Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆ ಸಮಯದಲ್ಲಿ ಅತೀವ ರಕ್ತಸ್ರಾವವೇ? ಈ ಸಂಗತಿಗಳು ನೆನಪಿರಲಿ
ಸಮಾಗಮದ ಸಮಯದಲ್ಲಿ ರಕ್ತಸ್ರಾವದ ತೊಂದರೆಯನ್ನು ಬಹಳಷ್ಟು ದಂಪತಿಗಳು ಅನುಭವಿಸುತ್ತಾರೆ. ಈ ಸಮಯದಲ್ಲಿ ನೈಸರ್ಗಿಕ ಜಾರುಕಗಳು ಮಾತ್ರವೇ ಸ್ರವಿಸಬೇಕು. ಇದರಲ್ಲಿ ರಕ್ತವೂ ಮಿಳಿತಗೊಂಡರೆ ಇದು ಖಂಡಿತಾ ಚಿಂತೆಗೆ ಕಾರಣವೇ ಆಗಿದೆ. ಒಂದು ವೇಳೆ ರಕ್ತಸ್ರಾವ ಸಮಾಗಮದ ಸಮಯದಲ್ಲಿ ಅಥವಾ ನಂತರ ಕಂಡುಬಂದರೆ ಹೆಚ್ಚಿನವರಿಗೆ ಎದುರಾಗುವ ಪ್ರಶ್ನೆ ಎಂದರೆ "ಇದು ಕ್ಯಾನ್ಸರ್ ಅಥವಾ ಇನ್ನೇನಾದರೂ ಗಂಭೀರವಾದ ಕಾಯಿಲೆಯ ಮುನ್ಸೂಚನೆಯೇ?" ಅಥವಾ ಇದು ಸ್ವಾಭಾವಿಕವಾಗಿದ್ದು ಈ ಬಗ್ಗೆ ಚಿಂತಿಸುವ ಕಾರಣವಿಲ್ಲವೇ?
ಪ್ರಥಮ ಪರಿಶೀಲನೆಯಲ್ಲಿ ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ರಕ್ತಸ್ರಾವ ಸ್ವಾಭಾವಿಕವೂ ಆಗಿರಬಹುದು ಅಥವಾ ಯಾವುದೋ ಅನಾರೋಗ್ಯದ ಪರಿಣಾಮವೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಚಿಂತೆಗೆ ಅಗತ್ಯವಿಲ್ಲವಾದರೆ ಕೆಲವು ಸಂದರ್ಭಗಳಲ್ಲಿ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೋಡೋಣ...

ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವೇ?
ಇನ್ನೂ ರಜೋನಿವೃತ್ತಿಯ ವಯಸ್ಸು ತಲುಪದಿರುವ ಮಹಿಳೆಯರಿಗೆ ಆಗಾಗ ಈ ಅನುಭವ ಆಗುತ್ತಿರುತ್ತದೆ. ಇದು ಅಪರೂಪಕ್ಕೊಮ್ಮೆ ಆಗುತ್ತಿದ್ದರೆ ಇದರ ಬಗ್ಗೆ ಹೆಚ್ಚಾಗಿ ಚಿಂತಿಸುವ ಅಗತ್ಯವಿಲ್ಲ. ಹೆಚ್ಚಿನವರಲ್ಲಿ ಇದು ಸ್ವಾಭಾವಿಕವಾಗಿರುತ್ತದೆ.

ಇದಕ್ಕೆ ಅಂಗಾಂಶಗಳಲ್ಲಿ ಬಿರುಕು ಕಾರಣವೇ?
ಕೆಲವೊಮ್ಮೆ ಘರ್ಷಣೆ ವಿಪರೀತವಾದಾಗ ಸೂಕ್ಷ್ಮಭಾಗದ ಒಳಗೋಡೆಗಳ ಅಂಗಾಂಶಗಳು ಬಿರುಕುಬಿಟ್ಟು ಗಾಯಗಳಾಗುವ ಸಂಭವವಿದೆ. ಈ ಗಾಯಗಳಿಂದಲೂ ರಕ್ತ ಒಸರಬಹುದು ಹಾಗೂ ಸಮಾಗಮದ ಬಳಿಕ ಸ್ರವಿಸಬಹುದು. ಅತಿ ಸೂಕ್ಷ್ಮ ಗಾಯಗಳಿಂದ ತಕ್ಷಣವೇ ನೋವು ಕಾಣಿಸಿಕೊಳ್ಳದಿರಬಹುದು, ಆದರೆ ನಂತರ ಸ್ರಾವ ಹಾಗೂ ನೋವು ಕಾಣಿಸಿಕೊಳ್ಳಬಹುದು.

ಇದು ಮಾಸಿಕ ದಿನಗಳ ಕೊಂಚ ಮೊದಲು ಕಾಣಿಸಿಕೊಂಡಿತೇ?
ಒಂದು ವೇಳೆ ಮಾಸಿಕ ದಿನಗಳ ಒಂದೆರಡು ದಿನಗಳ ಹಿಂದಿನ ಸಮಾಗಮದಲ್ಲಿ ಇದು ಕಾಣಿಸಿಕೊಂಡರೆ ಇದಕ್ಕೆ ಬಲಪ್ರಯೋಗವೇ ಕಾರಣವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ಗರ್ಭಾಶಯದ ಒಳಗೋಡೆಗಳು ಸೂಕ್ಷ್ಮವಾಗಿದ್ದು ಕೊಂಚವೇ ಘರ್ಷಣೆಗೆ ಒಳಗಾದರೂ ಸುಲಭವಾಗಿ ಗಾಯವಾಗುತ್ತದೆ. ಇದು ಕೆಲವೊ ತೊಟ್ಟು ರಕ್ತ ಜಿನುಗಲು ಕಾರಣವಾಗಬಹುದು.

ಇದಕ್ಕೆ ಉರಿಯೂತ ಕಾರಣವೇ?
ಕೆಲವು ಮಹಿಳೆಯರಲ್ಲಿ ಉರಿಯೂತವೂ ರಕ್ತಸ್ರಾವಕ್ಕೆ ಕಾರಣವಾಬಹುದು. ಅಲ್ಲದೇ ಗೋನೋರಿಯಾ, ಕ್ಲಾಮೈಡಿಯಾ ಮೊದಲಾದ ಕೆಲವು ಲೈಂಗಿಕ ಕಾಯಿಲೆಗಳ ಪರಿಣಾಮದಿಂದಲೂ ರಕ್ತಸ್ರಾವ ಕಂಡುಬರಬಹುದು. ಅಲ್ಲದೇ ಗುಪ್ತಾಂಗಗಳಲ್ಲಿ ಉಂಟಾದ ಸೋಂಕು ಸಹಾ ಉರಿಯೂತಕ್ಕೆ ಕಾರಣವಾಗಿ ರಕ್ತಸ್ರಾವ ಕಂಡುಬರಬಹುದು. ಇದಕ್ಕೆ pelvic inflammatory disease ಎಂದು ಕರೆಯುತ್ತಾರೆ.

ಗರ್ಭನಿರೋಧಕ ಕ್ರಮವೂ ಕಾರಣವಾಗಿರಬಹುದೇ?
ಕೆಲವು ಮಹಿಳೆಯರು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಿದ್ದು ಈ ಗುಳಿಗೆಗಳಲ್ಲಿ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುತ್ತದೆ. ಇದರ ಪರಿಣಾಮವಾಗಿ ಮಾಸಿಕ ಚಕ್ರದ ನಡುವಣ ಅವಧಿಯಲ್ಲಿ, ಅಂದರೆ ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿ ರಕ್ತಸ್ರಾವ ಕಂಡುಬರಬಹುದು. ಈ ಸಮಯದಲ್ಲಿ ಚಂದ್ರನಾಡಿ ಅತಿ ಸಂವೇದನಾಶೀಲವಾಗಿರುತ್ತದೆ ಹಾಗೂ ಮಾಸಿಕ ದಿನಗಳಲ್ಲದ ಹೊತ್ತಿನಲ್ಲಿಯೂ ಕೆಲವು ತೊಟ್ಟು ಹೊರಬರಬಹುದು. ಇದಕ್ಕೆ spotting ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಸಮಾಗಮ ನಡೆದು ಗರ್ಭ ನಿಂತ ಬಳಿಕವೂ ರಕ್ತಸ್ರಾವ ಕಂಡುಬರಬಹುದು.

ರಜೋನಿವೃತ್ತಿಯ ಬಳಿಕ ರಕ್ತಸ್ರಾವ ಕಂಡುಬಂದರೆ?
ರಜೋನಿವೃತ್ತಿಯ ಬಳಿಕ ರಕ್ತಸ್ರಾವ ಕಾಣಿಸಿಕೊಳ್ಳಬಾರದು. ಒಂದು ವೇಳೆ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಬಳಿ ಧಾವಿಸಿ ತಪಾಸಣೆಗೆ ಒಳಗಾಗಬೇಕು. ಒಂದು ವೇಳೆ ಗುಪ್ತಾಂಗದ ಒಳಭಾಗ ತೀರಾ ಒಣಗಿ ಅಂಗಾಂಶಗಳು ಬಿರುಕು ಬಿಟ್ಟರೆ ರಕ್ತಸ್ರಾವ ಸಂಭವಿಸುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರ ಹೊರತಾಗಿ ಗರ್ಭಾಶಯ ಅಥವಾ ಗುಪ್ತಾಂಗದ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ (endometrial ಅಥವಾ cervical ಕ್ಯಾನ್ಸರ್) ಇದಕ್ಕೆ ಕಾರಣವಾಗಿದ್ದರೆ ಮಾತ್ರ ಇದು ಗಂಭೀರವಾದ ವಿಷಯವಾಗಿದ್ದು ಇದಕ್ಕೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ.

ಈ ಬಗ್ಗೆ ಯಾವಾಗ ಚಿಂತಿಸಬೇಕಾದ ಅಗತ್ಯವಿದೆ?
ಒಂದು ವೇಳೆ ಸಮಾಗಮದ ಮರುದಿನವೂ ಕೆಲವು ತೊಟ್ಟುಗಳು ಸ್ರವಿಸಿರುವುದು ಕಂಡುಬಂದರೂ ಇದಕ್ಕೆ ಬೇರೆಯಾದ ಸೋಂಕುಗಳು ಕಾರಣವಾಗಿರಬಹುದು. ಯಾವುದಕ್ಕೂ ಅಲಕ್ಷಿಸದೇ ವೈದ್ಯರನ್ನು ಕಂಡು ತಪಾಸಣೆಗೊಳಪಡಬೇಕು.



Click it and Unblock the Notifications











