Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ತರ್ಕಕ್ಕೆ ನಿಲುಕದ್ದು: ಆರೋಗ್ಯ ವೃದ್ಧಿಗೆ, ಪಾದಗಳಿಗೆ ಮಸಾಜ್..!
ನಮ್ಮ ದೇಹದ ಭಾರವನ್ನು ಪೂರ್ಣವಾಗಿ ಹೊರುವ ಪಾದಗಳು ಒಂದು ಅಮೂಲ್ಯ ಅಂಗಗಳಾಗಿವೆ. ಚೀನಾ ವೈದ್ಯಪದ್ಧತಿಯಲ್ಲಂತೂ ಪಾದಗಳಿಗೆ ವಿಶೇಷ ಆರೈಕೆ ಮತ್ತು ದೇಹದ ವಿವಿಧ ಭಾಗಗಳಿಗೆ ಪಾದದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪಾದಗಳು ಇಡಿಯ ದೇಹದ ಅಂಗಗಳಿಗೆ ಶಾರೀರಿಕ ಹಾಗೂ ಮಾನಸಿಕ ಅಥವಾ ನರತಂತುಗಳ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಹೊಂದಿವೆ. ಪಾದಗಳಿಗೆ ಮಸಾಜ್ ಮಾಡುವ ಮೂಲಕ ದೇಹದ ಅಂಗಗಳಿಗೆ ಪೋಷಣೆ ನೀಡಬಹುದು.
ಆದರೆ ಈ ವಿದ್ಯೆ ಅಷ್ಟು ಸುಲಭವಲ್ಲ. ಇದಕ್ಕೆ ಕೊಂಚ ಪರಿಣಿತಿ ಅಗತ್ಯ. ‘reflexology' ಎಂದು ಕರೆಯುವ ಈ ವಿದ್ಯೆಯ ಮೂಲಕ ಪಾದಗಳಿಗೆ ಸೂಕ್ತ ಮಸಾಜ್ ನೀಡಿ ದೇಹ ಹಾಗೂ ಮನಸ್ಸುಗಳಿಗೆ ಮುದ ನೀಡಲು ಮತ್ತು ಒತ್ತಡದ ಮನಸ್ಸು ನಿರಾಳವಾಗಲು ಸಾಧ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ...

ಉತ್ತಮ ಆರೋಗ್ಯಕ್ಕಾಗಿ ಪಾದದ ’ಟಾಯಿ ಚಾಂಗ್’ ಒತ್ತಡ ಸ್ಥಾನ
ನಮ್ಮ ಪಾದಗಳ ಹೆಬ್ಬೆರಳು ಮತ್ತು ಎರಡನೆಯ ಬೆರಳ ನಡುವಣ ಸ್ಥಳಕ್ಕೆ ಚೀನೀ ವೈದ್ಯವಿಧಾನದಲ್ಲಿ ಹೆಚ್ಚಿನ ಮಹತ್ವವಿದೆ. 'ಟಾಯಿ ಚಾಂಗ್' (Tai Chong pressure point ) ಎಂಬ ಹೆಸರಿನ ಈ ಸ್ಥಳಕ್ಕೆ ಸರಿಯಾದ ಕ್ರಮದಲ್ಲಿ ಮಸಾಜ್ ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ನಂಬಲಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಪಾದದ ’ಟಾಯಿ ಚಾಂಗ್’ ಒತ್ತಡ ಸ್ಥಾನ
'ಟಾಯಿ ಚಾಂಗ್' ಸ್ಥಳ ಸೂಜಿ ಚುಚ್ಚಿ ನೀಡುವ ವೈದ್ಯಪದ್ಯಪದ್ಧತಿಯಲ್ಲಿ ಆಕ್ಯುಪಂಕ್ಚರ್ ವಿಧಾನದಲ್ಲಿ ಅತ್ಯಂತ ಪ್ರಮುಖ ಸ್ಥಾನವಾಗಿದೆ. ಈ ಸ್ಥಾನಕ್ಕೆ LR3 ಅಥವಾ ‘Great Surge' ಎಂಬ ಹೆಸರುಗಳೂ ಇವೆ. ಈ ಸ್ಥಾನದಲ್ಲಿ ನೀಡುವ ಚಿಕಿತ್ಸೆಯಿಂದ ಯಕೃತ್ ಗೆ ವಿಶೇಷವಾದ ಆರೈಕೆ ದೊರಕುತ್ತದೆ. ಈ ಆರೈಕೆ ದೈಹಿಕ ಹಾಗೂ ಮಾನಸಿಕವಾಗಿ ಇಡಿಯ ದೇಹಕ್ಕೆ ಆರಾಮ ನೀಡುತ್ತದೆ. ದೇಹದಲ್ಲಿ ಆಗುವ ನೋವುಗಳನ್ನು ನಿವಾರಿಸಲು ಈ ಸ್ಥಾನವನ್ನು ಮಸಾಜ್ ಮಾಡುವುದನ್ನು ಬಹಳ ಹಿಂದಿನಿಂದಲೇ ಚೀನೀಯರು ಕಂಡುಕೊಂಡಿದ್ದರು.

ಉತ್ತಮ ಆರೋಗ್ಯಕ್ಕಾಗಿ ಪಾದದ ’ಟಾಯಿ ಚಾಂಗ್’ ಒತ್ತಡ ಸ್ಥಾನ
ಅಷ್ಟೇ ಅಲ್ಲ, ಈ ಸ್ಥಾನಕ್ಕೆ ವಿವಿಧ ರೀತಿಯಲ್ಲಿ ಮಸಾಜ್ ಮಾಡುವ ಮೂಲಕ ದೇಹದ ಪ್ರಮುಖ ಭಾಗಳಾದ ತಲೆ (ತಲೆನೋವು) ಮೂಳೆ (ಸಂಧಿವಾತ) ಮತ್ತು ಸ್ನಾಯುಗಳು (ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಕಾಡುವ ನೋವು) ಮೊದಲಾದವುಗಳಿಗೂ ಉತ್ತಮ ಪರಿಹಾರ ದೊರಕುವುದನ್ನು ಕಂಡುಕೊಂಡಿದ್ದರು.

ಹಲವು ಸಮಸ್ಯೆಗಳಿಗೆ ರಾಮಬಾಣ...
'ಟಾಯಿ ಚಾಂಗ್' ಸ್ಥಾನಕ್ಕೆ ಸೂಕ್ತವಾದ ಮಸಾಜ್ ಮಾಡುವ ಮೂಲಕ ದೇಹದ ಇನ್ನೂ ಹಲವು ತೊಂದರೆಗಳನ್ನು ನಿವಾರಿಸಬಹುದು. ಉದಾಹರಣೆಗೆ ಅಧಿಕ ರಕ್ತದೊತ್ತಡ, ಯಕೃತ್ ನ ತೊಂದರೆ ಇತ್ಯಾದಿ. ಪುರಾತನ ಚೀನೀ ವೈದ್ಯವಿಜ್ಞಾನದ ಹೊತ್ತಿಗೆಗಳಲ್ಲಿ ಈ ಪದ್ಧತಿಯಿಂದ ಕಣ್ಣುಗಳ ದೃಷ್ಟಿ, ಬಾಯಿಗಳ ಹುಣ್ಣು ಮತ್ತು ಅಜೀರ್ಣದ ತೊಂದರೆಗಳನ್ನೂ ನಿವಾರಿಸುತ್ತದೆ ಎಂದು ತಿಳಿಸಲಾಗಿದೆ.

ಹಲವು ಸಮಸ್ಯೆಗಳಿಗೆ ರಾಮಬಾಣ...
ಇವುಗಳನ್ನು ಆಧರಿಸಿದ ಪದ್ಧತಿಯಾದ ಆಕ್ಯುಪಂಕ್ಚರ್ ನಲ್ಲಿಯೂ ಈ ಸ್ಥಾನಕ್ಕೆ ಬಹಳ ಮಹತ್ವವಿದೆ. ಅಧಿಕ ರಕ್ತದೊತ್ತಡದ ತೊಂದರೆ ಇರುವ ರೋಗಿಗಳಿಗೆ ಈ ವಿಧಾನ ಫಲಪ್ರದ ಎಂದು ಕಂಡುಬಂದಿದೆ. ಅಲ್ಲದೇ plasma endothelin-1 ಎಂಬ ಪೋಷಕಾಂಶಗಳು ಕಡಿಮೆಯಾಗುವ ಮೂಲಕ ನರಗಳ ಒಳಭಾಗ ಸಂಕುಚಿತಗೊಂಡು ಕಿರಿದಾಗುವ ನರಗಳನ್ನು ಹಿರಿದುಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.

ಮಾನಸಿಕ ಲಾಭಗಳು
'ಟಾಯಿ ಚಾಂಗ್' ಸ್ಥಾನಕ್ಕೆ ಮಸಾಜ್ ಅಥವಾ ಆಕ್ಯುಪಂಕ್ಚರ್ ವಿಧಾನದಿಂದ ನೀಡಲಾಗುವ ಚಿಕಿತ್ಸೆಯಿಂದ ದೈಹಿಕ ಪರಿಣಾಮಗಳ ಜೊತೆಗೆ ಮಾನಸಿಕ ಪರಿಣಾಮಗಳನ್ನೂ ಕಾಣಲಾಗಿದೆ. ಇಲ್ಲಿನ ಮಸಾಜ್ ಮೆದುಳಿಗೆ ಶಾಂತಗೊಳಿಸುವ ಸೂಚನೆಗಳನ್ನು ನರಗಳ ಮೂಲಕ ನೀಡಲು ಸಾಧ್ಯವಾಗುತ್ತದೆ. ಇದರಿಂದ ಉದ್ವೇಗ, ಕೀಳರಿಮೆ, ನಿದ್ರಾರಹಿತ ಸ್ಥಿತಿ ಮೊದಲಾದ ತೊಂದರೆಗಳಿಗೆ ಉತ್ತಮ ಪರಿಹಾರ ದೊರಕುತ್ತದೆ.

ಮಾನಸಿಕ ಲಾಭಗಳು
ಸಾಮಾನ್ಯವಾಗಿ ವಯಸ್ಸಿನ ಕಾರಣ ಹಲವು ದೈಹಿಕ ತೊಂದರೆಗಳು ಎದುರಾಗುವ ಮುನ್ಸೂಚನೆಗಳನ್ನು ಕೆಲವು ನೋವುಗಳು ನೀಡುತ್ತವೆ. ಈ ನೋವುಗಳನ್ನು ಅರಿತು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಈ ತೊಂದರೆಗಳನ್ನು ಸಾಕಷ್ಟು ಮುಂದಕ್ಕೆ ಹಾಕಬಹುದು.

ಸರ್ವಾಂಗೀಣ ಚಿಕಿತ್ಸೆಯಲ್ಲಿ ಮಸಾಜ್ ನ ಮಹತ್ವ
ಸರ್ವಾಂಗೀಣ ಚಿಕಿತ್ಸೆ(holistic medicine) ಯಲ್ಲಿ ಯಕೃತ್ ಗೆ ವಿಶೇಷ ಮಹತ್ವವಿದೆ. ಅಂದರೆ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಯಕೃತ್ ಗೆ ನೇರವಾದ ಸಂಬಂಧವಿದೆ. ಕೊಡುಗೈ ದಾನಿ, ಕರುಣೆ, ಸಹಾನುಭೂತಿ ಮೊದಲಾದ ಗುಣಗಳನ್ನು ಇತರರ ಬಗ್ಗೆ ತೋರ್ಪಡಿಸಲು ಯಕೃತ್ ಉತ್ತಮ ಆರೋಗ್ಯದಲ್ಲಿರುವುದು ಮುಖ್ಯ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರ್ವಾಂಗೀಣ ಚಿಕಿತ್ಸೆಯಲ್ಲಿ ಮಸಾಜ್ ನ ಮಹತ್ವ
ಒಂದು ವೇಳೆ ಯಾವುದೇ ಕಾರಣಕ್ಕೆ ಯಕೃತ್ ನ ಕಾರ್ಯಕ್ಷಮತೆ ಏರುಪೇರಾದರೆ ಮಾನಸಿಕವಾಗಿಯೂ ಏರುಪೇರುಗಳನ್ನು ಕಾಣಬಹುದು. ಮದ್ಯ ಕುಡಿದ ಬಳಿಕ ಇದರ ಅಮಲು ಯಕೃತ್ ನ ಕ್ಷಮತೆಯನ್ನು ಕುಗ್ಗಿಸುವುದರಿಂದಲೇ ಅಮಲಿನಲ್ಲಿದ್ದ ವ್ಯಕ್ತಿ ರಾಕ್ಷಸನಾಗುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರ್ವಾಂಗೀಣ ಚಿಕಿತ್ಸೆಯಲ್ಲಿ ಮಸಾಜ್ ನ ಮಹತ್ವ
ಕೆಟ್ಟ ಕೆಲಸಗಳಿಗೆ ಮನಸ್ಸಾಗುತ್ತದೆ. ಸಿಟ್ಟು, ಆಕ್ರೋಶ, ಖಿನ್ನತೆ, ಹೊಟ್ಟೆಕಿಚ್ಚು ಮೊದಲಾದ ಮಾನಸಿಕ ವ್ಯಗ್ರತೆಗಳು ಕಂಡುಬರುತ್ತವೆ. ಸರ್ವಾಂಗೀಣ ಚಿಕಿತ್ಸೆಯಲ್ಲಿ 'ಟಾಯಿ ಚಾಂಗ್' ಸ್ಥಾನಕ್ಕೆ ಮಸಾಜ್ ಅಥವಾ ಚಿಕಿತ್ಸೆ ನೀಡುವ ಮೂಲಕ ಮಾನಸಿಕವಾಗಿ ಹೆಚ್ಚು ದೃಢರಾಗಲು ಸಾಧ್ಯವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರ್ವಾಂಗೀಣ ಚಿಕಿತ್ಸೆಯಲ್ಲಿ ಮಸಾಜ್ ನ ಮಹತ್ವ
ಅಷ್ಟೇ ಅಲ್ಲ, ಕ್ರಿಯಾತ್ಮಕತೆ, ಆರನೆಯ ಇಂದ್ರಿಯದ ಕ್ಷಮತೆಯನ್ನು ಹೆಚ್ಚಿಸುವುದು ಮತ್ತು ಸಂದರ್ಭ ಹಾಗೂ ವ್ಯಕ್ತಿಗಳ ಭಾವಕ್ಕೆ ಅನುಸಾರವಾಗಿ ಪ್ರತಿಕ್ರಿಯಿಸಲು ಹೆಚ್ಚಿನ ಕ್ಷಮತೆ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಯಾವುದೇ ತೊಂದರೆ ಎದುರಾದರೂ ಅದಕ್ಕೆ ಸೂಕ್ತ ಪರಿಹಾರವನ್ನು ತಕ್ಷಣ ಕಂಡುಕೊಳ್ಳಲು ಸಾಧ್ಯವಾಗುತ್ತದೆ.



Click it and Unblock the Notifications










