For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ಪಾದಗಳಿಗೆ ಮಸಾಜ್‌‌ ಮಾಡಿ, ವ್ಯತ್ಯಾಸ ನೋಡಿ!

By Arshad
|

ನಮ್ಮ ಶರೀರದ ಭಾರವನ್ನು ಇಡಿಯ ದಿನ ಹೊರುವ ಪಾದಗಳು ಬಹಳಷ್ಟನ್ನು ಸಹಿಸುತ್ತವೆ. ದಿನದ ನಡಿಗೆ, ಓಟ, ನಿಲ್ಲುವ ಮೊದಲಾದ ಚಟುವಟಿಕೆಗಳಲ್ಲಿ ಸತತವಾಗಿ ಪಾದಗಳ ಮೇಲೆ ಭಾರ ಬೀಳುತ್ತಲೇ ಇರುತ್ತದೆ. ಆದರೆ ನಾವು ಇತರ ಅಂಗಗಳಿಗೆ ವಹಿಸುವ ಆರೈಕೆಯ ಒಂದು ಭಾಗವನ್ನೂ ಪಾದಗಳಿಗೆ ನೀಡುವುದಿಲ್ಲ.

ಹಿಂದೆ ಮಲೆನಾಡಿನಲ್ಲಿ ಮನೆಯ ಹೊರಗೆ ಒಂದು ದೊಡ್ಡ ಮಡಕೆಯಲ್ಲಿ ತಣ್ಣೀರು ಮತ್ತು ಪಕ್ಕದಲ್ಲಿ ಚಪ್ಪಡಿ ಕಲ್ಲನ್ನು ಇಡಲಾಗುತ್ತಿತ್ತು. ಹೊರಗಿನಿಂದ ಬಂದವರು ಮನೆಯೊಳಗೆ ಬರುವ ಮುನ್ನ ತಣ್ಣೀರಿನಲ್ಲಿ ಕೈಕಾಲುಗಳ ಜೊತೆಗೇ ಪಾದಗಳನ್ನು ಕಲ್ಲಿಗೆ ಉಜ್ಜಿ ತೊಳೆದುಕೊಂಡೇ ಒಳಗೆ ಬರುತ್ತಿದ್ದರು. ಅಲ್ಲದೇ ಪ್ರತಿರಾತ್ರಿ ಮಲಗುವ ಮುನ್ನವೂ ಪಾದಗಳನ್ನು ತಣ್ಣೀರಿನಲ್ಲಿ ತೊಳೆದುಕೊಂಡು ಕಲ್ಲಿಗೆ ಉಜ್ಜಿಕೊಂಡು ಬರುವಂತೆ ತಿಳಿಸಲಾಗುತ್ತಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಹಿಂದಿನವರು ಅನುಸರಿಸುತ್ತಾ ಬಂದ ಬೇರೆಲ್ಲಾ ಅಭ್ಯಾಸಗಳಂತೆ ಇದೂ ಕಾಣೆಯಾಗಿದೆ. ತರ್ಕಕ್ಕೆ ನಿಲುಕದ್ದು: ಆರೋಗ್ಯ ವೃದ್ಧಿಗೆ, ಪಾದಗಳಿಗೆ ಮಸಾಜ್..!

ವಾಸ್ತವವಾಗಿ ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ತೊಳೆದುಕೊಂಡು ಉಜ್ಜಿಕೊಳ್ಳುವ ಮೂಲಕ ದಣಿದಿದ್ದ ಪಾದಗಳಿಗೆ ಉತ್ತಮ ಮಸಾಜ್ ಮತ್ತು ರಕ್ತಪರಿಚಲನೆ ದೊರಕುತ್ತಿತ್ತು. ಮಸಾಜ್ ನಿಂದ ಆರಾಮ ದೊರಕುವುದು ಮಾತ್ರವಲ್ಲ, ರಾತ್ರಿಯ ನಿದ್ದೆಯೂ ಚೆನ್ನಾಗಿ ಬರುತ್ತದೆ. ನಮ್ಮ ದೇಹದ ಕೆಲವು ಬಿಂದುಗಳಲ್ಲಿ ನರಾಗ್ರಗಳು ಕೇಂದ್ರೀಕೃತವಾಗಿದ್ದು ಈ ಭಾಗದಲ್ಲಿ ಮಸಾಜ್ ನೀಡುವ ಮೂಲಕ ದೇಹಕ್ಕೆ ಹೆಚ್ಚಿನ ಆರಾಮ ಮತ್ತು ವಿವಿಧ ಅಂಗಗಳಿಗೆ ಆರಾಮ ಮತ್ತು ಚಿಕಿತ್ಸೆಯನ್ನು ನೀಡಬಹುದು. ವಾಸ್ತವವಾಗಿ ಈ ವಿಧಾನವನ್ನು ಒಂದು ಚಿಕಿತ್ಸಾಕ್ರಮವಾಗಿ (reflexology) ಅನುಸರಿಸಲಾಗುತ್ತಿದೆ.

ಪಾದಗಳಿಗೆ ಮಸಾಜ್ ಮಾಡುವುದು ಒಂದು ಆರಾಮದಾಯಕ ಕ್ರಮ ಮಾತ್ರವಲ್ಲ, ಒಂದು ಚಿಕಿತ್ಸಕಾ ಕ್ರಮವೂ ಹೌದು. ಆದರೆ ಚಿಕಿತ್ಸಕ ರೀತಿಯಲ್ಲಿ ಸರಿಯಾದ ಮಸಾಜ್ ಮಾಡುವುದನ್ನು ಕೇವಲ ವೃತ್ತಿಪರರು ಅನುಸರಿಸಬಲ್ಲರು. ಉಳಿದಂತೆ ಸಾಮಾನ್ಯವಾಗಿ ಪಾದಗಳನ್ನು ಸುಲಭರೀತಿಯಲ್ಲಿ ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆ ಹೆಚ್ಚಿಸಿ ಪಾದಗಳಿಗೆ ಆರಾಮ ನೀಡಬಹುದು. ಇದರ ಉತ್ತಮ ಗುಣವೆಂದರೆ ನಮ್ಮ ಪಾದಗಳನ್ನು ನಾವೇ ಮಸಾಜ್ ಮಾಡಿಕೊಳ್ಳಬಹುದು. ಬನ್ನಿ, ಇದರ ಪ್ರಯೋಜನಗಳು ಏನು ಎಂಬುದನ್ನು ಈಗ ನೋಡೋಣ...

ಪ್ರಯೋಜನ #1

ಪ್ರಯೋಜನ #1

ಶರೀರಕ್ಕೆ ಆರಾಮ ನೀಡುವ ನರಾಗ್ರಕೇಂದ್ರಗಳಲ್ಲಿ ಪ್ರಮುಖವಾದ ಕೇಂದ್ರವಿರುವುದು ಪಾದಗಳಲ್ಲಿ. ಪಾದಗಳ ಮಸಾಜ್ ನಿಂದ ಗರಿಷ್ಠ ಪ್ರಚೋದನೆ ದೊರೆತು ದೇಹಕ್ಕೆ ಹೆಚ್ಚಿನ ಆರಾಮ ದೊರಕುತ್ತದೆ. ಇದು ಸುಖನಿದ್ದೆಗೆ ಕಾರಣವಾಗುತ್ತದೆ. ನಿದ್ದೆ ಬೇಗನೇ ಬರುತ್ತದೆ ಹಾಗೂ ತಡೆರಹಿತ ನಿದ್ದೆ ಪಡೆಯಲೂ ಸಾಧ್ಯವಾಗುತ್ತದೆ.

ಪ್ರಯೋಜನ #2

ಪ್ರಯೋಜನ #2

ಕೆಲವು ನರಾಗ್ರ ಕೇಂದ್ರಗಳ ಮಸಾಜ್ ಬೆನ್ನುನೋವನ್ನೂ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸರಿಯಾದ ಮಸಾಜ್ ಪಾದಗಳಿಗೆ ದೊರಕಿದರೆ ಬೆನ್ನುನೋವು ಕಡಿಮೆಯಾಗುತ್ತದೆ. ಆದರೆ ಇದನ್ನು ಕೇವಲ ವೃತ್ತಿಪರ ಮಸಾಜ್ ಸೇವೆ ನೀಡುವ ವ್ಯಕ್ತಿಗಳಿಂದ ಮಾತ್ರ ಸಾಧ್ಯ.

ಪ್ರಯೋಜನ #3

ಪ್ರಯೋಜನ #3

ಪಾದಗಳ ಮಸಾಜ್ ನಿಂದ ದೇಹಕ್ಕೂ ಆರಾಮ ದೊರಕುತ್ತದೆ. ಇದು ಮಾನಸಿಕ ಒತ್ತಡ ಮತ್ತು ಉದ್ವೇಗ ಮೊದಲಾದ ತೊಂದರೆಗಳನ್ನೂ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.

ಪ್ರಯೋಜನ #4

ಪ್ರಯೋಜನ #4

ಸಾಮಾನ್ಯವಾಗಿ ನಮ್ಮ ಒಳ ಉಡುಪು, ಹೊರ ಉಡುಪು, ಕಾಲುಚೀಲ, ವಾಚು, ಬೆಲ್ಟ್ ಮೊದಲಾದವು ಕೊಂಚವಾದರೂ ಒತ್ತಡ ನೀಡುವ ಮೂಲಕ ಸರಾಗವಾದ ರಕ್ತಪರಿಚಲನೆಗೆ ಅಡ್ಡಿಯುಂಟುಮಾಡುತ್ತವೆ. ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡುವ ಮೂಲಕ ರಕ್ತಪರಿಚಲನೆಯನ್ನು ಚುರುಕುಗೊಳಿಸಿ ಈ ಒತ್ತಡದ ಕಾರಣ ಕುಂಠಿತಗೊಂಡಿದ್ದ ಪರಿಚಲನೆಯನ್ನು ಸರಾಗಗೊಳಿಸುತ್ತದೆ.

ಪ್ರಯೋಜನ #5

ಪ್ರಯೋಜನ #5

ದಿನವಿಡಿ ಕುಳಿತಿರುವ ಕಾರಣ ತೊಡೆಗಳ ತಳಭಾಗ, ಕೆಳೆಬೆನ್ನು, ಪ್ರಷ್ಠದ ಸ್ನಾಯುಗಳೆಲ್ಲಾ ರಾತ್ರಿಯಾಗುತ್ತಿದ್ದಂತೆ ಪೆಡಸಾಗಿರುತ್ತವೆ. ಕೆಲವೊಮ್ಮೆ ಊದಿಕೊಳ್ಳುವುದೂ ಇದೆ. ನಿಯಮಿತವಾಗಿ ಪಾದಗಳಿಗೆ ಮಸಾಜ್ ಮಾಡುವ ಮೂಲಕ ಈ ಎಲ್ಲಾ ಸ್ನಾಯುಗಳು ಸಡಿಲಗೊಳ್ಳಲು ಸಾಧ್ಯವಿದೆ.

ಪ್ರಯೋಜನ #6

ಪ್ರಯೋಜನ #6

ಕೆಲವು ಸಂಶೋಧನೆಗಳ ಪ್ರಕಾರ ಸರಿಯಾದ ಕ್ರಮದಲ್ಲಿ ಪಾದಗಳಿಗೆ ಮಸಾಜ್ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ಸಮರ್ಪಕವಾಗಿ ಕಡಿಮೆಗೊಳಿಸಲು ಸಾಧ್ಯವಿದೆ.

ಪ್ರಯೋಜನ #7

ಪ್ರಯೋಜನ #7

ಕಾಲುನೋವು, ಪಾದಗಳ ನೋವನ್ನೂ ಈ ಮಸಾಜ್ ಮೂಲಕ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.

English summary

Why You Need Foot Massage Before Bed

Whether you realise it or not you place a lot of stress on your feet. You walk with them, stand on them and run throwing your weight on them but you seldom care for them. A foot massage can be relaxing and can also promote your health both physically and mentally. In fact, foot massage is an integral part of reflexology. What most of us don't know is the fact that feet have nerve endings which are direct connections to various organs in the body.
X
Desktop Bottom Promotion