ಜೇನು ಅಪ್ಪಟವೇ ಅಥವಾ ಕಲಬೆರಕೆಯೇ? ಹೀಗೆ ಪರೀಕ್ಷಿಸಿ

By: Arshad
Subscribe to Boldsky

ಆರೋಗ್ಯಕ್ಕೆ ಉತ್ತಮವಾಗಿರುವ ಜೇನು ಇಂದು ಮಾರುಕಟ್ಟೆಯಲ್ಲಿ ಶುದ್ದರೂಪದಲ್ಲಿ ಸಿಗುವುದು ಅಪರೂಪ. ಏಕೆಂದರೆ ಮಾರುಕಟ್ಟೆಯಲ್ಲಿ ಕಲಬೆರಕೆ ಜೇನು ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಾಸ್ತವವಾಗಿ ದೊಡ್ಡ ದೊಡ್ಡ ಸಂಸ್ಥೆಗಳೂ ಜೇನು ಎಂಬ ಸುಂದರ ಲೇಬಲ್ ಅಂಟಿಸಿ ನೀಡುತ್ತಿರುವ ಉತ್ಪನ್ನವೂ ಅಸಲಿ ಜೇನೇ ಅಲ್ಲ, ಬದಲಿಗೆ ಕೊಂಚ ಜೇನಿನೊಂದಿಗೆ ಗ್ಲುಕೋಸ್ ದ್ರಾವಣ ಅಥವಾ ಇನ್ನಾವುದೋ ಸಿಹಿಪದಾರ್ಥವನ್ನು ಬೆರೆಸಿ ದೊಡ್ಡ ಬೆಲೆಗೆ ಮಾರಲಾಗುತ್ತದೆ. ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ

ಕೆಲವರಂತೂ ಜೇನಿಗೆ ಚಿನ್ನದ ಬಣ್ಣ ಬರಲು ಕೆಲವು ರಾಸಾಯನಿಕಗಳನ್ನೂ ಬೆರೆಸುತ್ತಾರೆ. ಕಲಬೆರಕೆ ಜೇನಿನಲ್ಲಿ ಹೆಚ್ಚಿನ ಫ್ರುಕ್ಟೋಸ್ ಸಕ್ಕರೆ ಇರುವ, ಆರೋಗ್ಯಕ್ಕೆ ಹಾನಿಕರವಾದ ಕಾರ್ನ್ ಸಿರಪ್ ಬೆರೆಸುತ್ತಿರುವುದು ನಿಮಗೆ ಗೊತ್ತಿದೆಯೇ? ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ

ಈ ಜೇನಿನ ಸೇವನೆಯಿಂದ ಸ್ಥೂಲಕಾಯ ಹೆಚ್ಚುವುದು, ಹೃದದ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಜೇನು ಅಪ್ಪಟವೋ ಎಂದು ಖಾತ್ರಿ ಪಡಿಸಿಕೊಳ್ಳಲು ಹೀಗೆ ಮಾಡಿ....  

ವಿಧಾನ #1

ವಿಧಾನ #1

ನಿಮಗೆ ಸಮೀಪವಿರುವ ಅಂಗಡಿಯಿಂದ ಜೇನನ್ನು ಕೊಂಡು ಪ್ರಯೋಗಕ್ಕೆ ಸಿದ್ಧಪಡಿಸಿ. ಇದಕ್ಕೆ ಒಂದು ದೊಡ್ಡಚಮಚ ಜೇನು ಸಾಕು. ಒಂದು ಲೋಟ ನೀರಿನಲ್ಲಿ ಜೇನು ತುಂಬಿದ ಈ ಚಮಚವನ್ನು ಕಲಕದೇ ನೇರವಾಗಿ ನೀರಿನಲ್ಲಿ ಇಳಿಬಿಡಿ. ಒಂದು ವೇಳೆ ಈ ಜೇನಿನಲ್ಲಿ ಕಲಬೆರಕೆ ಇದ್ದರೆ, ಈ ಜೇನು ಚಕಚಕನೇ ನೀರಿನಲ್ಲಿ ಕರಗಿ ಬಿಡುತ್ತದೆ. ಒಂದು ವೇಳೆ ಅಪ್ಪಟವಾಗಿದ್ದರೆ ಕಲಕದ ಹೊರತು ನೀರಿನಲ್ಲಿ ಕರಗದು.

ವಿಧಾನ #2

ವಿಧಾನ #2

ಇನ್ನೊಂದು ವಿಧಾನದಲ್ಲಿ ಕೆಲವು ಹನಿ ಜೇನನ್ನು ನೀರಿನೊಂದಿಗೆ ಬೆರೆಸಿ. ಕೊಂಚ ಶಿರ್ಕಾದ ಹನಿಗಳನ್ನು ಈ ನೀರಿನ ಮೇಲೆ ಚಿಮುಕಿಸಿ. ಒಂದು ವೇಳೆ ಈ ಹನಿಗಳು ಬಿದ್ದ ಬಳಿಕ ನೊರೆಯಾಗಿರುವುದು ಕಂಡುಬಂದರೆ ಜೇನು ಯಾವುದೋ ರಾಸಾಯನಿಕದೊಂದಿಗೆ ಕಲಬೆರಕೆಗೊಂಡಿದೆ ಎಂದು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಕಲಬೆರಕೆ ಮಾಡುವ ವಸ್ತುವೆಂದರೆ ಜಿಪ್ಸಂ!

ವಿಧಾನ #3

ವಿಧಾನ #3

ತುಂಬಾ ಸುಲಭವಾದ ಇನ್ನೊಂದು ವಿಧಾನವೆಂದರೆ ಜೇನಿನ ದ್ರವ ಹರಿಯುವ ಬಗೆಯನ್ನು ಗಮನಿಸುವುದು. ಒಂದು ಚಿಕ್ಕಚಮಚ ಜೇನನ್ನು ತೆಗೆದುಕೊಂಡು ಬಗ್ಗಿಸಿ. ಒಂದು ವೇಳೆ ಕಲಬೆರಕೆ ಇದ್ದರೆ ಈ ಜೇನು ಬೇಗಬೇಗನೇ ಬಿದ್ದು ಬಿಡುತ್ತದೆ.ಅಪ್ಪಟ ಜೇನು ಗಾಢವಾಗಿದ್ದು ಕೆಳಗೆ ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸ್ನಿಗ್ಧತೆ ಹೆಚ್ಚಿದ್ದಷ್ಟೂ ಜೇನು ಅಪ್ಪಟ ಎಂದು ತಿಳಿದುಕೊಳ್ಳಬಹುದು.

ವಿಧಾನ #4

ವಿಧಾನ #4

ಒಂದು ಬೆಂಕಿಕಡ್ಡಿಯನ್ನು ಗೀರಿ ಹಚ್ಚಿ ಜೇನಿಗೆ ಬೆಂಕಿಹಚ್ಚಲು ಯತ್ನಿಸಿ. ಅಪ್ಪಟ ಜೇನಾದರೆ ಬೆಂಕಿ ಹತ್ತಿಕೊಳ್ಳುತ್ತದೆ. ಆದರೆ ಕಲಬೆರಕೆ ಜೇನಿನಲ್ಲಿ ನೀರಿನ ಅಂಶವಿರುವ ಕಾರಣ ಬೆಂಕಿ ಹತ್ತಿಕೊಳ್ಳುವುದಿಲ್ಲ.

ವಿಧಾನ #5

ವಿಧಾನ #5

ಒಂದು ಚಿಕ್ಕಚಮಚ ಜೇನಿಗೆ ಕೊಂಚ ಅಯೋಡಿನ್ ದ್ರಾವಣವನ್ನು ಬೆರೆಸಿ. ಒಂದು ವೇಳೆ ಜೇನು ನೀಲಿ ಬಣ್ಣಕ್ಕೆ ತಿರುಗಿದರೆ ಇದು ಕಲಬೆರಕೆಯಾಗಿದೆ ಎಂದು ಅರ್ಥ. ಜೇನಿನಲ್ಲಿ ಪಿಷ್ಟವಿರುವ ವಸ್ತುವನ್ನು ಕಲಬೆರಕೆ ಮಾಡಿದ್ದರೆ ಹೀಗೆ ನೀಲಿಯಾಗುತ್ತದೆ. ಒಂದು ಚಿಕ್ಕ ಚಮಚ ಜೇನಿಗೆ ಒಂದೇ ಹನಿ ಅಯೋಡಿನ್ ಸಾಕಾಗುತ್ತದೆ.

ವಿಧಾನ #5

ವಿಧಾನ #5

ಜೇನಿನ ಶುದ್ಧತೆ ಪರೀಕ್ಷಿಸಲು ಇನ್ನೊಂದು ಸುಲಭ ವಿಧಾನವಿದೆ. ಒಂದು ಬ್ರೆಡ್ಡಿನ ತುಂಡನ್ನು ಒಂದು ದೊಡ್ಡಚಮಚದಷ್ಟು ಜೇನಿನಲ್ಲಿ ಮುಳುಗಿಸಿ. ಅಥವಾ ತುಂಡಿನ ಮೇಲೆ ಜೇನನ್ನು ಹರಡಿ ಕೆಲವು ನಿಮಿಷ ಒಣಗಲು ಬಿಡಿ. ಒಂದು ವೇಳೆ ಜೇನು ಅಪ್ಪಟವಾಗಿದ್ದರೆ ಬ್ರೆಡ್ ಕೆಲವು ನಿಮಿಷಗಳ ಬಳಿಕ ಗಟ್ಟಿಯಾಗುತ್ತದೆ. ಕಲಬೆರಕೆ ಜೇನಾಗಿದ್ದರೆ ಇದರಲ್ಲಿರುವ ನೀರಿನ ಅಂಶ ಬ್ರೆಡ್ ತುಂಡು ಮೃದುವಾಗಿಯೇ ಇರುವಂತೆ ಮಾಡುತ್ತದೆ.

ವಿಧಾನ #7

ವಿಧಾನ #7

ನೈಸರ್ಗಿಕ ಅಥವಾ ಕಾಡಿನ ಜೇನೇ ಏಕೆ ಅತ್ಯಂತ ಉತ್ತಮ? ಇದರಲ್ಲಿ ವಿಟಮಿನ್ನುಗಳಾದ A, B, C, D , E, ಅಮೈನೋ ಆಮ್ಲಗಳು ಹೇರಳವಾಗಿವೆ. ಅಲ್ಲದೇ ಇದರಲ್ಲಿ ಆಂಟಿ ಆಕ್ಸಿಡೆಂಟುಗಳೂ ಇದೆ ಹಾಗೂ ಜೇನಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯೂ ಇದೆ. ಜೇನು ಜೀರ್ಣಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

 
English summary

After Reading This, You Won't Buy Honey From Unreliable Places!!

Some go to an extent of adding certain chemicals to honey. Do you know that some adulterated honey also contains high fructose corn syrup which is bad for health? It could even cause obesity, heart disease and diabetes.
Please Wait while comments are loading...
Subscribe Newsletter