For Quick Alerts
ALLOW NOTIFICATIONS  
For Daily Alerts

ಮಲಬದ್ಧತೆ ನಿವಾರಣೆಗೆ ಇಲ್ಲಿದೆ ನೋಡಿ ನೈಸರ್ಗಿಕ ಜ್ಯೂಸ್

By Arshad
|

ಅನಾರೋಗ್ಯಕರ ಆಹಾರ ಕ್ರಮ, ಒತ್ತಡದ ಜೀವನ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮನೆಯಿಂದ ಹೊರಗಡೆ ಏನೇ ತಿಂದರೂ ಅದು ಅಜೀರ್ಣವಾಗಿ ಸಮಸ್ಯೆಯನ್ನು ಉಂಟುಮಾಡಬಹುದು. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಅದೇ ಮಲಬದ್ಧತೆ. ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ಮಲಬದ್ಧತೆಗೆ ಒಳಗಾಗುತ್ತಾರೆ. ಇದು ಹೆಚ್ಚಿನ ಸಮಯ ಯಾರನ್ನೂ ಕಾಡುವುದಿಲ್ಲ.

constipation

ಆದರೆ ಕೆಲವೊಮ್ಮೆ ಇದು ತುಂಬಾ ನೋವನ್ನು ಉಂಟುಮಾಡುವ ಸ್ಥಿತಿ ನಿರ್ಮಾಣ ಮಾಡುತ್ತದೆ. ಆಹಾರ ಕ್ರಮ, ನೀರು ಕಡಿಮೆ ಕುಡಿಯುವುದು ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಲಬದ್ಧತೆಯು ಒಂದು ದಿನಕ್ಕಿಂತ ಹೆಚ್ಚು ನಿಮ್ಮನ್ನು ಕಾಡಲು ಆರಂಭಿಸಿದರೆ ಆಗ ತಕ್ಷಣ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಇದು ಮುಂದೆ ದೊಡ್ಡ ಸಮಸ್ಯೆ ಕಾಡಲಿದೆ ಎನ್ನುವ ಸುಳಿವಾಗಿರಬಹುದು.

ಕೆಲವೊಂದು ಸಂದರ್ಭಗಳಲ್ಲಿ ಪ್ಲೆಥ್ರಾ ಎನ್ನುವ ಔಷಧಿಯನ್ನು ನೀಡಲಾಗುತ್ತದೆ. ಆದರೆ ಯಾವಾಗಲೂ ಇದನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವುದು. ಆದರೆ ಮನೆಯಲ್ಲಿ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಮಲಬದ್ಧತೆಯನ್ನು ನಿವಾರಿಸಬಹುದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಸುರಕ್ಷಿತ ಕೂಡ..ಬನ್ನಿ ಅವು ಯಾವುದು ಎಂಬುದನ್ನು ನೋಡೋಣ ಮಲಬದ್ಧತೆ ಉಂಟುಮಾಡುವ 7 ಆಹಾರಗಳು

ಅಗತ್ಯವಿರುವ ಸಾಮಾಗ್ರಿಗಳು:
*ಸೇಬಿನ ಶಿರ್ಕಾ (apple cider vinegar) ಎರಡು ದೊಡ್ಡ ಚಮಚ
*ಜೇನು: ಎರಡು ದೊಡ್ಡ ಚಮಚ
*ಉಗುರು ಬೆಚ್ಚನೆಯ ನೀರು : ಒಂದು ಲೋಟ

ಸೇಬಿನ ಶಿರ್ಕಾದಲ್ಲಿ Acetobacter ಎಂಬ ಬ್ಯಾಕ್ಟೀರಿಯಾವಿದೆ. ಇದೊಂದು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾವಾಗಿದ್ದು ಹೊಟ್ಟೆಯಲ್ಲಿ ಆಹಾರವನ್ನು ಇನ್ನಷ್ಟು ಚಿಕ್ಕಗಾಗಿ ಒಡೆಯಲು ನೆರವಾಗುತ್ತದೆ. ಇದರಿಂದ ಮಲಬದ್ಧತೆಯಿಂದ ಪರಿಹಾರ ದೊರಕುತ್ತದೆ. ಆದರೆ ಈ ಶಿರ್ಕಾವನ್ನು ಹಸಿಯಾಗಿಯೇ ಅಂದರೆ ಬಿಸಿ ಮಾಡದೇ ಮತ್ತು ಶೋಧಿಸದೇ ಸೇವಿಸಬೇಕು.

ಜೇನು
ಇದರಲ್ಲಿರುವ ಯೂಗ್ಯನಾಲ್ ಎಂಬ ಪೋಷಕಾಂಶ ಹೊಟ್ಟೆಯಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಆಹಾರ ಪೂರ್ಣವಾಗಿ ಜೀರ್ಣಗೊಳ್ಳಲು ತನ್ಮೂಲಕ ಮಲಬದ್ದತೆಯಾಗದಿರಲು ನೆರವಾಗುತ್ತದೆ. ಮಲಬದ್ಧತೆ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಕಾರಣ ತಿಳಿದುಕೊಳ್ಳಿ

ಪೇಯ ತಯಾರಿಸುವ ವಿಧಾನ:
೧) ಒಂದು ಲೋಟ ನೀರನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ
೨) ಇದಕ್ಕೆ ಶಿರ್ಕಾ ಮತ್ತು ಜೇನು ಬೆರೆಸಿ ಕಲಕಿ.
೩) ಈ ದ್ರವವನ್ನು ಚೆನ್ನಾಗಿ ಕಲಕಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಅಲ್ಲದೇ ಕೊಂಚ ಕೊಂಚವಾಗಿ ಇಡಿಯ ದಿನ ಕುಡಿಯುತ್ತಿರಿ. ಒಂದು ವೇಳೆ ಊಟದ ಬಳಿಕ ಹೊಟ್ಟೆಯುಬ್ಬರಿಕೆ ಕಂಡುಬಂದರೆ ತಕ್ಷಣ ಈ ಪೇಯವನ್ನು ಒಂದು ಲೋಟದಷ್ಟು ಕುಡಿಯಿರಿ. ಮಲಬದ್ಧತೆ ಇದ್ದಾಗಲೂ ಈ ಪೇಯವನ್ನು ಕುಡಿಯಬಹುದು ಹಾಗೂ ತಕ್ಷಣ ಒತ್ತಡದಿಂದ ಪಾರಾಗಬಹುದು.

English summary

this one natural drink helps relieve constipation instantly

Constipation, along with a feeling of bloating, nausea and uneasiness, really makes you uncomfortable. All that you want is to get rid of it immediately. If you have been suffering from this condition every now and then, then there is one drink prepared from natural ingredients that helps to relieve constipation instantly.
X
Desktop Bottom Promotion