For Quick Alerts
ALLOW NOTIFICATIONS  
For Daily Alerts

ಕರುಳುಗಳಲ್ಲಿ ಸೇರಿರುವ ಕಲ್ಮಶ ಹೊರಹಾಕುವ ಮನೆಮದ್ದು

By Arshad
|

ನಾಗರಿಕತೆ ನಮಗೆ ದೈಹಿಕ ಕಾರ್ಯದಲ್ಲಿ ಮಾತ್ರವಲ್ಲ, ಆಹಾರದಲ್ಲಿಯೂ ಆರಾಮ ನೀಡಿದೆ. ಹಿಂದೆ ಅನಿವಾರ್ಯವಾಗಿ ಮಾಡಬೇಕಾಗಿದ್ದ ನಡಿಗೆ, ಅಡುಗೆ ಕೆಲಸಗಳ ಮೂಲಕ ಅವಶ್ಯಕ ಪ್ರಮಾಣದ ವ್ಯಾಯಾಮ ಸಿಗುತ್ತಿತ್ತು. ಇಂದು ಸವಲತ್ತುಗಳು ಈ ವ್ಯಾಯಮಗಳನ್ನು ಇಲ್ಲವಾಗಿಸಿಬಿಟ್ಟಿವೆ. ಆಹಾರದಲ್ಲಿಯೂ ಅಷ್ಟೇ, ಇಂದು ಸಿದ್ಧರೂಪದಲ್ಲಿ ಸಿಗುತ್ತಿರುವ ಆಹಾರಗಳನ್ನು ನೆಚ್ಚಿಕೊಳ್ಳುತ್ತಾ ನಾವು ನಮ್ಮ ಜೀರ್ಣಂಗಗಳನ್ನು ಅಪಾಯಕ್ಕೆ ಒಡ್ಡುತ್ತಿದ್ದೇವೆ. ಇದಕ್ಕೆ ಅತ್ಯಂತ ಪ್ರಬಲ ಉದಾಹರಣೆ ಎಂದರೆ ಮೈದಾ ಹಿಟ್ಟಿನ ಬಳಕೆ. ಗೋಧಿಯಲ್ಲಿನ ನಾರಿನ ಅಂಶವನ್ನು ತೆಗೆದು ಕೇವಲ ಬಿಳಿಯ ಭಾಗವನ್ನು ಉಳಿಸಿಕೊಂಡ ಮೈದಾ ನೋಡಲಿಕ್ಕೆ ಚೆಂದ ಎನ್ನುವ ಒಂದೇ ಕಾರಣಕ್ಕೆ ಗೋಧಿ ಹಿಟ್ಟಿನ ಬದಲಾಗಿ ಇಡಿಯ ವಿಶ್ವದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಆದರೆ ಇದು ನಮ್ಮ ದೊಡ್ಡಕರುಳಿನಲ್ಲಿ ಗಡ್ಡೆಯಂತಾಗಿ ವಿಸರ್ಜನೆ ಕಷ್ಟಕರವಾಗುವುದು ಮಾತ್ರವಲ್ಲ, ಈ ಆಹಾರಗಳನ್ನು ಕೆಡದಂತಿರಲು ಇದರಲ್ಲಿ ಸೇರಿಸಿರುವ ಸಂರಕ್ಷಕ ಅಥವಾ ಪ್ರಿಸರ್ವೇಟಿವ್ ಗಳು ತಕ್ಷಣಕ್ಕೆ ಅಲ್ಲದಿದ್ದರೂ ಕ್ರಮೇಣವಾಗಿಯಾದರೂ ದೇಹದಲ್ಲಿ ವಿಷದ ರೂಪದಲ್ಲಿ ಸಂಗ್ರಹವಾಗುತ್ತವೆ. ಇಂದು ಸಿದ್ಧರೂಪದ ಆಹಾರಗಳು ಮಲ್ಟಿ ಮಿಲಿಯನ್ ಅಂದರೆ ಕೋಟಿಗಟ್ಟಲೇ ಬಂಡವಾಳ ಹಾಕಿ ಮಾಡಿರುವ ಉದ್ದಿಮೆ. ಇದರಲ್ಲಿ ಲಾಭವೇ ಮುಖ್ಯ. ತಕ್ಷಣಕ್ಕೆ ಕಂಡುಹಿಡಿಯಲಾಗದ ತೊಂದರೆಗಳಿರುವ ನೂರಾರು ರಾಸಾಯನಿಕಗಳನ್ನು ಬಳಸಿ ಸಸ್ಯ, ಮಾಂಸಗಳನ್ನು ಧಿಡೀರನೇ ಬೆಳೆಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸುವ ಹುನ್ನಾರ. ಕರುಳಿನ ಕಲ್ಮಶಗಳನ್ನು ಹೊರಹಾಕುವ ಟಾಪ್ 10 ಫುಡ್ಸ್

ಖ್ಯಾತನಾಮರೇ ಖುದ್ದಾಗಿ ನೀಡುವ ಜಾಹೀರಾತು, ಈ ಆಹಾರಗಳನ್ನು ಸೇವಿಸುವ ಮೂಲಕ ಮೆರೆಯುವ ಪ್ರತಿಷ್ಠೆ ಎಲ್ಲವೂ ದೇಹದಲ್ಲಿ ಅನಾರೋಗ್ಯಕರ ಆಹಾರ ಸೇರಲು ಕಾರಣವಾಗಿವೆ. ಅದರಲ್ಲೂ ಚೀನಾ ಮೊದಲಾದ ದೇಶಗಳಿಂದ ಆಮದಾಗುವ ಸಸ್ಯ ಮತ್ತು ಪ್ರಾಣಿಜನ್ಯ ಆಹಾರಗಳಲ್ಲಿ ನಿಷೇಧಿತ ರಾಸಾಯನಿಕಗಳೂ ಇವೆ. ಅಷ್ಟೇ ಏಕೆ, ಭಾರತದಲ್ಲಿಯೇ ವಿದೇಶದಲ್ಲಿ ನಿಷೇಧಿಸಲಾಗಿರುವ ಕೀಟನಾಶಕಗಳ ಬಳಕೆ ಅತಿ ಹೆಚ್ಚಾಗಿದೆ. ಕಾರಣಗಳೇನೇ ಇರಲಿ, ಪರಿಣಾಮ ಮಾತ್ರ ನಮ್ಮ ಕರುಳುಗಳು ಅನುಭವಿಸಬೇಕು. ಪರಿಣಾಮವಾಗಿ ಕರುಳಿನ ಕ್ಯಾನ್ಸರ್ ಮತ್ತಿತರ ಅಪಾಯಗಳು ಎದುರಾಗುವ ಸಂಭವವೂ ಇದೆ. ಈ ಆಹಾರಗಳನ್ನು ಇನ್ನು ಮುಂದೆ ತಿನ್ನಲಾರೆವು, ಮನೆಯ ಊಟವನ್ನೇ ಮಾಡುವೆವು ಎಂದು ಒಪ್ಪಿಕೊಂಡರೂ ಈಗಾಗಲೇ ನಮ್ಮ ಕರುಳುಗಳನ್ನು ಸೇರಿರುವ ವಿಷವಸ್ತುಗಳನ್ನು ಹೊರಹಾಕುವುದಾದರೂ ಹೇಗೆ? ಈ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ...

ಆಲೋವೆರಾ ಅಥವಾ ಲೋಳೆಸರ

ಆಲೋವೆರಾ ಅಥವಾ ಲೋಳೆಸರ

ಕರುಳುಗಳ ಶುದ್ದೀಕರಣಕ್ಕೆ ಲೋಳೆಸರದ ರಸಕ್ಕೆ ಪ್ರಥಮ ಹತ್ತರಲ್ಲಿ ಮೊದಲ ಸ್ಥಾನವಿದೆ. ಇದರ ಉರಿಯೂತ ನಿವಾರಕ ಗುಣದ ಕಾರಣ ಇದು ದೇಹದಲ್ಲಿ ಹಲವು ಅಂಗಗಳ ಉರಿಯೂತ ಸೋಂಕು ಮೊದಲಾದವುಗಳಿಗೆ ಶಮನ ನೀಡುತ್ತದೆ. ವಿಶೇಷವಾಗಿ ಚರ್ಮ, ಕೂದಲುಗಳಿಗೂ ಇದು ಉತ್ತಮವಾಗಿದೆ. ಆದರೆ ಇದರ ರಸವನ್ನು ನೇರವಾಗಿ ಸೇವಿಸಿದರೆ ಅತಿ ಪ್ರಬಲವಾದುದರಿಂದ ಇತರ ರಸಗಳೊಡನೆ ಬೆರೆಸಿ ಕುಡಿಯುವುದು ಉತ್ತಮ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲೋವೆರಾ ಅಥವಾ ಲೋಳೆಸರ

ಆಲೋವೆರಾ ಅಥವಾ ಲೋಳೆಸರ

ಮಾರುಕಟ್ಟೆಯಲ್ಲಿ ಲೋಳೆಸರದ ಸಿದ್ಧರೂಪದ ಜ್ಯೂಸ್ ಲಭ್ಯವಿದ್ದು ಇತರ ಹಣ್ಣಿನ ರಸಗಳೊಂದಿಗೆ ಸೇರಿಸಿ ತಯಾರಿಸಲಾಗಿರುತ್ತದೆ. ಇದರಲ್ಲಿ ನಿಮಗೆ ಸೂಕ್ತವೆನಿಸಿದ ಜ್ಯೂಸ್ ಆರಿಸಿಕೊಂಡು ಕುಡಿಯುವ ಮೂಲಕ ಕರುಳಿನ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಲೋಳೆಸರದ ಪ್ರಮಾಣ ಹೆಚ್ಚಿರುವ ಮತ್ತು ಸಾವಯವ ವಿಧಾನದ (organic) ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಹಸಿರು ಟೀ

ಹಸಿರು ಟೀ

ಹಸಿರು ಟೀ ಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಇತರ ಆಂಟಿ ಆಕ್ಸಿಡೆಂಟುಗಳಿವೆ. ಇವು ಕರುಳುಗಳ ಮತ್ತು ಜೀರ್ಣಾಂಗಗಳಲ್ಲಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತವೆ. ಅಷ್ಟೇ ಅಲ್ಲ, ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತವೆ.

ಲಿಂಬೆರಸ

ಲಿಂಬೆರಸ

ಬೀಜವಿಲ್ಲದಿದ್ದರೆ ಸಂಜೀವಿನಿಯೇ ಆಗುತ್ತಿತ್ತು ಎಂಬ ಹೆಗ್ಗಳಿಕೆ ಪಡೆದ ಲಿಂಬೆಯೂ ಪ್ರಥಮ ಹತ್ತರಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಿಶೇಷವಾಗಿ ದೊಡ್ಡಕರುಳಿನಲ್ಲಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳ ನಿವಾರಣೆಗೆ ಲಿಂಬೆ ಅತ್ಯುತ್ತಮವಾಗಿದೆ. ಅಲ್ಲದೇ ಇದರ ಪ್ರತಿಜೀವಕ ಗುಣದ ಕಾರಣ ದೊಡ್ಡಕರುಳಿನಲ್ಲಿ ವಿಸರ್ಜನೆಯಾಗದೇ ಉಳಿದಿರುವ ತ್ಯಾಜ್ಯ (ವಿಶೇಷವಾಗಿ ಮೈದಾ ಆಧರಿತ ಆಹಾರಗಳನ್ನು ತಿನ್ನುವ ಮೂಲಕ) ದಲ್ಲಿ ನಿಧಾನವಾಗಿ ಸೂಕ್ಷ್ಮಾಣುಗಳು ಬೆಳೆಯುವುದನ್ನು ಲಿಂಬೆ ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆರಸ

ಲಿಂಬೆರಸ

ಒಂದು ವೇಳೆ ಎರಡು ದಿನಕ್ಕೂ ಹೆಚ್ಚು ಕಾಲ ಮಲವಿಸರ್ಜನೆಯಾಗದಿದ್ದರೆ ದೊಡ್ಡ ಕರುಳಿನಲ್ಲಿ ಭಾರೀ ಪ್ರಮಾಣದಲ್ಲಿ ಮೈದಾ ಸಂಗ್ರಹಗೊಂಡಿದ್ದು ಗಟ್ಟಿಯಾಗಿರುವುದೇ ಕಾರಣ ಎಂದು ತಿಳಿದುಕೊಳ್ಳಬೇಕು. ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಒಂದು ದೊಡ್ಡ ಲೋಟದಲ್ಲಿ ಎರಡು ದೊಡ್ಡ ಲಿಂಬೆಯ ರಸವನ್ನು ಕೊಂಚವೇ ಉಪ್ಪು ಸೇರಿಸಿ ಕುಡಿಯುವುದು. ನಂತರದ ಒಂದೇ ಘಂಟೆಯೊಳಗೆ ಹೆಚ್ಚಿನ ಒತ್ತಡದ ಅಗತ್ಯವಿಲ್ಲದೇ ವಿಸರ್ಜನೆ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಒಂದೇ ಲಿಂಬೆ ಸಾಕು.

ಇಡಿಯ ಧಾನ್ಯದ ಆಹಾರಗಳು

ಇಡಿಯ ಧಾನ್ಯದ ಆಹಾರಗಳು

ಧಾನ್ಯಗಳನ್ನು ಪಾಲಿಷ್ ಮಾಡದೇ ತಿನ್ನುವುದೇ ಅತ್ಯುತ್ತಮ ವಿಧಾನವಾಗಿದೆ. ಅಂದರೆ ಇಡಿಯ ಧಾನ್ಯಗಳ ಹಿಟ್ಟು (whole wheat flour), ರವೆ ಮೊದಲಾದವುಗಳನ್ನು ಬಳಸಿದ ಆಹಾರಗಳನ್ನು ಸೇವಿಸುವುದು ಆರೋಗ್ಯಕರವಾಗಿದೆ. ಇವುಗಳಲ್ಲಿ ಹೆಚ್ಚಿನ ನಾರು ಇರುವ ಕಾರಣ ಕರುಳುಗಳಿಂದ ವಿಸರ್ಜನೆಗೆ ನೆರವಾಗುವ ಜೊತೆಗೇ ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕೊಲೆಸ್ಟ್ರಾಲ್ ಮೂಲಕ ತೂಕ ಹೆಚ್ಚಳವಾಗದಿರಲೂ ನೆರವಾಗುತ್ತವೆ. ಜೀರ್ಣಕ್ರಿಯೆಯೂ ಸುಲಭವಾಗುತ್ತದೆ ಹಾಗೂ ಕರುಳುಗಳಲ್ಲಿ ಸಂಗ್ರಹವಾಗಿದ್ದ ವಿಷವಸ್ತುಗಳು ನಿವಾರಣೆಯಾಗಲೂ ಸಾಧ್ಯವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಆಹಾರದಲ್ಲಿ ರುಚಿ ನೀಡಲು ಮಾತ್ರವಲ್ಲ, ಕರುಳುಗಳನ್ನು ಸ್ವಚ್ಛಗೊಳಿಸುವ ಒಂದು ಉತ್ತಮ ಔಷಧವೂ ಆಗಿದೆ. ಇದರ ಬ್ಯಾಕ್ಟೀರಿಯಾ ನಿವಾರಕ, ಪರಾವಲಂಬಿ ಜೀವಿ ನಿವಾರಕ ಮತ್ತು ವೈರಸ್ ನಿರೋಧಕ ಗುಣಗಳು ಬೆಳ್ಳುಳ್ಳಿಯನ್ನು ಅತ್ಯುತ್ತಮ ಆಹಾರಗಳ ಪಟ್ಟಿಯ ಪ್ರಥಮ ಹತ್ತರಲ್ಲಿ ಒಂದು ಸ್ಥಾನವನ್ನುಕಲ್ಪಿಸಿವೆ. ಇದರ ರುಚಿ ಕೊಂಚ ಕಹಿ ಹಾಗೂ ರುಚಿ ಕೊಂಚ ಕಮಟು ಎನ್ನುವುದನ್ನು ಬಿಟ್ಟರೆ ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ಸಹಕರಿಸುವ ಅತ್ಯುತ್ತಮ ಆಹಾರವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದನ್ನು ಹಸಿಯಾಗಿ ತಿನ್ನುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ಅಜೀರ್ಣತೆ ಕಡಿಮೆಯಾಗುತ್ತದೆ ಹಾಗೂ ಜಠರ, ಕರುಳುಗಳಲ್ಲಿ ವ್ಯಾಧಿಯುಂಟುಮಾಡುವ ಸೂಕ್ಷ್ಮಾಣುಗಳು ಮತ್ತು ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕರುಳುಗಳಲ್ಲಿ ಹಲ್ಲುಗಳಿಂದ ಕಚ್ಚಿಹಿಡಿದು ಮನೆಮಾಡಿಕೊಂಡಿದ ಜಂತುಹುಳು ಮತ್ತಿತರ ಕ್ರಿಮಿಗಳನ್ನೂ ನಿವಾರಿಸುತ್ತದೆ. ಉರಿಯೂತ, ವ್ರಣಗಳನ್ನೂ ಕಡಿಮೆಯಾಗಿಸುತ್ತದೆ.

ಹಸಿರು ಸೊಪ್ಪು

ಹಸಿರು ಸೊಪ್ಪು

ಹಸಿರು ಸೊಪ್ಪುಗಳನ್ನು ಸೇವಿಸಿ ಕರುಳುಗಳನ್ನು ಸ್ವಚ್ಛಗೊಳಿಸಲು ಇನ್ನೊಂದು ಸುಲಭ ವಿಧಾನವೆಂದರೆ ಹಸಿರು ಸೊಪ್ಪುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು. ಹೆಚ್ಚಿನವರಿಗೆ ಸೊಪ್ಪು ಎಂದರೆ ತಾತ್ಸಾರ. ಸೊಪ್ಪು ತಿನ್ನಲು ನಾವೇನು ದನಗಳೇ ಎಂಬ ಉದ್ಧಟತನದ ಉತ್ತರವೂ ಬರಬಹುದು. ಆದರೆ ಕರುಳಿನಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಬುಡಸಹಿತ ಕಿತ್ತು ಹೊರಹಾಕಲು ಹಸಿರು ಸೊಪ್ಪು ಅತ್ಯುತ್ತಮವಾಗಿದೆ. ಮುಂದೆ ಓದಿ

ಹಸಿರು ಸೊಪ್ಪು

ಹಸಿರು ಸೊಪ್ಪು

ಹಸಿರು ಸೊಪ್ಪುಗಳನ್ನು ಸೇವಿಸಿ ಬಸಲೆ, ಹರಿವೆ, ಪಾಲಕ್, ಕೇಲ್ ಎಲೆಗಳು ಮೊದಲಾದ ದಪ್ಪನೆಯ ಎಲೆಗಳ ಸಾರು ಮತ್ತು ಪಲ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಂತರದ ದಿನಗಳಲ್ಲಿ ಕರುಳುಗಳು ಸ್ವಚ್ಛಗೊಳ್ಳುತ್ತಾ ಹೋಗುತ್ತವೆ. ಅಷ್ಟೇ ಅಲ್ಲ, ಕರುಳುಗಳಲ್ಲಿ ಇನ್ನೊಮ್ಮೆ ಸುಲಭವಾಗಿ ಬ್ಯಾಕ್ಟೀರಿಯಾಗಳು ಬಾರದಂತೆ ತಡೆಯುತ್ತದೆ.

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಒಂದು ವೇಳೆ ಕರುಳುಗಳಲ್ಲಿ ಗುಡುಗುಡು ಶಬ್ಧ ಅನವರತವಾಗಿದ್ದು ತೊಂದರೆ ನೀಡುತ್ತಿದ್ದರೆ ಇದಕ್ಕೆ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಪರಿಹಾರವಾಗಿದೆ.ಇದಕ್ಕಾಗಿ ಸುಮಾರು ಎರಡು ಅಥವಾ ಮೂರು ಪೊಪ್ಪಾಯಿ ಅಗತ್ಯ. ರಾತ್ರಿ ಕೇವಲ ದ್ರವಾಹಾರ ಸೇವಿಸಿ ಮಲಗಿ ಬೆಳಿಗ್ಗೆದ್ದ ಬಳಿಕ ಹೊಟ್ಟೆ ಖಾಲಿ ಮಾಡಿ ಸುಮಾರು ಅರ್ಧ ಗಂಟೆ ನಡೆಯಿರಿ. ಈಗ ಚುರುಗುಟ್ಟುತ್ತಿರುವ ಹೊಟ್ಟೆಗೆ ಕೇವಲ ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಮಾತ್ರ ಸೇವಿಸಿ. ನೀರನ್ನು ಕನಿಷ್ಠ ಪ್ರಮಾಣದಲ್ಲಿ ಕುಡಿಯಿರಿ.

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಮಧ್ಯಾಹ್ನದ ಊಟಕ್ಕೂ ಇದೇ ಪಪ್ಪಾಯಿ, ಸಂಜೆಗೂ ಇದೇ, ರಾತ್ರಿಯೂಟಕ್ಕೂ ಇದೇ ಪಪ್ಪಾಯಿಯನ್ನು ಸೇವಿಸಿ, ಮತ್ತೇನನ್ನೂ ಸೇವಿಸಬೇಡಿ. ಮರುದಿನ ಬೆಳಿಗ್ಗೆ ನಿಮ್ಮ ಬಹಿರ್ದೆಶೆಯ ಬಳಿಕ ನಿಮ್ಮ ಕರುಳು ಸಂಪೂರ್ಣವಾಗಿ ಖಾಲಿಯಾಗಿದ್ದು ಗುಡುಗುಡು ಎಲ್ಲಾ ಪೂರ್ಣವಾಗಿ ನಿಂತಿರುತ್ತದೆ. (ಈ ವಿಧಾನ ಗರ್ಭಿಣಿಯರಿಗೆ ಮತ್ತು ರೋಗಿಗಳಿಗೆ ಸೂಕ್ತವಲ್ಲ)

ಸೇಬಿನ ಜ್ಯೂಸ್

ಸೇಬಿನ ಜ್ಯೂಸ್

ಕರುಳಿನ ಕಲ್ಮಶಗಳನ್ನು ಹೊರಹಾಕುವಲ್ಲಿ ಸೇಬಿನ ರಸವು ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಸೇಬಿನ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯೂಹದ ಕಾರ್ಯ ಚಟುವಟಿಕೆಯು ಸುಗಮವಾಗುತ್ತದೆ ಮತ್ತು ಟಾಕ್ಸಿನ್‍ಗಳು ಕಡಿಮೆಯಾಗುತ್ತವೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. *ದಿನ ಬೆಳಗ್ಗೆ ಒಂದು ಲೋಟ ಶೋಧಿಸದ ಸೇಬಿನ ಹಣ್ಣಿನ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ. *30 ನಿಮಿಷಗಳ ನಂತರ, ಒಂದು ಲೋಟ ನೀರನ್ನು ಸೇವಿಸಿ. *ಈ ವಿಧಾನವನ್ನು ದಿನ ಪೂರ್ತಿ ಹಲವಾರು ಬಾರಿ ಪುನರಾವರ್ತಿಸಿ ಹಾಗು ಮೂರು ದಿನಗಳವರೆಗೆ ಮುಂದುವರಿಸಿ. ಇದರ ನಡುವೆ, ಒಂದು ಲೋಟ ಪ್ರೂನ್ ರಸವನ್ನು ಸೇವಿಸಿ. ಈ ಪರಿಹಾರೋಪಾಯವನ್ನು ಪಾಲಿಸುವಾಗ ಘನ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು ಒಳ್ಳೆಯದು.

ಶುಂಠಿ

ಶುಂಠಿ

ಶುಂಠಿಯು ಹೊಟ್ಟೆ ಉಬ್ಬುವುದನ್ನು ಮತ್ತು ಕರುಳಿನ ಕಾರ್ಯಾಚರಣೆಯನ್ನು ಉದ್ಧೀಪಿಸಲು ಮತ್ತು ದೇಹವನ್ನು ಕಲ್ಮಶಗಳು ಹಾಗು ಹಾನಿಕಾರಕ ಟಾಕ್ಸಿನ್‍ಗಳಿಂದ ಮುಕ್ತವಾಗಿರಿಸಲು ಸಹಕರಿಸುತ್ತದೆ. ಇದು ಅವಿತುಕೊಂಡ ಜೀರ್ಣಕಾರಿ ರಸಗಳನ್ನು ಉದ್ದೀಪಿಸಿ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಶುಂಠಿ

ಶುಂಠಿ

* ಕರುಳಿನ ಶುಚಿಗೊಳಿಸುವ ಸಲುವಾಗಿ ನೀವು ಶುಂಠಿಯನ್ನು ಯಾವ ರೂಪದಲ್ಲಿ ಬೇಕಾದರು ಸೇವಿಸಬಹುದು. ಅದು ಜಜ್ಜಿಯಾದರು ಸರಿ, ಕತ್ತರಿಸಿ ತುಂಡು ಮಾಡಿ ಇಲ್ಲವೇ ರಸ ಮಾಡಿಕೊಂಡಾದರು ಸರಿ.

* ಶುಂಠಿಯನ್ನು ಸೇವಿಸಲು ಒಂದು ಒಳ್ಳೆಯ ಆಯ್ಕೆಯೆಂದರೆ, ಶುಂಠಿರಸವನ್ನು, ಅದರ ಕಾಲುಭಾಗದಷ್ಟು ಲಿಂಬೆರಸವನ್ನು ಎರಡು ಕಪ್ ಬಿಸಿ ನೀರಿಗೆ ಬೆರೆಸಿ. ಇದಕ್ಕೆ ನಿಮ್ಮ ರುಚಿಗಾಗಿ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ಎರಡು ಅಥವಾ ಮೂರು ಭಾಗವಾಗಿ ಮಾಡಿಕೊಂಡು ದಿನ ಪೂರ್ತಿ ಸೇವಿಸಿ. ವಿಶೇಷ ಸೂಚನೆ: ಗರ್ಭಿಣಿಯರಾದವರು ಶುಂಠಿಯನ್ನು ಸೇವಿಸುವುದು ಒಳ್ಳೆಯದಲ್ಲ.ಈ ಸಲಹೆಯು ಅವರಿಗೆ ಅನ್ವಯಿಸುವುದಿಲ್ಲ.

ನೀರು

ನೀರು

ಕರುಳನ್ನು ಶುಚಿಗೊಳಿಸಲು ನೀರು ಅತ್ಯುತ್ತಮವಾದ ಮದ್ದಾಗಿರುತ್ತದೆ. ಆದ್ದರಿಂದ ಪ್ರತಿದಿನ 10 ರಿಂದ 12 ಲೋಟ ನೀರನ್ನು ಕುಡಿಯಬೇಕಾದುದು ಅತ್ಯಗತ್ಯ. ನಿಯಮಿತವಾಗಿ ನೀರನ್ನು ಕುಡಿಯುತ್ತಿದ್ದರೆ, ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಸ್ವಾಭಾವಿಕವಾಗಿ ಹೊರ ಹಾಕಲು ಸಾಧ್ಯವಾಗುತ್ತದೆ.

English summary

Super Foods That Clean Up Your Intestines

Nowadays, gastrointestinal issues have become quite common in a majority of people. The main reason for this is that a large amount of people gorge on the foods that lack nutrients that are necessary for a healthy digestive system. Following are the brief details of the top foods that clean up your intestines, do have a look:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more