For Quick Alerts
ALLOW NOTIFICATIONS  
For Daily Alerts

  ಹೊಟ್ಟೆ ತುಂಬಾ ತಿನ್ನುವುದು ದೊಡ್ಡದಲ್ಲ!, ತಿಂದದ್ದು ಜೀರ್ಣವಾಗಬೇಕಲ್ಲವೇ?

  By Arshad
  |

  ಕೆಲವೊಮ್ಮೆ ನಮ್ಮ ಶರೀರದಲ್ಲಿ ಯಾವುದಾದರೊಂದು ಖನಿಜ ಅಥವಾ ಪೋಷಕಾಂಶದ ಕೊರತೆಯುಂಟಾದಾಗ ದೇಹ ಕೆಲವು ವಿಧದಲ್ಲಿ ಪ್ರತಿಕ್ರಿಯೆ ತೋರುತ್ತದೆ. ವೈದರು ಈ ಕೊರತೆಯ ಬಗ್ಗೆ ವಿವರಿಸಿದಾಗ ನಮ್ಮಲ್ಲಿ ಹೆಚ್ಚಿನವರು ತಮಗೆ ತಾವೇ ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತೇವೆ. ನಾವು ಸರಿಯಾದ ಆಹಾರ ಸೇವಿಸುತ್ತಿದ್ದೇವೆ ತಾನೇ ಅಥವಾ ತಾವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇದ್ದರೂ ನಮ್ಮ ಶರೀರ ಇದನ್ನು ಪಡೆಯುವಲ್ಲಿ ವಿಫಲವಾಗಿಲ್ಲ ತಾನೇ? 

  ಅಜೀರ್ಣ ನಿವಾರಣೆಗೆ​ ಹಿತ್ತಲ ಗಿಡವೇ ರಾಮಬಾಣ

  ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡುವುದು ಕಷ್ಟ. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಸೂಕ್ತ ಪ್ರಮಾಣದ ಆರೋಗ್ಯಕರ ಆಹಾರವನ್ನು ಸೇವಿಸುತ್ತಾ ಬಂದವರಿಗೆ ಯಾವುದೇ ರೋಗ ಆವರಿಸುವುದಿಲ್ಲ. ಆದರೆ ವಾಸ್ತವ ಹಾಗಿಲ್ಲ. ಆಹಾರದಲ್ಲಿ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಖನಿಜ ಪೋಷಕಾಂಶಗಳಿರುವ ಆಹಾರವನ್ನೇ ಸೇವಿಸಿದರೂ ನಮ್ಮ ಶರೀರ ಅಷ್ಟೂ ಪ್ರಮಾಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಕೆ ಎಂಬ ಪ್ರಶ್ನೆಗೆ ಕೆಳಗಿನ ವಿವರಗಳು ಉತ್ತರ ನೀಡಲಿವೆ....

  ನೀವು ತಿಂದದನ್ನೆಲ್ಲಾ ಅರಗಿಸಿಕೊಳ್ಳಲು ನಿಮಗೆ ಸಾಧ್ಯವೇ?

  ನೀವು ತಿಂದದನ್ನೆಲ್ಲಾ ಅರಗಿಸಿಕೊಳ್ಳಲು ನಿಮಗೆ ಸಾಧ್ಯವೇ?

  ನಮ್ಮ ಶರೀರಕ್ಕೆ ನಿತ್ಯವೂ ಕೆಲವಾರು ಪೋಷಕಾಂಶಗಳು ಹಾಗೂ ಖನಿಜಗಳ ಅಗತ್ಯವಿದೆ. ನಾವು ತಿನ್ನುವ ಆಹಾರವನ್ನು ನಮ್ಮ ಜೀರ್ಣಾಂಗಗಳು ಜೀರ್ಣಿಸಿಕೊಂಡು ಇದರಲ್ಲಿರುವ ಕಾರ್ಬೋಹೈಡ್ರೇಟುಗಳು, ಕೊಬ್ಬು, ಪ್ರೋಟೀನು, ವಿಟಮಿನ್ನು ಹಾಗೂ ಖನಿಜಗಳನ್ನು ಪಡೆದುಕೊಳ್ಳಲು ಯತ್ನಿಸುತ್ತವೆ.

  ಅಸಹಿಷ್ಣುತೆ

  ಅಸಹಿಷ್ಣುತೆ

  ಒಂದು ವೇಳೆ ಆಹಾರದಲ್ಲಿರುವ ಪೋಷಕಾಂಶವನ್ನು ನಮಗೆ ಅಗತ್ಯವಿದ್ದರೂ ಹೀರಿಕೊಳ್ಳಲು ಅಸಮರ್ಥವಾದರೆ ಈ ಪರಿಸ್ಥಿತಿಗೆ ಆಹಾರದ ಅಸಹಿಷ್ಣುತೆ ಎಂದು ಕರೆಯುತ್ತಾರೆ. ಈ ಅಸಹಿಷ್ಣುತೆ ಕೆಲವು ಸಂಕೇತಗಳ ಮೂಲಕ ಪ್ರಕಟವಾಗುತ್ತದೆ. ಸತತ ಮೂತ್ರ ವಿಸರ್ಜನೆ, ಒಣಗಿದ ಬಾಯಿ, ಮನಸ್ಸು ಜಡಗಟ್ಟುವುದು, ಮೈಯೆಲ್ಲಾ ತುರಿಕೆ, ಸುಸ್ತು ಮೊದಲಾದವು ಆವರಿಸುತ್ತವೆ.

   ಪ್ರೋಟೀನ್ ಅಸಹಿಷ್ಣುತೆ

  ಪ್ರೋಟೀನ್ ಅಸಹಿಷ್ಣುತೆ

  ಒಂದು ವೇಳೆ ನಮ್ಮ ದೇಹ ಅಗತ್ಯವಿರುವಷ್ಟು ಪ್ರೋಟೀನುಗಳನ್ನು ಪಡೆಯಲು ಅಸಮರ್ಥವಾದರೆ ಇದಕ್ಕೆ ಪ್ರೋಟೀನ್ ಅಸಹಿಷ್ಣುತೆ ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿ ಉದ್ವೇಗ, ಒಸಡುಗಳಲ್ಲಿ ರಕ್ತ ಒಸರುವುದು, ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಹಾಗೂ ಸ್ನಾಯುಗಳ ಸೆಡೆತ ಮೊದಲಾದವು ಎದುರಾಗುತ್ತದೆ. ಇದೇ ತರಹದಲ್ಲಿ ಕೊಬ್ಬಿನ ಅಸಹಿಷ್ಣುತೆಯಿಂದ ಮೂಳೆಗಳ ಸಂಧುಗಳಲ್ಲಿ ನೋವು, ಒಣಗಿದ ಕೂದಲು, ಒಣಚರ್ಮ, ಹಾರ್ಮೋನುಗಳ ಏರಿಳಿತ ಹಾಗೂ ಅಧಿಕ ರಕ್ತದೊತ್ತಡದ ತೊಂದರೆ ಎದುರಾಗುತ್ತದೆ.

  ನಮ್ಮ ಆಹಾರ ಹೇಗೆ ಜೀರ್ಣಗೊಳ್ಳುತ್ತದೆ?

  ನಮ್ಮ ಆಹಾರ ಹೇಗೆ ಜೀರ್ಣಗೊಳ್ಳುತ್ತದೆ?

  ನಮ್ಮ ಜೀರ್ಣಾಂಗಗಳು ಹಲವು ಹಂತಗಳಲ್ಲಿ ಆಹಾರವನ್ನು ಜೀರ್ಣಿಸುತ್ತವೆ. ಮೊದಲ ಹಂತದಲ್ಲಿ ಆಹಾರವನ್ನು ಲಾಲಾರಸದಲ್ಲಿ ಮೆದುಗೊಳಿಸಿ ಜೀರ್ಣಾಂಗಗಳಿಗೆ ತಲುಪಿಸುವುದು. ಎರಡನೆಯ ಹಂತದಲ್ಲಿ ಆಹಾರವನ್ನು ಒಡೆಯುವುದು ಹಾಗೂ ಪೋಷಕಾಂಶಗಳನ್ನು ಪಡೆಯುವುದಾಗಿದೆ. ಮೂರನೆಯ ಹಂತದಲ್ಲಿ ಪೋಷಕಾಂಶಗಳನ್ನು ಹೀರಿಕೊಂಡು ರಕ್ತಕ್ಕೆ ಒದಗಿಸುವುದು. ನಾಲ್ಕನೆಯ ಹಂತದಲ್ಲಿ ಜೀರ್ಣಕ್ರಿಯೆಯ ಬಳಿಕ ಉಳಿದ ತ್ಯಾಜ್ಯಗಳನ್ನು ವಿಸರ್ಜಿಸುವುದು.

  ಜೀರ್ಣಕ್ರಿಯೆಯ ಯಾವ ಹಂತ ಮುಖ್ಯ?

  ಜೀರ್ಣಕ್ರಿಯೆಯ ಯಾವ ಹಂತ ಮುಖ್ಯ?

  ಇಡಿಯ ಜೀರ್ಣಕ್ರಿಯೆಯಲ್ಲಿ ಆಹಾರಕಣಗಳನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳುವ ಹಂತವೇ ಅತಿ ಹೆಚು ಮುಖ್ಯವಾಗಿದೆ. ಏಕೆಂದರೆ ನಮ್ಮ ದೈಹಿಕ ಅಗತ್ಯವೆಲ್ಲಾ ಈ ಪೋಷಕಾಂಶಗಳನ್ನೇ ಆಧರಿಸಿದೆ. ಇವುಗಳನ್ನು ಪಡೆದ ಬಳಿಕವೇ ಬೆಳವಣಿಗೆಯ ಸಹಿತ ಉಳಿದೆಲ್ಲಾ ಕೆಲಸಗಳು ಸಾಧ್ಯವಾಗುತ್ತವೆ.

  ಜೀರ್ಣಕ್ರಿಯೆ ವಿಫಲವಾದರೇನಾಗುತ್ತದೆ?

  ಜೀರ್ಣಕ್ರಿಯೆ ವಿಫಲವಾದರೇನಾಗುತ್ತದೆ?

  ಈ ಪ್ರಶ್ನೆ ಕಾರಿನ ಇಂಜಿನ್ನು ನಿಂತು ಹೋದರೆ ಏನಾಗುತ್ತದೆ ಎಂಬಂತೆಯೇ ಇದೆ. ಜೀರ್ಣಕ್ರಿಯೆ ವಿಫಲವಾದರೆ ಪೋಷಕಾಂಶಗಳ ಪೂರೈಕೆ ನಿಂತುಹೋಗುತ್ತದೆ. ಪೋಷಕಾಂಶಗಳಿಗಾಗಿ ಹಾತೊರೆಯುತ್ತಿದ್ದ ಪ್ರತಿ ಜೀವಕೋಶವೂ ನಿಧಾನವಾಗಿ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದೇಹ ಕೊಬ್ಬಿನ ಸಂಗ್ರಹದಿಂದ ಮುಂದಿನ ದಿನಗಳ ಅಗತ್ಯತೆಯನ್ನು ಪೂರೈಸುತ್ತದಾದರೂ ಜೀರ್ಣಾಂಗಗಳಲ್ಲಿರುವ ಜೀರ್ಣರಸ ಹೊಟ್ಟೆ ಮತ್ತು ಕರುಳುಗಳ ಒಳಭಾಗವನ್ನೇ ಸುಡಲು ಪ್ರಾರಂಭಿಸುತ್ತವೆ.

  ಜೀರ್ಣಕ್ರಿಯೆ ಸಮಸ್ಯೆಗೆ ಆಯುರ್ವೇದದ ಉಪಚಾರ...

   ಪೋಷಕಾಂಶಗಳ ಕೊರತೆಗೆ ಪರಿಹಾರ?

  ಪೋಷಕಾಂಶಗಳ ಕೊರತೆಗೆ ಪರಿಹಾರ?

  ದೇಹಕ್ಕೆ ಯಾವುದಾದರೂ ಪೋಷಕಾಂಶದ ಕೊರತೆ ಇದೆ ಎಂದಾದರೆ ಈ ಪೋಷಕಾಂಶ ಹೆಚ್ಚಿರುವ ಆಹಾರಗಳ ಸೇವನೆಯನ್ನು ಹೆಚ್ಚಿಸುವುದೇ ಜಾಣತನವೇ ಹೊರತು ಈ ಪೋಷಕಾಂಶಗಳನ್ನು ಕೃತಕವಾಗಿ ನೀಡುವ ಔಷಧಿಗಳನ್ನಲ್ಲ. ಅಲ್ಲದೇ ಯಾವುದೇ ಆಹಾರ ಸೇವಿಸುವ ಮುನ್ನ ಈ ಆಹಾರದ ಸೇವನೆಯ ಬಳಿಕ ಎಲ್ಲವನ್ನೂ ನಾನು ಜೀರ್ಣಿಸಿಕೊಳ್ಳಬಲ್ಲೆನೇ ಎಂದು ಮೊದಲು ನಿಮಗೆ ನೀವೇ ಕೇಳಿಕೊಳ್ಳಿ.

  English summary

  Are You Able To Digest Whatever You Eat? No? Then Read This!

  minerals? If your answer to this question is yes, then is your body able to absorb those vitamins and minerals? Well, if your body successfully absorbs all nutrients from the food you eat, you will obviously never suffer deficiency of any nutrient.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more