For Quick Alerts
ALLOW NOTIFICATIONS  
For Daily Alerts

  ಆರೋಗ್ಯಕಾರಿ ಟಿಪ್ಸ್: ಕ್ಯಾರೆಟ್ ಎಣ್ಣೆಯ ಚಿನ್ನದಂತಹ ಗುಣಗಳು

  By Manu
  |

  ಸಾಮಾನ್ಯವಾಗಿ ಕ್ಯಾರೆಟ್ ಅನ್ನು ನಾವೆಲ್ಲಾ ಗಡ್ಡೆಯ ರೂಪದಲ್ಲಿ ಮಾತ್ರ ಸೇವಿಸಿದ್ದೇವೆ. ಆದರೆ ಇತ್ತೀಚೆಗೆ ಇದರ ಬೀಜದಿಂದ ಸಂಸ್ಕರಿಸಲಾದ ಎಣ್ಣೆಯನ್ನೂ ತೆಗೆಯಲಾಗುತ್ತಿದ್ದು ಇದರ ಆರೋಗ್ಯಕರ ಪ್ರಯೋಜನಗಳನ್ನು ಪಡೆಯುವಂತಾಗಿದೆ. ಕ್ಯಾರೆಟ್ ಅನ್ನು ಬಲಿತ ಬಳಿಕವೂ ಕೀಳದೇ ಗಿಡದಲ್ಲಿಯೇ ಹೂವಾಗಲು ಬಿಟ್ಟು ಬೀಜ ಬಲಿತ ಬಳಿಕ ಹಿಂಡಿ ತೆಗೆದ ಎಣ್ಣೆ ಕೊಂಚ ಮರದ ಹೊಟ್ಟಿನ ಪರಿಮಳ ಹೊಂದಿರುತ್ತದೆ ಹಾಗೂ ಚಿನ್ನದಂತಹ ಹಳದಿ ಬಣ್ಣ ಹೊಂದಿರುತ್ತದೆ.   ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

  ಈ ಎಣ್ಣೆಯ ಪ್ರಯೋಜನಗಳಲ್ಲಿ ಪ್ರಥಮವಾಗಿ ಪರಿಗಣಿಸುವುದಾದರೆ ಇದರ ಕ್ಯಾನ್ಸರ್ ನಿರೋಧಕ ಶಕ್ತಿಯಾಗಿದೆ. ಹೊಟ್ಟೆ, ಬಾಯಿ, ಕರುಳು, ಪ್ರಾಸ್ಟ್ರೇಟ್ ಗ್ರಂಥಿ ಮೊದಲಾದ ಅಂಗಗಳಿಗೆ ಆವರಿಸುವ ಕ್ಯಾನ್ಸರ್ ತಡೆಗಟ್ಟಲು ಉತ್ತಮವಾಗಿದೆ. ಅಲ್ಲದೇ ಪಿತ್ತ ಮತ್ತು ಹೊಟ್ಟೆಯಲ್ಲಿನ ಆಮ್ಲೀಯತೆ ಕಡಿಮೆಗೊಳಿಸಿ ಹೊಟ್ಟೆಯಲ್ಲಿನ ಕಲ್ಮಶಗಳನ್ನು ಹೊರಹಾಕಲೂ ಸಮರ್ಥವಾಗಿದೆ. ಇದರ ಮೂತ್ರವರ್ಧಕ ಗುಣ ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.

  Top Health Benefits of Carrot Seed Essential Oil
   

  ಅಲ್ಲದೇ ಇದರ ವೈರಸ್ ನಿರೋಧಕ ಗುಣ ಹಲವು ಶ್ವಾಸಸಂಬಂಧಿ ರೋಗಗಳನ್ನು ತಡೆಯಲು ಮತ್ತು ನಿವಾರಿಸಲು ಸಕ್ಷಮವಾಗಿದ್ದು ಶೀತ, ಅಸ್ತಮಾ ಮತ್ತು ಮೂಗಿನ ಒಳಭಾಗದ ಸೋಂಕು (mumps) ಮೊದಲಾದವುಗಳನ್ನು ನಿವಾರಿಸಲು ಸಹಕರಿಸುತ್ತದೆ. ಅಷ್ಟೇ ಅಲ್ಲ, ಇದೊಂದು ಉತ್ತಮ ಸೋಂಕುನಿವರಕವೂ ಆಗಿದ್ದು ವಿಶೇಷವಾಗಿ ಗ್ಯಾಂಗ್ರೀನ್, ಗಾಯಗಳು, ಚರ್ಮರೋಗಗಳಾದ ಸೋರಿಯಾಸಿಸ್ ಮತ್ತು ಬೊಬ್ಬೆಗಳೇಳುವ carbuncles ಮೊದಲಾದ ಕಾಯಿಲೆಗಳ ಚಿಕಿತ್ಸೆಗೂ ನೆರವಾಗುತ್ತದೆ.

  ಈ ಎಣ್ಣೆ ಒಂದು ಉತ್ತಮ ವಿಷನಿವಾರಕವೂ ಆಗಿದ್ದು ವಿಶೇಷವಾಗಿ ಯಕೃತ್ ನಲ್ಲಿ ಹೆಚ್ಚಿನ ಪ್ರಮಾಣದ ಪಿತ್ತರಸ ಸ್ರವಿತವಾದರೆ ಅದನ್ನು ಶಮನಗೊಳಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಿಂದ ಯೂರಿಕ್ ಆಮ್ಲವನ್ನು ನಿವಾರಿಸಿ ಸಂಧಿವಾತ ಮತ್ತು ರ್‍ಹೂಮ್ಯಾಟಿಕ್ ನೋವನ್ನೂ ಕಡಿಮೆಮಾಡುತ್ತದೆ. ಹೊಟ್ಟೆಯುಬ್ಬರಿಕೆ, ಎದೆಯುರಿ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ಅಪಾನವಾಯುವಿನ ಪ್ರಕೋಪವನ್ನೂ ಕಡಿಮೆಮಾಡುತ್ತದೆ.

  Top Health Benefits of Carrot Seed Essential Oil
   

  ಇದು ಉತ್ತಮ ನಂಜುನಿರೋಧಕವೂ ಆಗಿದ್ದು ತೆರೆದ ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಅಲ್ಲದೇ ಹೊಟ್ಟೆ ಮತ್ತು ಬಾಯಿಯಲ್ಲಿ ಆಗಿರುವ ಹುಣ್ಣುಗಳನ್ನು ಮಾಗಿಸಲೂ ನೆರವಾಗುತ್ತದೆ. ದೇಹದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುವ ಮೂಲಕ ಈ ಎಣ್ಣೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ನಮ್ಮ ಜೀರ್ಣವ್ಯವಸ್ಥೆ, ವಿಸರ್ಜನಾ ವ್ಯವಸ್ಥೆ ಮತ್ತು ರಕ್ತಪರಿಚಲನಾವ್ಯವಸ್ಥೆಗಳನ್ನು ಸುಸ್ಥಿತಿಯಲ್ಲಿಡಲು ಸಹಕರಿಸುತ್ತದೆ.  

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಘಾಸಿಗೊಂಡ ಅಂಗಾಂಶಗಳನ್ನು ಪುನಃಶ್ಚೇತನಗೊಳಿಸಲು ನೆರವಾಗುತ್ತದೆ. ಅಲ್ಲದೇ ಚರ್ಮ, ಕೂದಲುಗಳನ್ನು ಉತ್ತಮ ಸ್ಥಿತಿಯಲ್ಲಿರಿಸಲೂ ನೆರವಾಗುತ್ತದೆ. ತನ್ಮೂಲಕ ಚರ್ಮದ ಸೆಳೆತ ಹೆಚ್ಚಿಸಿ ನೆರಿಗೆಗಳಾಗದಂತೆ ಕಾಪಾಡುತ್ತದೆ. ಅಲ್ಲದೇ ಮೂಳೆಗಳ ಗಂಟುಗಳು ಸಡಿಲವಾಗದಂತೆ ಮತ್ತು ಸ್ನಾಯುಗಳು ಬಲ ಕಳೆದುಕೊಳ್ಳದಿರಲು ನೆರವಾಗುತ್ತದೆ. ಕಣ್ಣುಗಳ ಆರೋಗ್ಯವನ್ನೂ ಕಾಪಾಡುತ್ತದೆ.           ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

  ಮಹಿಳೆಯರ ಮಾಸಿಕ ದಿನಗಳಲ್ಲಿ ಈ ಎಣ್ಣೆ ಉತ್ತಮ ನೋವುನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಅನಿಯಮಿತವಾಗಿದ್ದ ದಿನಗಳನ್ನು ನಿಯಮಿತವಾಗಿಸಲು ಸಹಕರಿಸುತ್ತದೆ. ವಿಶೇಷವಾಗಿ ಕೆಳಹೊಟ್ಟೆಯಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ಅಂಗಗಳು ಸರಿಯಾಗಿ ಕೆಲಸ ಮಾಡುವಂತೆ ಸಹಕರಿಸುತ್ತದೆ. ಕ್ಯಾರೆಟ್ ಬೀಜದ ಎಣ್ಣೆಯಲ್ಲಿ ನರಗಳನ್ನು ಪ್ರಚೋದಿಸುವ ಗುಣವಿರುವ ಕಾರಣ ನರವ್ಯವಸ್ಥೆ ಮತ್ತು ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಅಲ್ಲದೇ ಈ ಪ್ರಚೋದನೆ ವಿವಿಧ ಗ್ರಂಥಿಗಳಿಂದ ಸೂಕ್ತ ಪ್ರಮಾಣದ ರಸದೂತ ಮತ್ತು ಕಿಣ್ವಗಳು ಒಸರುವಂತೆ ಮಾಡಿ ದೇಹದ ಬೆಳವಣಿಗೆ ಸರಿಯಾದ ಕ್ರಮದಲ್ಲಿ ಆಗುವಂತೆ ಸಹಕರಿಸುತ್ತದೆ.

  Top Health Benefits of Carrot Seed Essential Oil
   

  ಈ ಎಣ್ಣೆ ಒಂದು ಕೀಟಾಣುನಿವಾರಕವೂ ಆಗಿದ್ದು ವಿಶೇಷವಾಗಿ ಕರುಳುಗಳಲ್ಲಿ ಆಶ್ರಯ ಪಡೆದಿದ್ದ ಹುಳ, ಕೀಟ, ಕ್ರಿಮಿಗಳನ್ನು ಹೊರಹಾಕಲು ನೆರವಾಗುತ್ತದೆ. ದೇಹದ ಅಂಗಾಂಶಗಳು ಮತ್ತು ಸ್ನಾಯುಗಳಿಗೆ ಹೆಚ್ಚಿನ ಬಲ ನೀಡುವ ಮೂಲಕ ಇವುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಬಳಲಿಕೆಗೆ ಕಾರಣವಾಗುವ ಉದ್ವೇಗ ಮತ್ತು ಒತ್ತಡಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲೂ ನೆರವಾಗುತ್ತದೆ.      

  ಎಚ್ಚರಿಕೆ

  Top Health Benefits of Carrot Seed Essential Oil

  ಈ ಎಣ್ಣೆಯ ಕೆಲವು ಗುಣಗಳು ಅತಿ ಪ್ರಬಲವಾದ ಕಾರಣ ಇದು ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸೂಕ್ತವಲ್ಲ. ಅಲ್ಲದೇ ಅತಿ ಸೂಕ್ಷ್ಮ ಸಂವೇದಿ ಚರ್ಮ ಹೊಂದಿರುವವರಿಗೂ ಈ ಎಣ್ಣೆ ಅಲರ್ಜಿಕಾರಕವಾಗಿದ್ದು ತುರಿಕೆ ಮತ್ತು ಉರಿ ತರಿಸಬಹುದು. ಆದ್ದರಿಂದ ಚರ್ಮದ ಒಂದು ಭಾಗಕ್ಕೆ ಕೊಂಚವೇ ಹಚ್ಚಿ ಪರೀಕ್ಷಿಸಿಕೊಳ್ಳುವ ಪ್ಯಾಚ್ ಟೆಸ್ಟ್ ಪರೀಕ್ಷೆ ಮಾಡಿಕೊಂಡೇ ಮುಂದುವರೆಯುವುದು ಉತ್ತಮ.

  English summary

  Top Health Benefits of Carrot Seed Essential Oil

  Carrot seed oil is extracted from the seeds of wild carrots or from the dried plants itself by steam distillation. The carrot seed oil has a woody aroma and is golden-yellow in colour. The health benefits of this oil are many, have a look
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more