For Quick Alerts
ALLOW NOTIFICATIONS  
For Daily Alerts

ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!

ಲಿಂಬೆ ಹಣ್ಣು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ....

By Manu
|

ದಿನದಲ್ಲಿ ಎಷ್ಟು ಲೋಟ ನೀರು ಕುಡಿಯುತ್ತೇವೆ ಎಂದು ಕೇಳಿದರೆ ಉತ್ತರ ಐದಕ್ಕಿಂತ ಕಡಿಮೆಯೇ ಇರಬಹುದು. ಯಾಕೆಂದರೆ ನೀರು ಕುಡಿಯುವಷ್ಟು ಉದಾಸೀನತೆಯನ್ನು ನಾವು ಬೇರೆ ಯಾವುದೇ ವಿಷಯದಲ್ಲೂ ಮಾಡಲ್ಲ. ಚಾ, ಕಾಫಿಯಾದರೆ ಅದಕ್ಕಿಂತ ಹೆಚ್ಚು ಸಲ ಕುಡಿಯುತ್ತೇವೆ.

Lemon Water

ಬೆಳಿಗ್ಗೆ ಎದ್ದು, ಮಧ್ಯಾಹ್ನ ಮತ್ತು ಸಂಜೆ ಹೀಗೆ ಎಷ್ಟು ಬೇಕೋ ಅಷ್ಟು ಸಲ ಚಾ, ಕಾಫಿ ಕುಡಿಯುತ್ತೇವೆ. ಆದರೆ ನೀರು ಮಾತ್ರ ಕುಡಿಯಲ್ಲ. ಆದರೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವುದು ನೀರು. ನಾವು ಹೆಚ್ಚು ನೀರು ಕುಡಿಯಲೇಬೇಕು. ನೀರು ಕುಡಿಯದೆ ಇದ್ದರೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀರಿಗೆ ಸ್ವಲ್ಪ ಲಿಂಬೆರಸ ಬೆರೆಸಿ ಕುಡಿದರೆ ಅದು ತುಂಬಾ ಆರೋಗ್ಯಕಾರಿ. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದು ಕೇಳುತ್ತವೆ. ಇದಕ್ಕೆ ಹಣ ಕೂಡ ಖರ್ಚು ಮಾಡಬೇಕಾಗುತ್ತದೆ. ಯಾವುದೇ ಖರ್ಚು ಇಲ್ಲದೆ ಹೆಚ್ಚಿಗೆ ನೀರು ಕುಡಿದರೆ ಚರ್ಮದ ಕಾಂತಿಯು ವೃದ್ಧಿಸುತ್ತದೆ.

ಅದರಲ್ಲೂ ನೀರಿಗೆ ಎರಡು ಮೂರು ಚಮಚ ಲಿಂಬೆರಸವನ್ನು ಹಾಕಿ ಕುಡಿದರೆ ಅದರಿಂದ ಕಪ್ಪುಕಲೆಗಳು, ವಯಸ್ಸಾಗುತ್ತಿರುವ ಲಕ್ಷಣ ಮತ್ತು ನೆರಿಗೆ ಮೂಡುವುದನ್ನು ತಡೆಯಬಹುದು. ಲಿಂಬೆರಸವು ತಂಪನ್ನು ಉಂಟು ಮಾಡುವ ಕಾರಣದಿಂದ ಅತಿಯಾದ ಉಷ್ಣತೆಯಲ್ಲಿ ಇದು ತುಂಬಾ ಪರಿಣಾಮಕಾರಿ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಅಜೀರ್ಣವೆನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಂಡುಬರುತ್ತಿದೆ. ಆದರೆ ಬಿಸಿನೀರು ಮತ್ತು ಲಿಂಬೆರಸವು ಅಜೀರ್ಣಕ್ಕೆ ಒಳ್ಳೆಯ ಮದ್ದು. ಅಷ್ಟೇ ಅಲ್ಲದೆ ಲಿಂಬೆರಸವು ರಕ್ತವನ್ನು ಶುದ್ಧೀಕರಿಸುತ್ತದೆ, ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.

ಅಷ್ಟೇ ಅಲ್ಲದೆ ಇದು ಬಾಯಿಯ ಕೆಟ್ಟ ವಾಸನೆ ಹಾಗೂ ಒಸಡುಗಳಲ್ಲಿ ರಕ್ತ ಸೋರುವುದನ್ನು ನಿವಾರಿಸುತ್ತದೆ. ಹಲ್ಲುಗಳು ಕೆಡುವುದನ್ನು ಇದು ತಡೆಯುವುದು. ಲಿಂಬೆರಸದಲ್ಲಿ ಇರುವಂತಹ ಪೊಟಾಶಿಯಂ ಅಧಿಕ ರಕ್ತದೊತ್ತಡವನ್ನು ನಿವಾರಿಸುವುದು. ಇದು ವಾಕರಿಕೆ ಹಾಗೂ ತಲೆತಿರುಗುವಿಕೆಯನ್ನು ತಡೆಯುತ್ತದೆ. ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು

ಲಿಂಬೆನೀರು ನಿಮ್ಮಲ್ಲಿನ ಒತ್ತಡ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಿ ಒಳ್ಳೆಯ ಭಾವನೆ ಉಂಟು ಮಾಡುವುದು. ಅಷ್ಟೇ ಅಲ್ಲದೆ ಲಿಂಬೆರಸವು ಕಫವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಸ್ತಮಾ ಇರುವವರು ಸರಿಯಾಗಿ ಉಸಿರಾಡಲು ನೆರವಾಗುವುದು. ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ

ಲಿಂಬೆನೀರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ. ಗಂಟಲಿನಲ್ಲಿ ಉಂಟಾಗಿರುವ ಕೆರೆತವನ್ನು ನಿವಾರಿಸಲು ಉಪ್ಪು ನೀರಿನಿಂದ ಸಾಧ್ಯವಾಗದಿದ್ದರೆ ಲಿಂಬೆನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ.

English summary

Top Benefits of Drinking Lemon Water Every Morning

In India, tea and coffee is regularly consumed at breakfast, lunch and during mid-afternoon but we forget drinking water. Drinking water is important and to spruce it up, what you can do is add a slice of lemon or squeeze a lime in water.
Story first published: Wednesday, November 30, 2016, 20:23 [IST]
X
Desktop Bottom Promotion