Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಕಣ್ಣಿಗೆ ಧೂಳು ಬಿದ್ದರೆ ಚಿಂತಿಸದಿರಿ, ಇಲ್ಲಿದೆ ಸರಳ ಟ್ರಿಕ್ಸ್
ಮೊನ್ನೆ ನನ್ನ ಕಣ್ಣಿಗೆ ಕಸ ಬಿದ್ದಿತ್ತು ಕಣೋ, ಇದಕ್ಕೆ ಡಾಕ್ಟ್ರ ಹತ್ತಿರ ಹೋದಾಗ ನೂರು ರೂಪಾಯಿ ಖರ್ಚಾಯಿತು ಎಂದಾಗ ಆತನ ಸ್ನೇಹಿತ-ನೀನೇ ಎಷ್ಟೋ ಪರವಾಗಿಲ್ಲ, ಮೊನ್ನೆ ನನ್ನ ಹೆಂಡತಿ ಕಣ್ಣಿಗೆ ಆ ಸೀರೆ ಬಿದ್ದಿತ್ತು, ಸಾವಿರ ರೂಪಾಯಿ ಖರ್ಚಾಯ್ತು ಎಂದನಂತೆ! ನಗೆಹನಿ ನಗು ಬರಿಸಿದರೂ ಕಣ್ಣಿಗೆ ಬಿದ್ದ ಕಸ ಮಾತ್ರ ಖಂಡಿತಾ ಕಣ್ಣೀರು ಬರುಸುತ್ತದೆ. ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗಗಳಾದ ಕಣ್ಣುಗಳ ಮೇಲೆ ಸದಾ ತೇವವಾದ ಪಸೆ ಇರಬೇಕು. ಈ ಪಸೆಗೆ ಗಾಳಿಯಲ್ಲಿರುವ ಧೂಳು, ಹೊಗೆ, ಪರಾಗ ಮತ್ತಿತರ ಕಣಗಳು ಅಂಟುತ್ತಲೇ ಇರುತ್ತವೆ. ಆದರೆ ಕಣ್ಣುರೆಪ್ಪೆ ಮಿಟುಕಿಸಿ ಈ ಕಲ್ಮಶಗಳನ್ನೆಲ್ಲಾ ಗುಡಿಸುತ್ತಲೇ ಇರುತ್ತದೆ. ಕಣ್ಣಿಗೆ ಭಾದೆ ತರುವ ಕೆಂಗಣ್ಣು ರೋಗಕ್ಕೆ ಪರಿಹಾರವೇನು?
ಆದರೆ ಕೆಲವೊಮ್ಮ ಧೂಳಿನ ದೊಡ್ಡ ಕಣಗಳು ಅಥವಾ ದೊಡ್ಡ ಗಾತ್ರದ ಕಸ ಬಿದ್ದರೆ ಮಾತ್ರ ಕಣ್ಣಿನಲ್ಲಿ ಉರಿ, ನೋವು, ಅಸಹನೆಯುಂಟಾಗುತ್ತದೆ. ಚಿಕ್ಕವರಿದ್ದಾಗ ನಾವೆಲ್ಲಾ ಒಂದು ಬಟ್ಟೆಯನ್ನು ಗಂಟುಕಟ್ಟಿ ಬಿಸಿಗಾಳಿಯೂದಿ ಬಿಸಿಯಾದ ಬಟ್ಟೆಯನ್ನು ಕಣ್ಣಿನ ಮೇಲಿಟ್ಟು ಕಸ ನಿವಾರಿಸುತ್ತಿದ್ದೆವು. ಆದರೆ ವೈದ್ಯರು ಈ ವಿಧಾನ ತಪ್ಪು ಎನ್ನುತ್ತಾರೆ. ಹಾಗಾದರೆ ಸರಿಯಾದ ಕ್ರಮ ಯಾವುದು? ಕೆಳಗಿನ ಸ್ಲೈಡ್ ಶೋನಲ್ಲಿ ಕೆಲವು ಸುಲಭ ಮತ್ತು ಸುರಕ್ಷಿತವೆಂದು ಸಾಬೀತಾದ ವಿಧಾನಗಳನ್ನು ನೀಡಲಾಗಿದ್ದು ಇದರಲ್ಲಿ ಸೂಕ್ತವಾದುದನ್ನು ಆಯ್ದುಕೊಳ್ಳಿ...

ಪಟಪಟನೇ ಕಣ್ಣು ಮಿಟುಕಿಸುವುದು
ಕಣ್ಣಿನಲ್ಲಿ ಕಸ ಬಿದ್ದರೆ ಪಟಪಟನೇ ಕಣ್ಣು ಮಿಟುಕಿಸುವುದರಿಂದ ಶಮನ ದೊರಕುತ್ತದೆ. ವಾಸ್ತವವಾಗಿ ಕಾರಿನ ಗಾಜಿನ ವೈಪರ್ ವೇಗ ಹೆಚ್ಚಿಸಿ ನೀರನ್ನು ಬೇಗಬೇಗನೇ ತೊಡೆಯುವಂತೆ ಕಸವನ್ನು ಕಣ್ಣಿನ ತಳಭಾಗಕ್ಕೆ ಇದರಿಂದ ನೂಕಲು ಸಾಧ್ಯ. ಬಳಿಕ ನಿಧಾನವಾಗಿ ಕಸವನ್ನು ಕಣ್ಣಿನ ತುದಿಯಿಂದ ನಿವಾರಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಟಪಟನೇ ಕಣ್ಣು ಮಿಟುಕಿಸುವುದು
ಆದರೆ ಇದು ಸೂಕ್ಷ್ಮ ಧೂಳು ಮತ್ತು ನವಿರಾದ ಕಸವಾಗಿದ್ದರೆ ಮಾತ್ರ ಉಳಿತು. ದೊಣ್ಣ ಕಣ, ಉದಾಹರಣೆಗೆ ಮರಳು, ಗಾಳಿಯಲ್ಲಿ ಹಾರಿಬಂದ ಕಡ್ಡಿ, ಕಸ, ಹುಳ ಮೊದಲಾದವುಗಳಿಗೆ ಈ ವಿಧಾನ ಸೂಕ್ತವಲ್ಲ, ಮತ್ತು ಅಪಾಯಕರ ಸಹಾ.

ಕಣ್ರೆಪ್ಪೆಯನ್ನು ಮೇಲಕ್ಕೆತ್ತಿ ಕಸ ನಿವಾರಿಸಿ
ಕೆಲವೊಮ್ಮೆ ದೊಣ್ಣ ಕಣಗಳು ಕಣ್ಣಿಗೆ ಬಿದ್ದು ಆ ಕ್ಷಣದಲ್ಲಿಯೇ ಕಣ್ಣನ್ನು ಮಿಟುಕಿಸಿದ ಕಾರಣ ಆ ಕಸ ಕಣ್ರೆಪ್ಪೆಯ ಅಡಿಗೆ ತೂರಿಬಿಡುತ್ತದೆ. ಹೀಗಾದಾಗ ಬಹುತೇಕ ಜನರು ಮಾಡುವ ದೊಡ್ಡ ತಪ್ಪೆಂದರೆ ಕಣ್ಣನ್ನು ಉಜ್ಜಿಕೊಳ್ಳುವುದು. ಇದರಿಂದ ರೆಪ್ಪೆಯ ಒಳಭಾಗದಲ್ಲಿರುವ ಕಸ ಕಣ್ಣಿನ ಮಸೂರದ ಮೇಲೆ ಒತ್ತಡಹೇರಿ ಸೂಕ್ಷ್ಮ ಗೀರು ಮತ್ತು ಗಾಯವನ್ನುಂಟುಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ರೆಪ್ಪೆಯನ್ನು ಮೇಲಕ್ಕೆತ್ತಿ ಕಸ ನಿವಾರಿಸಿ
ಬದಲಿಗೆ ಕಣ್ರೆಪ್ಪೆಯನ್ನು ನಿಧಾನವಾಗಿ ಎತ್ತಿ ಕೆಳಗಿನ ರೆಪ್ಪೆಯ ಮೇಲೆ ಅಂಟಿಸಿ. ಆಗ ಮೇಲ್ರೆಪ್ಪೆಗೆ ಅಂಟಿಕೊಂಡಿದ್ದ ಕಸ ಕಳಗೆ ಅಂಟಿಕೊಂಡು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಸ್ವತಃ ನಿವಾರಿಸಲು ಸಾಧ್ಯವಾಗದಿದ್ದಲ್ಲಿ ಯಾರದ್ದಾದರೂ ಸಹಾಯ ಪಡೆಯಿರಿ. ಒಮ್ಮೆಯೇ ನಿವಾರಿಸಲು ಸಾಧ್ಯವಾಗದಿದ್ದರೆ ಕೆಲವಾರು ಬಾರಿ ಪುನರಾವರ್ತಿಸಿ.

ತಣ್ಣೀರಿನಿಂದ ತೊಳೆದುಕೊಳ್ಳಿ
ಇದೊಂದು ಸುರಕ್ಷಿತವಾದ ವಿಧಾನವಾಗಿದೆ. ಧೂಳು ಚಿಕ್ಕದಾಗಿದ್ದರೆ ಅಂಗೈಯಲ್ಲಿ ನೀರು ತುಂಬಿಸಿ ಕಣ್ಣನ್ನು ಆ ನೀರಿನಲ್ಲಿ ಮುಳುಗಿಸಿ ಆ ನೀರಿನಲ್ಲಿ ತೆರೆದು ಮುಚ್ಚಬೇಕು. ಆಗ ಧೂಳು ನೀರಿನಲ್ಲಿ ಬಂದುಬಿಡುತ್ತದೆ. ಕಣ ದೊಡ್ಡದಾಗಿದ್ದರೆ ನಲ್ಲಿಯ ನೀರು ನಿಧಾನವಾಗಿ ತೆರೆದ ಕಣ್ಣುಗಳ ಮೂಲಕ ಹರಿಯುವಂತೆ ಮಾಡಬೇಕು. ಆದರೆ ಈ ನೀರು ತಣ್ಣಗೆ ಮತ್ತು ಸ್ವಚ್ಛವಾಗಿರುವುದು ಅಗತ್ಯ. ನೀರು ಕಣ್ಣಿಗೆ ಯಾವುದೇ ಹಾನಿ ಎಸಗುವುದಿಲ್ಲ.

ಹತ್ತಿಯ ಕಡ್ಡಿಯನ್ನು ಉಪಯೋಗಿಸಿ
ಒಂದು ವೇಳೆ ಕಣ ಕಣ್ಣುರೆಪ್ಪೆಯ ಅಡಿ ಸಿಲುಕಿಕೊಂಡಿದ್ದರೆ ಮೊದಲು ಮೇಲ್ರೆಪ್ಪೆಯನ್ನು ಮಡಚಿ ಒಳಭಾಗ ಹೊರಬರುವಂತೆ ಮಾಡಿ. ಸಾಮಾನ್ಯವಾಗಿ ಕಸ ಇಲ್ಲಿ ಅಂಟಿಕೊಂಡಿರುತ್ತದೆ. ಈಗ ಹತ್ತಿಯ ಕಡ್ಡಿಯನ್ನು ಉಪಯೋಗಿಸಿ ಈ ಕಸವನ್ನು ನಿವಾರಿಸಿ. ಕಡ್ಡಿ ಕಣ್ಣಿನ ಪಾಪೆಗೆ ತಾಕದಂತೆ ಎಚ್ಚರವಹಿಸಿ.

ಮನೆಯವರ ಸಹಾಯ ಪಡೆಯಿರಿ
ಒಂದು ವೇಳೆ ಕಣ ಸಾಕಷ್ಟು ದೊಡ್ಡದಾಗಿದ್ದು ಬಡಪೆಟ್ಟಿಗೆ ಮಣಿಯುವಂತೆ ಕಾಣದಿದ್ದರೆ ಸ್ವತಃ ನಿವಾರಿಸಲು ಹೋಗಬೇಡಿ. ಮನೆಯವರ ಸಹಾಯದಿಂದ ಕಣ್ಣುರೆಪ್ಪೆಯನ್ನು ಮೇಲೆಳೆದು ಹತ್ತಿಯ ಸುರುಳಿಯ ತುದಿ ಇರುವ ಕಣ್ಣಿಯನ್ನು ಉಪಯೋಗಿಸಿ ನವಿರಾಗಿ ಕಸವನ್ನು ಹೊರತೆಗೆಯಿರಿ. ಇದಕ್ಕೆ ಕೊಂಚ ಪರಿಣಿತಿ ಅಗತ್ಯ.



Click it and Unblock the Notifications