆಂದರೆ ಇದರಿಂದ ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಜೀರ್ಣಾಂಗಗಳು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಕುಡಿಯಲೇಬೇಕೆಂದಿದ್ದರೆ ಊಟ ಮತ್ತು ಕಾಫಿಯ ನಡುವೆ ಕನಿಷ್ಠ ಒಂದು ಗಂಟೆಯಾದರೂ ಅಂತರವಿರಬೇಕು. ಅದರಲ್ಲೂ ವಿಶೇಷವಾಗಿ ಹಾಲು ಸಕ್ಕರೆ ಕಾಫಿಯ ಸೇವನೆಯಾಗಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅದರಲ್ಲೂ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ವಿಷಯದಲ್ಲಿ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ವಾಸ್ತವಾಂಶ #8
ಅಲ್ಲದೇ ಸಂಜೆಯ ಬಳಿಕ ಕಾಫಿಯ ಸೇವನೆ ಸಲ್ಲದು. ಏಕೆಂದರೆ ಇದರಿಂದ ನಿಮ್ಮ ನಿದ್ದೆಯ ಗುಣಮಟ್ಟ ಕೆಡುತ್ತದೆ. ಅಂದರೆ ನಿದ್ದೆ ತಡೆತಡೆದು ಬರುತ್ತಾ, ನಡುನಡುವೆ ಎಚ್ಚರಾಗುತ್ತಾ, ಎಚ್ಚರಾದ ಬಳಿಕ ಬಹಳ ಹೊತ್ತಿನವರೆಗೆ ನಿದ್ದೆ ಬರದೇ ಮಾನಸಿಕವಾಗಿಯೂ ದೈಹಿಕವಾಗಿಯೂ ಮರುದಿನ ಬಳಲುವಂತಾಗುತ್ತದೆ.



Click it and Unblock the Notifications