Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಬಾಗಿಲಿನ ಕಡೆಗೆ ಕಾಲು ಚಾಚಿ ಮಲಗುವುದು ಅನಾರೋಗ್ಯಕರವೇ?
ಮಕ್ಕಳಿಗೆ ಹಿರಿಯರು ಹಲವು ಕಟ್ಟುಪಾಡುಗಳನ್ನು ಹೇರುತ್ತಾರೆ. ಕೆಲವು ಆರೋಗ್ಯದ ಕಾರಣದಿಂದಿದ್ದರೆ ಕೆಲವು ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಕೆಲವು ಇಂತಹ ಕಟ್ಟುಪಾಡುಗಳಿಗೆ ವೈಜ್ಞಾನಿಕ ಅರ್ಥವಿಲ್ಲ, ಆದರೆ ಕೆಲವು ವೈಜ್ಞಾನಿಕವಾದ ಅರ್ಥ ಹೊಂದಿವೆ. ಉದಾಹರಣೆಗೆ ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಅಡುಗೆ ಮನೆಗೆ ಪ್ರವೇಶ ನೀಡದಿರುವುದು. ಒಂದರ್ಥದಲ್ಲಿ ಇದೊಂದು ಕಠಿಣ ಕ್ರಮ ಎಂದು ಕಂಡುಬಂದರೂ ಹಿಂದಿನ ದಿನಗಳಲ್ಲಿ ಅಡುಗೆ ಮನೆಯಲ್ಲಿದ್ದ ಅಪಾರ ದೈಹಿಕ ಶ್ರಮದಿಂದ ಆ ದಿನಗಳಲ್ಲಿ ತಪ್ಪಿಸಿ ವಿಶ್ರಾಂತಿ ನೀಡಲೆಂದೇ ಈ ಕ್ರಮ ಪ್ರಾರಂಭಿಸಲಾಯಿತು ಎಂದು ತಿಳಿದುಬರುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಪಶಕುನವೇ?
ಆದರೆ "ಕುಳಿತಿದ್ದಾಗ ಕಾಲನ್ನು ಅದುರಿಸಬೇಡ", "ಖಾಲಿ ಪಾತ್ರೆಯನ್ನು ತಲೆಕೆಳಗಾಗಿ ಇಡಬೇಡ" ಮೊದಲಾದ ಕಟ್ಟುಪಾಡುಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಮಲಗುವ ವಿಷಯ ಬಂದಾಗ ಪ್ರತಿ ಮನೆಯಲ್ಲಿಯೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸುವುದನ್ನು ಕಾಣಬಹುದು. ಮುಸ್ಲಿಮರು ಎಂದಿಗೂ ಪಶ್ಚಿಮದ ಕಡೆ ಕಾಲು ಹಾಕಿ ಮಲಗುವುದಿಲ್ಲ. ಹಿಂದೂ ವಾಸ್ತು ಪ್ರಕಾರ ತಲೆ ಉತ್ತರಾಭಿಮುಖವಾಗಿರಬೇಕು.
ಆದರೆ ಕೆಲವು ಮನೆಗಳಲ್ಲಿ ಈ ದಿಕ್ಕುಗಳಿಗೆ ಹೊರತಾಗಿ ಕಾಲುಗಳು ಬಾಗಿಲಿಗೆ ಎದುರಾಗಿರಬಾರದು ಎಂಬ ಕಟ್ಟುಪಾಡನ್ನು ಅನುಸರಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ಕೇಳಿದರೆ ಈ ರೀತಿ ಮಲಗಿದರೆ ಆರೋಗ್ಯ ಕೆಡುತ್ತದೆ ಎಂಬ ಉತ್ತರ ಸಿಗುತ್ತದೆ. ಈ ಕಟ್ಟುಪಾಡಿನ ಇನ್ನೊಂದು ತೊಂದರೆ ಎಂದರೆ ಕೋಣೆಯಲ್ಲಿದ್ದಾಗ ನೀವು ಬಾಗಿಲಿಗೆ ಅಂದರೆ ಕೋಣೆಯ ಬಾಗಿಲಿಗೆ ಮಾತ್ರವಲ್ಲ, ಕೋಣೆಯಲ್ಲಿರುವ ಇತರ ಯಾವುದೇ ಬಾಗಿಲಿಗೂ ಕಾಲು ತೋರಿಸುವಂತಿಲ್ಲ. ಕಿಟಕಿ ಬಾಗಿಲೂ ಸೇರಿ. ಏಕೆಂದರೆ ಬಾಗಿಲು ಅಥವಾ ಕಿಟಕಿಯಿಂದ ನೋಡುವ ಯಮಕಿಂಕರರು ಕಾಲುಗಳನ್ನು ಕಂಡರೆ ಮೊದಲು ಹೊತ್ತೊಯ್ಯುತ್ತಾರೆ. ಸಾವಿನ ಭಯ ಇಲ್ಲದಿದ್ದರೆ ನಿಶ್ಚಿಂತರಾಗಿ ಯಾವುದೇ ಬಾಗಿಲಿಗೆ ಕಾಲು ತೋರಿಸಿ ಮಲಗಿ. ಇದೆ ಎಂದಾದರೆ ಕೆಳಗಿನ ಸ್ಲೈಡ್ ಶೋನಲ್ಲಿರುವ ವಿವರಗಳನ್ನು ಗಮನಿಸಿ...

ಕೋಣೆಯಲ್ಲಿ ನಿಮ್ಮ ಮಂಚ ಎಲ್ಲಿರಬೇಕು?
ಆರೋಗ್ಯ ಉತ್ತಮವಾಗಿರಬೇಕು ಎಂದಾದರೆ ನಿಮ್ಮ ಮಂಚ ಸಾಧ್ಯವಾದಷ್ಟೂ ಬಾಗಿಲಿನಿಂದ ದೂರ ಅಥವಾ ಅಡ್ಡಲಾಗಿದ್ದು ಇದರಲ್ಲಿ ಮಲಗಿದಾಗ ಪಾದಗಳು ಯಾವುದೇ ಕಿಟಕಿಗಳಿಗೆ ಎದುರಾಗಿರಬಾರದು.

ಇದು ಏಕೆ ಅನಾರೋಗ್ಯಕರ?
ಒಂದು ನಂಬಿಕೆಯ ಪ್ರಕಾರ ನಿದ್ದೆಗೆ ಜಾರಿದ ಬಳಿಕ ದೇಹದಲ್ಲಿರುವ 'ಚಿ' ಎಂಬ ಶಕ್ತಿ ನಮ್ಮ ಶರೀರದ ಒಳಭಾಗ ಮತ್ತು ಹೊರಭಾಗಗಳಲ್ಲಿ ಸಂಚರಿಸುತ್ತಾ ದೇಹದ ಪೋಷಣೆ, ಬೆಳವಣಿಗೆ ಮತ್ತು ಇತರ ಅನೈಚ್ಛಿಕ ಕೆಲಸಗಳನ್ನು ನೆರವೇರಿಸುತ್ತದೆ. ಒಂದು ವೇಳೆ ಪಾದ ಬಾಗಿಲಿಗೆ ಎದುರಾಗಿದ್ದರೆ ಈ ಚಿ ಶಕ್ತಿ ಪಾದದಿಂದ ನೇರವಾಗಿ ಬಾಗಿಲ ಮೂಲಕ ಹೊರಟು ಹೋಗುತ್ತದೆ!

ಈ ’ಚಿ’ ಎಂದರೇನು?
ಒಂದು ನಂಬಿಕೆಯ ಪ್ರಕಾರ ನಮ್ಮ ದೇಹದಲ್ಲಿ ಎರಡು ಚಿ ಪ್ರವಾಹಗಳಿವೆ. ಒಂದು ಧನಾತ್ಮಕ ಮತ್ತೊಂದು ಋಣಾತ್ಮಕ. ಇದರಲ್ಲಿ ಧನಾತ್ಮಕ ಚಿ ದೇಹದಿಂದ ಹೊರಹೋಗಲು ಸುಲಭ ದಾರಿ ಸಿಕ್ಕೊಡನೆ ದೂರ ಹೋಗುತ್ತವೆ. ಆಗ ಋಣಾತ್ಮಕ ಚಿ ದೇಹವನ್ನು ಹೆಚ್ಚು ಆವರಿಸಿಕೊಳ್ಳುತ್ತದೆ. ಆದ್ದರಿಂದ ಬಾಗಿಲ ಕಡೆಗೆ ಕಾಲು ಹಾಕಿ ಮಲಗಬಾರದು ಎಂದು ಹೇಳುತ್ತಾರೆ.

ಋಣಾತ್ಮಕ ಚಿ ಆವರಿಸಿದರೆ ಏನಾಗುತ್ತದೆ?
ಋಣಾತ್ಮಕ ಚಿ ಶಕ್ತಿ ದೇಹವನ್ನು ಆವರಿಸಿದಾಕ್ಷಣ ನಮ್ಮ ಆತ್ಮ ದುರ್ಬಲವಾಗುತ್ತದೆ. ಪರಿಣಾಮವಾಗಿ ವಿವೇಕ ಮತ್ತು ಧನಾತ್ಮಕ ಚಿಂತನೆಯೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ದುರ್ಮಾರ್ಗ, ದುರ್ವರ್ತನೆ, ಋಣಾತ್ಮಕ ಚಿಂತನೆ ಮೊದಲಾದವುಗಳು ವ್ಯಕ್ತಿಯ ಚಿಂತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ.

ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?
ಫೆಂಗ್ ಶುಯಿ ಎಂಬ ಪ್ರಾಚೀನ ನಂಬಿಕೆಯ ಪ್ರಕಾರ ಬಾಗಿಲ ಕಡೆಗೆ ಕಾಲುಹಾಕದೇ ಮಲಗಿದರೆ ಎಂದೂ ನಿಮಗೆ ನೋವು ಕಾಡದು. ಈ ನೋವು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು.

ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?
ಇನ್ನೊಂದು ಅರ್ಥದಲ್ಲಿ ಜೀವನದಲ್ಲಿ ಎದುರಾಗುವ ಯಾವುದೇ ನೋವುನೀಡುವ ತೊಂದರೆಯನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಪಡೆಯಬಹುದು. ಅಲ್ಲದೇ ತಲೆನೋವು ಮತ್ತು ದೇಹದ ಇತರ ನರಸಂಬಂಧಿತ ನೋವುಗಳೂ ದೂರವಾಗುತ್ತವೆ.



Click it and Unblock the Notifications