For Quick Alerts
ALLOW NOTIFICATIONS  
For Daily Alerts

  ಪಪ್ಪಾಯಿ ಬೀಜದಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಪವರ್

  By Super
  |

  ಪಪ್ಪಾಯಿ ಹಣ್ಣು ಎಂದರೇ ನಮ್ಮಲ್ಲಿ ಹೆಚ್ಚಿನವರಿಗೆ ಇಷ್ಟವಿಲ್ಲದ ಹಣ್ಣು. ಅದರಲ್ಲೂ ಪಪ್ಪಾಯಿಯ ಬೀಜವೇ? ಇಸ್ಸೀ.. ಎಂದೇ ಮೂಗು ಮುರಿಯಬಹುದು. ಕೆಲ ವರ್ಷಗಳ ಹಿಂದಿನವರೆಗೂ ಮಲೆನಾಡಿನ ಅಪ್ಪಟ ಸಾಂಬಾರ ಪದಾರ್ಥವಾಗಿದ್ದ ಕಾಳುಮೆಣಸಿಗೆ ವಿಶ್ವಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಮತ್ತು ಬೆಲೆ ಇತ್ತು.  ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

  ಆದರೆ ಲಾಭಕೋರತನ ಮನೋಭಾವದ ವ್ಯಾಪಾರಿಗಳು ನೋಡಲು ಕೊಂಚ ಕಾಳುಮೆಣಸಿನಂತೆಯೇ ಇರುವ ಪಪ್ಪಾಯಿ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕಲಬೆರಕೆ ಮಾಡಿ ವಿದೇಶಕ್ಕೆ ಕಳುಹಿಸಿದ್ದರ ಪರಿಣಾಮವಾಗಿ ಭಾರತದ ಅಷ್ಟೂ ಕಾಳುಮೆಣಸನ್ನು ಅಲ್ಲಿನ ಗುಣಮಟ್ಟ ತಂತ್ರಜ್ಞರು ನಿರಾಕರಿಸಿದ್ದರಿಂದ ಭಾರತ ವಿಶ್ವಮಾರುಕಟ್ಟೆಯಲ್ಲಿ ಮುಜುಗರ, ಅವಮಾನ ಮತ್ತು ಕವಡೆಕಾಸಿನ ಬೆಲೆಗೆ ನಮ್ಮ ಕಾಳುಮೆಣಸನ್ನು ಮಾರಬೇಕಾಗಿ ಬಂದಿತ್ತು. ಇದೇ ಕಾರಣಕ್ಕೆ ಇಂದು ಕಾಳುಮೆಣಸಿಗೆ ಬೆಲೆ ಇಳಿದಿರುವುದು. ಇದೇ ರೀತಿ ವನಿಲ್ಲಾದಲ್ಲಿ ತಂತಿಯ ತುಂಡುಗಳನ್ನೂ ಸೇರಿಸಿ ಇದನ್ನೂ ಅಧ್ವಾನವಾಗಿಸಿದ್ದಾರೆ. 

  ಆದರೆ ಕೆಲಸಕ್ಕೆ ಬಾರದು ಎಂದು ಪಪ್ಪಾಯಿಯ ಬೀಜಗಳನ್ನು ಏಕಾಏಕಿ ಕಳಪೆ ಎನ್ನಲಾಗದು. ಏಕೆಂದರೆ ಇತ್ತೀಚಿನ ಸಂಶೋಧನೆಗಳು ಇದರಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎನ್ನುತ್ತವೆ. ವಿಶೇಷವಾಗಿ ಹೊಟ್ಟೆಹುಳದ ತೊಂದರೆಗೆ ಇದೊಂದು ಸಮರ್ಥ ಮದ್ದು ಎಂದು ತಿಳಿಸುತ್ತಿವೆ. ಉತ್ತಮ ಪರಿಣಾಮಕ್ಕಾಗಿ ಪಪ್ಪಾಯಿ ಹಣ್ಣಿನಿಂದ ನಿವಾರಿಸಿದ ಹಸಿಬೀಜವನ್ನು ನುಂಗಬೇಕು. ಆದರೆ ಇದು ಅತಿ ಕಹಿಯಾಗಿರುವ ಕಾರಣ ಇದನ್ನು ಅರೆದು ನಯವಾದ ಲೇಪನಮಾಡಿ ಇತರ ಸಾಲಾಡ್‌ಗಳೊಂದಿಗೆ ಸೇರಿಸಿ ಸೇವಿಸಬಹುದು. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

  ಪ್ರಮುಖ ಎಚ್ಚರಿಕೆ ಎಂದರೆ ಪಪ್ಪಾಯಿ ಹಣ್ಣನ್ನಾಗಲೀ, ಕಾಯಿಯನ್ನಾಗಲೀ, ಬೀಜವನ್ನಾಗಲೀ ಗರ್ಭಿಣಿಯರು, ಹಾಲೂಣಿಸುತ್ತಿರುವ ತಾಯಿಯರು ಮತ್ತು ಗರ್ಭಧರಿಸುವ ಪ್ರಯತ್ನದಲ್ಲಿರುವವರು ಸರ್ವಥಾ ಸೇವಿಸಕೂಡದು. ಅಲ್ಲದೇ ಮಕ್ಕಳೂ ವೈದ್ಯರ ಸಲಹೆಯ ಹೊರತಾಗಿ ಈ ಬೀಜಗಳನ್ನು ಸೇವಿಸಬಾರದು. ಆದರೆ ಹಣ್ಣನ್ನು ಸೇವಿಸಬಹುದು. ಏಕೆಂದರೆ ಇದರ ಬೀಜದಲ್ಲಿರುವ ರಾಸಯನಿಕಗಳು ಪ್ರಬಲವಾಗಿದ್ದು ಮಕ್ಕಳ ಕೋಮಲ ಅಂಗಗಳಿಗೆ ಹಾನಿಯುಂಟುಮಾಡಬಹುದು. ಬನ್ನಿ, ಈ ಬೀಜಗಳ ಪ್ರಯೋಜನಗಳ ಬಗ್ಗೆ ಅರಿಯೋಣ..

  ಪ್ರಯೋಜನ #1

  ಪ್ರಯೋಜನ #1

  ಪಪ್ಪಾಯಿ ಬೀಜಗಳಲ್ಲಿಯೂ ಪಪಾಯಿನ್ ಎಂಬ ಅಂಶವಿದ್ದು ಇದು ಜೀರ್ಣಕ್ರಿಯೆಗೆ ಅಪಾರವಾದ ಸಹಾಯ ಮಾಡುತ್ತದೆ.

  ಪ್ರಯೋಜನ #2

  ಪ್ರಯೋಜನ #2

  ಹೊಟ್ಟೆಯಲ್ಲಿ ಹುಳಗಳಿದ್ದರೆ ದಿನಕ್ಕೆ ಎರಡು ಬಾರಿ ಸುಮಾರು ಹತ್ತರಷ್ಟು ಬೀಜಗಳನ್ನು ಅರೆದು ತಿನ್ನಬೇಕು. ಇದರಲ್ಲಿರುವ ತೀಕ್ಷ್ಣ ರಾಸಾಯನಿಕಗಳು ಹೊಟ್ಟೆ, ಕರುಳು, ಅಪೆಂಡಿಕ್ಸ್ ಮೊದಲಾದೆಡೆ ಅಡಗಿ ಕುಳಿತಿದ್ದ ಕ್ರಿಮಿಗಳನ್ನು ನಾಶಪಡಿಸುತ್ತದೆ. ಸರಿಸುಮಾರು ತನ್ನ ಬಾಯಿಯಿಂದ ಕರುಳಿನ ಒಳಭಾಗವನ್ನು ಕಚ್ಚಿಹಿಡಿದು ಹೊರಬರಲು ನಿರಾಕರಿಸುವ ಲಾಡಿಹುಳಕ್ಕೂ ಈ ಬೀಜಗಳು ತಕ್ಕ ಬುದ್ಧಿ ಕಲಿಸಿ ಹೊರಹಾಕುತ್ತವೆ.

  ಪ್ರಯೋಜನ #3

  ಪ್ರಯೋಜನ #3

  ಪಪ್ಪಾಯಿ ಬೀಜಗಳು ನೈಸರ್ಗಿಕವಾದ ಸಂತಾನನಿಯಂತ್ರಕಗಳಾಗಿದ್ದು ಇದರ ಸೇವನೆಯಿಂದ ಪುರುಷರಲ್ಲಿ ವೀರ್ಯದ ಪ್ರಾಬಲ್ಯವನ್ನು ಕಡಿಮೆಗೊಳಿಸಿ ಗರ್ಭಾಂಕುರವಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

  ಪ್ರಯೋಜನ #4

  ಪ್ರಯೋಜನ #4

  ಕೆಲವು ಬಗೆಯ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಈ ಬೀಜಗಳು ಸಮರ್ಥವಾಗಿವೆ.

  ಪ್ರಯೋಜನ #5

  ಪ್ರಯೋಜನ #5

  ಈ ಬೀಜಗಳು ಉತ್ತಮವಾದ ಉರಿಯೂತ ನಿವಾರಕಗಳಾಗಿರುವ ಕಾರಣ ಸಂಧಿವಾತ, ಸಂಧಿಗಳಲ್ಲಿ ಉರಿ, ನೋವು, ಬಾವು ಮೊದಲಾದ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ.

  ಪ್ರಯೋಜನ #6

  ಪ್ರಯೋಜನ #6

  ಕೆಲವು ಮಾರಕ ಬ್ಯಾಕ್ಟೀರಿಯಾಗಳಾದ ಸ್ಟಾಫ್, ಈ ಕೊಲೈ, ಸಾಲ್ಮೋನೆಲ್ಲಾ ಮೊದಲಾದವುಗಳ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ಈ ಬ್ಯಾಕ್ಟೀರಿಯಾಗಳಿಂದ ಎದುರಾಗುವ ಟೈಫಾಯ್ಡ್, ಡೆಂಗ್ಯೂ ಮತ್ತಿತರ ವೈರಸ್ ಆಧಾರಿತ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ.

  ಪ್ರಯೋಜನ #7

  ಪ್ರಯೋಜನ #7

  ಈ ಬೀಜಗಳ ಸೇವನೆಯಿಂದ ಯಕೃತ್‌ನ ಜೀವಕೋಶಗಳು ನಿಧಾನವಾಗಿ ಮರಗಟ್ಟಿ ನಿಶ್ಚೇಷ್ಟಿತಗೊಳಿಸುವ cirrhosis of the liver ಎಂಬ ತೊಂದರೆಯಿಂದ ರಕ್ಷಣೆ ಪಡೆಯಬಹುದು. ಉತ್ತಮ ಪರಿಣಾಮಕ್ಕಾಗಿ ಈ ಬೀಜಗಳನ್ನು ಕೊಂಚ ಲಿಂಬೆರಸದೊಂದಿಗೆ ಸೇವಿಸಬೇಕು.

  ಪ್ರಯೋಜನ #8

  ಪ್ರಯೋಜನ #8

  ಈ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಮೂತ್ರಪಿಂಡಗಳೂ ಸುಸ್ಥಿತಿಯಲ್ಲಿರುತ್ತವೆ.

  ಪರಾವಲಂಬಿ ಕ್ರಿಮಿಗಳನ್ನು ಕೊಲ್ಲುತ್ತದೆ

  ಪರಾವಲಂಬಿ ಕ್ರಿಮಿಗಳನ್ನು ಕೊಲ್ಲುತ್ತದೆ

  ಕೆಲವೊಮ್ಮೆ ಕರುಳುಗಳಲ್ಲಿರುವ ಲಾಡಿಹುಳ ಮೊದಲಾದವು ಎಷ್ಟು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ ಎಂದರೆ ಸುಲಭವಾಗಿ ನಿವಾರಣೆ ಸಾಧ್ಯವಿಲ್ಲ. ಇದಕ್ಕೆ ಸಾಮಾನ್ಯವಾಗಿ ಮಿಲ್ಕ್ ಆಫ್ ಮೆಗ್ನೀಶಿಯಾ ಎಂಬ ದ್ರವವನ್ನು ನೀಡಲಾಗುತ್ತದೆ. ಕ್ಷಾರೀಯವಾದ ಈ ದ್ರವ ಕ್ರಿಮಿಯನ್ನು ಸಡಿಲಿಸಿ ವಿಸರ್ಜನೆ ಮೂಲಕ ದೇಹದಿಂದ ಹೊರಹಾಕುತ್ತದೆ. ಆದರೆ ಈ ದ್ರವ ಇಲ್ಲದಿದ್ದಾಗ ಪಪ್ಪಾಯಿ ಬೀಜದ ಪುಡಿ ಸೇರಿಸಿದ ಹಾಲು ಅಥವಾ ನೀರು ಸಹಾ ಇದೇ ಕೆಲಸ ಮಾಡುತ್ತದೆ.

  ಸಂಧಿವಾತಕ್ಕೂ ಉತ್ತಮ

  ಸಂಧಿವಾತಕ್ಕೂ ಉತ್ತಮ

  ಇದರ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಗುಣಪಡಿಸಲು ಮತ್ತು ಮೂಳೆಗಳು ಹೆಚ್ಚಿನ ದೃಢತೆ ಪಡೆಯಲು ನೆರವಾಗುತ್ತದೆ.

  ಆದ್ದರಿಂದ ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಪಪ್ಪಾಯಿ ಬೀಜವನ್ನು ಮುಂದಿನ ಬಾರಿ ಪಪ್ಪಾಯಿ ಹಣ್ಣನ್ನು ಕತ್ತರಿಸಿದ ಬಳಿಕ ಅದರ ಕಪ್ಪು ಬೀಜಗಳನ್ನು ಎಸೆಯದೇ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಕುಟ್ಟಿ ಪುಡಿಮಾಡಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿದರೆ ಸುಮಾರು ಒಂದು ವರ್ಷದವರೆಗೂ ಉಪಯೋಗಿಸಬಹುದು.

   

  English summary

  What Happens If You Eat Papaya Seeds?

  Some of us hate to eat papaya. And the rest of us eat papaya but we throw away the seeds. But many studies claim that they too contain many medicinal properties. They can prevent liver issues and even eliminate worms in the gut.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more