ಫಿಲ್ಟರ್ ಕಾಫಿ-ರುಚಿಕರವೇನೋ ಹೌದು, ಆದರೆ ಆದಷ್ಟು ಕಡಿಮೆ ಸೇವಿಸಿ!

By: manu
Subscribe to Boldsky

ಬೆಳಿಗ್ಗೆದ್ದ ಬಳಿಕ ಒಂದು ಕಪ್ ಬಿಸಿ ಕಾಫಿ ನೀಡುವ ಮುದವನ್ನು ಬೇರಾವ ಪೇಯವೂ ನೀಡಲಾರದು. ಆದರೆ ಇದರ ಹಿಂದೆ ಕೆಫೀನ್ ಎಂಬ ಪದಾರ್ಥದ ಅಮಲೂ ಇದೆ ಎಂಬುದು ಕೊಂಚ ವಿಷಾದಕರ ಅಂಶವಾಗಿದೆ. ವಾಸ್ತವವಾಗಿ ಕೆಫೀನ್ ಎಂಬುದು ಮೆದುಳಿಗೆ ಮುದನೀಡುವ ಒಂದು ರಾಸಾಯನಿಕವಾಗಿದ್ದು ಇದರ ಸೇವನೆ ಸತತವಾಗಿದ್ದಂತೆ ನಾವು ಇದಕ್ಕೆ ವ್ಯಸನಿಗಳಾಗಿಬಿಡುತ್ತೇವೆ.

ಒಂದು ವೇಳೆ ಕೆಫೀನ್ ಸೇವನೆಯ ಪರಿಣಾಮದಿಂದ ತಲೆನೋವು, ನಿದ್ದೆ ಇಲ್ಲದಿರುವುದು, ತಳಮಳ ಹೆಚ್ಚುವುದು, ಮೂತ್ರದ ಪ್ರಮಾಣ ಹೆಚ್ಚುವುದು ಮಾತ್ರವೇ ಅಡ್ಡಪರಿಣಾಮಗಳಾಗಿವೆ ಎಂದು ನಾವು ತಿಳಿದುಕೊಂಡಿದ್ದರೆ ನಮಗೆಲ್ಲಾ ಆಘಾತಕಾರಿ ವಾಸ್ತವಾಂಶ ಕಾದಿದೆ. ಏಕೆಂದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಕೆಫೀನ್ ನ ವ್ಯಸನ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು 15%ರಷ್ಟು ಹೆಚ್ಚಿಸುತ್ತದೆ.

ಬ್ಯೂಟಿ ಟಿಪ್ಸ್: ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್'!

ಅಷ್ಟೇ ಅಲ್ಲ, ಈಗಾಗಲೇ ದೇಹದೊಳಗೆ ಸಂಗ್ರಹವಾಗಿದ್ದ ಕೊಲೆಸ್ಟ್ರಾಲ್ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ರಕ್ತದಲ್ಲಿನ homocysteine ಎಂಬ ಕಣಗಳ ಪ್ರಮಾಣವನ್ನು ಹೆಚ್ಚಿಸಲೂ ಕಾರಣವಾಗುತ್ತವೆ. ಇವು ಪರೋಕ್ಷವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ನಾವು ಕುಡಿಯುವುದು ಫಿಲ್ಟರ್ ಕಾಫಿ, ಅದರಲ್ಲೇನೋ ಅಪಾಯವಿಲ್ಲವಲ್ಲ ಎನ್ನುವವರನ್ನೂ ಈ ತೊಂದರೆ ಬಾಧಿಸದೇ ಇರದು. ಬನ್ನಿ, ತಜ್ಞರು ಈ ಬಗ್ಗೆ ಏನೆನ್ನುತ್ತಾರೆ ಎಂಬುದನ್ನು ನೋಡೋಣ....

ವಾಸ್ತವಾಂಶ #1

ವಾಸ್ತವಾಂಶ #1

ಕಾಫಿಯಲ್ಲಿ ಟರ್ಪೆನಾಯ್ಡುಗಳೆಂಬ ಪೋಷಕಾಂಶಗಳೀವೆ. ಈ ಕಣಗಳು ಕಾಫಿಯನ್ನು ಫಿಲ್ಟರ್ ಮಾಡಿದ ಬಳಿಕವೂ ಕಾಫಿಯಲ್ಲಿಯೇ ಉಳಿದುಕೊಳ್ಳುತ್ತವೆ. ಈ ಪೋಷಕಾಂಶವೇ ಹೃದಯಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುವ ಖಳನಾಯಕನಾಗಿದ್ದು ಎಷ್ಟು ಬಾರಿ ಫಿಲ್ಟರ್ ಮಾಡಿದರೂ ಇವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವೇ ಇಲ್ಲ.

ವಾಸ್ತವಾಂಶ #2

ವಾಸ್ತವಾಂಶ #2

ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಯಾರ ದೇಹದಲ್ಲಿ ಈಗಾಗಲೇ ಕೊಲೆಸ್ಟ್ರಾಲ್ ಹೆಚ್ಚು ಪ್ರಮಾಣದಲ್ಲಿದ್ದು ಇದನ್ನು ಕಡಿಮೆ ಮಾಡಬಯಸುತ್ತಾರೋ, ಅವರು ಅನಿವಾರ್ಯವಾಗಿ ಕಾಫಿಯನ್ನು ತ್ಯಜಿಸುವುದೇ ಉತ್ತಮ. ಈ ಮೂಲಕ ರಕ್ತದಲ್ಲಿ homocysteine ಮತ್ತು ಕೊಲೆಸ್ಟ್ರಾಲ್ ಎರಡನ್ನೂ ಹೆಚ್ಚುವರಿಯಾಗಿ ಸೇವಿಸದೇ, ಇರುವ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ವಾಸ್ತವಾಂಶ #3

ವಾಸ್ತವಾಂಶ #3

ಒಂದು ವೇಳೆ ಊಟದ ಬಳಿಕ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಇದು ನಿಮ್ಮ ಊಟದಿಂದ ಖನಿಜಗಳನ್ನು ಮತ್ತು ವಿಟಮಿನ್ನುಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಅಲ್ಲದೇ ಒಂದು ವೇಳೆ ಈಗಾಗಲೇ ನಿಮ್ಮ ದೇಹದಲ್ಲಿ ಕೆಲವಾರು ಖನಿಜ ಮತ್ತು ಪೋಷಕಾಂಶಗಳ ಕೊರತೆ ಇದ್ದರೆ ಕಾಫಿಗೆ ವಿದಾಯ ಹೇಳುವುದೇ ಒಳ್ಳೆಯದು.

ಟೀ ಕಾಫಿ ಸೇವನೆ ಅತಿಯಾದರೆ, ಅಪಾಯ ಬೆನ್ನೇರಿ ಕಾಡಲಿದೆ!

ವಾಸ್ತವಾಂಶ #4

ವಾಸ್ತವಾಂಶ #4

ಕೆಫೀನ್‍ನ ಇನ್ನೊಂದು ಅಡ್ಡಪರಿಣಾಮವೆಂದರೆ ಆಹಾರದ(ವಿಶೇಷವಾಗಿ ಹಾಲು) ಮೂಲಕ ಲಭ್ಯವಾದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳದಂತೆ ಮಾಡುವುದು. ಇದರ ಪರಿಣಾಮವಾಗಿ ಅಗತ್ಯವಾಗಿದ್ದ ಕ್ಯಾಲ್ಸಿಯಂ ಮೂತ್ರದ ಮೂಲಕ ವ್ಯರ್ಥವಾಗಿ ಹರಿದುಹೋಗುತ್ತದೆ. ಆದ್ದರಿಂದ ತಜ್ಞರು ಕ್ಯಾಲ್ಸಿಯಂ ಇರುವ ಆಹಾರದ ಸೇವನೆಯ ಬಳಿಕ ಕಾಫಿ ಕುಡಿಯದಂತೆ ಸಲಹೆ ಮಾಡುತ್ತಾರೆ ಹಾಗೂ ಕಾಫಿಯ ಸೇವನೆಯನ್ನು ಉಳಿದ ಹೊತ್ತಿನಲ್ಲಿ ಅತಿ ಕಡಿಮೆ ಮಾಡಲು ಸೂಚಿಸುತ್ತಾರೆ.

ವಾಸ್ತವಾಂಶ #5

ವಾಸ್ತವಾಂಶ #5

ಫಿಲ್ಟರ್ ಕಾಫಿಯ ಸಹಿತ ಯಾವುದೇ ಕಾಫಿಯ ಸೇವನೆಯ ಪರಿಣಾಮವಾಗಿ ದೇಹ ಆಹಾರದ ಮೂಲಕ ಲಭ್ಯವಾಗುವ ಸತುವನ್ನು ಹೀರಿಕೊಳ್ಳುವ ಗತಿ ನಿಧಾನವಾಗುತ್ತದೆ. ಈ ಅಂಶ ಹೆಚ್ಚಾಗಿರುವ ಒಣಫಲಗಳು, ಬೀನ್ಸ್, ಕೋಳಿಮಾಂಸ, ಮೊಟ್ಟೆ, ಕೆಂಪು ಮಾಂಸ ಅಥವಾ ಚಿಪ್ಪುಗಳನ್ನು ಮಧ್ಯಾಹ್ನದ ಊಟದಲ್ಲಿ ಸೇವಿಸಿದ್ದರೆ ಊಟದ ಕೆಲವು ಗಂಟೆಗಳ ಅವಧಿಯಲ್ಲಿ ಕಾಫಿ ಕುಡಿಯಬಾರದು. ಕುಡಿದರೆ ಈ ಆಹಾರದ ಮೂಲಕ ಲಭ್ಯವಗಿದ್ದ ಸತು ವಿಸರ್ಜನೆಗೊಳ್ಳುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಕಾಫಿಯ ಪ್ರಮಾಣ ಹೆಚ್ಚಾದಷ್ಟೂ ವಿಟಮಿನ್ ಡಿ ಯನ್ನು ಹೀರಿಕೊಳ್ಳಲು ದೇಹ ಅಸಮರ್ಥವಾಗುತ್ತದೆ ಎಂದು ಒಂದು ಸಂಶೋಧನೆಯ ಮೂಲಕ ವಿವರಿಸಲಾಗಿದ್ದರೂ ಇದನ್ನು ಸಂಪೂರ್ಣವಾಗಿ ಸತ್ಯವೆಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೂ, ಈ ವಿಷಯವನ್ನು ಅಲಕ್ಷಿಸುವಂತಿಲ್ಲ. ಏಕೆಂದರೆ ಕಾಫಿ ಹೆಚ್ಚು ಹೆಚ್ಚು ಕುಡಿಯುವುದರಿಂದ ಮೂತ್ರದ ಪ್ರಮಾಣವೂ ಹೆಚ್ಚಾಗಿ ವಿಟಮಿನ್ ಬಿ ಸಹಾ ವಿಸರ್ಜನೆಗೊಳ್ಳುತ್ತದೆ.

ವಾಸ್ತವಾಂಶ #7

ವಾಸ್ತವಾಂಶ #7

ಕಾಫಿಯ ಸೇವನೆಯಿಂದ ಕಬ್ಬಿಣದ ಹೀರಿಕೊಳ್ಳುವಿಕೆಯೂ ಬಾಧೆಗೊಳಗಾಗುತ್ತದೆ. ಆದ್ದರಿಂದ ಕಾಫಿ ಕುಡಿಯುವುದಿದ್ದರೆ ಕಡ್ಲೆಕಾಳು, ಬೇಳೆಗಳು, ಒಣಫಲಗಳು, ಬಟಾಣಿ, ಬಸಲೆಸೊಪ್ಪು ಮೊದಲಾದವುಗಳನ್ನು ಸೇವಿಸಬೇಡಿ. ಅಥವಾ ಇವುಗಳ ಸೇವನೆಯ ಬಳಿಕ ಕೆಫೀನ್ ಬೇಡವೇ ಬೇಡ.

ಕಾಫಿ-ಟೀ ಬದಲು, ಒಂದು ಗ್ಲಾಸ್ ಲಿಂಬೆ ಜ್ಯೂಸ್ ಕುಡಿಯಿರಿ!

English summary

What are the side effects Filter Coffee

Nothing can stimulate your senses better than a cup of coffee in the morning. But sadly, caffeine is among one of the most overused stimulants. In fact, we are addicted to caffeine. If you have thought that the only side effects of caffeine are headaches, insomnia, jitters and diuresis, then you need to know something else too. A study says that it can raise the risk of cardiovascular diseases by 15%.
Subscribe Newsletter