For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಟಿಪ್ಸ್: ಬಾಳೆಕಾಯಿಯ ಪವರ್‌ಗೆ ಬಹುಪರಾಕ್!

By Hemanth
|

ಅಗ್ಗದ ಬೆಲೆಯಲ್ಲಿ ದೊರೆಯುವ ಅಂತೆಯೇ ಎಲ್ಲರಿಗೂ ಹೆಚ್ಚು ಪ್ರಿಯವಾಗಿರುವ ಬಾಳೆಹಣ್ಣು ತನ್ನಲ್ಲಿ ಯಥೇಚ್ಛ ಪೋಷಕಾಂಶಗಳನ್ನು ಒಳಗೊಂಡಿದೆ. ಯಾವುದರೊಂದಿಗೂ ಹೊಂದಿಕೊಳ್ಳು ಬಾಳೆ ಜೀರ್ಣಕ್ರಿಯೆಯಲ್ಲಿ ಹೆಚ್ಚು ಸಹಾಯಕವಾದುದು. ಆದರೆ ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವ ಮಹತ್ವದ ವಿಷಯ ಬಾಳೆಹಣ್ಣಿಗಿಂತ ಬಾಳೆಕಾಯಿಯಲ್ಲಿರುವ ವಿಶಿಷ್ಟ ಗುಣಗಳ ಕುರಿತಾಗಿದೆ. ಹಣ್ಣಿನಂತೆ ಬಾಳೆಯ ಕಾಯಿಯನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲ ಅಂತೆಯೇ ಇದನ್ನು ಚೆನ್ನಾಗಿ ಬೇಯಿಸಿದ ನಂತರವೇ ಇದನ್ನು ಸೇವಿಸಲು ಸಾಧ್ಯವಾಗುವುದು.

ಆದರೆ ರುಚಿಯಲ್ಲಿ ಹಿಂದಿದ್ದರೂ ಬಾಳೆಯ ಕಾಯಿ ತನ್ನ ಅಸಾಮಾನ್ಯ ಗುಣದಿಂದ ಬಾಳೆಪ್ರಿಯರ ಅಚ್ಚುಮೆಚ್ಚಿನದ್ದಾಗಿದೆ. ನಮ್ಮಲ್ಲೂ ಬಾಳೆಯ ಕಾಯಿಯಿಂದ ಹಲವಾರು ಭಕ್ಷ್ಯಗಳನ್ನು ತಯಾರಿಸುತ್ತಾರೆ. ನೀವು ಎಣಿಸದೇ ಇರುವ ಹಲವಾರು ಅಂಶಗಳನ್ನು ಬಾಳೆಕಾಯಿ ಒಳಗೊಂಡಿದ್ದು ಇಂದಿನ ಲೇಖನದಲ್ಲಿ ನಾವು ಅದನ್ನು ತಿಳಿಸುತ್ತಿದ್ದೇವೆ.

ತೂಕ ಕಳೆದುಕೊಳ್ಳುವುದು

ತೂಕ ಕಳೆದುಕೊಳ್ಳುವುದು

ದಿನಕ್ಕೊಂದು ಕಚ್ಚಾ ಬಾಳೆಕಾಯಿಯನ್ನು ತಿಂದರೆ ತೂಕ ಕಳೆದುಕೊಳ್ಳಬಹುದು, ಅಲ್ಲದೆ ಇದರಲ್ಲಿರುವ ಉನ್ನತ ಮಟ್ಟದ ನಾರಿನಾಂಶವು ಕರುಳನ್ನು ಶುಚಿಗೊಳಿಸಿ ಬೇಡದ ಕೊಬ್ಬಿನ ಕೋಶಗಳನ್ನು ತೆಗೆದುಹಾಕುತ್ತದೆ. ಇದರಿಂದ ದೇಹದಲ್ಲಿನ ಕಲ್ಮಶವು ಹೊರಹೋಗುವುದು.

ಮಲಬದ್ಧತೆಯಿಂದ ಮುಕ್ತಿ

ಮಲಬದ್ಧತೆಯಿಂದ ಮುಕ್ತಿ

ಕಚ್ಚಾ ಬಾಳೆಕಾಯಿಯಲ್ಲಿರುವ ಪಿಷ್ಠ ಮತ್ತು ನಾರಿನಾಂಶವು ಅಧಿಕವಾಗಿರುವ ಕಾರಣ ಇದು ಕರುಳಿನಲ್ಲಿ ಸುಲಭವಾಗಿ ಸಾಗುತ್ತದೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆಯವರಿಗೆ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ನೈಸರ್ಗಿಕವಾಗಿ ಹಸಿವು ನಿವಾರಣೆ

ನೈಸರ್ಗಿಕವಾಗಿ ಹಸಿವು ನಿವಾರಣೆ

ದಿನಕ್ಕೊಂದು ಕಚ್ಚಾ ಬಾಳೆಕಾಯಿಯನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆಯಾಗುವುದು ಹಾಗೂ ಆಗಾಗ ಹಸಿವಾಗುವುದು ನಿಲ್ಲುತ್ತದೆ. ಇದರಿಂದ ತೂಕ ಹೆಚ್ಚಳವಾಗುವ ಸಮಸ್ಯೆ ಇಲ್ಲ.

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ಕಚ್ಚಾ ಬಾಳೆಕಾಯಿ ದೇಹದಲ್ಲಿನ ಕೋಶಗಳು ಗ್ಲೂಕೋಸ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದರಿಂದ ಇನ್ಸುಲಿನ್ ಮಟ್ಟವು ನಿಯಂತ್ರಣದಲ್ಲಿದ್ದು, ಮಧುಮೇಹ ಬರದಂತೆ ತಡೆಯುವುದು.

ಆರೋಗ್ಯಕರ ಜೀರ್ಣಕ್ರಿಯೆ

ಆರೋಗ್ಯಕರ ಜೀರ್ಣಕ್ರಿಯೆ

ಇದು ಕರುಳಿನ ಅರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಪಡಿಸುವುದು. ಇದರಿಂದ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ ಕರುಳಿನ ಗೋಡೆಗಳ ಮೇಲೆ ಬೆಳೆದು ಆ್ಯಸಿಡಿಟಿ ನಿವಾರಣೆಯಾಗುವುದು.

ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು

ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು

ಅಧ್ಯಯನಗಳ ಪ್ರಕಾರ ಆಹಾರ ಪದಾರ್ಥಗಳಲ್ಲಿ ಕಚ್ಚಾ ಬಾಳೆಕಾಯಿಯನ್ನು ಬಳಸುವುದರಿಂದ ಕರುಳಿನ ಕ್ಯಾನ್ಸರ್ ನ್ನು ತಡೆಗಟ್ಟಬಹುದು. ಅಲ್ಲದೆ ಕರುಳಿನ ಗೋಡೆಗಳಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕುವುದರಿಂದ ಕರುಳು ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು.

ಮೂಳೆಗಳಿಗೆ ಒಳ್ಳೆಯದು

ಮೂಳೆಗಳಿಗೆ ಒಳ್ಳೆಯದು

ಇದರಲ್ಲಿರುವ ವಿಟಮಿನ್, ಮೆಗ್ನಿಶಿಯಂ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳ್ಳುವಂತೆ ಮಾಡುವುದು. ಇದರಿಂದ ನೋವು ಮತ್ತು ಅಸ್ಟಿಸ್ಪೋರಿಸಿಸ್ ಬರದಂತೆ ತಡೆಯುವುದು.

ಭಾವನೆಗಳ ಬದಲಾವಣೆ ನಿಯಂತ್ರಣ

ಭಾವನೆಗಳ ಬದಲಾವಣೆ ನಿಯಂತ್ರಣ

ಅಧ್ಯಯನಗಳ ಪ್ರಕಾರ, ಇದರಲ್ಲಿರುವ ಆ್ಯಮಿನೊ ಆ್ಯಸಿಡ್ ಮೆದುಳಿನಲ್ಲಿ ರಾಸಾಯನಿಕವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದರಿಂದ ಭಾವನೆಗಳ ಬದಲಾವಣೆಯಾವುದು ನಿಯಂತ್ರಣದಲ್ಲಿರುತ್ತದೆ.

English summary

What Happens When You Eat One Raw Banana Everyday?

Most of us have devoured banana-split sundaes and banana shakes to our hearts' content. Apart from making for a tasty treat, banana is a fruit that also comes with numerous health benefits! It is one of the most important natural sources of potassium that can keep your body energised and improve your immune system.
X
Desktop Bottom Promotion