ದೈವ ಸ್ವರೂಪಿ 'ಅಶ್ವತ್ಥ ಮರ'ದ ಎಲೆಗಳ ಔಷಧೀಯ ಗುಣಗಳು

By: Arshad
Subscribe to Boldsky

Ficus religiosa ಎಂಬ ವೈಜ್ಞಾನಿಕ ಹೆಸರಿನ ಈ ಮರ ಅಶ್ವತ್ಥ ಮರ ಅಥವಾ ಪೀಪಲ್ ಟ್ರೀ ಎಂದೇ ಹೆಚ್ಚು ಜನಪ್ರಿಯವಾಗಿದ್ದು ಭಾರತದ ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಇದ್ದೇ ಇರುವ ಮರವಾಗಿದೆ. ಈ ಮರಕ್ಕೆ ಇರುವ ಧಾರ್ಮಿಕ ಮಹತ್ವದ ಕಾರಣ ಇವುಗಳನ್ನು ಅನಿವಾರ್ಯವಾಗದ ಹೊರತು ಯಾರೂ ಕಡಿಯುವುದಿಲ್ಲ. ಮಲ್ಬೆರಿ ಸಸ್ಯವರ್ಗಕ್ಕೆ ಸೇರಿರುವ ಈ ಮರ ಕಾಡಿನಲ್ಲಿ ಯಾವುದೇ ಪೋಷಣೆಯಿಲ್ಲದೇ ಸೊಂಪಾಗಿ ಬೆಳೆಯುತ್ತದೆ.

ಕೆಲವರು ತಮ್ಮ ಮನೆಯ ಅಂಗಳದಲ್ಲಿಯೇ ಬೆಳೆಸಿದ್ದಾರೆ. ಎಷ್ಟೋ ಕಡೆಗಳಲ್ಲಿ ಈ ಮರದ ಕೆಳಗೇ ಪಂಚಾಯತಿ ಸಭೆ, ಕಟ್ಟಡವಿಲ್ಲದ ಶಾಲೆಗಳಿಗೆ ತರಗತಿಗಳೂ ನಡೆಯುತ್ತವೆ. ಇತರ ಮರಗಳಿಗೆ ಹೋಲಿಸಿದರೆ ಈ ಎಲೆಗಳು ಸೂಸುವ ಆಮ್ಲಜನಕದ ಪ್ರಮಾಣ ಹೆಚ್ಚು. ಈ ಮರದಲ್ಲಿ ಟ್ಯಾನಿಕ್ ಆಮ್ಲ, ಅಸ್ಪಾರ್ಟಿಕ್ ಆಮ್ಲ, ಫ್ಲೇವನಾಯ್ದುಗಳು, ಸ್ಟೆರಾಯ್ಡುಗಳು, ವಿಟಮಿನ್ನುಗಳು, ಮೀಥಿಯೋನೈನ್, ಗ್ಲೈಸಿನ್ ಮೊದಲಾದ ಪೋಷಕಾಂಶಗಳಿವೆ. 

ಅಶ್ವತ್ಥ ಮರದಲ್ಲಿ ಹಲವು ದೇವತೆಗಳ ವಾಸ... ತಪ್ಪದೇ ಪೂಜಿಸಿ

ಈ ಎಲ್ಲಾ ಪೋಷಕಾಂಶಗಳು ಅಶ್ವತ್ಥ ಮರವನ್ನು ಅತ್ಯುತ್ತಮ ಔಷಧೀಯ ಮರವನ್ನಾಗಿಸಿದೆ. ಆಯುರ್ವೇದದ ಪ್ರಕಾರ ಅಶ್ವತ್ಥ ಮರದ ಪ್ರತಿ ಭಾಗವೂ ಒಂದಲ್ಲಾ ಒಂದು ಔಷಧೀಯ ಗುಣವನ್ನು ಹೊಂದಿದೆ. ಎಲೆ, ತೊಗಟೆ, ಬೇರು, ಬೀಜಗಳು, ಹಣ್ಣುಗಳು, ಎಲ್ಲವೂ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತವೆ.

ಭಾರತದಲ್ಲಿ ಪುರಾತನ ಕಾಲದಿಂದಲೂ ಇವುಗಳನ್ನು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಾ ಬರಲಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮೀಯರಿಗೆ ಈ ಮರ ಪವಿತ್ರವೂ ಆಗಿದ್ದು ಈ ಮರಕ್ಕೆ ಪೂಜ್ಯಸ್ಥಾನವನ್ನು ನೀಡಲಾಗಿದೆ. ಈ ಮರದ ತೊಗಟೆ ಬೇರು ಎಲೆ ಮೊದಲಾದವುಗಳ ರಸಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ಪ್ರಮುಖವಾದ ಹತ್ತು ಸಂಗತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ನಿಮ್ಮ ಮುಂದಿಡಲು ಹರ್ಷಿಸುತ್ತಿದೆ... 

ಶೀತ, ಜ್ವರದ ಶಮನಕ್ಕಾಗಿ

ಶೀತ, ಜ್ವರದ ಶಮನಕ್ಕಾಗಿ

ಕೆಲವು ಎಳೆಯ ಅಶ್ವತ್ಥ ಮರದ ಎಲೆಗಳನ್ನು ಕೊಂಚ ಹಾಲಿನಲ್ಲಿ ಬೇಯಿಸಿ. ಇದಕ್ಕೆ ಕೊಂಚ ಸಕ್ಕರೆ ಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯಿರಿ. ಇದರಿಂದ ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.

ಅಸ್ತಮಾ ತೊಂದರೆ ಇದ್ದರೆ

ಅಸ್ತಮಾ ತೊಂದರೆ ಇದ್ದರೆ

ಕೆಲವು ಎಳೆಯ ಅಶ್ವತ್ಥ ಎಲೆಗಳನ್ನು ಅಥವಾ ಎಲೆಗಳ ಒಣ ಪುಡಿಯನ್ನು ಕೊಂಚ ಹಾಲಿನಲ್ಲಿ ಬೇಯಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಅಸ್ತಮಾ ರೋಗದಿಂದ ಬಳಲುತ್ತಿರುವವರಿಗೆ ಆರಾಮ ದೊರಕುತ್ತದೆ.

ಕಣ್ಣಿನಲ್ಲಿ ನೋವಿದ್ದರೆ

ಕಣ್ಣಿನಲ್ಲಿ ನೋವಿದ್ದರೆ

ಕಣ್ಣು ಕೆಂಪಗಾಗಿದ್ದು ನೋವಿನಿಂದ ಕೂಡಿದ್ದರೆ ಅಶ್ವತ್ಥ ಎಲೆ ಇದಕ್ಕೆ ಶಮನ ನೀಡಬಲ್ಲುದು. ಅಶ್ವತ್ಥ ಮರದ ಎಲೆಗಳ ಕೆಲವು ಹಸಿರು ಎಲೆಗಳನ್ನು ಅರೆದು ಹಿಂಡಿ ತೆಗೆದ ರಸದ ಕೆಲವು ತೊಟ್ಟುಗಳನ್ನು ಕಣ್ಣಿಗೆ ಬಿಟ್ಟುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ.

ಹಲ್ಲುನೋವಿಗೆ

ಹಲ್ಲುನೋವಿಗೆ

ಅಶ್ವತ್ಥ ಮರದ ಗೆಲ್ಲಿನ ತುದಿಯ ಭಾಗ ಅಥವಾ ಬೇರಿನ ಚಿಕ್ಕ ಭಾಗದ ತುದಿಯನ್ನು ಜಜ್ಜಿ ಇದನ್ನು ಹಲ್ಲುಜ್ಜಲು ಬಳಸುವ ಬ್ರಶ್ ನಂತೆ ಬಳಸುವುದರಿಂದ ಹಲ್ಲುಗಳಲ್ಲಿರುವ ಕಲೆಗಳು ನಿವಾರಣೆಯಾಗುತ್ತವೆ ಹಾಗೂ ಹಲ್ಲುಗಳ ಮತ್ತು ಒಸಡುಗಳ ಸಂಧಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನೂ ಕೊಂದು ನಿವಾರಿಸಲು ನೆರವಾಗುತ್ತದೆ.

ಮೂಗಿನಿಂದ ರಕ್ತ ಸೋರುತ್ತಿದ್ದರೆ

ಮೂಗಿನಿಂದ ರಕ್ತ ಸೋರುತ್ತಿದ್ದರೆ

ಕೆಲವು ಎಳೆಯ ಅಶ್ವತ್ಥ ಮರದ ಎಲೆಗಳನ್ನು ಅರೆದು ರಸ ಹಿಂಡಿ. ಈ ರಸವನ್ನು ಮೂಗಿನೊಳಗೆ ಬಿಟ್ಟುಕೊಳ್ಳುವ ಮೂಲಕ ಮೂಗಿನಿಂದ ಸೋರುವ ರಕ್ತ ನಿಲ್ಲುತ್ತದೆ.

ಕಾಮಾಲೆ ರೋಗದ ಶಮನಕ್ಕಾಗಿ

ಕಾಮಾಲೆ ರೋಗದ ಶಮನಕ್ಕಾಗಿ

ಕೆಲವು ಅಶ್ವತ್ಥ ಎಲೆಗಳನ್ನು ಅರೆದು ರಸ ಹಿಂಡಿ ಕೊಂಚ ನೀರು ಹಾಗೂ ಸಕ್ಕರೆ ಬೆರೆಸಿ. ಈ ದ್ರವವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುತ್ತಾ ಬಂದರೆ ಕಾಮಾಲೆ ರೋಗ ಹಾಗೂ ಇದರ ಪರಿಣಾಮಗಳು ಕಡಿಮೆಯಾಗುತ್ತಾ ಬರುತ್ತವೆ.

ಮಲಬದ್ಧತೆಗೆ

ಮಲಬದ್ಧತೆಗೆ

ಸಮಪ್ರಮಾಣದಲ್ಲಿ ಒಣ ಅಶ್ವತ್ಥ ಎಲೆಗಳ ಪುಡಿ ಹಾಗೂ ದೊಡ್ಡಜೀರಿಗೆ (ಬಡಾಸೊಪ್) ಪುಡಿ (anise seed powder) ಹಾಗೂ ಕೊಂಚ ಬೆಲ್ಲವನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.

ಹೃದಯದ ತೊಂದರೆ ಇದ್ದರೆ

ಹೃದಯದ ತೊಂದರೆ ಇದ್ದರೆ

ಕೆಲವು ಅಶ್ವತ್ಥ ಮರದ ಎಲೆಗಳನ್ನು ಒಂದು ಗಾಜಿನ ಜಾಡಿಯಲ್ಲಿನ ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಈ ನೀರನ್ನು ಸೋಸಿ ದಿನದಲ್ಲಿ ಎರಡು ಅಥವಾ ಮೂರು ಬಾರಿ ಕುಡಿದು ಖಾಲಿ ಮಾಡಿ. ಇದರಿಂದ ಹೃದಯಾತಿಸ್ಪಂದನ ಹಾಗೂ ದುರ್ಬಲವಾಗಿರುವ ಹೃದಯವನ್ನು ಪುನಃ ಆರೋಗ್ಯವಂತವಾಗಿಸಲು ಸಾಧ್ಯವಾಗುತ್ತದೆ.

ಅತಿಸಾರ

ಅತಿಸಾರ

ಒಂದು ಅಶ್ವತ್ಥ ಎಲೆ , ಕೆಲವು ಕೊತ್ತಂಬರಿ ಸೊಪ್ಪಿನ ಎಲೆಗಳು ಹಾಗೂ ಕೊಂಚ ಸಕ್ಕರೆಯನ್ನು ಬೆರೆಸಿ ನಿಧಾನವಾಗಿ ಜಗಿದು ನುಂಗಿ. ಇದರಿಂದ ಅತಿಸಾರದಿಂದ ತಕ್ಷಣವೇ ಆರಾಮ ದೊರಕುತ್ತದೆ.

ಮಧುಮೇಹದ ನಿಯಂತ್ರಣಕ್ಕೆ

ಮಧುಮೇಹದ ನಿಯಂತ್ರಣಕ್ಕೆ

ಅಶ್ವತ್ಥ ಎಲೆಗಳಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವ ಶಕ್ತಿ ಇದೆ. ಅರಳಿ ಹಣ್ಣನ್ನು ಒಣಗಿಸಿ ಪುಡಿ ಮಾಡಿ. ಈ ಪುಡಿಯನ್ನು ಸಮಪ್ರಮಾಣದಲ್ಲಿ ಅಳಲೇಕಾಯಿ ಪುಡಿ (Haritaki fruit powder) ನೊಂದಿಗೆ ಬೆರೆಸಿ. (ಅಳಲೇಕಾಯಿ ಆಯುರ್ವೇದ ಅತ್ಯುತ್ತಮವೆಂದು ಬಣ್ಣಿಸಿದ ತ್ರಿಫಲಗಳಲ್ಲೊಂದಾಗಿದೆ) ಈ ಮಿಶ್ರಣವನ್ನು ನಿಯಮಿತವಾಗಿ ಸೇವಿಸುವ ಮೂಲಕ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ರೋಗ: ಸ್ವಲ್ಪ ಯಾಮಾರಿದರೂ- ಜೀವಕ್ಕೆ ಸಂಚಕಾರ!

English summary

Amazing Health Benefits Of Peepal Tree & Leaf

According to Ayurveda, every part of the peepal tree - the leaf, bark, shoot, seeds, as well as the fruit, has several medicinal benefits. It is being used since ancient times for curing many diseases. Today, at Boldsky, we bring to you 10 amazing health benefits of peepal tree, its leaf and juice.
Subscribe Newsletter