Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆರೋಗ್ಯ ಟಿಪ್ಸ್: ಜೀರಿಗೆ-ಜೇನುತುಪ್ಪದ ಜಬರ್ದಸ್ತ್ ಪವರ್
ಹಿಂದಿನಿಂದಲೂ ಭಾರತೀಯ ಆಹಾರ ಪದ್ಧತಿ ಮತ್ತು ಸೇವಿಸುತ್ತಿದ್ದಂತಹ ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ಆರೋಗ್ಯ ಗುಣಗಳಿದ್ದವು. ಪ್ರತಿಯೊಂದು ಸಾಂಬಾರ ಪದಾರ್ಥಗಳನ್ನು ಹಿತಮಿತವಾಗಿ ಸೇವನೆ ಮಾಡಿದಾಗ ಅದರ ಆರೋಗ್ಯ ಲಾಭಗಳು ನಮಗೆ ಸಿಗುತ್ತದೆ. ಹೆಚ್ಚಾಗಿ ಆಯುರ್ವೇದದಲ್ಲಿಯೂ ಸಾಂಬಾರ ಪದಾರ್ಥಗಳನ್ನೇ ಬಳಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀರಿಗೆ: ಸೌಂದರ್ಯದ ಸರ್ವ ಸಮಸ್ಯೆಗೆ ಒಂದೇ ಪರಿಹಾರ
ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು ಇದನ್ನು ಕಡೆಗಣಿಸುತ್ತಾ ಇದ್ದಾರೆ. ಯಾಕೆಂದರೆ ಸಾಂಬಾರ ಪದಾರ್ಥಗಳನ್ನು ಕೇವಲ ಪದಾರ್ಥಗಳಿಗೆ ಮಾತ್ರ ಬಳಸುತ್ತೇವೆ. ಅದರ ನೆನಪಾಗುವುದು ನಮಗೆ ಅಡುಗೆ ಕೋಣೆಗೆ ಹೋದಾಗ ಮಾತ್ರ. ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ
ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಅನಾರೋಗ್ಯವನ್ನು ಗುಣಪಡಿಸಬಹುದು ಮತ್ತು ಬರುವಂತಹ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಸಾಂಬಾರ ಪದಾರ್ಥಗಳನ್ನು ಸೇವನೆ ಮಾಡುವ ಕಾರಣದಿಂದಾಗಿ ನಿಮ್ಮ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಜೀರಿಗೆ ನೀರು ಮತ್ತು ಜೇನುತುಪ್ಪನ್ನು ಸೇರಿಸಿಕೊಂಡು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದನ್ನು ಹೇಗೆ ಮಾಡಿಕೊಳ್ಳುವುದು ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು
*ಜೇರಿಗೆ -2 ಚಮಚ
*ಜೇನುತುಪ್ಪ- 2 ಚಮಚ
*ನೀರು- ಒಂದು ಕಪ್

ತಯಾರಿಸುವ ವಿಧಾನ
*ನೀರನ್ನು ಒಂದು ತಳ ಆಳವಿರುವ ಪಾತ್ರೆಯಲ್ಲಿ ಬಿಸಿ ಮಾಡಿ. ಕುದಿಯುವ ನೀರಿಗೆ ಎರಡು ಚಮಚ ಜೀರಿಗೆ ಹಾಕಿ. ಹತ್ತು ನಿಮಿಷ ಹಾಗೆ ಕುದಿಯಲು ಬಿಡಿ. ನೀರನ್ನು ಸೋಸಿ ತೆಗೆಯಿರಿ.
*ಇನ್ನು ಈ ನೀರಿಗೆ ಎರಡು ಚಮಚ ಜೇನುತುಪ್ಪ ಹಾಕಿ, ತಣ್ಣಗಾದ ಬಳಿಕ ದಿನಕ್ಕೆ ಒಂದು ಗ್ಲಾಸ್ ನಂತೆ ಕುಡಿಯಿರಿ.
ಬನ್ನಿ ಮುಂದಿನ ಸ್ಲೈಡ್‌ನಲ್ಲಿ ಜೀರಿಗೆ ನೀರು ಮತ್ತು ಜೇನುತುಪ್ಪದಿಂದ ಆಗುವಂತಹ ಆರೋಗ್ಯ ಲಾಭಗಳನ್ನು ಈ ಲೇಖನದಲ್ಲಿ ಓದಿಕೊಂಡು ತಿಳಿಯಿರಿ.

ಕಲ್ಮಶಗಳನ್ನು ಹೊರಹಾಕುವುದು
ರಕ್ತದಲ್ಲಿರುವ ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ಮೂತ್ರ ಮತ್ತು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ಇದು ಶುದ್ಧೀಕರಿಸುವ ಕೆಲಸ ಮಾಡುವ ಕಾರಣದಿಂದಾಗಿ ಅನಾರೋಗ್ಯವನ್ನು ದೂರವಿಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ
ಜೀರಿಗೆ ನೀರು ಮತ್ತು ಜೇನುತುಪ್ಪವು ಆರೋಗ್ಯಕಾರಿಯಾಗಿ ಜೀರ್ಣ ಕ್ರಿಯೆ ರಸವು ಸ್ರವಿಸುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ ಹಲವಾರು ರೀತಿಯ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮಲಬದ್ಧತೆ ನಿವಾರಣೆ
ಜೀರಿಗೆ ನೀರು ಮತ್ತು ಜೇನುತುಪ್ಪವು ಮಲಬದ್ಧತೆ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮಲ ಸರಾಗವಾಗಿ ಹೊರಬರಲು ಇದು ಕರುಳನ್ನು ಹೆಚ್ಚು ನಯಗೊಳಿಸುತ್ತದೆ.

ಕ್ಯಾನ್ಸರ್ ತಡೆಯುವುದು
ಜೀರಿಗೆಯಲ್ಲಿ ಕ್ಯುಮಿನಾಲ್ಡೆಹೈಡೆ ಎನ್ನುವ ಅಂಶವಿದ್ದು, ಇದು ದೇಹದಲ್ಲಿ ಕ್ಯಾನ್ಸರ್ ನ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ರಕ್ತದೊತ್ತಡ ನಿಯಂತ್ರಣ
ದೇಹದಲ್ಲಿರುವ ವಿದ್ಯುದ್ವಿಚ್ಛೇದ್ಯ ಸಮತೋಲಿತವಾಗಿ ನಿಯಂತ್ರಣದಲ್ಲಿಡಲು ಬೇಕಾಗಿರುವಂತಹ ಪೊಟಾಶಿಯಂ ಜೀರಿಗೆ ನೀರು ಮತ್ತು ಜೇನುತುಪ್ಪದಲ್ಲಿದೆ. ಇದರಿಂದಾಗಿ ದೇಹದ ರಕ್ತದೊತ್ತಡವು ಆರೋಗ್ಯಕರ ರೀತಿಯಲ್ಲಿ ನಿಯಂತ್ರಣದಲ್ಲಿರುತ್ತದೆ.

ಅಸ್ತಮಾಗೆ ಚಿಕಿತ್ಸೆ
ಜೀರಿಗೆ ನೀರು ಮತ್ತು ಜೇನುತುಪ್ಪದ ಮಿಶ್ರಣದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಉಸಿರಾಟದ ವ್ಯವಸ್ಥೆಯಲ್ಲಿರುವ ಮ್ಯೂಕಸ್ ಒಳಪದರದ ಉರಿಯೂತ ತಗ್ಗಿಸಿ ಅಸ್ತಮಾ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.



Click it and Unblock the Notifications










