Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಜೇನು ಬೆರೆತ ಹಾಲು ಕುಡಿಯುವುದರ ಅದ್ಭುತ ಪ್ರಯೋಜನಗಳು
ಇಂದಿನ ಜನಾಂಗ ವೇಗದೊಡನೆ ಸ್ಪರ್ಧಿಸುತ್ತಾ ಜೀವಿಸಲು ಯತ್ನಿಸುತ್ತಿದೆ. ಕಛೇರಿಯ ಹಾಗೂ ವೈಯಕ್ತಿಕ ಜೀವನವನ್ನು ಪೂರ್ಣವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗುತ್ತಿದೆ. ಎಲ್ಲರೂ ಧಾವಂತದಲ್ಲಿ ಸಾಗುತ್ತಿರುವಾಗ ನಾವು ಮಾತ್ರವೇ ನಿಧಾನವಾದರೆ ಎಲ್ಲರೂ ಬಿಟ್ಟು ಹೋಗುತ್ತಾರೆ ಎಂಬ ಭಯ ಎಲ್ಲರನ್ನೂ ಈ ಧಾವಂತದಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ. ಆದರೆ ಇವತ್ತಲ್ಲ ನಾಳೆ, ಈ ಧಾವಂತದ ಪರಿಣಾಮವನ್ನು ಎದುರಿಸಲೇಬೇಕಾಗುತ್ತದೆ. ಒಂದು ದಿನ ಅನಾರೋಗ್ಯ ಕಾಡಿದರೆ ನಿತ್ಯದ ಕೆಲಸಗಳೆಲ್ಲವೂ ಬಾಧೆಗೊಳಗಾಗುತ್ತದೆ ಹಾಗೂ ನಾವಾರು ಇದನ್ನು ಅಪೇಕ್ಷಿಸುವುದಿಲ್ಲ.
ಅಲ್ಲದೇ ನಿತ್ಯದ ಎಲ್ಲಾ ಕೆಲಸಗಳೆಲ್ಲವೂ ತ್ವರಿತವಾಗಿ ಆಗಬೇಕೆಂದು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕಿರುದಾರಿಗಳನ್ನೇ ಅನುಸರಿಸುತ್ತೇವೆ. ಇದರಲ್ಲಿ ತಾಜಾ ಹಾಗೂ ಆರೋಗ್ಯಕರ ಆಹಾರ ತಯಾರಿಸುವ ಬದಲು ಅನಾರೋಗ್ಯಕರವಾದ ಸಿದ್ಧ ಆಹಾರಗಳನ್ನು ಸೇವಿಸುತ್ತಿದ್ದೇವೆ. ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಹೊತ್ತು ಕುಳಿತೇ ಇರುವುದು, ವ್ಯಾಯಾಮಕ್ಕೆ ಸಮಯವಿಲ್ಲದೇ ಹೋಗುವುದು, ಬೆಳಿಗ್ಗೆ ತಡವಾಗಿ ಎದ್ದು ಲಗುಬಗೆಯಿಂದ ಕಛೇರಿಗೆ ತಯಾರಾಗುವುದು, ಇವೆಲ್ಲವೂ ಆರೋಗ್ಯದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.
ನಮ್ಮ ದೇಹವೊಂದು ಹಲವು ವ್ಯವಸ್ಥೆಗಳ ಯಂತ್ರವಾಗಿದ್ದು ನಾವು ಸೇವಿಸುವ ಆಹಾರ ಇದಕ್ಕೆ ಇಂಧನ ಒದಗಿಸುತ್ತದೆ. ಆದ್ದರಿಂದ ಸೂಕ್ತ ಇಂಧನ ಪಡೆಯಲು ಸೂಕ್ತ ಆಹಾರ ಸೇವಿಸುವುದೂ ಅಗತ್ಯ. ಈ ಆಹಾರ ಆರೋಗ್ಯಕರ ಹಾಗೂ ಸಂತುಲಿತ ಪ್ರಮಾಣದಲ್ಲಿರುವುದೂ ಅಗತ್ಯ. ಇಂದಿನ ಧಾವಂತದಲ್ಲಿ ಪ್ರತಿಹೊತ್ತಿನ ಆಹಾರ ಸಂತುಲಿತ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಸುಲಭವಲ್ಲ. ಅನಿವಾರ್ಯವಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸಬೇಕಾಗಿ ಬರುತ್ತದೆ. ಈ ಸಂದರ್ಭವನ್ನು ಆಯುರ್ವೇದ ಸರಳವಾಗಿ ಪರಿಹರಿಸಿದ್ದು ಈ ಪರಿಹಾರದ ಮೂಲಕ ದೇಹಕ್ಕೆ ಕೆಲವಾರು ರೀತಿಯ ಪ್ರಯೋಜನಗಳಿವೆ.
ನಮ್ಮ ಪೂರ್ವಜರು ಹಲವಾರು ದೈಹಿಕ ತೊಂದರೆಗಳಿಗೆ ನೈಸರ್ಗಿಕ ಉಪಶಮನವನ್ನು ಕಂಡುಕೊಂಡಿದ್ದು ಇದರ ಜ್ಞಾನವನ್ನು ಮುಂದಿನ ಜನಾಂಗಕ್ಕೆ ಕಲಿಸುತ್ತಾ ಬಂದಿದ್ದು ಇಂದಿಗೂ ಈ ವಿಜ್ಞಾನ ಜೀವಂತವಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದ ಇಂದಿನ ಯುಗದಲ್ಲಿಯೂ ಪುರಾತನ ಆಯುರ್ವೇದ ರಾರಾಜಿಸುತ್ತಿರುವುದರ ಕಾರಣ ಇದರ ಸಫಲತೆಯೇ ಆಗಿದೆ. ಇಂದಿಗೂ ಕೆಲವಾರು ಕಾಯಿಲೆಗಳ ಚಿಕಿತ್ಸೆಗೆ ಆಯುರ್ವೇದವನ್ನೇ ನೆಚ್ಚಿಕೊಂಡಿದ್ದೇವೆ.
ಇಂದಿನ ಧಾವಂತದ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮಪಡಿಸಲು ನಿತ್ಯವೂ ಸರಳವಾದ ಅಭ್ಯಾಸಗಳನ್ನು ಅನುಸರಿಸಬೇಕು. ಇದರಲ್ಲಿ ಪ್ರಮುಖವಾದುದೆಂದರೆ ನಿತ್ಯವೂ ಜೇನು ಬೆರೆಸಿದ ಹಾಲನ್ನು ಸೇವಿಸುವುದು. ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡ ಅದ್ಭುತ ಆಹಾರವಾಗಿದ್ದು ಒಂದು ಲೋಟ ಹಾಲಿನ ಸೇವನೆ ಒಂದು ಹೊತ್ತಿನ ಊಟಕ್ಕೆ ಸಮನಾದುದು ಎಂದು ಹೇಳಲಾಗುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಹಾಗೂ ಇತರ ಪೋಷಕಾಂಶಗಳು ದೇಹದ ಮೂಳೆಗಳನ್ನು ದೃಢವಾಗಿರಿಸಲು ಹಾಗೂ ಆರೋಗ್ಯದಿಂದಿರಿಸಲು ನೆರವಾಗುತ್ತದೆ. ಆಯುರ್ವೇದದ ಪುಸ್ತಕದ ಹೆಚ್ಚೂ ಕಡಿಮೆ ಎಲ್ಲಾ ಕಡೆಗಳಲ್ಲೂ ಉಲ್ಲೇಖಿಸಲಾಗಿರುವ ಜೇನು ಸಹಾ ಅದ್ಭುತ ಆಹಾರವಾಗಿದ್ದು ಇದರ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳು ದೇಹದಲ್ಲಿ ಆವರಿಸುವ ಚಿಕ್ಕ ದೊಡ್ಡ ಎಲ್ಲಾ ಸೋಂಕುಗಳಿಂದ ರಕ್ಷಿಸುತ್ತದೆ.
ಒಂದು ವೇಳೆ ಇವೆರಡೂ ಅದ್ಭುತ ಆಹಾರಗಳ ಮಿಲನವಾದರೆ ಇದು ದೇಹದ ಮೇಲೆ ಅದ್ಭುತವಾದ ಪರಿಣಾಮವನ್ನೇ ಬೀರುತ್ತದೆ. ನಿತ್ಯವೂ ಈ ರುಚಿಯಾದ ಆಹಾರವನ್ನು ಸೇವಿಸುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಬೇಡ ಎನ್ನಲು ಯಾವುದೇ ಕಾರಣ ಉಳಿಯುವುದಿಲ್ಲ. ಬನ್ನಿ, ಹಾಲುಜೇನನ್ನು ಸೇವಿಸುವ ಮೂಲಕ ಪಡೆಯಬಹುದಾದ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಹತ್ತು ಪ್ರಯೋಜನಗಳ ಬಗ್ಗೆ ಅರಿಯೋಣ......
ದೇಹದ ದಾರ್ಢ್ಯತೆಯನ್ನು ಹೆಚ್ಚಿಸುತ್ತದೆ
ದಿನದ ಪ್ರಾರಂಭವನ್ನು ಒಂದು ದೊಡ್ಡ ಲೋಟ ಹಾಲಿನ ಸೇವನೆಯಿಂದ ಪ್ರಾರಂಭಿಸುವುದು ಉತ್ತಮ. ಜೇನಿಲ್ಲಿರುವ ಕಾರ್ಬೋಹೈಡ್ರೇಟುಗಳು ದಿನದ ಚಟುವಟಿಕೆಗೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ಹಾಲಿನಲ್ಲಿರುವ ಪ್ರೋಟೀನುಗಳು ದೇಹಕ್ಕೆ ಬಲವನ್ನು ನೀಡುತ್ತವೆ. ಒಂದು ಲೋಟ ಹಾಲುಜೇನು ಇಡಿಯ ದಿನ ಶಕ್ತಿಭರಿತವಾಗಿರಲು ನೆರವಾಗುತ್ತದೆ. ದೇಹದ ದಾರ್ಢ್ಯತೆಯನ್ನು ಹೆಚ್ಚಿಸಲು ಮಕ್ಕಳಿಗೂ ಹಿರಿಯರಿಗೂ ದಿನಕ್ಕೊಂದು ಲೋಟ ಅಗತ್ಯವಾಗಿ ಬೇಕಾಗುತ್ತದೆ.
ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ
ಹಾಲು ಮತ್ತು ಜೇನಿನ ಮಿಶ್ರಣ ದೇಹದ ಜೀರ್ಣಕ್ರಿಯೆಯಲ್ಲಿ ಅದ್ಭುತಗಳನ್ನೇ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಹಲವಾರು ಪೋಷಕಾಂಶಗಳು ಜೇನಿನಲ್ಲಿದ್ದು ಹಾಲಿನಲ್ಲಿರುವ ಪೋಷಕಾಂಶಗಳೊಡನೆ ಬೆರೆತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೀರ್ಣಾಂಗಗಳಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ದಿಯಾಗಲು ನೆರವಾಗುತ್ತದೆ. ಜೀರ್ಣಾಂಗಗಳು ಆರೋಗ್ಯಕರವಾಗಿದ್ದರೆ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ ಹಾಗೂ ಮಲಬದ್ದತೆ, ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.
ಮೂಳೆಗಳಿಗೆ ಒಳ್ಳೆಯದು
ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ. ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ನೇರವಾಗಿ ಹೀರಿಕೊಳ್ಳಲಾರದು. ಹಾಲಿಗೆ ಜೇನು ಬೆರೆಸುವ ಮೂಲಕ ದೇಹ ಈ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಪಡೆದುಕೊಳ್ಳಬೇಕಾದರೆ ಜೇನನ್ನು ಬೆರೆಸಿಯೇ ಸೇವಿಸಬೇಕು. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಈ ಹಾಲು ಅತ್ಯುತ್ತಮವಾಗಿದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ
ಉಗುರುಬೆಚ್ಚನೆಯ ಹಾಲಿಗೆ ಕೊಂಚ ಜೇನನ್ನು ಬೆರೆಸಿ ಕುಡಿಯುವ ಮೂಲಕ ಮಲಬದ್ದತೆ ನಿವಾರಣೆಯಾಗುತ್ತದೆ. ಹಾಲು ವಿಸರ್ಜನಾ ಕಾರ್ಯವನ್ನು ಸುಲಭಗೊಳಿಸುತ್ತದೆ. ಜೇನಿನಲ್ಲಿರುವ ಕೆಲವು ಕಿಣ್ವಗಳು ತ್ಯಾಜ್ಯಪದಾರ್ಥ ಕರುಳುಗಳ ಒಳಗೆ ಸುಲಭವಾಗಿ ಜಾರುವಂತೆ ನೆರವಾಗುತ್ತದೆ. ಇವೆರಡೂ ಕ್ರಿಯೆಗಳ ಪರಿಣಾಮವಾಗಿ ಕರುಳುಗಳ ಒಳಗಿರುವ Staphylococcus bacteria ಎಂಬ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಮಲಬದ್ದತೆ ಹಾಗೂ ಅಪಾನವಾಯು ಎದುರಾಗುವ ಸಂದರ್ಭವನ್ನು ಇಲ್ಲವಾಗಿಸಬಹುದು.
ನಿದ್ರಾರಾಹಿತ್ಯ ದೂರಗಿಸುತ್ತದೆ
ನಿದ್ದೆ ಬರುತ್ತಿಲ್ಲದಿದ್ದರೆ ಅಥವಾ ಗಾಢನಿದ್ದೆಗೆ ಜಾರಲು ಕಷ್ಟವಾಗುತ್ತಿದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಜೇನು ಬೆರೆಸಿದ ಹಾಲನ್ನು ಕುಡಿದು ಮಲಗುವುದರಿಂದ ಉತ್ತಮ ಪರಿಹಾರ ದೊರಕುತ್ತದೆ. ಜೇನು ಸಿಹಿಯಾದ ಪದಾರ್ಥವಾಗಿದ್ದು ಇದರ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಸ್ರವಿಸುವ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಟ್ರೊಫ್ಟೋಫಾನ್ ಎಂಬ ಪೋಷಕಾಂಶ ಹೆಚ್ಚು ಸ್ರವಿಸಲು ನೆರವಾಗುತ್ತದೆ. ಬಳೀಕ ಈ ಟ್ರಿಪ್ಟೋಫಾನ್ ಸೆರೋಟೋನಿನ್ ಎಂಬ ಪೋಷಕಾಂಶವಾಗಿ ಪರಿವರ್ತನೆಗೊಳ್ಳುತ್ತದೆ. ಇದು ನಿದ್ದೆಗೆ ನೆರವಾಗುವ ಪೋಷಕಾಂಶವಾಗಿದ್ದು ರಾತ್ರಿ ಸುಖನಿದ್ದೆ ಪಡೆಯಲು ನೆರವಾಗುತ್ತದೆ.
ವೃದ್ಧಾಪ್ಯದಿಂದ ರಕ್ಷಿಸುತ್ತದೆ
ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪರಿಣಾಮವನ್ನು ಕಡಿಮೆಯಾಗಿಸುವ ಮೂಲಕ ವೃದ್ದಾಪ್ಯದ ಚಿಹ್ನೆಗಳನ್ನು ಹಿಮ್ಮರಳಿತ್ತದೆ. ಫ್ರೀ ರ್‍ಯಾಡಿಕಲ್ ಎಂಬ ಕಣಗಳು ನಮ್ಮ ದೇಹದ ಒಳಾಂಗಣದ ಪ್ರಮುಖ ಅಂಗಗಳ ಮೇಲೆ ಧಾಳಿಯಿಟ್ಟು ಇವು ಶಿಥಿಲವಾಗುವಂತೆ ಮಾಡುತ್ತವೆ. ಪರಿಣಾಮವಾಗಿ ಚರ್ಮದಲ್ಲಿ ಸುಕ್ಕು ಬೀಳತೊಡಗುತ್ತದೆ. ಈ ಪರಿಣಾಮವನ್ನು ಹಿಮ್ಮರಳಿಸುವ ಮೂಲಕ ಹಿಂದಿನ ತಾರುಣ್ಯವನ್ನು ಪಡೆಯಬಹುದು. ನಿತ್ಯವೂ ಜೇನುಬೆರೆಸಿದ ಹಾಲು ಕುಡಿಯುವ ಮೂಲಕ ದೇಹದ ಒಳಗಿನ ಹಾಗೂ ಹೊರಗಿನ ಅಂಗಗಳು ಹೆಚ್ಚು ಕ್ಷಮತೆಯಿಂದ ಕೆಲಸ ಮಾಡುವ ಮೂಲಕ ವೃದ್ದಾಪ್ಯವನ್ನು ಮುಂದೂಡುತ್ತವೆ.
ಕೆಮ್ಮು ಕಡಿಮೆಯಾಗಲು ನೆರವಾಗುತ್ತದೆ
ಈ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಎದೆಯಲ್ಲಿ ಕಟ್ಟಿಕೊಂಡಿದ್ದ ಕಫವನ್ನು ಕರಗಿಸಿ ನಿವಾರಿಸಲು ನೆರವಾಗುತ್ತದೆ,. ಇದರ ಉರಿಯೂತ ನಿವಾರಕ ಗುಣ ಉರಿಯೂತ ಹಾಗೂ ಗಂಟಲಿನ ಊತವನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗಿದ್ದ ಕೆಮ್ಮನ್ನೂ ಕಡಿಮೆ ಮಾಡುತ್ತದೆ. ಹಾಲು ಮತ್ತು ಜೇನಿನ ಪಾನೀಯವನ್ನು ಕುಡಿಯುವ ಮೂಲಕ ದೇಹದಿಂದ ಕಫವನ್ನು ಕರಗಿಸಿ ನಿವಾರಿಸಲು ಸಾಧ್ಯವಾಗುತ್ತದೆ.
ಮಾನಸಿಕ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ
ಬೆಚ್ಚಗಿನ ಜೇನು ಬೆರೆತ ಹಾಲು ಕುಡಿಯುವ ಮೂಲಕ ದೇಹದಲ್ಲಿ ಕಾರ್‍ಟಿಸೋಲ್ ಎಂಬ ರಸದೂತದ ಪ್ರಮಾಣ ಹೆಚ್ಚುತ್ತದೆ. ಇದು ಒತ್ತಡವನ್ನು ಕಡಿಮೆಗೊಳಿಸುವ ರಸದೂತವಾಗಿದ್ದು ಮೆದುಳಿಗೆ ರಕ್ತಸಂಚಾರ ಒದಗಿಸುವ ರಕ್ತನಾಳಗಳನ್ನು ನಿರಾಳಗೊಳಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೇ ಇತರ ರಸದೂತಗಳ ಪ್ರಭಾವದಿಂದ ದೇಹದ ಒಳಗಿನ ಪ್ರಮುಖ ಅಂಗಗಳಿಗೆ ಆಗಿದ್ದ ಘಾಸಿಯನ್ನೂ ಕಡಿಮೆ ಮಾಡುತ್ತದೆ. ಹಾಲಿನಲ್ಲಿರುವ ಕಿಣ್ವಗಳು ಮನೋಭಾವವನ್ನು ಉತ್ತಮಗೊಳಿಸುವ ಗುಣ ಹೊಂದಿವೆ.
ಏಕಾಗ್ರತೆ ಹೆಚ್ಚಿಸಲು ನೆರವಾಗುತ್ತದೆ
ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಜೇನು ಅತ್ಯುತ್ತಮ ಆಹಾರವಾಗಿದೆ. ಇದು ಮೆದುಳಿನ ಒತ್ತಡವನ್ನು ಕಡಿಮೆಗೊಳಿಸುವ ಹಾಗೂ ಮೆದುಳಿನ ಸ್ಮರಣಶಕ್ತಿ ಹಾಗೂ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಹೊಂದಿದೆ. ಹಾಲು ಮತ್ತು ಜೇನಿನ ಮಿಶ್ರಣ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಹಾಗೂ ಏಕಾಗ್ರತೆಯಿಂದ ಕೆಲಸ್ ನಿರ್ವಹಿಸಲು ಉತ್ತಮವಾದ ಆಹಾರವಾಗಿದೆ.
ಹೊಟ್ಟೆಯ ಸೋಂಕುಗಳಿಂದ ರಕ್ಷಿಸುತ್ತದೆ
ಇದರ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣ ಹೊಟ್ಟೆಯಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಈ ಅದ್ಭುತ ಪೇಯದಲ್ಲಿರುವ ಕಿಣ್ವಗಳು ಆಹಾರವನ್ನು ಸುಲಭವಾಗಿ ಜೀರ್ಣಿಸಲು ನೆರವಾಗುತ್ತವೆ ಹಾಗೂ ಜಠರ ಹಾಗೂ ಒಟ್ಟಾರೆ ಜೀರ್ಣವ್ಯವಸ್ಥೆಯ ಕೆಲಸವನ್ನು ಉತ್ತಮಗೊಳಿಸಲು ನೆರವಾಗುತ್ತದೆ.