For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ಜೀವನ ಶೈಲಿಗೆ ಇಲ್ಲಿದೆ ಸಿಂಪಲ್ ಟಿಪ್ಸ್...

By Hemanth
|

ನಮ್ಮ ದೇಹದಲ್ಲಿ ಮುಕ್ಕಾಲು ಭಾಗದಷ್ಟು ನೀರಿನಾಂಶವಿದೆಯೆಂದು ಹೇಳಲಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾಗಿ ಬೇಕು. ನೀರು ಕುಡಿಯದೆ ಬದುಕಲು ಸಾಧ್ಯವೇ ಇಲ್ಲ. ಹಾಗೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ. ಆದರೆ ನೀರನ್ನು ಯಾವಾಗ ಕುಡಿಯಬೇಕು ಎನ್ನುವುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ.

ಮಾತ್ರೆ ತೆಗೆದುಕೊಳ್ಳಲು ನೀರು ಬೇಕೆನ್ನುವುದು ತಿಳಿದಿರುವ ವಿಚಾರ. ಆದರೆ ಮಾತ್ರೆ ಸರಿಯಾಗಿ ದೇಹದೊಳಗೆ ಹೋಗದೆ ಇದ್ದರೆ ಆಗ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ವಾಕಿಂಗ್ ಮಾಡಬೇಕು ಮತ್ತು ನಡೆಯಬೇಕು ಎಂದು ನಾವು ಪ್ರತಿಯೊಬ್ಬರಿಗೂ ತಿಳಿಸುತ್ತೇವೆ. ಆದರೆ ಹೇಗೆ ನಡೆಯಬೇಕು ಮತ್ತು ಓಡಬೇಕು ಎಂದು ಹೆಚ್ಚಿನವರಿಗೆ ತಿಳಿದೇ ಇರುವುದಿಲ್ಲ. ಅದೇ ರೀತಿ ಬಾಳೆಹಣ್ಣನ್ನು ಅದರಲ್ಲಿರುವ ಪೋಷಕಾಂಶಗಳಿಂದ ನಾವು ತಿನ್ನಲು ಇಷ್ಟಪಡುತ್ತೇವೆ. ಆದರೆ ನಾವು ತುಂಬಾ ಆಯಾಸಗೊಂಡಿರುವಾಗ ಬಾಳೆಹಣ್ಣನ್ನು ತಿನ್ನುತ್ತೇವೆಯಾ? ಇಲ್ಲ. ಹಾಗಾದರೆ ಇಂತಹ ವಿಷಯಗಳ ಬಗ್ಗೆ ಮತ್ತಷ್ಟು ಚರ್ಚೆ ಮಾಡುವ.

ಟಿಪ್ಸ್#1

ಟಿಪ್ಸ್#1

ಮಾತ್ರೆ ಸೇವಿಸಿದ ಬಳಿಕ ಉಗುರುಬೆಚ್ಚಗಿನ ನೀರು ಕುಡಿಯಿರಿ ಅಥವಾ ವೈದ್ಯರು ತಿಳಿಸಿದ್ದರೆ ತಣ್ಣೀರು ಕುಡಿಯಿರಿ ಮಾತ್ರೆಯನ್ನು ಅದರ ಸ್ಥಾನಕ್ಕೆ ತಲುಪಿಸಲು ನೀವು ಸರಿಯಾಗಿ ನೀರನ್ನು ಕುಡಿಯದೆ ಇದ್ದರೆ ಆಗ ಅದು ಬೇರೆ ಎಲ್ಲೋ ಸಿಲುಕಿಕೊಂಡು ಉರಿಯೂತ ಉಂಟಾಗಬಹುದು.

ಟಿಪ್ಸ್#2

ಟಿಪ್ಸ್#2

ಸಂಜೆ 5 ಗಂಟೆ ಬಳಿಕ ಹೊಟ್ಟೆಗೆ ಭಾರವಾಗುವಂತಹ ಯಾವುದೇ ಆಹಾರವನ್ನು ಸೇವಿಸಬೇಡಿ. ದಿನಲ್ಲಿ 3- ಸಲ ಊಟ ಮಾಡುವ ಅಭ್ಯಾಸವಿದ್ದರೆ ಆಗ ನೀವು ರಾತ್ರಿ ವೇಳೆಗೆ ಲಘು ಆಹಾರ ಸೇವಿಸಿ. ಬೆಳಿಗ್ಗೆಯಿಂದ ಉಪವಾಸವಿದ್ದರೆ ಆಗ ಮಾತ್ರ ರಾತ್ರಿ ಸರಿಯಾಗಿ ತಿನ್ನಿ.

ಟಿಪ್ಸ್#3

ಟಿಪ್ಸ್#3

ಹಗಲಿನಲ್ಲಿ ಹೆಚ್ಚಿನ ನೀರನ್ನು ಸೇವಿಸಿ ಮತ್ತು ರಾತ್ರಿ ಕಡಿಮೆ ನೀರು ಸೇವಿಸಿ. ರಾತ್ರಿ ಮಲಗುವ ಮೊದಲು ನೀವು ಹೆಚ್ಚಿನ ನೀರು ಸೇವನೆ ಮಾಡಿದರೆ ಆಗ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ಇದರಿಂದ ನಿದ್ರೆ ಹಾಳಾಗಬಹುದು.

ಟಿಪ್ಸ್#4

ಟಿಪ್ಸ್#4

ರಾತ್ರಿ 10 ಗಂಟೆಗೆ ಮೊದಲು ನೀವು ನಿದ್ರೆ ಮಾಡಿದರೆ ಆಗ ನಿಮಗೆ ಒಳ್ಳೆಯ ನಿದ್ರೆ ಲಭಿಸುತ್ತದೆ. ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸ ಮಾಡಿಕೊಳ್ಳಿ.

ಟಿಪ್ಸ್#5

ಟಿಪ್ಸ್#5

ಹೊಟ್ಟೆತುಂಬ ಊಟ ಮಾಡಿದ ತಕ್ಷಣ ಮಲಗಬೇಡಿ. ಇದರಿಂದ ಅಜೀರ್ಣ ಮತ್ತು ಇತರ ಆ್ಯಸಿಡಿಟಿ ಸಮಸ್ಯೆಗಳು ಉಂಟಾಗಬಹುದು.

ಟಿಪ್ಸ್#6

ಟಿಪ್ಸ್#6

ನಿಮ್ಮ ಮೊಬೈಲ್ ಗೆ ಕರೆ ಬಂದಾಗ ಎಡದ ಬದಿಗೆ ಮೊಬೈಲ್ ಇಟ್ಟು ಮಾತನಾಡಿ. ಆದರೆ ಇದಕ್ಕೆ ನಿಖರವಾದ ಕಾರಣಗಳು ತಿಳಿದಿಲ್ಲ.

ಟಿಪ್ಸ್#7

ಟಿಪ್ಸ್#7

ಸೂರ್ಯನ ಕಿರಣಗಳಿಗೆ ಮೈಯೊಡ್ಡದೆ ಕೋಣೆಯೊಳಗೆ ಜೀವನ ಕಳೆಯಬೇಡಿ. ಆರೋಗ್ಯಕರ ಜೀವನಕ್ಕೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದು ತುಂಬಾ ಮುಖ್ಯ.

ಟಿಪ್ಸ್#8

ಟಿಪ್ಸ್#8

ನಿಮ್ಮ ಮನಸ್ಥಿತಿ ಸರಿಪಡಿಸಲು ಬಾಳೆಹಣ್ಣುಗಳನ್ನು ತಿನ್ನಿ. ಇದರಲ್ಲಿ ಸೆರೊಟೊನಿನ್ ಅಂಶವಿದೆ. ಮೆಣಸನ್ನು ತಿಂದರೆ ಖಿನ್ನತೆ ಹೋಗಲಾಡಿಸಬಹುದು. ಖಿನ್ನತೆ ಹೋಗಲಾಡಿಸಿ ನಿಮ್ಮ ಮನಸ್ಥಿತಿ ಉತ್ತಮಗೊಂಡರೆ ಒಳ್ಳೆಯ ಭಾವನೆ ಮೂಡುತ್ತದೆ.

ಟಿಪ್ಸ್#9

ಟಿಪ್ಸ್#9

ಯಾವಾಗಲೂ ನಡೆಯುತ್ತಿರಿ. ಇದರಿಂದ ನಿಮ್ಮ ಮನಸ್ಸು ಉಲ್ಲಾಸಿತಗೊಂಡು ಸ್ವಲ್ಪ ಕ್ಯಾಲರಿ ನಶಿಸುತ್ತದೆ.

ಟಿಪ್ಸ್#10

ಟಿಪ್ಸ್#10

ಕ್ಯಾಂಡಿ, ಕೇಕ್, ಚಿಪ್ಸ್, ಬಿಳಿ ಬ್ರೆಡ್, ಫಾಸ್ಟ್ ಫುಡ್, ಐಸ್ ಕ್ರೀಮ್, ಸಂಸ್ಕರಿತ ಆಹಾರ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ ಮತ್ತು ಒಳ್ಳೆಯ ಆರೋಗ್ಯ ಕಾಪಾಡಿ.

English summary

Simple Health Tips That We Don’t Know

Most of us know that we need to drink more water. But most of us don't know when to drink water. Most of us know that swallowing a pill needs some water. But we don't know what happens if the pill fails to go inside properly. So, there are certain health tips that we don't know. Let us discuss them here...
Story first published: Tuesday, May 31, 2016, 20:13 [IST]
X
Desktop Bottom Promotion