Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಟೀ, ಕಾಫಿ ಕುಡಿಯುವ ಮುಂಚೆ, ಒಂದು ಗ್ಲಾಸ್ ನೀರು ಕುಡಿಯಿರಿ!
ಮುಂಜಾನೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕೇವಲ ತಣ್ಣೀರು ಕುಡಿಯುವುದು ಅತ್ಯಂತ ಆರೋಗ್ಯಕರ. ಕೊಂಚ ಹೊತ್ತಿನ ಬಳಿಕ ಅಂದರೆ ಸುಮಾರು ಮುಕ್ಕಾಲು ಗಂಟೆಯ ಬಳಿಕ ಟೀ ಕಾಫಿ ಸೇವಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ನಾವು ಭಾರತೀಯರು, ನಮ್ಮ ದಿನದ ಪ್ರಾರಂಭವನ್ನು ಟೀ ಅಥವಾ ಕಾಫಿ ಸೇವಿಸುವ ಮೂಲಕ ಪ್ರಾರಂಭಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಬ್ರಿಟಿಷರು ನಮಗೆ ಕಲಿಸಿ ಬಿಟ್ಟು ಹೋದ ಅಭ್ಯಾಸಗಳಲ್ಲಿ ಇದೂ ಒಂದು. ಇದರಿಂದ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಇದರ ಆರಾಧಕರು ನಂಬಿದ್ದಾರೆ.
ವಾಸ್ತವವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಈ ವಿಷಯದ ಮೇಲೆ ತಜ್ಞರು ಕಂಡುಕೊಂಡಂತೆ ಏನು ಕಾರಣ ಎಂಬುದನ್ನು ಇಂದು ವಿವರಿಸಲಾಗಿದೆ. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!
ಮುಂಜಾನೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕೇವಲ ತಣ್ಣೀರು ಕುಡಿಯುವುದು ಅತ್ಯಂತ ಆರೋಗ್ಯಕರ. ಕೊಂಚ ಹೊತ್ತಿನ ಬಳಿಕ ಅಂದರೆ ಸುಮಾರು ಮುಕ್ಕಾಲು ಗಂಟೆಯ ಬಳಿಕ ಟೀ ಕಾಫಿ ಸೇವಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬೆಳಿಗ್ಗೆ ಮಾತ್ರವಲ್ಲ, ಮಧ್ಯಾಹ್ನ ಅಥವಾ ಸಂಜೆ, ಅಂದರೆ ಊಟದ ಸುಮಾರು ಮೂರು ಗಂಟೆಗಳ ಬಳಿಕ ಹೊಟ್ಟೆ ಖಾಲಿಯಿದ್ದಾಗಲೂ ಟೀ ಕಾಫಿ ನೇರವಾಗಿ ಸೇವಿಸದೇ ಮೊದಲು ಒಂದು ಲೋಟ ನೀರು ಕುಡಿದ ಬಳಿಕ ಟೀ ಕಾಫಿ ಸೇವಿಸಬಹುದು.....

ಕಾಫಿ ಟೀ ಸೇವನೆಗೆ ಮುನ್ನ ನೀರನ್ನೇಕೆ ಕುಡಿಯಬೇಕು?
ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಹೊಟ್ಟೆಯಲ್ಲಿರುವ ಜೀರ್ಣರಸಗಳು ಆಮ್ಲೀಯವಾಗಿದ್ದು ಟೀ ಕಾಫಿಗಳು ಸಹಾ ಆಮ್ಲೀಯವಾಗಿರುತ್ತವೆ. ಆದ್ದರಿಂದ ಈ ಆಮ್ಲೀಯ ರಸದ ಮೇಲೆ ಇನ್ನಷ್ಟು ಆಮ್ಲ ಸುರಿದರೆ ಒಟ್ಟಾರೆ ಆಮ್ಲೀಯತೆ ಇನ್ನಷ್ಟು ಹೆಚ್ಚುವುದಲ್ಲವೇ?

ಪಿಎಚ್ ಮಟ್ಟ
ಟೀ ಯಲ್ಲಿರುವ ಪಿಎಚ್ ಮಟ್ಟ (ಅಂದರೆ ಆಮ್ಲ-ಕ್ಷಾರೀಯತೆಯನ್ನು ತಿಳಿಸುವ ಕೋಷ್ಟಕ) 6 ಮತ್ತು ಕಾಫಿಯ ಮಟ್ಟ 5 ಇದೆ. ನೀರಿನ ಮಟ್ಟ 7 ಇದ್ದು ಇದಕ್ಕಿಂದ ಕೆಳಗಿರುವ ಯಾವುದೇ ಮಟ್ಟ ಆಮ್ಲೀಯವಾಗಿರುತ್ತದೆ. ಆದ್ದರಿಂದ ಬೆಳಿಗ್ಗೆ ಅಥವಾ ಸಂಜೆ ಖಾಲಿಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿದರೆ ಹೊಟ್ಟೆಯ ಆಮ್ಲೀಯತೆ ತೀರಾ ಹೆಚ್ಚಾಗುತ್ತದೆ.

ಇದರಿಂದ ಅನೇಕ ಕಾಯಿಲೆಗಳೂ ಕಾಡಬಹುದು!
ಇದು ಹೊಟ್ಟೆಯ ಒಳಪದರ, ಕರುಳುಗಳ ಒಳಭಾಗಗಳನ್ನು ಸುಡಲು ಕಾರಣವಾಗುತ್ತದೆ. ಪರಿಣಾಮವಾಗಿ ಕರುಳುಗಳ ಹುಣ್ಣು (ಅಲ್ಸರ್), ಹುಳಿತೇಗು, ಎದೆಯುರಿ, ವಾಕರಿಕೆ ಮೊದಲಾದವು ಎದುರಾಗುತ್ತವೆ. ಒಂದು ವೇಳೆ ಇದೇ ಅಭ್ಯಾಸವಿದ್ದರೆ ಇದು ಕ್ಯಾನ್ಸರ್‌ಗೂ ತಿರುಗಬಹುದು.

ಟೀ ಕುಡಿಯುವ ಮೊದಲು, ಒಂದು ಗ್ಲಾಸ್ ನೀರು ಕುಡಿಯಿರಿ
ಒಂದು ವೇಳೆ ಖಾಲಿಹೊಟ್ಟೆಯಲ್ಲಿ ನೀರು ಕುಡಿದರೆ ಇದು ಹೊಟ್ಟೆಯ ಜೀರ್ಣರಸಗಳನ್ನು ತಿಳಿಗೊಳಿಸಿ ಒಟ್ಟಾರೆ ಪಿಎಚ್ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಟೀ ಕಾಫಿಯ ಆಮ್ಲೀಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗಿಸುತ್ತದೆ.

ಟೀ ಕುಡಿಯುವ ಮೊದಲು, ಒಂದು ಗ್ಲಾಸ್ ನೀರು ಕುಡಿಯಿರಿ
ನೀರು ಕುಡಿಯುವ ಮೂಲಕ ಬಹಳ ಹೊತ್ತಿನಿಂದ ನೀರಿಲ್ಲದೇ ಬಳಲಿದ ಅಂಗಗಳಿಗೆ ನೀರು ಉಣಿಸಲು ಹಾಗೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.



Click it and Unblock the Notifications
