Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯ ಟಿಪ್ಸ್: ನೆನಪಿನ ಶಕ್ತಿ ವೃದ್ಧಿಗೆ ಪವರ್ ಫುಲ್ ಜ್ಯೂಸ್
ಸ್ಮರಣ ಶಕ್ತಿ ಮಾನವರಿಗೆ ದೇವರು ನೀಡಿರುವ ಒಂದು ಅದ್ಭುತ ಶಕ್ತಿಯಾಗಿದೆ. ನಮ್ಮ ಸಾಮರ್ಥ್ಯಗಳೆಲ್ಲವೂ ಈ ಸ್ಮರಣಶಕ್ತಿಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ಯಾವುದೇ ಒಳ್ಳೆಯ ವಸ್ತುವಿನೊಂದಿಗೆ ಯಾವುದೋ ಒಂದು ಕೊರತೆ ಇರುವಂತೆ ಸ್ಮರಣಶಕ್ತಿಯೊಂದಿಗೇ ಮರೆವಿನ ತೊಂದರೆಯೂ ಜೊತೆಗೇ ಇದೆ.
ಎಷ್ಟೇ ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡು ಹೋಗಿದ್ದರೂ ಪರೀಕ್ಷೆಯ ಸಮಯದಲ್ಲಿ ಯಾವುದೋ ಒಂದು ಚಿಕ್ಕ ವಿಷಯ ನೆನಪಿಗೇ ಬರದೆ ಅಂಕ ಸಿಗದೇ ಕೈ ಕೈ ಹಿಸುಕಿಕೊಳ್ಳುವ ಹಾಗಾಗುತ್ತದೆ. ಆದರೆ ಪರೀಕ್ಷಾ ಅವಧಿ ಮುಗಿದು ಹೊರಬಂದ ಬಳಿಕ ಇದು ಥಟ್ಟನೆ ನೆನಪಿಗೆ ಬರುವುದು ಮಾತ್ರ ಅಪ್ಪಟ ವಿಪರ್ಯಾಸ. ಸ್ಮರಣ ಶಕ್ತಿ ಹೆಚ್ಚಿಸುವ ಚಟ್ನಿ ಮತ್ತು ತಂಬುಳಿ
ಸ್ಮರಣಶಕ್ತಿ ಕೇವಲ ಪರೀಕ್ಷೆಯಲ್ಲಿ ಮಾತ್ರವಲ್ಲ, ನಮ್ಮ ನಿತ್ಯದ ಚಟುವಟಿಕೆಗಳಲ್ಲಿ, ಔದ್ಯೋಗಿಕ ರಂಗದಲ್ಲಿ, ಕ್ರೀಡೆ, ಸಾಮಾಜಿಕ ಪಾತ್ರ, ಒಟ್ಟಾರೆ ಎಲ್ಲೆಡೆ ಉಪಯೋಗಕ್ಕೆ ಬರುತ್ತದೆ. ಸ್ಮರಣ ಶಕ್ತಿ ಎಂದರೆ ಮಾಹಿತಿ ನಮ್ಮ ಮೆದುಳಿನಲ್ಲಿ ನ್ಯೂರಾನ್‌ಗಳ ರೂಪದಲ್ಲಿ ಸಂಗ್ರಹವಾಗಿರುವುದು. ಮೆದುಳಿನ ಕಾರ್ಯಕ್ಷಮತೆಯನ್ನು ಅರಿಯಲು ಇನ್ನೂ ವಿದ್ವಾಂಸರು ಪ್ರಯತ್ನಿಸುತ್ತಲೇ ಇದ್ದಾರೆ.
ಪಂಚೇಂದ್ರಿಯಗಳ ಮೂಲಕ ಲಭ್ಯವಾಗುವ ಮೂಲಕ ಮಾಹಿತಿಯನ್ನು ವಿಶ್ಲೇಷಿಸಿ ಬಳಿಕ ಬಳಸಿಕೊಳ್ಳುವುದೇ ಸ್ಮರಣ ಶಕ್ತಿಯಾಗಿದೆ.

ಆದರೆ ಇದಕ್ಕೂ ಮಿಗಿಲಾದ ಅರಿವು ಮೆದುಳಿಗಿದ್ದು ಇದನ್ನು ಅರಿಯುವುದು ಬಹಳ ಕಷ್ಟಕರವಾಗಿದೆ. ಆತ್ಮಸಾಕ್ಷಿ, ಅಂತಃಸಾಕ್ಷಿ, ಮನಃಸಾಕ್ಷಿ, ಧರ್ಮಪ್ರಜ್ಞೆ, ಕೌಶಲ, ನೈಪುಣ್ಯ, ಚತುರತೆ, ಬುದ್ಧಿವಂತಿಕೆ, ಸಾಮರ್ಥ್ಯ ಮೊದಲಾದವು ಮೆದುಳಿನ ಇತರ ಶಕ್ತಿಗಳಾಗಿವೆ. ಒಂದು ವೇಳೆ ವ್ಯಕ್ತಿಯ ಮೆದುಳಿನ ಕ್ಷಮತೆ ಬಾಧೆಗೊಳಗಾದರೆ ಈ ಮೂಲಕ ನಡೆಯುವ ಎಲ್ಲಾ ಕೆಲಸಗಳು ಬಾಧೆಗೊಳಗಾಗುತ್ತವೆ.
ಆದ್ದರಿಂದ ಮೆದುಳಿನ ಕ್ಷಮತೆ ಹೆಚ್ಚಿಸಲು ಸ್ಮರಣ ಶಕ್ತಿಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸಾಕಷ್ಟು ವಿಶ್ರಾಂತಿ ಮತ್ತು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದೂ ಅಗತ್ಯ. ಮನೆಯಲ್ಲಿಯೇ ತಯಾರಿಸಬಹುದಾದ ಈ ಪೇಯವನ್ನು ಕುಡಿಯುವ ಮೂಲಕ ಅಗತ್ಯವಾದ ಪೋಷಕಾಂಶಗಳನ್ನು ಪಡೆದು ಸ್ಮರಣಶಕ್ತಿಯನ್ನು ಹೆಚ್ಚಿಸಬಹುದು. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ನೆನೆಪಿನ ಶಕ್ತಿ ಹೆಚ್ಚಿಸಬೇಕೆ? ಈ ರೀತಿ ಮಾಡಿ
ಅಗತ್ಯವಿರುವ ಸಾಮಾಗ್ರಿಗಳು:
*ಟೊಮೇಟೊ ರಸ: ಮೂರು ದೊಡ್ಡ ಚಮಚ
*ಪಾಲಕ್ ಸೊಪ್ಪಿನ ರಸ: ಮೂರು ದೊಡ್ಡಚಮಚ
*ಆಲಿವ್ ಎಣ್ಣೆ: ಒಂದು ದೊಡ್ಡ ಚಮಚ
ಟೊಮೇಟೊ ಹಣ್ಣಿಗೆ ಕೆಂಪು ಬಣ್ಣ ಬರಲು ಕಾರಣವಾದ ಲೈಕೋಪೀನ್ ಎಂಬ ಪೋಷಕಾಂಶ ಒಂದು ಉತ್ತಮ ಆಂಟಿ ಆಕ್ಸಿಡೆಂಟು ಆಗಿದ್ದು ಮೆದುಳಿನ ಜೀವಕೋಶಗಳಿಗೆ ಆಮ್ಲಜನಕವನ್ನು ನೀಡುವ ಮೂಲಕ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಮರೆವನ್ನು ಕಡಿಮೆಯಾಗಿಸುತ್ತದೆ ಹಾಗೂ ಭಾವೋದ್ವೇಗದ ಏರುಪೇರುಗಳನ್ನು ನಿವಾರಿಸುತ್ತದೆ.
ಪಾಲಕ್ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ಆರೋಗ್ಯಕರ ಮೆದುಳಿನ ಜೀವಕೋಶಗಳ ಉತ್ಪಾದನೆಗೆ ನೆರವಾಗುತ್ತದೆ. ಇದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಹೊಸ ವಿಷಯಗಳನ್ನು ಕಲಿಯಲು ನೆರವಾಗುತ್ತದೆ.
ಆಲಿವ್ ಎಣ್ಣೆಯಲ್ಲಿ ಸ್ಮರಣಶಕ್ತಿಯನ್ನು ಉತ್ತಮಗೊಳಿಸುವ ಪೋಷಕಾಂಶಗಳಿದ್ದು ಮೆದುಳಿನಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಹರಿಯಲು ನೆರವಾಗುತ್ತದೆ. ಇದರಿಂದಲೂ ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ.
ಈ ಮೂರೂ ಸಾಮಾಗ್ರಿಗಳು ಒಟ್ಟು ಸೇರಿದಾಗ ಈ ಪೇಯದ ಸಾಮರ್ಥ್ಯ ಅತಿಹೆಚ್ಚಾಗುತ್ತದೆ. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:
ತಯಾರಿಸುವ ವಿಧಾನ
1) ಮಿಕ್ಸಿಯ ಬ್ಲೆಂಡರ್ ನಲ್ಲಿ ಈ ಟೊಮಾಟೋ ಮತ್ತು ಪಾಲಕ್‌ಗಳನ್ನು ಗೊಟಾಯಿಸಿ. ಅಗತ್ಯವಿದ್ದರೆ ಕೊಂಚ ನೀರು ಸೇರಿಸಿ.
2) ಬಳಿಕ ಆಲಿವೆ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.
3) ಈ ಪೇಯವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಸತತವಾಗಿ ಒಂದು ತಿಂಗಳ ಕಾಲ ಸೇವಿಸಿದರೆ ಸ್ಮರಣಶಕ್ತಿಯಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



