Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಣ್ಣಿನ ಪೊರೆಗಳ ಸಮಸ್ಯೆಗೆ-ಪಾರ್ಸ್ಲಿ ಎಲೆಗಳಿಂದ ಆರೈಕೆ....
ವೃದ್ಧಾಪ್ಯ ನಮಗೆ ಯಾರಿಗೂ ಬೇಡ. ಆದರೆ ವಯೋಸಹಜವಾಗಿ ನಾವೆಲ್ಲರೂ ವೃದ್ಧಾಪ್ಯದತ್ತ ನಿಧಾನವಾಗಿ ಜಾರುತ್ತಾ ಹೋಗುತ್ತಿದ್ದೇವೆ. ಇದು ಅನಿವಾರ್ಯ. ಇದರೊಂದಿಗೇ ನಮ್ಮ ಆರೋಗ್ಯವೂ ನಿಧಾನವಾಗಿ ಶಿಥಿಲವಾಗುತ್ತಾ ಹೋಗುತ್ತದೆ. ಹತ್ತು ಹಲವು ಕಾಯಿಲೆಗಳು ಆವರಿಸಿಕೊಳ್ಳುತ್ತಾ ಹೋಗುತ್ತವೆ. ಸುಮಾರು ಐವತ್ತು ವರ್ಷ ದಾಟಿದ ಬಳಿಕ ನಮ್ಮ ಜೀವಕೋಶಗಳು ತಾರುಣ್ಯದಲ್ಲಿದ್ದ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ.
ಮರುಹುಟ್ಟುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ನಮ್ಮ ದೇಹದ ಒಂದೊಂದೇ ಅಂಗಗಳು ನಿಧಾನವಾಗಿ ಶಿಥಿಲಗೊಳ್ಳುತ್ತಾ ಸಾಗುತ್ತವೆ. ವಯಸ್ಸಿಗೆ ಅನುಗುಣವಾಗಿ ಎದುರಾಗುವ ಕಾಯಿಲೆಗಳಲ್ಲಿ ಪ್ರಮುಖವಾಗಿ ಮಧುಮೇಹ, ಆಲ್ಜೀಮರ್ಸ್ ಕಾಯಿಲೆ, ಸಂಧಿವಾತ, ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ ಓಸ್ಟಿಯೋಪೋರೋಸಿಸಿ, ಕಣ್ಣುಗಳಲ್ಲಿ ಪೊರೆಗಳು ಬರುವುದು ಅಥವಾ ಕ್ಯಾಟರಾಕ್ಟ್ ಮೂಲಕ ಕಣ್ಣಿನ ದೃಷ್ಟಿ ಕುಂದುವುದು ಇತ್ಯಾದಿ.

ಇಂದು ವಯೋಸಹಜವಾಗಿ ಆಗಮಿಸುವ ಕ್ಯಾಟರಾಕ್ಟ್‌ನ ತೊಂದರೆಯನ್ನು ಅಥವಾ ಕಣ್ಣಿನ ಪೊರೆಗಳ ಸಮಸ್ಯೆಯನ್ನು ನಿವಾರಿಸಲು ನೈಸರ್ಗಿಕವಾದ ವಿಧಾನವೊಂದಿದೆ. ಅದೇ ಪಾರ್ಸ್ಲಿ ಎಲೆಗಳ ಸೇವನೆ. Petroselinum Crispum ಎಂಬ ವೈಜ್ಞಾನಿಕ ಹೆಸರಿರುವ, ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಕಾಣುವ ಈ ಎಲೆಗಳಿಗೆ ಕನ್ನಡದಲ್ಲಿ ಕೆಲವೆಡೆ ಕಾಡು ಕೊತ್ತಂಬರಿ ಎಂದೂ ಕೆಲವೆಡೆ ಅಚ್ಚು ಮೂಡ ಸೊಪ್ಪು ಎಂದೂ ಕರೆಯುತ್ತಾರೆ. ಬನ್ನಿ, ಈ ಸೊಪ್ಪಿನ ಸೇವನೆಯಿಂದ ಕ್ಯಾಟರಾಕ್ಟ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ: ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ
ಅಗತ್ಯವಿರುವ ಸಾಮಾಗ್ರಿಗಳು:
*ಪಾರ್ಸ್ಲಿ ಎಲೆಗಳು: ಆರರಿಂದ ಏಳು
*ಜೇನು : ಎರಡು ಚಿಕ್ಕ ಚಮಚ
ಈ ಎಲೆಗಳಲ್ಲಿ ಕಣ್ಣುಗಳಿಗೆ ಅತಿ ಅಗತ್ಯವಾದ ವಿಟಮಿನ್ ಎ ಇದೆ. ಅಲ್ಲದೇ ಕಣ್ಣಿತ ತೇವಾಂಶವನ್ನು ಸದಾ ಹಿಡಿದಿಡಲು ಕಣ್ಣೀರ ಗ್ರಂಥಿಗಳು ಸದಾ ತುಂಬಿಕೊಂಡಿರಲೂ ಈ ಎಲೆಗಳ ಪೋಷಕಾಂಶಗಳು ನೆರವಾಗುತ್ತವೆ.
ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕ್ಯಾರೋಟಿನಾಯ್ಡುಗಳಾದ ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್‌ಗಳಿವೆ. ಇವೇ ವಾಸ್ತವವಾಗಿ ಕ್ಯಾಟರಾಕ್ಟ್ ತೊಂದರೆಗೆ ಸೂಕ ಪರಿಹಾರವನ್ನು ನೀಡುತ್ತವೆ. ಸತತವಾದ ಸೇವನೆಯಿಂದ ಈ ತೊಂದರೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸಬಹುದು.
ಈ ಎಲೆಗಳನ್ನು ಬಳಸುವ ವಿಧಾನ:
*ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.
*ಈ ನೀರಿಗೆ ಜೇನನ್ನು ಸೇರಿಸಿ ಕಲಕಿ.
*ಪ್ರತಿದಿನ ರಾತ್ರಿಯೂಟಕ್ಕೂ ಮೊದಲು ಖಾಲಿ ಹೊಟ್ಟೆಯಲ್ಲಿ, ಅಂದರೆ ಮಧ್ಯಾಹ್ನದ ಊಟದ ಬಳಿಕ ರಾತ್ರಿಯೂಟದವರೆಗೂ ಉಪವಾಸವಿದ್ದು ಸೇವಿಸಬೇಕು.
*ನಿತ್ಯವೂ ಈ ರಸವನ್ನು ಸೇವಿಸುತ್ತಾ ಬರುವ ಮೂಲಕ ನಿಧಾನವಾಗಿ ಕ್ಯಾಟರಾಕ್ಟ್‌ನ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

