For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಎದ್ದು ಬಿಸಿನೀರು ಕುಡಿಯುವುದರಿಂದ ಹತ್ತಾರು ಲಾಭಗಳಿವೆ...

By Divya Pandith -
|

ಬಿಸಿ ನೀರು ಕುಡಿಯಲು ಸಾಮಾನ್ಯ ನೀರಿಗಿಂತ ಸಪ್ಪೆಯಾದ ರುಚಿಯನ್ನು ಹೊಂದಿರುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಬಹಳಷ್ಟು ಬದಲಾವಣೆಯನ್ನು ಕಾಣಬಹುದು. ಅದು ನಿಮಗೆ ತಾಜಾ ಮತ್ತು ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುತ್ತದೆ. ನಿತ್ಯವೂ ಬಿಸಿನೀರನ್ನು ಕುಡಿದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಪ್ರಪಂಚದ ಎಲ್ಲಾ ಸುಖವನ್ನು ಅನುಭವಿಸಬೇಕು ಅಥವಾ ಸಮಾಜದಲ್ಲಿ ಎಲ್ಲರಂತೆ ಖುಷಿಯಾಗಿ ಬಾಳುವೆ ನಡೆಸಲು ಆರೋಗ್ಯ ಎನ್ನುವ ಸಂಪತ್ತು ಇರಬೇಕು.

ನಿಮ್ಮ ಬಳಿ ಆರೋಗ್ಯ ಎನ್ನುವ ಸಂಪತ್ತು ಇಲ್ಲವಾದರೆ ಪ್ರಪಂಚದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಆರೋಗ್ಯಕ್ಕೆ ಪೂರಕವಾಗಿ ನಿತ್ಯವೂ ಸಂಜೀವಿನಿಯಾಗಿರುವುದು ನೀರು. ನೀರು ಇಲ್ಲದೆ ಯಾವ ಪ್ರಾಣಿ ಪಕ್ಷಿಯೂ ಬದುಕಿರಲು ಸಾಧ್ಯವಿಲ್ಲ. ತಿಂದ ಆಹಾರವನ್ನು ಕರಗಿಸುವುದರಿಂದ ಹಿಡಿದು ದೇಹದ ಕಲ್ಮಶವನ್ನು ಹೊಹಾಕುವುದರ ವರೆಗೆಗೂ ನೀರಿನ ಅಗತ್ಯವಿದೆ.

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಾದರೆ ದಿನದಲ್ಲಿ ಕಡಿಮೆ ಎಂದರೂ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕು. ಸಾಮಾನ್ಯವಾಗಿ ಬಾಯಾರಿಕೆ ಆದಾಗ ಮಾತ್ರ ನೀರನ್ನು ಕುಡಿಯುವ ಹವ್ಯಾಸ ನಮ್ಮದಾಗಿರುತ್ತದೆ. ಹೆಚ್ಚಿನವರು ಬಾಯಾರಿಕೆ ಆದಾಗ ಪ್ರಿಜ್‍ನಲ್ಲಿ ಇಟ್ಟಿರುವ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಈ ಹವ್ಯಾಸ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನಲಾಗುತ್ತದೆ. ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಸಾಮಾನ್ಯ ತಾಪಮಾನದ ನೀರನ್ನು ಕುಡಿಯುವುದಕ್ಕಿಂತ ಬಿಸಿ ನೀರು ಅಥವಾ ಬೆಚ್ಚಗಿರುವ ನೀರನ್ನು ಕುಡಿದರೆ ದೇಹವು ಆರೋಗ್ಯವಾಗಿರುತ್ತದೆ ಎಂದು ಹೇಳಲಾಗಿದೆ.

ಬಿಸಿ ನೀರು ಕುಡಿಯಲು ಸಾಮಾನ್ಯ ನೀರಿಗಿಂತ ಸಪ್ಪೆಯಾದ ರುಚಿಯನ್ನು ಹೊಂದಿರುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಬಹಳಷ್ಟು ಬದಲಾವಣೆಯನ್ನು ಕಾಣಬಹುದು. ಅದು ನಿಮಗೆ ತಾಜಾ ಮತ್ತು ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುತ್ತದೆ. ನಿತ್ಯವೂ ಬಿಸಿನೀರನ್ನು ಕುಡಿದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ...

ತೂಕ ನಷ್ಟವಾಗುವುದು

ತೂಕ ನಷ್ಟವಾಗುವುದು

ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದು ತೂಕ ನಷ್ಟಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ನೀವು ಕೆಲವು ಕಿಲೋ ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವುದಾದರೆ ಪ್ರತಿದಿನ ಬೆಳಗ್ಗೆ ಬಿಸಿ ನೀರನ್ನು ಕುಡಿಯಿರಿ. ಇದು ದೇಹದ ಚಯಾಪಚಯವನ್ನು ಉತ್ತೇಜಿಸುತ್ತದೆ. ಅಲ್ಲದೆ ಚರ್ಮದ ಕೆಳಭಾಗದಲ್ಲಿರುವ ಅಡಿಪೋಸ್ ಅಂಗಾಂಶವನ್ನು ಒಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ನಿಂಬೆ ಮತ್ತು ಜೇನುತುಪ್ಪವನ್ನು ಸೇವಿಸಿದಾಗ ಪ್ರಯೋಜನಗಳು ಅದ್ಭುತವಾಗಿರುತ್ತದೆ. ಪರಿಣಾಮವಾಗಿ ಹೆಚ್ಚುವರಿ ದೇಹದ ತೂಕ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಉತ್ತಮವಾಗುವುದು

ಜೀರ್ಣಕ್ರಿಯೆ ಉತ್ತಮವಾಗುವುದು

ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಗ್ರಂಥಿಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತದೆ. ಊಟದ ನಂತರ ತಂಪಾದ ನೀರನ್ನು ಕುಡಿಯುವುದರಿಂದ ಆಹಾರ ಪದಾರ್ಥದಲ್ಲಿ ಇರುವ ಎಣ್ಣೆಯ ಪದಾರ್ಥವು ಗಟ್ಟಿಗೊಳ್ಳುತ್ತದೆ ಎಂಬುದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಕರುಳಿನ ಕೆಳಭಾಗದಲ್ಲಿ ಕೊಬ್ಬಿನಂಶಗಟ್ಟಿಯಾಗಿ ಕುಳಿತಿರುವಂತೆ ಮಾಡುತ್ತದೆ. ಈ ರೀತಿಯ ಪರಿವರ್ತನೆಯು ದೀರ್ಘಾವಧಿಯ ಕರುಳು ಕ್ಯಾನ್ಸರ್‍ಗೆ ಕಾರಣವಾಗುತ್ತದೆ ಎಂದು ಸಂಶೋಧನೆ ದೃಢಪಡಿಸಿದೆ. ಇನ್ನೊಂದೆಡೆ ಊಟದ ನಂತರ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಸೂಕ್ತ ರೀತಿಯಲ್ಲಿ ಆಗುವುದು ಎನ್ನುತ್ತದೆ.

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ

ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ದೇಹದ ಎಲ್ಲಾ ಭಾಗದಲ್ಲೂ ರಕ್ತ ಪರಿಚಲನೆಯು ಸುಗಮವಾಗಿ ಆಗುವುದು. ಅಲ್ಲದೆ ಅಪಧಮನಿ ಮತ್ತು ಅಭಿಧಮನಿಗಳ ಕಾರ್ಯವು ಸುಗಮವಾಗಿ ನೆರವೇರುವಂತೆ ಮಾಡುತ್ತದೆ. ಹಾಗೆಯೇ ಬೆಚ್ಚಗಿನ ನೀರನ್ನು ಕುಡಿದರೆ ದೇಹದಲ್ಲಿ ಇದೇ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುವುದು. ರಕ್ತದ ಹರಿವು ಆರೋಗ್ಯಕರವಾಗಿರುತ್ತದೆ. ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗದು. ಜೊತೆಗೆ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ದೇಹದಲ್ಲಿ ನೀರನ ಕೊರತೆಯು ದೀರ್ಘಾವಧಿಯ ಮಲಬದ್ಧತೆಯನ್ನು ಸೃಷ್ಟಿಸುತ್ತದೆ. ಆಹಾರ ಪದಾರ್ಥಗಳು ನಿಮ್ಮ ಕರುಳಿನಲ್ಲಿ ಸಂಗ್ರಹವಾದಾಗ, ಕರುಳಿನ ಚಲನೆ ನಿಧಾನವಾಗುತ್ತದೆ. ಹೊಟ್ಟೆ ಖಾಲಿ ಇರುವಾಗ ಬೆಚ್ಚಗಿನ ನೀರನ್ನು ಕುಡಿದರೆ ಜೀರ್ಣ ಕ್ರಿಯೆ ಸುಗಮವಾಗುತ್ತದೆ. ಅಲ್ಲದೆ ನಂತರ ತಿಂದ ಆಹಾರವು ಬಹು ಬೇಗ ಕೊಳೆಯಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಮಾಡುವ ಮೂಲಕ ಕರುಳಿಗೆ ಮೃದುವಾಗಿ ಹಾಗೂ ಕಡಿಮೆ ನೋವಿನಿಂದ ಕಾರ್ಯ ನಿರ್ವಹಿಸುತ್ತದೆ.

ಮುಟ್ಟಿನ ಸೆಳೆತ

ಮುಟ್ಟಿನ ಸೆಳೆತ

ಬಾಲಕೀಯರಲ್ಲಿ ಉಂಟಾಗುವ ಮುಟ್ಟಿನ ಸೆಳೆತವನ್ನು ಬಿಸಿ ನೀರು ಕುಡಿಯುವುದರ ಮೂಲಕ ನಿಯಂತ್ರಿಸಬಹುದು. ಸ್ವಲ್ಪ ಜೀರಿಗೆಯನ್ನು ಬಿಸಿನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಮುಟ್ಟಿನ ಸೆಳೆತವು ಕಡಿಮೆಯಾಗುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರಿ ನೋವನ್ನು ಶಮನಗೊಳಿಸುತ್ತದೆ. ಅಲ್ಲದೆ ಹಿತಕರವಾದ ಪರಿಣಾಮ ಉಂಟಾಗುತ್ತದೆ. ನಿಮಗೂ ಋತುಸ್ರಾವದ ನೋವಿನಿಂದ ಪಾರಾಗಬೇಕೆನಿಸಿದರೆ ಮುಂಜಾನೆ ಬಿಸಿ ನೀರು ಕುಡಿಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ.

ದೇಹದ ನಿರ್ವಿಶೀಕರಣ

ದೇಹದ ನಿರ್ವಿಶೀಕರಣ

ಬೆಳಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ನಿರ್ವಿಶೀಕರಣ ಅಥವಾ ದೇಹದ ಕಲ್ಮಶವನ್ನು ಹೊರಹಾಕಲು ಸಹಾಯವಾಗುತ್ತದೆ. ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದು. ಇದರ ಪರಿಣಾಮವಾಗಿ ಬೆವರಲು ಪ್ರಾರಂಭವಾಗುತ್ತದೆ. ಈ ಕ್ರಿಯೆಯಿಂದ ದೇಹದ ಕಲ್ಮಶಗಳು ಹೊರಹಾಕಲಾಗುತ್ತದೆ. ಜೊತೆಗೆ ಜೀವಾಣುಗಳ ಚದುರುವಿಕೆಗೆ ಸಹಾಯವಾಗುವುದು. ತನ್ಮೂಲಕ ಸರಿಯಾಗಿ ಅದನ್ನು ಶುದ್ಧೀಕರಿಸಬಹುದು. ಈ ಬಿಸಿನೀರಿಗೆ ನಿಂಬೆರಸ ಅಥವಾ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಮೂಗು ಮತ್ತು ಗಂಟಲಿಗೆ ಆರಾಮದಾಯಕ

ಮೂಗು ಮತ್ತು ಗಂಟಲಿಗೆ ಆರಾಮದಾಯಕ

ಬೆಳಗ್ಗೆ ಬಿಸಿ ನೀರನ್ನು ಸೇವಿಸುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್‍ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತವೆ. ಕುತ್ತಿಗೆ ಹಾಗೂ ಮುಂಡದ ಉದ್ದಕ್ಕೂ ಮ್ಯೂಕಸ್ ಎಂಬ ಲೋಳೆಯ ಪದರಗಳಿವೆ. ಬಿಸಿ ನೀರು ಕುಡಿದರೆ ಲೋಳೆಯ ಪದರಗಳು ಪ್ರಭಾವಿತ ಪ್ರದೇಶಗಳನ್ನು ಸಡಿಲಗೊಳಿಸುತ್ತದೆ. ನೋಯುತ್ತಿರುವ ಗಂಟಲಿಗೂ ಉಪಶಮನ ನೀಡುತ್ತದೆ.

ಅಕಾಲಿಕ ವಯಸ್ಸನ್ನು ತಡೆಯುತ್ತದೆ

ಅಕಾಲಿಕ ವಯಸ್ಸನ್ನು ತಡೆಯುತ್ತದೆ

ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಅತಿ ಚಿಕ್ಕ ವಯಸ್ಸಿನಲ್ಲೇ ವಯಸ್ಸಾದಂತೆ ಕಾಣುವ ಲಕ್ಷಣಗಳು ದೂರವಾಗುತ್ತವೆ. ಬೆರಗುಗೊಳಿಸುವಂತಹ ಅಥವಾ ತಾರುಣ್ಯದ ತ್ವಚೆಯನ್ನು ಪಡೆಯಬಹುದು. ಬಿಸಿನೀರು ಕುಡಿಯುವುದರಿಂದ ಚರ್ಮದ ಸ್ಥಿತಿ ಸ್ಥಾಪಕತ್ವವು ಹೆಚ್ಚಾಗುತ್ತದೆ. ಮತ್ತು ಪರಿಣಾಮವಾಗಿ ಹಾನಿಗೊಳಗಾದ ಚರ್ಮವು ಸುರಳಿಯಾಕಾರದಿಂದ ಹಾಗೂ ಸುಕ್ಕುಗಟ್ಟುವಿಕೆಯಿಂದ ಮುಕ್ತಿಯನ್ನು ಪಡೆದುಕೊಳ್ಳುವುದು.

 ಆರೋಗ್ಯಕರ ಚರ್ಮವನ್ನು ಹೆಚ್ಚಿಸುತ್ತದೆ

ಆರೋಗ್ಯಕರ ಚರ್ಮವನ್ನು ಹೆಚ್ಚಿಸುತ್ತದೆ

ಬೆಳಗ್ಗೆ ನಿಯಮಿತವಾಗಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವು ಹೈಡ್ರೀಕರಿಸುತ್ತದೆ ಮತ್ತು ಬೆಚ್ಚಗಿರುತ್ತದೆ. ಇದು ಶುಷ್ಕ ಮತ್ತು ಹೊಳಪಿನ ಚರ್ಮವನ್ನು ಪಡೆಯಲು ಅನುವುಮಾಡಿಕೊಡುವುದು. ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳನ್ನು ದೂರಮಾಡುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ.

ನರವ್ಯೂಹ ವ್ಯವಸ್ಥೆ

ನರವ್ಯೂಹ ವ್ಯವಸ್ಥೆ

ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ನಿಮ್ಮ ನರಮಂಡಲ ವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಜೊತೆಗೆ ದೇಹವನ್ನು ನಯಗೊಳಿಸುವುದು. ನರಗಳಿಗೆ ಸಂಬಂಧಿಸಿದ ಅನೇಕ ನೋವುಗಳನ್ನು ನಿವಾರಿಸುತ್ತದೆ. ಜೊತೆಗೆ ದಿನವಿಡೀ ಆರಾಮದಾಯಕ ಅನುಭವವನ್ನು ಹೊಂದಬಹುದು.

English summary

Amazing Benefits Of Drinking Warm Water In The Morning

Especially, when you drink warm water in the morning on a regular basis, you will see a lot of changes in your body, and it will make you feel fresh and healthy. Also, your skin and hair are benefited when you drink warm water in the morning. The intention of this article to discuss the ten amazing health benefits of drinking warm water in the morning.
X
Desktop Bottom Promotion