Latest Updates
-
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ
ಇದೇ ಕಾರಣಕ್ಕೆ 'ಅಸಿಡಿಟಿ' ಕಾಣಿಸಿಕೊಳ್ಳುವುದು, ನೆನಪಿಡಿ....
ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಹುಳಿ ಹುಳಿಯಾದಂತಾಗುವ ಅನುಭವವು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಬಾರಿ ಕಾಟ ನೀಡಿರುತ್ತದೆ. ಸಾಮಾನ್ಯವಾಗಿ ಮಿತಿ ಮೀರಿ ತಿಂದಾಗ ಈ ಸಮಸ್ಯೆ ಕಾಡುವುದು ಸಹಜ. ಆದರೆ ಇದರಿಂದಾಗುವ ಸಮಸ್ಯೆಗಳು ಮಾತ್ರ ಅಷ್ಟಿಷ್ಟಲ್ಲ ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು
ಕೆಲವೊಮ್ಮೆ ಎದೆಯ ಭಾಗದಲ್ಲಿ ಉರಿ, ವಾಕರಿಕೆ, ವಾಂತಿ, ತೇಗು, ಹುಳಿತೇಗು ಇತ್ಯಾದಿಗಳು ಎದುರಾಗುತ್ತವೆ. ಇದರೊಂದಿಗೆ ಹೊಟ್ಟೆಯಲ್ಲಿ ನೋವು, ತಲೆಸಿಡಿತ ಮೊದಲಾದವೂ ಉಂಟಾಗಬಹುದು. ಅಸಿಡಿಟಿಯ ಈ ಅಸಾಮಾನ್ಯ ಲಕ್ಷಣಗಳನ್ನು ಕಡೆಗಣಿಸಬೇಡಿ
ಆದರೆ ಈ ಸ್ಥಿತಿಗೆ ಕೆಲವು ಆಹಾರಗಳು ಮಾತ್ರವೇ ಕಾರಣವಲ್ಲ, ನಮ್ಮ ಕೆಲವು ಅಭ್ಯಾಸಗಳೂ ಕಾರಣವಾಗಿರಬಹುದು. ಬನ್ನಿ, ಈ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ನೋಡೋಣ:

ಕಾಫಿ
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಖಾಲಿಹೊಟ್ಟೆಯಲ್ಲಿ ಕಾಫಿ ಕುಡಿಯುವ ಮೂಲಕ ಆಮ್ಲೀಯತೆ ಇನ್ನಷ್ಟು ಹೆಚ್ಚುತ್ತದೆ.

ಮದ್ಯಪಾನ
ಹುಳಿತೇಗು, ವಾಕರಿಕೆ ಮೊದಲಾದವುಗಳಿಗೆ ಮದ್ಯಪಾನ ನೇರವಾಗಿ ಕಾರಣವಾಗಿದೆ. ನಿಯಮಿತವಾಗಿ ಸೇವಿಸುವವರೂ ಆಗಾಗ ಸೇವಿಸುವವರೂ ಆಮ್ಲೀಯತೆಗೆ ಒಳಗಾಗುತ್ತಾರೆ. ರಾತ್ರಿ ಮಲಗುವ ಮುನ್ನ ಮದ್ಯಪಾನದ ಅಭ್ಯಾಸವಿರುವವರಿಗೆ ಮರುದಿನ ಆಮ್ಲೀಯತೆ ಖಾತರಿಯಾಗಿದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಚ್ಯೂಯಿಂಗ್ ಗಮ್ ಮೆಲ್ಲುವುದು
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ದಿನದ ಹೆಚ್ಚಿನ ಸಮಯ ಚ್ಯೂಯಿಂಗ್ ಗಮ್ ಮೆಲ್ಲುವ ಅಭ್ಯಾಸವುಳ್ಳವರು ಆಮ್ಲೀಯತೆಗೆ ಒಳಗಾಗುತ್ತಾರೆ. ವಿಶೇಷವಾಗಿ ಪುದೀನಾ ಅಥವಾ ಮಿಂಟ್ ಸ್ವಾದದ ಗಮ್ ಮೆಲ್ಲುವವರಲ್ಲಿ ಈ ಪ್ರಮಾಣ ಅತ್ಯಧಿಕವಿರುತ್ತದೆ.

ತಡರಾತ್ರಿ ಆಹಾರ ಸೇವನೆ
ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ತಡರಾತ್ರಿಯವರೆಗೆ ಎಚ್ಚರಾಗಿದ್ದು ಅನಾರೋಗ್ಯಕರ ಆಹಾರ ಸೇವಿಸುವುದು ಅಥವಾ ಊಟದ ತಕ್ಷಣ ಮಲಗುವುದು ಆಮ್ಲೀಯತೆ ಹೆಚ್ಚಿಸುತ್ತದೆ. ಏಕೆಂದರೆ ಮಲಗಿದ ಬಳಿಕ ಅಡ್ದಲಾಗಿದ್ದ ಅನ್ನನಾಳದಿಂದ ಅರೆಜೀರ್ಣಗೊಂಡ ಆಹಾರ ಹಿಂದೆ ಬರಲು ಸುಲಭವಾಗುತ್ತದೆ. ಇದು ಎದೆಯುರಿ ಮತ್ತು ಹುಳಿತೇಗಿಗೆ ಕಾರಣವಾಗುತ್ತದೆ.

ಲಗುಬಗನೇ ತಿನ್ನುವುದು
ಕೆಲಸದ, ಪ್ರಯಾಣ, ಬೇಗ ತಲುಪುವ ಆತುರದಲ್ಲಿ ಲಗುಬಗನೇ ತಿನ್ನುವ ಮೂಲಕವೂ ಆಮ್ಲೀಯತೆಯುಂಟಾಗುತ್ತದೆ. ಏಕೆಂಅರೆ ಈ ಮೂಲಕ ಆಹಾರ ಲಾಲಾರಸದಲ್ಲಿ ಸಾಕಷ್ಟು ಬೆರೆತಿರುವುದಿಲ್ಲ. ಅರ್ಧಬರ್ಧ ಅರೆದಿದ್ದ ಆಹಾರ ಹೊಟ್ಟೆ ಸೇರಿದಾಗ ಇಲ್ಲಿಯೂ ಅಜೀರ್ಣವಾಗಿ ಆಮ್ಲೀಯತೆ ಉಂಟಾಗುತ್ತದೆ.

ಧೂಮಪಾನ
ಆಮ್ಲೀಯತೆಗೆ ಧೂಮಪಾನವೂ ಇನ್ನೊಂದು ಕಾರಣವಾಗಿದೆ. ಹೊಗೆ ಶ್ವಾಸಕೋಶಗಳಿಗೆ ತಲುಪಿದರೂ ಬೂದಿ ಮತ್ತು ಇತರ ಕಣಗಳು ಹೊಟ್ಟೆ ಸೇರಬಹುದು. ಇದು ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುತ್ತದೆ.



Click it and Unblock the Notifications